ಮನುಷ್ಯರಿಗೆ ವಾಸಿಸಲು ಯೋಗ್ಯವಾಗಿರದ ಅಂಟಾರ್ಟಿಕದಲ್ಲಿನ ಕುತೂಹಲಕಾರಿ ವಿಸ್ಮಯಗಳು. ಉದ್ದವಾದ ಬುರುಡೆಗಳು 1985 ರಲ್ಲಿ ಅಂಟಾರ್ಟಿಕದ ಕೆಎಫ್ ಶಿರಪ್ ನಲ್ಲಿ 3 ಬೃಹತ್ ಗಾತ್ರದ ಮನುಷ್ಯನ ಬುರುಡೆಗಳು ವಿಜ್ಞಾನಿಗಳಿಗೆ ಸಿಕ್ಕಿವೆ ಇವುಗಳು ಸಾಮಾನ್ಯ ಮನುಷ್ಯರ ಬುರುಡೆಗಳ ತರಹ ಇಲ್ಲ ನೋಡಲು ತುಂಬಾ ಉದ್ಧವಾಗಿವೆ ಇದರ ಬಗ್ಗೆ ಅಧ್ಯಯನ ಮಾಡಿದಾಗ ಬಾಲಕಿಯ ಬುರುಡೆಯಾಗಿದ್ದು 200 ವರ್ಷಗಳಷ್ಟು ಹಳೆಯದಾಗಿದೆ ಆದರೆ ಈ ಬುರುಡೆ ಅಲ್ಲಿ ಹೇಗೆ ಬಂದಿತು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದೆ ತರಹದ ಬುರುಡೆ ಈಜಿಪ್ಟನಲ್ಲಿ ವಿಜ್ಞಾನಿಗಳಿಗೆ ಇದಕ್ಕೂ ಮೊದಲು ಸಿಕ್ಕಿತ್ತು ಇದರಿಂದ ವಿಜ್ಞಾನಿಗಳಿಗೆ ತಿಳಿದ ಸಂಗತಿ ಏನೆಂದರೆ ಆಫ್ರಿಕಾ ಖಂಡ ದಕ್ಷಿಣ ಅಮೆರಿಕ ಖಂಡ ಮತ್ತು ಅಂಟಾರ್ಟಿಕ ಖಂಡಕ್ಕೆ ಯಾವುದೋ ಒಂದು ರೀತಿಯ ಸಂಬಂಧವಿದೆ ಎನ್ನುವುದು. ಕ್ಷುದ್ರ ಗ್ರಹದ ತುಂಡು ಪ್ರತಿದಿನ ಬಾಹ್ಯಾಕಾಶದಿಂದ ಭೂಮಿಗೆ ಸಾವಿರಾರು ಕ್ಷುದ್ರ ಗ್ರಹದ ತುಂಡುಗಳು ಅಪ್ಪಳಿಸುತ್ತವೆ
ಈ ರೀತಿಯಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಕ್ಷುದ್ರ ಗ್ರಹಗಳ ತುಂಡುಗಳಲ್ಲಿ 90ರಷ್ಟು ತುಂಡುಗಳು ಅಂಟಾರ್ಟಿಕಕ್ಕೆ ಅಪ್ಪಳಿಸುತ್ತವೆ ಕಳೆದ 50 ವರ್ಷಗಳಲ್ಲಿ ಬರೋಬ್ಬರಿ 10000 ಕ್ಕಿಂತ ಹೆಚ್ಚು ಕ್ಷುದ್ರ ಗ್ರಹದ ತುಂಡುಗಳನ್ನು ವಿಜ್ಞಾನಿಗಳು ಅಂಟಾರ್ಟಿಕಾದಲ್ಲಿ ಪತ್ತೆ ಹಚ್ಚಿದ್ದಾರೆ ಇವುಗಳಲ್ಲಿ ಕೆಲವು ತುಂಡುಗಳು 7 ಲಕ್ಷ ವರ್ಷಗಳಷ್ಟು ಹಳೆಯದಾಗಿವೆ 2015 ರಲ್ಲಿ ಆಲೂಗಡ್ಡೆ ಗಾತ್ರದಷ್ಟು ಚಿಕ್ಕದಾದ ಕ್ಷುದ್ರಗ್ರಹದ ತುಂಡು ವಿಜ್ಞಾನಿಗಳಿಗೆ ಅಂಟಾರ್ಟಿಕಾದ ಮಂಜುಗಡ್ಡೆಗಳಲ್ಲಿ ಸಿಕ್ಕಿದ್ದು ಅದು ಮಂಗಳ ಗ್ರಹದಿಂದ ನೇರವಾಗಿ ಭೂಮಿಗೆ ಅಪ್ಪಳಿಸಿದೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಡೈನೋಸಾರ್ ಪಳೆಯುಳಿಕೆಗಳು 70 ರಿಂದ 200 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲೆ ಡೈನೋಸಾರ್ ಬದುಕಿದ್ದವು ಎಂದು ನಮಗೆ ಗೊತ್ತು. ಆದರೆ ಅಂಟಾರ್ಟಿಕಾದಂತಹ ಕಡಿಮೆ ಉಷ್ಣಾಂಶ ಹೊಂದಿರುವ ಪ್ರದೇಶದಲ್ಲೂ ಕೂಡ ಅವುಗಳು ಇದ್ದವು ಎನ್ನುವ ಸಂಗಂತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ಅಂಟಾರ್ಟಿಕಾದ ಮಂಜುಗಡ್ಡೆಯ ಒಳಗೆ ಸಿಕ್ಕಿರುವ ಅನೇಕ ಪಳೆಯುಳಿಕೆಗಳಿಂದ 75 ಮಿಲಿಯನ್ ವರ್ಷಗಳ ಹಿಂದೆ ಮಂಜುಗಡ್ಡೆ
ಕೆಳಗೆ ಇರುವ ನೀರಿನಲ್ಲಿ ಫ್ಲೆಸಿಯೊಸಾರ್ಸ್ ಮತ್ತು ಮೋಸೋಸಾರ್ಸ್ ನಂತಹ ಜೀವಿಗಳು ವಾಸಿಸುತ್ತಿದ್ದವು ಎನ್ನುವುದು ತಿಳಿದುಬಂದಿದೆ. ಡ್ರೈವ್ಯಾಲಿ ಬೃಹತ್ ಮಂಜುಗಡ್ಡೆಗಳ ಮಧ್ಯ ಒಂದು ಬರಡು ಪ್ರದೇಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಆ ಸ್ಥಳದಲ್ಲೇ ಕಳೆದ 2 ಮಿಲಿಯನ್ ವರ್ಷಗಳಿಂದ ಮಳೆ ಆಗಿಲ್ಲ ಆ ಸ್ಥಳದ ಹೆಸರೇ ಡ್ರೈವ್ಯಾಲಿ ಅಂಟಾರ್ಟಿಕದ 0.03ರಷ್ಟು ಜಾಗವನ್ನು ಆವರಿಸಿರುವ ಈ ಸ್ಥಳವನ್ನು 1903 ರಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಇದೆ ತರದ ಪ್ರದೇಶವು ಮಂಗಳ ಗ್ರಹದಲ್ಲಿ ಇರುವುದನ್ನು ನಾಸಾದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ರ ಕ್ತದ ಜಲಪಾತ 1911 ರಲ್ಲಿ ಆಸ್ಟ್ರೇಲಿಯಾ ಭೂಗೋಳ ಶಾಸ್ತ್ರಜ್ಞ ಗ್ರಿಫಿಟ್ ಟೇಲರ್ ರವರು ಮಂಜುಗಡ್ಡೆ ನಡುವೆ ಕೆಂಪು ನೀರು ಹೊರಬರುವುದನ್ನು ಪತ್ತೆ ಮಾಡಿದರು ಅಲ್ಲಿ ಏನೋ ವಿಚಿತ್ರವಾದದ್ದು ಇದೆ ಎಂದು ಭಾವಿಸಿದ್ದರು ಆದರೆ ವರ್ಷಗಳು ಕಳೆದಂತೆ ತಂತ್ರಜ್ಞಾನ ಬಳಸಿಕೊಂಡು ಪತ್ತೆ ಮಾಡಿದಾಗ ಸ್ವಲ್ಪ ದೂರದಲ್ಲೇ ಮಂಜುಗಡ್ಡೆಗಳ ಕೆಳಗೆ ಒಂದು ಸರೋವರ ಇದ್ದು ಅದರ ನೀರಿನ ಲವಣಾಂಶವು ಸಮುದ್ರದ ನೀರಿನಲ್ಲಿರುವ ಲವಣಾಂಶಕ್ಕಿಂತ ನಾಲ್ಕು ಪಟ್ಟು ಹೆಚ್ಚಿರುವುದರಿಂದ ಇರಿತಿಯಾಗಿ ಕೆಂಪು ಬಣ್ಣದ ನೀರು ಬರುತ್ತಿದೆ ಎಂದು ತಿಳಿದುಬಂದಿತು.