ಅಡುಗೆಗೆ ರುಚಿ ಕೊಡುವ ಹುಣಸೆ ಹಣ್ಣಿನಿಂದ ಹತ್ತಾರು ಲಾಭ ಪಡೆಯಿರಿ

73

ಅಡುಗೆಗೆ ರುಚಿ ಕೊಡುವ ಹುಣಸೆ ಹಣ್ಣು ನಮ್ಮ ದೇಹಕ್ಕೂ ಸಹ ಹಲವಾರು ಲಾಭಗಳನ್ನು ನೀಡುತ್ತದೆ. ನಮ್ಮ ಭಾರತೀಯ ಅಡುಗೆಯ ಪ್ರಮುಖ ಆಕರ್ಷಣೆಯ ಅಂಗವಾಗಿರುವ ಸಾಂಬಾರ ಮತ್ತು ರಸಮ್ ಗಳಿಗೆ ರುಚಿ ನೀಡುವುದೇ ಹುಣಸೆ ಹಣ್ಣು ಇದು ರುಚಿ ನೀಡುವುದರೊಂದಿಗೆ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಕಾರಿ ಆಗಿದೆ ಎಂದು ತಿಳಿದುಬಂದಿದೆ ಭಾರತದ ವಿವಿಧ ಪ್ರದೇಶಗಳಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಸಲಾಗುತ್ತದೆ ತ್ವಚೆಯ ಸರ್ವ ರೋಗಕ್ಕೆ ಹುಣಸೆ ಹಣ್ಣಿನ ಫೇಸ್ ಪ್ಯಾಕ್ ನ್ನು ಬಳಸಲಾಗುತ್ತದೆ ಚಟ್ನಿ ಸಾಸ್ ಪಾನಿಪುರಿ ಲಘುಪಾನಿಯ ಕರಿ ಮೊದಲಾದವುಗಳಲ್ಲಿ ಈ ಹುಣಸೆ ಹುಳಿಯ ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಆರೋಗ್ಯಕ್ಕೆ ಬೇಕಾದ ತುಂಬಾ ಅಂಶಗಳೇ ಇವೆ ಆದ್ದರಿಂದ ಹುಣಸೆ ಹಣ್ಣು ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ಈ ಹುಣಸೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮತ್ತು ಕರಗಿರುವ ನಾರಿನಿಂದಾಗಿ ಈ ಹುಳಿಯನ್ನು ಸೇವಿಸುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗಿ ಒಟ್ಟಾರೆ ಕೊಬ್ಬಿನ ಮಟ್ಟ ಸಾಧಾರಣ ಮಟ್ಟವನ್ನು ತಲುಪಲು ಸಹಾಯ ಮಾಡುತ್ತದೆ. ಇದರ ಮೂಲಕ ಹೃದಯ ಸಂಬಂಧಿ ತೊಂದರೆಗಳು ಆಗುವ ಸಾಧ್ಯತೆ ಕಡಿಮೆಯಾಗುತ್ತದೆ ಹುಣಸೆ ಹುಳಿಯಲ್ಲಿ ಹೈಡ್ರೋಸ್ ಸಿಟ್ರಿಕ್ ಆಮ್ಲ ಎಂಬ ಮುಖ್ಯವಾದ ಪೋಷಕಾಂಶ ಇದೆ ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ ಇದಲ್ಲದೆ ಈ ಹುಣಸೆ ಹುಳಿಯ ಸೇವನೆ ನಂತರ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆಯನ್ನು ತಡೆಯಬಹುದು ಈ ಮೂಲಕ ಹೆಚ್ಚುವರಿ ತೂಕ ಹೆಚ್ಚುವುದನ್ನು ತಪ್ಪಿಸುವುದಕ್ಕೆ ಈ ಒಂದು ಹುಣಸೆಹಣ್ಣು ತುಂಬಾ ಅದ್ಭುತವಾದ ಮದ್ದಾಗಿದೆ.

ಈ ಹುಣಸೆ ಹಣ್ಣಿನಲ್ಲಿ ಕಬ್ಬಿಣ ಮತ್ತು ಪೊಟ್ಯಾಷಿಯಂ ಅಂಶ ಉತ್ತಮ ಪ್ರಮಾಣದಲ್ಲಿ ಇರುವ ಕಾರಣ ರ ಕ್ತದೊತ್ತಡ ಸರಿಯಾದ ಮಟ್ಟದಲ್ಲಿ ಸಾಗುವಂತೆ ನೆರವಾಗುತ್ತದೆ ಮತ್ತು ಉತ್ತಮ ಪ್ರಮಾಣದ ಕೆಂಪು ರ ಕ್ತಕಣಗಳ ಉತ್ಪಾದನೆಗೆ ಇದು ನೆರವಾಗುತ್ತದೆ ಈ ಹುಣಸೆ ಹುಳಿಯ ಸೇವನೆಯಿಂದ ರ ಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಾವು ನಿಯಂತ್ರಣಕ್ಕೆ ತರಬಹುದು. ಇದಲ್ಲದೆ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಕಾರ್ಬೋ ಹೈಡ್ರೇಟ್ ಗಳನ್ನು ಹೀರಿ ಕೊಳ್ಳುವುದನ್ನು ತಪ್ಪಿಸಿ ಈ ಮೂಲಕ ಏರು ಪೇರಾಗುವ ರ ಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ನಿಯಮಿತವಾಗಿ ಒಂದು ಚಿಕ್ಕ ಲೋಟ ಹುಳಿಯನ್ನು ಬೆರಸಿದ ನೀರನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಹುಣಸೆ ಹುಳಿಯಲ್ಲಿ ಉತ್ತಮ ಪ್ರಮಾಣದ ಪಿಗ್ವಿನ್ ಮತ್ತು ಟ್ಯಾನಿನ್ ಎಂಬ ಮೊದಲಾದ ಕರಗದ ನಾರುಗಳಿರುತ್ತವೆ ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ ಮತ್ತು ಮಲಬದ್ಧತೆ ಆಗದಂತೆ ನೋಡಿಕೊಳ್ಳುತ್ತದೆ.

ಹುಣಸೆ ಹಣ್ಣಿನಲ್ಲಿರುವ ಪೊಟ್ಯಾಷಿಯಮ್ ರ ಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದರಲ್ಲಿ ಇರುವ ನಾರಿನಂಶ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಇದರಲ್ಲಿನ ಆಂಟಿ ಆಕ್ಸಿಡೆಂಟಗಳು ನಮ್ಮ ದೇಹದಲ್ಲಿರುವ ಫ್ರೀ ಆರ್ಟಿಕಲ್ ನ್ನು ನಿಯಂರ್ತಿಸುತ್ತದೆ ಇವೆಲ್ಲವೂ ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿ ಇಡುತ್ತವೆ ಪ್ರತಿದಿನ ಅರ್ಧ ಚಮಚ ಹುಣಸೆ ಹಣ್ಣನ್ನು ತಿನ್ನುವುದರಿಂದ ನಮ್ಮ ತೂಕ ನಿಯಂತ್ರಣದಲ್ಲಿ ಇರಿಸಲು ಇದು ತುಂಬಾ ಸಹಕರಿಸುತ್ತದೆ. ಮಧುಮೇಹವನ್ನು ಸಹ ಇದು ನಿಯಂತ್ರಿಸುತ್ತದೆ. ಹೀಗೆ ಹುಣಸೆ ಹಣ್ಣು ಬರಿ ಅಡುಗೆಗೆ ರುಚಿ ನೀಡುವುದಷ್ಟೇ ಅಲ್ಲದೆ ನಮ್ಮ ದೇಹಕ್ಕೂ ಕೂಡ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಸ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here