ಅತೀಯಾದ ತೂಕವನ್ನು ಕಡಿಮೆ ಮಾಡಲು ನೈಸರ್ಗಿಕ ಮನೆಮದ್ದು

54

ಆಧುನಿಕ ಜೀವನ ಶೈಲಯಿಂದಾಗಿ ಮತ್ತು ಆಧುನಿಕ ಹವ್ಯಾಸಗಳಿಂದ ದೇಹದ ತೂಕ ಹೆಚ್ಚಾಗುತ್ತಿದೆ. ಮತ್ತು ಇನ್ನೂ ಕೆಲ ಜನರಿಗೆ ಆದ್ರತೆ ಅಥವಾ ಅನುವಂಶೀಯವಾಗಿ ಈ ಬೊಜ್ಜಿನ ಸಮಸ್ಯೆ ಅಥವಾ ಓಬಿಸಿತಟಿ ಸಮಸ್ಯೆ ಉಂಟಾಗುತ್ತದೆ. ಮತ್ತು ಹೊರಗಡೆ ಸಿಗುವ ಆಹಾರ ಪದಾರ್ಥಗಳನ್ನೂ ಸೇವಿಸುವುದರಿಂದ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿ ದೇಹದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾದರೆ ಈ ತೂಕವನ್ನು ಕಡಿಮೆ ಮಾಡಲು ಸುಲಭವಾದ ಪಾನೀಯವನ್ನು ಮಾಡಿಕೊಳ್ಳುವುದನ್ನು ನೋಡೋಣ. ಇದನ್ನು ಸುಲಭವಾಗಿ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ದೇಹದ ಬೊಜ್ಜನ್ನು ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಸ್ನೇಹಿತರೆ ಈ ಪಾನೀಯವನ್ನು ತಯಾರಿಸುವ ವಿಧಾನವನ್ನು ಕೊನೆವರೆಗೂ ಓದಿರಿ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಪ್ರತಿನಿತ್ಯವೂ ಆಹಾರದಲ್ಲಿ ಈ ಒಂದು ಪಾನೀಯವನ್ನು ಸೇರಿಕೊಳ್ಳಬೇಕು. ಹೀಗೆ ಮಾಡುವುದರಿಂದ ವೇಗವಾಗಿ ಮತ್ತು ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ದೇಹದ ತೂಕವನ್ನು ಇಳಿಸಿಕೊಳ್ಳಲು ಮನೆಯಲ್ಲಿಯೇ ಈ ಸುಲಭವಾದ ಪಾನೀಯವನ್ನು

ಮಾಡಿಕೊಳ್ಳಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಸಾಮಗ್ರಿಗಳೆಂದರೆ ಚೆಕ್ಕೆ, ಶುಂಠಿ ಮತ್ತು ನಿಂಬೆ ಹಣ್ಣಿನ ರಸ. ಇದನ್ನು ಹೇಗೆ ತಯಾರಿಕೊಳ್ಳುದೆಂದರೆ ಒಂದು ಲೋಟ ನೀರನ್ನು ಬಿಸಿ ಮಾಡಬೇಕು. ಈ ಬಿಸಿ ನೀರಿನಲ್ಲಿ ಚೆಕ್ಕೆ ಪುಡಿಯನ್ನು ಹಾಕಬೇಕು. ನಂತರ ಶುಂಠಿಯನ್ನು ಕತ್ತರಿಸಿ ಹಾಕಬೇಕು. ಈ ಒಂದು ಲೋಟ ನೀರು ಅರ್ಧ ಲೋಟ ಆಗುವವರೆಗೂ ಚೆನ್ನಾಗಿ ಕಾಯಿಸಬೇಕು. ನಂತರ ನೀರು ಬೆಚ್ಚಗೆ ಆಗಲು ಬಿಡಬೇಕು. ನೀರು ತಣ್ಣಗಾದ ನಂತರ ಈ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಯದಾಗಿ ಈ ತೂಕ ಕಡಿಮೆ ಮಾಡುವ ಪಾನೀಯ ಸಿದ್ಧವಾಗುತ್ತದೆ. ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಇರುವ ಕಲುಷಿತ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವಂತೆ ಮಾಡುತ್ತದೆ. ಈ ಪಾನೀಯವನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಕುಡಿಯುದರಿಂದ ಇದರ ಫಲತಾಂಶ ತುಂಬಾ ಒಳ್ಳೆಯ ರೀತಿಯಲ್ಲಿ ಸಿಗುತ್ತದೆ. ಮುಖ್ಯವಾದ

ಸಂಗತಿ ಎಂದರೆ ಈ ಪಾನೀಯವನ್ನು ಕುಡಿದ ನಂತರ ಅರ್ಧ ಅಥವಾ ಒಂದು ಗಂಟೆವರೆಗೆ ಬೇರೆ ಯಾವುದೇ ಆಹಾರವನ್ನು ಸೇವಿಸಬಾರದು. ಟೀ ಮತ್ತು ಕಾಫೀ ಕುಡಿಯುವ ಅಭ್ಯಾಸವನ್ನೂ ಹೊಂದಿದ್ದಾರೆ ಅದನ್ನು ಬಿಟ್ಟು ಈ ಪಾನೀಯವನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಲಾಭದಾಯಕ ಸಿಗುತ್ತದೆ. ಈ ಪಾನೀಯವನ್ನು ಪ್ರತಿನಿತ್ಯ ಡಯೆಟ್ ನಲ್ಲಿ ಸೇರಿಸಿ ಕುಡಿಯಬೇಕು. ಇದರಿಂದ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಮತ್ತು ದೇಹದಲ್ಲಿ ಕೆಟ್ಟ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದರ ಜೊತೆಗೆ ರಕ್ತವು ಶುದ್ಧಗೊಳ್ಳುತ್ತದೆ. ಕೆಟ್ಟ ಎಲ್.ಡಿ. ಎಲ್ ಕೊಬ್ಬನ್ನು ಫ್ಯಾಟ್ ಎಂದು ಕರೆಯುತ್ತಾರೆ. ಇದು ಎಲ್.ಡಿ. ಎಲ್ ಕೊಬ್ಬನ್ನು ಕಡಿಮೆ ಮಾಡಿ ಹೆಚ್. ಡೀ. ಏಲ್ ಕೊಬ್ಬನ್ನು ಹೆಚ್ಚಿಸುತ್ತದೆ. ಕೇವಲ ದೇಹದ ತೂಕವನ್ನು ಕಡಿಮೆ ಮಾಡಲು ಈ ಪಾನೀಯವನ್ನು ಬಳಸಿದರೆ ತಕ್ಷಣವೇ ತೂಕ ಕಡಿಮೆಯಾಗುವುದಿಲ್ಲ. ಇದರ ಜೊತೆಗೆ ವ್ಯಾಯಾಮ, ಯೋಗಾಸನ ಮತ್ತು ಆಹಾರದ ಮೇಲೆ ಗಮನವಿರಬೇಕು. ಆದ್ದರಿಂದ ಒಳ್ಳೆಯ ಪೌಷ್ಟಿಕಾಂಶ ಮತ್ತು ಪ್ರೊಟೀನ್ ಆಹಾರವನ್ನು ಸೇವಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಈ ಒಂದು ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here