ಅದೃಷ್ಟ ಬದಲಿಸುವ ಶಕ್ತಿ ನಾವು ಧರಿಸುವ ಬಟ್ಟೆ ಗೆ ಇದೆ. ಹೌದು ಸ್ನೇಹಿತರೆ ನಾವು ಧರಿಸುವ ಬಟ್ಟೆ ಮಾನ ಮುಚ್ಚುವುದು ಅಷ್ಟೆ ಅಲ್ಲದೆ ನಮ್ಮ ವ್ಯಕ್ತಿತ್ವವನ್ನು ಕೂಡ ಹೇಳುತ್ತದೆ ವ್ಯಕ್ತಿಯ ನಡುವಳಿಕೆ ಸ್ವಭಾವ ಆತ್ಮ ವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದು ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ ಬಟ್ಟೆ ಕೂಡ ಬದಲಾಗಿದೆ ಪಾಶ್ಚಿಮಾತ್ಯ ಸಂಸ್ಕೃತಿ ಯಿಂದಾಗಿ ಭಾರತೀಯರು ಧರಿಸುವ ಬಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನೋಡಬಹುದು ಅಲ್ಲಲ್ಲಿ ಹರಿದ ಜೀನ್ಸ್ ಸೇರದಂತೆ ಭಿನ್ನ ಭಿನ್ನ ಫ್ಯಾಷನ್ ಬಟ್ಟೆಯಲ್ಲಿ ನೋಡಬಹುದಾಗಿದೆ. ಆದರೆ ಹಿಂದೂ ಶಾಸ್ತ್ರದ ಪರಕರ ಕೆಲವೊಂದು ಬಟ್ಟೆ ನಮಗೆ ಶುಭವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಬಟ್ಟೆಯನ್ನು ಹಾಕಿ ಕೊಳ್ಳುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯ ನಷ್ಟ ಆಗುತ್ತದೆ. ಇದು ಮನಸ್ಸು ಹಾಗೇ ದೇಹವನ್ನು ದುರ್ಬಲ ಗೊಳಿಸಿ ಕೆಲವು ರೋಗಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಪ್ರೇಮ ರೊಮ್ಯಾನ್ಸ್ ಸಂತೋಷ ನೀಡುವ ಗ್ರಹ ಎಂದು ಪರಿಗಣಿಸಲಾಗಿದೆ
ಮನರಂಜನೆ ಹಾಗೂ ಐಷಾರಾಮಿ ಗ್ರಹ ಎಂದು ಚಂದ್ರನನ್ನು ಕರೆಯಲಾಗುತ್ತದೆ. ಹರಿದ ಬಟ್ಟೆಯನ್ನು ಧರಿಸುವುದರಿಂದ ಚಂದ್ರ ಗ್ರಹ ದುರ್ಬಲ ಆಗುತ್ತದೆ ಎಂದು ನಂಬಲಾಗಿದೆ. ಫೆಂಗ್ ಶೂಯಿ ಪ್ರಕಾರ ಹರಿದ ಹಾಗೂ ಹಳೆ ಬಟ್ಟೆ ದುಃಖವನ್ನು ನೀಡುತ್ತದೆ ಹರಿದ ಜೀನ್ಸ್ ಹಾಗೂ ಶರ್ಟ್ ಧರಿಸುವುದರಿಂದ ಬಡತನ ನಮ್ಮನ್ನು ಹುಡುಕಿಕೊಂಡು ಬರುತ್ತದೆ, ಹರಿದ ಬಟ್ಟೆ ಆಕರ್ಷಕ ಆಗಿದ್ದು ಸುಂದರವಾಗಿ ಕಾಣುತ್ತದೆ ಇದ್ದರೂ ಅದನ್ನು ಖರೀದಿ ಮಾಡಬೇಡಿ ಹರಿದ ಬಟ್ಟೆ ಮನೆಯಿಂದ ಹೊರಗೆ ನಿಷಿದ್ದ ಮನೆಯಲ್ಲಿ ಇದನ್ನು ಧರಿಸಿದರೆ ಸಕಾರಾತ್ಮಕ ಶಕ್ತಿ ನಷ್ಟ ಆಗಿ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಲು ಕಾರಣ ಆಗುತ್ತದೆ. ಬುಧವಾರ ಗುರುವಾರ ಹಾಗೂ ಶುಕ್ರವಾರ ಮಾತ್ರ ಹೊಸ ಬಟ್ಟೆಯನ್ನು ಧರಿಸಬೇಕು ಒಣಗಿದ ಬಟ್ಟೆಯನ್ನು ಎಂದು ರಾತ್ರಿ ಹೊರಗೆ ಬಿಡಬಾರದು ನಕಾರಾತ್ಮಕ ಶಕ್ತಿ ಬಟ್ಟೆಯ ಮೂಲಕ ಮನೆ ಮತ್ತು ಮನಸ್ಸನ್ನು ಪ್ರವೇಶ ಮಾಡಬಹುದು
ಶನಿವಾರ ಮತ್ತು ಅಮಾವಾಸ್ಯೆ ದಿನ ಎಂದೂ ಹೊಸ ಬಟ್ಟೆಯನ್ನು ಧರಿಸಬೇಡಿ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು ಆದರೆ ಅದೇ ಬಟ್ಟೆ ನಿಮ್ಮ ದುರದೃಷ್ಟಕ್ಕೆ ಕಾರಣ ಆಗಬಹುದು ಮನೆಯಿಂದ ಹೊರ ಹೋಗುವಾಗ ಅಲ್ಲ ಮನೆಯಲ್ಲಿ ಇರುವಾಗ ಅಥವಾ ಅಡುಗೆ ಮಾಡುವಾಗ ಕೂಡ ಹಳೆಯ ಹಾಗೂ ಹರಿದ ಬಟ್ಟೆಯನ್ನು ಧರಿಸಬಾರದು ಇದು ಬಡತನಕ್ಕೆ ದಾರಿ ಮಾಡಿಕೊಡುತ್ತದೆ. ಬಟ್ಟೆಯನ್ನು ತೊಳೆದ ನಂತರ ಅದನ್ನು ಬಿಸಿಲಿಗೆ ಒಣ ಹಾಕಬೇಕು. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿ ಬಳಸಿದ ಬಟ್ಟೆಯನ್ನು ಸ್ವಚ್ಛಗೊಳಿಸಿ ಬಿಸಿಲಿಗೆ ಹಾಕಬೇಕು ಸಣ್ಣ ಪುಟ್ಟ ವಿಷಯಗಳು ಕೂಡ ನಮ್ಮ ಆರೋಗ್ಯ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ. ಇಂತಹ ಹಕ್ವು ಮಾಹಿತಿಗಾಗಿ ಈ ಪೇಜ್ ಲೈಕ್ ಮಾಡಿರಿ.