ಅಧಿಕ ರಕ್ತದೊತ್ತಡವನ್ನು ಈ ಕ್ರಮಗಳನ್ನು ಬಳಸಿ ನಿವಾರಿಸಿಕೊಳ್ಳಿ

31

ಒತ್ತಡದ ಜೀವನದಿಂದಾಗಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿದೆ ಅದರಲ್ಲೂ ಇಂದಿನ ಕಾಲದಲ್ಲಿ ಪ್ರತಿಯೊಂದರಿಂದಲೂ ಕೂಡ ಮನುಷ್ಯನಿಗೆ ಹಲವಾರು ಕಾಯಿಲೆಗಳು ಬರುತ್ತಿವೆ ಏಕೆಂದರೆ ಇಂದಿನ ಒತ್ತಡದ ಜೀವನವೇ ಇದಕ್ಕೆಲ್ಲ ಕಾರಣ ಪ್ರತಿಯೊಂದಕ್ಕೂ ತುಂಬಾ ಯೋಚನೆ ಸುಸ್ತು ನಿರಾಸೆ ಉದ್ವೇಗ ದುಃಖ ಹೀಗೆ ಹಲವಾರು ಕಾರಣಗಳು ಕೂಡ ಇದರಲ್ಲಿ ಸೇರಿಕೊಳ್ಳುತ್ತವೆ ಮನುಷ್ಯ ಸುಖವಾಗಿ ಆರೋಗ್ಯವಾಗಿ ಬದುಕ ಬೇಕು ಎಂದರೆ ಆತನಿಗೆ ಒತ್ತಡ ಮುಕ್ತ ಜೀವನ ಇರಬೇಕು ಆದರೆ ಇವತ್ತಿನ ದಿನಮಾನಗಳಲ್ಲಿ ಅಂತಹ ಒತ್ತಡ ರಹಿತ ಜೀವನ ಯಾರಿಗೂ ಸಹ ಸಿಗಲು ಸಾಧ್ಯವಿಲ್ಲ ಹಾಗಾಗಿ ಮನುಷ್ಯ ಇವತ್ತು ತುಂಬಾ ಅನುಭವಿಸಬೇಕಾಗಿದೆ ಹೀಗಾಗಿ ಅಧಿಕ ರಕ್ತದೊತ್ತದ ಎನ್ನುವುದು ಆತನನ್ನು ಬೆಂಬಿಡದೆ ಕಾಡುತ್ತಿದೆ ಈ ಅಧಿಕ ಒತ್ತಡದಿಂದಾಗಿ ಬರುವಂತಹ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಲು ಕೆಲವೊಂದು ವಿಧಾನಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲನೆಯದಾಗಿ ನಿಯಮಿತ ವ್ಯಾಯಾಮ ವ್ಯಾಯಾಮವು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದು

ಎಂದು ಪ್ರತಿಯೊಬ್ಬರಿಗೂ ಸಹ ಗೊತ್ತು ಹೀಗಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಮತ್ತು ಹೃದಯವು ಆರೋಗ್ಯವಾಗಿ ಇರುತ್ತದೆ ಎರಡನೆಯದು ಆಹಾರ ಕ್ರಮದಲ್ಲಿ ಬದಲಾವಣೆ ನಾವು ತಿನ್ನುವಂತಹ ಆಹಾರವು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ ಹೀಗಾಗಿ ತಿನ್ನುವ ಆಹಾರವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಕೆಲವೊಂದು ಆಹಾರಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಂಡರೆ ಆಗ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಿಕೊಳ್ಳಬಹುದು. ಮೊಸರು ಹಸಿರೆಲೆ ತರಕಾರಿಗಳು ಬಾಳೆಹಣ್ಣು ಓಟ್ಸ್ ಬೆರಿಗಳು ಬೀಜಗಳು ಆಲಿವ್ ಎಣ್ಣೆ ಮತ್ತು ನಾರಿನಂಶ ಅಧಿಕವಾಗಿರುವ ಆಹಾರಗಳನ್ನು ಬಳಸಬೇಕು. ಮೂರನೆಯದು ಒತ್ತಡವನ್ನು ನಿಭಾಯಿಸಬೇಕು ಒತ್ತಡವು ಹಲವಾರು ವಿಧದಿಂದ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ದೈನಂದಿನ ಕೆಲವೊಂದು ಚಟುವಟಿಕೆಗಳಿಂದಲು ಒತ್ತಡವು ಹೆಚ್ಚಾಗುವುದು ದಿನವಿಡಿ ಒತ್ತಡ ಹೆಚ್ಚಾಗುತ್ತಲೇ ಇದ್ದರೆ ನೀವು ರಕ್ತದೊತ್ತಡ ಕಡಿಮೆ ಮಾಡಲು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು

ವ್ಯಾಯಾಮ ಯೋಗ ಮತ್ತು ಧ್ಯಾನದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ನಾಲ್ಕನೆಯದು ಧೂಮಪಾನವನ್ನು ತ್ಯಜಿಸಬೇಕು ನಿಯಮಿತವಾಗಿ ಧೂಮಪಾನ ಮಾಡಿದರೆ ಅದರಿಂದ ರಕ್ತದ ಒತ್ತಡವು ಹೆಚ್ಚಾಗುತ್ತದೆ ನಿಯಮಿತವಾಗಿ ಧೂಮಪಾನ ಮಾಡುತ್ತ ಇದ್ದರೆ ಆಗ ನೀವು ಖಂಡಿತವಾಗಿಯೂ ಕೂಡ ಧೂಮಪಾನವನ್ನು ತ್ಯಜಿಸಬೇಕು ನಿಮಗೆ ಸಾಧ್ಯವಾಗದೇ ಇದ್ದರೆ ಧೂಮಪಾನವನ್ನು ತ್ಯಜಿಸಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆ ಅಂಟಿಕೊಂಡ ಆ ಕೆಟ್ಟ ಅಭ್ಯಾಸದಿಂದ ನೀವು ಬೇಗನೆ ಹೊರಗೆ ಬರಬಹುದು ಹಾಗೇನೇ ಇದರಿಂದ ನಿಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಇದರಿಂದ ನೀವು ನಿಮ್ಮ ಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸಿಕೊಳ್ಳಬಹುದು ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here