ಅಲೋವೆರಾ ಉಪಯೋಗ ಮಾಡುವ ಮುನ್ನ ಇದನ್ನು ಪಾಲಿಸಿ

90

ಅಲೋವೆರಾ ಇದು ಒಂದು ಆಯುರ್ವೇದಿಕ್ ಗಿಡವಾಗಿದೆ. ನೋಡಲು ಹಸಿರು ಬಣ್ಣದಿಂದ ಕೂಡಿದ್ದು ಸುತ್ತಲೂ ಚಿಕ್ಕ ಚಿಕ್ಕ ಮುಳ್ಳುಗಳಿಂದ ಕೂಡಿರುತ್ತದೆ. ಮತ್ತು ಇದರ ಮಹತ್ವದ ಅಂಶ ಏನೆಂದರೆ ಇದು ಲೋಳೆ ರೂಪದಲ್ಲಿ ಸಿಗುತ್ತದೆ. ಇದನ್ನು ಮುಟ್ಟಲು ಅಂಟು ಅಂಟಾಗಿರುತ್ತದೆ. ಆದರೆ ಇದರಿಂದ ತುಂಬಾ ಲಾಭಗಳು ದೊರೆಯುತ್ತವೆ. ಹಾಗಾದರೆ ಈ ಅಲೋವೆರಾವನ್ನು ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮತ್ತು ಸೇವಿಸದೇ ಇದ್ದರೆ ಯಾವ ರೀತಿಯ ಹಾನಿಯುಂಟು ಮಾಡುತ್ತದೆ ಎಂದು ನೋಡೋಣ. ಅಲೋವೆರಾವನ್ನೂ ಯಾವ ಸಮಯದಲ್ಲೂ ಬೇಕಾದರೂ ಸೇವಿಸುವ ಹಾಗಿಲ್ಲ. ಹೀಗೆ ಮಾಡಿದರೆ ಸಿಗುವ ಲಾಭಗಳು ಕೂಡ ಪರಿಣಾಮಕಾರಿ ಆಗುತ್ತವೆ. ಈ ಅಲೋವೆರ ವನ್ನು ಮೂರು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಅಲೋವೆರಾ ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. ಮತ್ತು ಅಲೋವೆರಾ ಮಧ್ಯಭಾಗವನ್ನು ಇನ್ನರ್ ಲೀಫ್ ಎಂದು ಕರೆಯುತ್ತಾರೆ. ಇದೆ ಭಾಗವೇ ಅಲೋವೆರಾ ಜೆಲ್ ಎಂದು ಕೂಡ ಕರೆಯುತ್ತಾರೆ. ಇದು ಲೊಳೆಯಾಗಿ ಸಿಗುತ್ತದೆ. ಅಲೋವೆರಾ ಮೂರನೇ ಭಾಗವನ್ನು ಅಲೋವೆರಾ ಲ್ಯಾಟಿಕ್ಸ್ ಎನ್ನುತ್ತಾರೆ. ಇದು ಅಲೋವೆರಾ ಕೆಳಭಾಗದಲ್ಲಿ ಇರುವ ಅರಿಶಿನ ಬಣ್ಣದ ರಸ

ಇದನ್ನು ಎಲ್ಲೋ ಇಷ್ ಸ್ವೀಟ್ಸ್ ಎಂದು ಕರೆಯುತ್ತಾರೆ. ಈ ಎಲ್ಲೋ ಕಲರ್ ನಲ್ಲಿ ಇರುವ ರಸವನ್ನು ಸೇವಿಸಬಾರದು. ಇದನ್ನು ಯಾವುದೇ ಕಾರಣಕ್ಕೂ ಸ್ಕಿನ್ ಗೆ ಹಚ್ಚಬಾರದು. ಕೆಲವರಿಗೆ ಇದರಿಂದ ಏನು ತೊಂದರೆ ಆಗುವುದಿಲ್ಲ. ಆದರೆ ಸೂಕ್ಷ್ಮ ಚರ್ಮ ಇರುವವರು ಈ ಹಳದಿ ರಸವನ್ನು ಹಚ್ಚಬಾರದು. ಅಲೋವೆರಾ ಬಳಸಬೇಕೆಂದರೆ ಈ ಹಳದಿ ರಸವನ್ನು ತೆಗೆದು ಬಳಸಬೇಕು. ಒಂದು ವೇಳೆ ಹಾಗೆ ಬಳಸಿದರೆ ಚರ್ಮ ತುರಿಕೆ ಮತ್ತು ಸ್ಕಿನ್ ಬ್ಲೀಚಿಂಗ್ ಗೆ ಮತ್ತು ಸ್ಕಿನ್ ಗೆ ರಿಡ್ ನೆಸ್ ಗೆ ಆಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇದು ಎದೆ ಉರಿಗೆ ಹೊಟ್ಟೆ ಉರಿಗೆ ಹಾಗೆ ಗಂಟಲು ನೋವಿಗೆ ಕಾರಣವಾಗುತ್ತದೆ. ಅಲೋವೆರಾ ಇಂದ ತುಂಬಾ ಲಾಭಗಳಿವೆ. ಇದನ್ನು ಸೌಂದರ್ಯ ವರ್ಧಕವಾಗಿ ಜೆಲ್ ಕ್ರೀಮಗಲಾಗಿ ಬಳಸುತ್ತಾರೆ. ಆದರೆ ಅದನ್ನು ಸರಿಯಾಗಿ ಬಳಸುವ ರೀತಿಯಲ್ಲಿ ಬಳಸಿದರೆ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲವಾದರೆ ದುಷ್ಪರಿಣಾಮ ಬೀರುತ್ತದೆ. ಅಲೋವೆರಾವನ್ನು ಕತ್ತರಿಸಿ ಅರ್ಧ ಗಂಟೆ ಹಾಗೆ ಬಿಡಬೇಕು. ನಂತರ ಹಳದಿ

ಭಾಗವಿರುವ ಅಲೋವೆರಾವನ್ನು ಕಟ್ ಮಾಡಬೇಕು. ಉಳಿದ ಅಲೋವೆರಾವನ್ನು ಬಳಸಬೇಕು. ಮಾರ್ಕೇಟ್ ನಲ್ಲಿ ಹಲವಾರು ಬ್ರಾಂಡ್ ಅಲೋವೆರಾ ಸಿಗುತ್ತದೆ. ಇದಕ್ಕಿಂತ ಉತ್ತಮ ಎಂದರೆ ಮನೆಯಲ್ಲಿ ಅಲೋವೆರಾ ಗಿಡವನ್ನು ಬೆಳಸಬೇಕು. ಉತ್ತಮ ಬ್ರಾಂಡ್ ಗಿಂತ ನೈಸರ್ಗಿಕವಾಗೀ ಸಿಗುವ ಅಲೋವೆರಾ ತುಂಬಾ ಒಳ್ಳೆಯದು. ಮತ್ತು ಅಲೋವೆರಾ ಜೆಲ್ ಅನ್ನು ಚರ್ಮದ ಅಂದವನ್ನು ಹೆಚ್ಚಿಸಲು ಬಳಸುತ್ತಾರೆ. ಇದು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಮತ್ತು ಇನ್ನೂ ಅಲೋವೆರಾ ಜ್ಯೂಸ್, ಫ್ರೆಶ್ ಅಲೋವೆರಾ ಜ್ಯೂಸ್ ಅನ್ನು ಸೇವಿಸಬೇಕು. ಇದು ನ್ಯಾಚುರಲ್ ಆಗಿ ಇರಬೇಕು. ಇದನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಕಲ್ಮಶ ಹೋಗಲಾಡಿಸಬಹುದು. ಮತ್ತು ಇದರಿಂದ ಉತ್ತಮ ಫಲಿತಾಂಶ ಕೂಡ ದೊರೆಯುತ್ತದೆ. ಮಾರ್ಕೇಟ್ ನಲ್ಲಿ ಸಿಗುವ ಅಲೋವೆರಾ ಜ್ಯೂಸ್ ಗಿಂತ ಪತಂಜಲಿ ಅಲೋವೆರಾ ಜ್ಯೂಸ್ ಚೆನ್ನಾಗಿ ಸಿಗುತ್ತದೆ. ಇದು ಕೆಲವರ ಅಭಿಪ್ರಾಯ. ನಿಮಗೆ ಯಾವುದು ಆರೋಗ್ಯಕ್ಕೆ ಒಳ್ಳೆಯದು ಅದನ್ನು ಮಾತ್ರ ಸೇವಿಸಿ ಮತ್ತು ಉಪಯೋಗಿಸಿ. ಈ ಒಂದು ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here