ಆಂಬುಲೆನ್ಸ್ ಬಂದ್ರು ಸಹ ರೈಲ್ವೆ ಗೇಟ್ ತೆಗೆಯೋದಿಲ್ಲ ಇದಕ್ಕೆ ಕಾರಣ ಇದೆ

67

ಒಮ್ಮೆ ಮುಚ್ಚಿದ ರೈಲು ಗೇಟನ್ನು ರೈಲು ಹೋದಮೇಲೆ ತೆರೆಯಲು ಕಾರಣ ಇಲ್ಲಿದೆ ನೋಡಿ. ಪ್ರಿಯ ಓದುಗರೇ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದುಬಾರಿ ರೈಲ್ವೆ ಹಳಿಯನ್ನು ದಾಟುವಾಗ ರೈಲು ಬರುವಾಗ ರೈಲ್ವೆ ಗೇಟ್ ಬಳಿ ನಿಂತು ಆ ರೈಲು ಹೋದಮೇಲೆ ಗೇಟು ತೆರೆದಾಗ ನಾವು ಅಲ್ಲಿಂದ ನಿರ್ಗಮಿಸುವ ಅನುಭವವನ್ನು ಪಡೆದಿರುತ್ತೀವಿ ಕೆಲವರಿಗೆ ಇದನ್ನು ಬಿಟ್ಟು ಇನ್ನು ಒಂದು ಅನುಭವ ಆಗಿರುತ್ತದೆ ಅಲ್ಲಿ ಒಂದು ರೈಲು ಹೋಗುತ್ತಿದೆ ಎಂದಾಗ 5 ನಿಮಿಷಗಳ ಕಾಲ ಮುಂಚೆನೇ ಆ ಗೇಟನ್ನು ಮುಚ್ಚಾಲಾಗುತ್ತದೆ ಆ ಗೇಟ್ ಮುಚ್ಚಿದ ತಕ್ಷಣ ತುಂಬಾ ಹುಷಾರಿಲ್ಲದ ರೋಗಿಯ ಒಂದು ಆಂಬುಲೆನ್ಸ್ ಬಂದು ಆ ರೈಲ್ವೆ ಗೇಟ್ ಹತ್ತಿರ ನಿಲ್ಲುತ್ತದೆ ರೈಲು ಬರಲು ಇನ್ನು 5 ನಿಮಿಷ ಇದೆ ಅಷ್ಟರಲ್ಲಿ ಈ ಆಂಬುಲೆನ್ಸ್ ಹೋಗುವುದಕ್ಕೆ ಜಾಗ ಕೊಡಬಹುದು ಎಂದು ನೀವು ಯೋಚಿಸಿರುತ್ತಿರ ಆದರೆ ಅಲ್ಲಿರುವ ರೈಲ್ವೇಗೇಟ್ ನೋಡಿಕೊಳ್ಳುವವನು ರೈಲ್ವೆ ಹೋದಮೇಲೆ ಗೇಟನ್ನು ತೆರೆದು ಆಂಬುಲೆನ್ಸ್ ಹೋಗುವುದಕ್ಕೆ ದಾರಿ ಮಾಡಿಕೊಡುತ್ತಾನೆ

ಇದನ್ನು ನೋಡಿದಾಗ ಆ ಗೇಟ್ ಕಾಯುವವನನ್ನು ನಾವು ಬೈದಿರುತ್ತೇವೆ ಆದರೆ ಒಮ್ಮೆ ಮುಚ್ಚಿದ ಗೆಟನ್ನು ಯಾವುದೇ ತುರ್ತು ಪರಿಸ್ಥಿತಿಯಲ್ಲೂ ಕೂಡ ರೈಲ್ವೆ ಗೇಟ್ ಕಾಯುವವರು ಯಾವುದೇ ಕಾರಣಕ್ಕೂ ಅದನ್ನು ತೆರೆಯುವುದಿಲ್ಲ ಏಕೆ ಅದನ್ನು ತೆರೆಯುವುದಿಲ್ಲ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಒಂದು ರೈಲು ನಿಲ್ದಾಣದಿಂದ ಹೊರಟ ನಂತರ ಆ ರೈಲ್ವೆ ನಿಲ್ದಾಣದ ಸ್ಟೆಷೆನ್ ಮಾಸ್ಟರ್ ಅವರು ಮುಂದಿನ ನಿಲ್ದಾಣದ ಸ್ಟೇಷನ ಮಾಸ್ಟರ್ ಮತ್ತು ರೈಲು ಹಾದು ಹೋಗೋ ಹಾದಿಯಲ್ಲಿ ಕಾರ್ಯ ನಿರ್ವಹಿಸೋ ರೈಲ್ವೆ ಗೇಟ್ ಕಾಯುವವರಿಗೆ ಗೇಟ್ ನ್ನು ಮುಚ್ಚುವ ಆದೇಶವನ್ನು ನೀಡುತ್ತಾರೆ ಇನ್ನು ಗೇಟ್ ಮುಚ್ಚಿದ ನಂತರ ಸೂಚನೆ ಹಸಿರು ಬಣ್ಣಕ್ಕೆ ತಿರುಗುವುದರಿಂದ ರೈಲು ಚಾಲಕ ನಿಗದಿತ ವೇಗದಲ್ಲಿ ರೈಲನ್ನು ಚಲಾಯಿಸುತ್ತಾರೆ ಮತ್ತು ಈ ರೈಲ್ವೆ ಗೇಟ್ ಕಂಟ್ರೋಲ್ ಸಿಸ್ಟಮ್ ಇದು ಸಿಗ್ನಲ್ ಲಾಕಿಂಗ್ ಸಿಸ್ಟಮನ್ನು ಹೊಂದಿದ್ದು ಗೇಟ್ ಮುಚ್ಚಿದ ತಕ್ಷಣ ತನ್ನಿಂದ ತಾನೇ ಲಾಕ್ ಆಗೋ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತೆ

ಸ್ಟೇಷನ ಮಾಸ್ಟರ್ ಡಿಜಿಟಲ್ ಸೂಚನೆ ಮೂಲಕ ಅನುಮತಿ ನೀಡಿದ ಮೇಲೆ ಆ ಲಾಕ್ ತೆರೆಯುತ್ತದೆ ಮತ್ತೆ ಆ ಗೇಟ್ ಕಾಯುವವರ ಬಳಿ ಇರುವ ವಸ್ತುವಿನಲ್ಲಿ ಒಂದು ಬಲ್ಬ್ ಹತ್ತುತ್ತದೆ ಆಗ ಮಾತ್ರ ಅವರು ಗೇಟ್ ನ್ನು ತೆರೆಯುತ್ತಾರೆ. ಸ್ಟೇಷನ್ ಮಾಸ್ಟರ್ ಕಡೆಯಿಂದ ಡಿಜಿಟಲ್ ಸೂಚನೆ ಬರದೆ ಇದ್ದರೆ ಇವರು ಗೆಟನ್ನು ತೆರೆಯಲು ಆಗುವುದಿಲ್ಲ ಮತ್ತೆ ತುಂಬಾ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಅಂದರೆ ಆಂಬುಲೆನ್ಸ್ ಗಳು ಅದೇ ರಸ್ತೆಯಲ್ಲಿ ಸಾಗುವ ಸಂದರ್ಭಗಳಲ್ಲಿ 5 ರಿಂದ 6 ನಿಮಿಷ ಸಮಯ ಆಗುತ್ತದೆ ಎಂದು ಗೊತ್ತಿದ್ದಾಗ ಗೇಟ್ ಕಾಯುವವರಿಂದ ಗೇಟನ್ನು ತೆರೆಯಲು ಸಾಧ್ಯವಿಲ್ಲ ಇಂತಹ ಸಂದರ್ಭಗಳಲ್ಲಿ ಆಂಬುಲೆನ್ಸ್ ಚಾಲಕ ತನ್ನ ರಸ್ತೆಯನ್ನು ಬದಲಾಯಿಸ ಬೇಕಾಗುತ್ತದೆ ಆದರೆ ಒಂದು ವೇಳೆ ರೈಲು ತುಂಬಾ ತಡವಾಗಿ ಬರುವುದಿದ್ದರೆ ಅಥವಾ ಆ ಆಂಬುಲೆನ್ಸ್ ಹೋಗುವುದಕ್ಕೆ ಬೇರೆ ಯಾವುದೇ ರಸ್ತೆ ಇಲ್ಲ ಅಂದರೆ ರೈಲ್ವೆ ಸ್ಟೇಷನ ಮಾಸ್ಟರ್ ಬಳಿ ಮನವಿ ಮಾಡಿಕೊಂಡು ಅವರು ಅನುಮತಿ ಕೊಟ್ಟರೆ ಮಾತ್ರ

ಆ ಒಂದು ಗೆಟನ್ನು ತೆರೆಯಲು ಸಾಧ್ಯ. ಅಂದರೆ ರೈಲು ಬರಲು ತಡವಾದರೆ ಮಾತ್ರ ತೆರೆಯುತ್ತಾರೆ. ಏಕೆ ಇದನ್ನು ಇಷ್ಟೊಂದು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದರೆ ಒಂದು ರೈಲು ನಿಲ್ದಾಣ ಬಿಟ್ಟ ಸ್ವಲ್ಪ ಸಮಯದಲ್ಲೇ ತನ್ನ ವೇಗವನ್ನು ಹೆಚ್ಚು ಮಾಡಿಕೊಂಡು ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಅದೇ ರೈಲನ್ನು ನಿಲ್ಲಿಸುವ ವಿಚಾರ ಬಂದಾಗ ಅದು ಅಷ್ಟು ಸುಲಭವಾಗಿ ಇರುವುದಿಲ್ಲ ಮತ್ತು ರೈಲಿನಲ್ಲಿ ತುರ್ತು ಸೌಲಭ್ಯ ಇದ್ದರು ಕೂಡ ಅದನ್ನು ಉಪಯೋಗಿಸುವುದು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಒಂದು ರೈಲನ್ನು ಸಂಪೂರ್ಣವಾಗಿ ನಿಲ್ಲಿಸೋಕೆ ಇಂತಿಷ್ಟು ಸಮಯ ಅಂತರ ಇರಬೇಕು ಎನ್ನುವ ನಿಯಮ ಇರುತ್ತದೆ ಮತ್ತು ರೈಲಿನಲ್ಲಿರುವ ಸಾವಿರಾರು ಪ್ರಯಾಣಿಕರ ದೃಷ್ಟಿಯಿಂದ ರೈಲಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಒಬ್ಬರ ಪ್ರಾಣ ಉಳಿಸಲು ಹೋಗಿ ರೈಲಿನಲ್ಲಿರುವ ಸಾವಿರಾರು ಜನರ ಬಾಳಲ್ಲಿ ಆಟವಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ರೈಲ್ವೆ ಅಧಿಕಾರಿಗಳ ಲೆಕ್ಕಾಚಾರವಾಗಿರುತ್ತದೆ ಹಾಗಾಗಿ ಒಮ್ಮೆ ಮುಚ್ಚಿದ ರೈಲು ಗೆಟನ್ನು ರೈಲು ಅಲ್ಲಿಂದ ಹಾದು ಹೋಗುವವರೆಗೂ ತೆರೆಯುವುದಿಲ್ಲ.

LEAVE A REPLY

Please enter your comment!
Please enter your name here