ಇದನ್ನು ಬಳಸಿ ನಿಮ್ಮ ಅನಾರೋಗ್ಯ ಬಾಧೆಗಳು ಕಡಿಮೆ ಆಗಲಿದೆ

53

ಮೈ ತುಂಬಾ ಮುಳ್ಳು ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ. ಸ್ಪರ್ಶ ತಾಗಿದ ತಕ್ಷಣವೇ ನಾಚಿ ಕೆಂಪಾಗಿ ಮುಸುಗೊಂಡು ಕುಳಿತಂತೆ ಭಾಸವಾಗುತ್ತದೆ. ಚಿಕ್ಕ ಮಕ್ಕಳಿಗೆ ಈ ಗಿಡದ ಜೊತೆಗೆ ಆಟವಾಡಲು ಇಷ್ಟ. ಏಕೆಂದ್ರೆ ಇದನ್ನು ಮುಟ್ಟಿದರೆ ಇದು ಮುಣಿಚಿ ಕೊಳ್ಳುತ್ತದೆ. ಇದೊಂದು ಪ್ರಕೃತಿಯ ರಹಸ್ಯವಾಗಿದ್ದು, ಇದು ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನಲ್ಲಿ ತಂತ್ರವನ್ನು ಹೊಂದಿದೆ. ಇದು ಪ್ರಕೃತಿಯ ವಿಸ್ಮಯ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ಈ ಸ್ವಭಾವದಿಂದ ಮಕ್ಕಳು ತುಂಬಾ ಆಕರ್ಷಿತರಾಗುತ್ತಾರೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಆಡು ಭಾಷೆಯಲ್ಲಿ ಇದನ್ನು ನಾಚಿಕೆ ಮುಳ್ಳು, ಮುಟ್ಟಿದರೆ ಮುಚುಕ ಮುಟ್ಟಿದರೆ ಮುನಿ ಎಂಬ ಹಲವಾರು ಹೆಸರುಗಳಿಂದ ಈ ಸಸ್ಯವೂ ಪ್ರಸಿದ್ದಿಯನ್ನು ಪಡೆದಿದೆ. ಇನ್ನೂ ಈ ಮುಟ್ಟಿದರೆ ಮುನಿಯನ್ನು ಇಂಗ್ಲಿಷ್ ನಲ್ಲಿ ಟಚ್ ಮಿ ನೋಟ್ ಅಂತ ಕರೆಯುತ್ತಾರೆ. ಕೆಲವು ಸಸ್ಯಗಳಲ್ಲಿ ಎಂಥಹ ಶಕ್ತಿ ಅಡಗಿದೆ ಎಂದರೆ ಕೆಲವೊಂದು ಬಾರಿ ನಂಬುದಕ್ಕೂ ಕೂಡ ಅಸಾಧ್ಯವಾಗುತ್ತದೆ. ಅದೇ ರೀತಿ ಅದರಲ್ಲಿ ಈ ಮುಟ್ಟಿದರೆ ಮುನಿ ಮೂಲತಃ ದಕ್ಷಿಣ ಹಾಗೂ

ಮಧ್ಯ ಅಮೆರಿಕ ಆಗಿದ್ದು ಇದು ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣಗಳನ್ನು ಹೊಂದಿದೆ. ಮೈ ತುಂಬಾ ಮುಳ್ಳುಗಳನ್ನು ತುಂಬಿಕೊಂಡಿರುವ ಈ ಸಸ್ಯ ಮುಟ್ಟಿದ ತಕ್ಷಣವೇ ಮುದುಡಿ ಕೊಳ್ಳುತ್ತದೆ. ಹಳ್ಳಿಗಳಲ್ಲಿ ಮುಟ್ಟಿದರೆ ಮುನಿ ಎಂದರೆ ಅದು ಒಂದು ಕಳ್ಳಿ ಗಿಡ ಇದ್ದಂತೆ. ಈ ಸಸ್ಯ ಎಲ್ಲಿ ಬೇಕಾದರೂ ಬೆಳೆಯುವ ಚಿಕ್ಕ ಸಸ್ಯವಾಗಿದೆ. ಆದರೆ ಆಯುರ್ವೇದ ಶಾಸ್ತ್ರದ ಪ್ರಕಾರ ಮುಟ್ಟಿದರೆ ಮುನಿಗೆ ಬಹಳ ವಿಶೇಷವಾದ ಮಹತ್ವ ಇದೆ. ಇಂದಿನ ಲೇಖನದಲ್ಲಿ ಈ ಮುಟ್ಟಿದರೆ ಮುನಿ ಈ ಚಿಕ್ಕ ಸಸ್ಯದ ಆರೋಗ್ಯಕರ ಲಾಭವನ್ನು ವಿವರವಾಗಿ ತಿಳಿದುಕೊಳ್ಳೋಣ. ಬನ್ನಿ. ಈ ಸಸ್ಯವನ್ನು ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯ ಮಾಡಿ ಕುಡಿದರೆ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಮೂಲ ವ್ಯಾಧಿ ಯನ್ನು ಗುಣಮುಖ ಪಡಿಸಿಕೊಳ್ಳಬಹುದು. ಇನ್ನೂ ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುವವರು ಮುಟ್ಟಿದರೆ ಮುನಿ ಸಸ್ಯವನ್ನು ಜಜ್ಜಿ ಅದರ ರಸವನ್ನೂ ಸೇವನೆ ಮಾಡಬೇಕು. ಈ ರೀತಿಯಲ್ಲಿ ಸಸ್ಯ ತುಂಬಾ ಪರಿಣಾಮಕಾರಿಯಾಗಿ ಮಲಬದ್ಧತೆಯನ್ನು  ನಿವಾರಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ ಪ್ರಮಾಣದಲ್ಲಿ ಕುಡಿಯಬೇಕು.

ಇನ್ನೂ ಈ ಮುಟ್ಟಿದರೆ ಮುನಿ ಕಷಾಯವನ್ನು ಮಾಡಿ ಕುಡಿಯುವುದರಿಂದ ಮಂಡಿ ನೋವು, ಮೂತ್ರ ಪಿಂಡದ ಸಮಸ್ಯೆಗಳನ್ನು ಕೂಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಗಾಯವಾಗಿ ರಕ್ತ ಸ್ರಾವ ಆಗುತ್ತಿದ್ದರೆ ಮುಟ್ಟಿದರೆ ಮುನಿ ಎಲೆಗಳ ರಸವನ್ನು ಹಚ್ಚುವುದರಿಂದ ರಕ್ತ ಸೋರುವುದು ಬೇಗನೆ ನಿಂತು ಹೋಗುತ್ತದೆ. ಹಾಗೂ ಚರ್ಮದಲ್ಲಿ ಆಗುವ ಮೊಡವೆಗಳಿಗೆ ತುರಿಕೆಗಳಿಗೆ ಗುಳ್ಳೆಗಳಿಗೆ ಮುಟ್ಟಿದರೆ ಮುನಿಯ ರಸವನ್ನು ಹಚ್ಚುವುದರಿಂದ ಕ್ರಮೇಣ ಗುಣಮುಖವಾಗುತ್ತದೆ. ಮತ್ತು ಈ ಸಸ್ಯದ ಎಲ್ಲ ಭಾಗಗಳೂ ಔಷಧ ಗುಣಗಳನ್ನು ಹೊಂದಿದೆ. ಗಂಟಲು ಬಾವೂ ಹಾಗೂ ಇತರ ಬಾವೂಗಳಿಂದ ತೊಂದರೆಯನ್ನೂ ಅನುಭವಿಸುತ್ತಿದ್ದರೆ ಈ ಗಿಡದ ಎಲೆಗಳನ್ನು ಚೆನ್ನಾಗಿ ಜಜ್ಜಿ ಹಚ್ಚುವುದರಿಂದ ಬಾವು ಬೇಗನೆ ಇಳಿಯುತ್ತದೆ. ಮೂತ್ರಕೋಶದ ಕಲ್ಲು ನಿವಾರಣೆಯಲ್ಲಿ ಹಾಗೂ ಋತು ಚಕ್ರ ಸರಾಗವಾಗಿ ಆಗುವಲ್ಲಿ ಹಲ್ಲು ನೋವಿನ ನಿವಾರಣೆಯಲ್ಲಿ ಮುಖ್ಯವಾದ ಪಾತ್ರವಹಿಸುತ್ತದೆ. ಇನ್ನೂ ಈ ಗಿಡವನ್ನು ಉಪಯೋಗ ಮಾಡುವಾಗ ಒಂದು ಮುನ್ನೆಚ್ಚರಿಕೆ ಕ್ರಮವನ್ನೂ ಏನು ತೆಗೆದುಕೊಳ್ಳಬೇಕು ಎಂದರೆ ಈ ಮುಟ್ಟಿದರೆ ಮುನಿ ಗಿಡದ ಮುಳ್ಳುಗಳು ಚುಚ್ಚದ ಹಾಗೇ ನೋಡಿಕೊಳ್ಳಿ. ಆ ಮುಳ್ಳುಗಳು ಚುಚ್ಚಿದರೆ ನಂಜು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮುಳ್ಳು ಚುಚ್ಚದಂತೆ ನೋಡಿಕೊಳ್ಳಿ.

LEAVE A REPLY

Please enter your comment!
Please enter your name here