ಇಯರ್ ಫೋನ್ ಬಳಕೆ ಮಾಡುವ ಜನಕ್ಕೆ ಮಾತ್ರ

84

ಹೆಡ್ ಫೋನ್ಸ್ ಬಳಸುವವರಿಗೆ ಒಂದು ಆಶ್ಚರ್ಯಕರ ವಿಷಯ. ನಮಸ್ಕಾರ ಪ್ರಿಯ ಓದುಗರೇ ಉಳಿದ ಜೀವ ರಾಶಿಗಳಿಗೆ ಹೋಲಿಕೆ ಮಾಡಿದರೆ ಈ ಮನುಷ್ಯ ತುಂಬಾನೇ ಬುದ್ಧಿ ಜೀವಿ ಏಕೆಂದರೆ ಈತನು ತನ್ನ ಬುದ್ಧಿವಂತಿಕೆಯಿಂದ ತಂತ್ರಜ್ಞಾನದಿಂದ ಇಂದು ಇಡೀ ಪ್ರಪಂಚವನ್ನೇ ರಾಜ್ಯಭಾರ ಮಾಡುತ್ತಿದ್ದಾನೆ ಈ ಭೂಮಿಯ ಮೇಲೆ ನಾವು ಎಲ್ಲೇ ನೋಡಿದರು ಸಹ ಮನುಷ್ಯ ಸೃಷ್ಟಿಸಿದ ತಂತ್ರಜ್ಞಾನ ನಮಗೆ ಕಾಣಿಸುತ್ತದೆ. 2 ವರ್ಷದ ಮಗುವಿನಿಂದ ಹಿಡಿದು 70 ವರ್ಷದ ಮುದುಕನ ವರೆಗೂ ಎಲ್ಲರೂ ಸಹ ಈ ತಂತ್ರಜ್ಞಾನದ ಹಿಡಿತದಲ್ಲೇ ಬದುಕುತ್ತಿದ್ದಾರೆ ಈ ತಂತ್ರಜ್ಞಾನದಿಂದಾಗಿ ಎಷ್ಟೇ ಕಷ್ಟದ ಕೆಲಸಗಳನ್ನು ಸಹ ಸುಲಭವಾಗಿ ಮಾಡಿಸಬಹುದು ಹಾಗೆಯೇ ಈ ತಂತ್ರಜ್ಞಾನದಿಂದಾಗಿ ಕೆಲವು ಸಮಸ್ಯೆಗಳು ಸಹ ಎದುರಾಗುತ್ತಿವೆ. ನಮ್ಮ ಜೀವನದಲ್ಲಿ ಒಂದು ಭಾಗವಾಗಿ ಬಿಟ್ಟಿರುವ ಕೆಲವೊಂದು ಅಪಾಯಕಾರಿ ವಸ್ತುಗಳು ಉದಾಹರಣೆಗೆ ಹೇಡಪೋನ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಈ ಏರ್ಪೋನ್ಸ್ ಮತ್ತು ಹೆಡ್ ಫೋನ್ಸ್ ಗಳನ್ನು ಇಂದಿನ ಯುವ ಪೀಳಿಗೆ ಹೆಚ್ಚಾಗಿ ಬಳಸುತ್ತಿದ್ದಾರೆ ಇವರಲ್ಲಿ 99% ಜನ ಇವುಗಳನ್ನು ಉಪಯೋಗಿಸುವುದರಿಂದ ನಮ್ಮ ಮೆದುಳಿನ ಮೇಲೆ ಶರೀರದ ಮೇಲೆ ಎಷ್ಟೊಂದು ಕೆಟ್ಟ ಪ್ರಭಾವ ಬಿರುತ್ತೋ ಎಷ್ಟೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತವೋ ಅನ್ನುವುದು ಅವರಿಗೆ ಗೊತ್ತಿಲ್ಲ ಈ ಒಂದು ಲೇಖನದಲ್ಲಿ ಅಂತಹ ಕೆಲವೊಂದು ವಸ್ತುಗಳ ಬಗ್ಗೆ ಕೆಲವು ಆಶ್ಚರ್ಯಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನು ಏರ್ಪೋನ್ಸ್ ಹಾಕಿಕೊಂಡು ಓದುತ್ತಿರುವವರಾದರೆ ನೀವು ಖಂಡಿತ ಆಶ್ಚರ್ಯ ಚಕಿತರಾಗುತ್ತಿರ. ಮೊದಲನೆಯದು ನೀವು ಹೆಡ್ ಫೋನ್ ಉಪಯೋಗಿಸುವವರಾದರೆ ಅದರ ಶಬ್ದದ ಹಂತವನ್ನು 90 ಡೆಸಿಮಿಲ್ಸ್ ಗಳಿಗಿಂತಲು ಹೆಚ್ಚಾಗಿ ಕೇಳಬೇಡಿ ಅದಕ್ಕಿಂತಲು ಹೆಚ್ಚಾಗಿ ಕೇಳಿದರೆ ಬೇಗನೆ ನೀವು ಕಿವುಡರಾಗುತ್ತಿರಿ ಹಾಗೆಯೇ 100 ಡೆಸಿಮಿಲ್ಸ್ ಗಿಂತಲೂ ಹೆಚ್ಚು ಶಬ್ದವನ್ನು 18 ನಿಮಿಷಗಳವರೆಗೂ ಏರ್ಪೋನ್ಸ್ ಮುಖಾಂತರ ಕೇಳಿಸಿಕೊಂಡರೆ ಏನಾಗುತ್ತದೆ ಗೊತ್ತಾ ನಿಮ್ಮ ಕೇಳಿಸಿಕೊಳ್ಳುವ ಶಕ್ತಿಯು ಕುಗ್ಗಿಹೋಗುತ್ತದೆ. ಇನ್ನು ಎರಡನೆಯದು ಒಂದು ಸರ್ವೇ ಪ್ರಕಾರ ರಾತ್ರಿ ಹಗಲು ನಿರಂತರವಾಗಿ ಸಂಗೀತ ಕೇಳುವವರು ಅವರ ಕಿವಿಗಳು ಶೂನ್ಯವಾಗಿ ಬದಲಾಗುತ್ತವೆ.

ಹೀಗಾದರೆ ಭಾರಿ ಶಬ್ದಗಳನ್ನು ಕೇಳಿಸಿಕೊಂಡರೆ ಇವರಿಗೆ ತಡೆದುಕೊಳ್ಳಲು ಆಗುವುದಿಲ್ಲ. ಕೆಲವು ಗಂಟೆಗಳ ನಂತರ ಸಾಮಾನ್ಯವಾಗಿ ಕೇಳಿಸುತ್ತದೆ. ತುಂಬಾ ಹೊತ್ತು ಸಂಗೀತ ಕೇಳುವುದು ಕಿವುಡುತನಕ್ಕೆ ದಾರಿಮಾಡಿಕೊಡುತ್ತದೆ. ಮೂರನೆಯದು ನಿಮ್ಮ ಹೆಡ್ ಫೋನ್ಸ್ ಅಥವಾ ಏರ್ಪೋನ್ಸ್ ಬೆರೆಯೋರಿಗೆ ಕೊಡುತ್ತಿದ್ದರೆ ಹುಷಾರಾಗಿರಿ ಏಕೆಂದರೆ ಇದರಿಂದ ನಿಮಗೆ ಕಿವಿಅಲರ್ಜಿಯು ಸಹ ಆಗಬಹುದು ಈ ಒಂದು ವಸ್ತುವಿನಿಂದ ಸುಲಭವಾಗಿ ಬೇರೆಯವರ ಕಿವಿಗಳಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಕಿವಿಯೊಳಗೆ ಸೇರುತ್ತದೆ ಆದ್ದರಿಂದ ನಿಮ್ಮ ಏರ್ಪೋನ್ಸ್ ಮತ್ತು ಹೆಡ್ ಫೋನ್ಸ್ ಗಳನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ.
ನಾಲ್ಕನೆಯದು ನಿಮಗೆ ಜೋರಾಗಿ ಸಂಗೀತ ಕೇಳುವುದು ಅಭ್ಯಾಸವಿದ್ದರೆ ಆ ಅಭ್ಯಾಸವನ್ನು ಬೇಗನೆ ಬದಲಿಸಿಕೊಳ್ಳಿ ಇಲ್ಲದಿದ್ದರೆ ನೀವು ಬೇಗನೆ ಒತ್ತಡಕ್ಕೆ ಗುರಿಯಾಗುತ್ತಿರಿ ಒತ್ತಡದಿಂದ ಹಾರ್ಮೋನ್ಸ್ ಮತ್ತು ಕಾಂಟೆಸೆನ್ ಪ್ರಭಾವಿತವಾಗುತ್ತವೆ. ಇವು ರಕ್ತದೊತ್ತಡ ಪಲ್ಸ್ ರೇಟ್ ಮತ್ತು ರಕ್ತದಲ್ಲಿ ಕೊಬ್ಬನ್ನು ಹೆಚ್ಚಿಸುತ್ತವೆ. ಐದನೆಯದು ಈ ದಿನಗಳಲ್ಲಿ ಪ್ರತಿಯೊಂದು ಕಂಪನಿಗಳು ಸಹ ನಾಮುಂದು ತಾಮುಂದು ಎಂದು ಏರ್ಪೋನ್ಸಗಳನ್ನು ತಯಾರಿ ಮಾಡುತ್ತಿದೆ ನಮ್ಮ ಕಂಪನಿ ಏರ್ಪೋನ್ಸ್ ಅಥವಾ ಹೆಡ್ ಫೋನ್ಸ್ ಎಲ್ಲದಕ್ಕಿಂತಲು ಒಳ್ಳೆಯದು ಎಂದು ಕೂಡ ಹೇಳುತ್ತಿದ್ದಾರೆ

ಈ ಸ್ಪರ್ಧೆಯಲ್ಲಿ ಎಂತಹ ವಸ್ತುಗಳನ್ನು ತಯಾರಿಸುತ್ತಿದ್ದಾರೆ ಎಂದರೆ ನಿಮ್ಮ ಕಿವಿಯ ಒಳಗಡೆ ಗಾಳಿಯು ಕೂಡ ಹೋಗುವುದಿಲ್ಲ ಇವುಗಳನ್ನು ಹೆಚ್ಚು ದಿವಸ ಬಳಸಿದರೆ ನಿಮಗೆ ಕೇಳಿಸಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಈಗ ನೀವು ಕೇಳಿಸಿಕೊಳ್ಳುತ್ತಿರುವ ಹಾಗೆ ಮುಂದೆ ನಿಮಗೆ ಕೇಳಿಸಿಕೊಳ್ಳಲು ಆಗುವುದಿಲ್ಲ. ಆರನೆಯದು ಹೆಚ್ಚಾಗಿ ಏರ್ಪೋನ್ಸ್ ಬಳಸುವವರು ಕಿವಿ ನೋಯುತ್ತಿದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ ಒಮ್ಮೊಮ್ಮೆ ಏನೋ ಒಂದು ಶಬ್ದ ನಿಮ್ಮ ಕಿವಿಗಳಲ್ಲಿ ಬರುವುದನ್ನು ಗಮನಿಸುತ್ತೀರಿ ಆ ಸಮಯದಲ್ಲಿ ಇದು ನೋವಾಗಿ ಪರಿಣಮಿಸುವ ಅವಕಾಶ ಇದೆ ಅಥವಾ ಇದನ್ನು ಆಲಸ್ಯ ಮಾಡಿದರೆ ನಂತರ ಬಹಳ ಅನುಭವಿಸಬೇಕಾಗುತ್ತದೆ. ಏಳನೆಯದು ಈ ವಸ್ತುವನ್ನು ಬಳಸುವಾಗ ಎಲೆಕ್ಟ್ರಿಕ್ ಮಾಗ್ನೆಟಿಕ್ ವಿವಸ್ ಬಿಡುಗಡೆಯಾಗುತ್ತವೆ ಇವು ನೇರವಾಗಿ ಮೆದುಳಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಕೆಲವು ಸರ್ವೆಗಳ ಆಧಾರದ ಮೇಲೆ ಗೊತ್ತಾಗಿರುವು ಏನೆಂದರೆ ಹೆಚ್ಚಾಗಿ ಹೆಡ್ ಫೋನ್ಸ್ ಬಳಸುವವರಿಗೆ ಮೆದುಳಿನ ತೊಂದರೆಗಳು ಸಹ ಬರುತ್ತವೆ. ಇನ್ನು ಎಂಟನೆಯದು ನೀವು ಒಂದು ಸಾರಿ ಹೊರಗಡೆ ಹೋದಾಗ ಎಲ್ಲರನ್ನು ಒಮ್ಮೆ ಗಮನಿಸಿ ಬಹುತೇಕ ಜನರು ಏನೇ ಕೆಲಸಗಳನ್ನು ಮಾಡುತ್ತಿದ್ದರು ಸಹ ಕಿವಿಗಳಲ್ಲಿ ಏರ್ಪೋನ್ಸ್ ಗಳನ್ನು ಹಾಕಿಕೊಂಡು ಕಾಣಿಸುತ್ತಾರೆ ಈ ಕಾರಣದಿಂದ ರಸ್ತೆ ಅಪಘಾತಗಳು ತುಂಬಾನೇ ಸಂಭವಿಸುತ್ತವೆ. ಇವರನ್ನು ಕಾಪಾಡುವುದಕ್ಕೆ ಬಂದು ಇತರರು ಕೂಡ ಆಸ್ಪತ್ರೆ ಪಾಲಾಗುತ್ತಿದ್ದಾರೆ ವಾಹನ ಚಲಿಸುವಾಗ ರಸ್ತೆಯ ಮೇಲೆ ಏರ್ಪೋನ್ಸ್ ಬಳಸಬೇಡಿ ನಿಮಗೆ ಅಷ್ಟೇ ಅಲ್ಲದೆ ನಿಮ್ಮಿಂದ ಇತರರ ಪ್ರಾಣಕ್ಕೂ ಕೂಡ ಅಪಾಯ.

LEAVE A REPLY

Please enter your comment!
Please enter your name here