ಇದನ್ನು ಎರಡು ತಿಂಗಳು ಉಪಯೋಗಿಸಿ 7 ಕೆಜಿ ತೂಕ ಕಡಿಮೆ ಮಾಡಿಕೊಳ್ಳಿ

94

ಇವುಗಳನ್ನು ಉಪಯೋಗಿ 2 ತಿಂಗಳಲ್ಲಿ 6 ರಿಂದ 7 ಕೆಜಿ ತೂಕ ಇಳಿಸಿರಿ. ಅತಿಯಾದ ತೂಕ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂತವರು ಎಲ್ಲ ರೀತಿಯ ವಸ್ತುಗಳನ್ನು ಬಳಸಿ ತೂಕ ಇಳಿಸಿಕ್ಕೊಳ್ಳಲು ಬಳಸುತ್ತಾರೆ ಆದರೆ ಇವತ್ತು ಇಲ್ಲಿ ಹೇಳುವ ಮನೆಮದ್ದು ಯಾವುದೇ ಖರ್ಚಿಲ್ಲದೆ ಮನೆಯಲ್ಲೆ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಮಾಡುವಂತದ್ದು ಅದನ್ನು ಹೇಗೆ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಜೀರಿಗೆ ಮತ್ತು ಅಜೀವಾನ ಇವೆರಡು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯಮಾಡುತ್ತವೆ ಇನ್ನು ಇವೆರಡರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಮೊದಲ ಒಂದು ತಿಂಗಳಲ್ಲಿ 15 ದಿನ ಜೀರಿಗೆ ಬಳಸಬೇಕು ನಂತರ 15 ದಿನ ಅಜೀವಾನವನ್ನು ಬಳಸಬೇಕು ಅದು ಹೇಗೆಂದರೆ ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ನೆನಸಿಟ್ಟು ಮಲಗಬೇಕು ಬೆಳಿಗ್ಗೆ ಎದ್ದ ನಂತರ ಈ ಜೀರಿಗೆ ನೀರನ್ನು ಕುಡಿಯಬೇಕು ಹೀಗೆ 15 ದಿನ ಈ ಜೀರಿಗೆ ನೀರನ್ನು ಕುಡಿದರೆ ಇನ್ನು 15 ದಿನ ನೀವು ಅಜೀವಾನದ ನೀರನ್ನು ಕುಡಿಯಬೇಕು

ಅದನ್ನು ಸಹ ರಾತ್ರಿ ಮಲಗುವ ಮುಂಚೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಅಜೀವಾನವನ್ನು ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯಬೇಕು ಇನ್ನು ಇರೀತಿ ಮಾಡುವಾಗ ನೀವು ಸ್ವಲ್ಪ ಆಹಾರದಲ್ಲಿ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು ಜೊತೆಗೆ ಹೊರಗಡೆ ಸಿಗುವ ತಿಂಡಿಗಳನ್ನು ಅಂದರೆ ಗೋಬಿ ಪಾನಿಪುರಿ ಇಂತವುಗಳನ್ನು ಸ್ವಲ್ಪ ಕಡಿಮೆ ಮಾಡಬೇಕು ಇನ್ನು ಕೆಲವೊಬ್ಬರಿಗೆ ಪಿಜ್ಜಾ ಬರಗರ್ ಅಂದರೆ ತುಂಬಾ ಇಷ್ಟ ಇಂತವರು ಇದನ್ನು ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಬೇಕು ಈ ನೀರನ್ನು ಕುಡಿಯುವಾಗ. ಇನ್ನು ಜೀರಿಗೆ ಮತ್ತು ಅಜೀವಾನ ನೀರನ್ನು ಕುಡಿಯುವುದರ ಜೊತೆಗೆ ಇನ್ನು ಒಂದು ವಿಧಾನವೆಂದರೆ ನೀವು ಜೀರಿಗೆ ನೀರನ್ನು ಕುಡಿಯುವಾಗ ಜೀರಿಗೆ ಚಹಾವನ್ನು ಕುಡಿಯಬೇಕು ಹಾಗೇನೇ ಅಜೀವಾನದ ನೀರು ಕುಡಿಯುವಾಗ ಅಜೀವಾನದ ಚಹಾವನ್ನು ಕುಡಿಯಬೇಕು ಹಾಗಾದರೆ ಅದನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯೋಣ.

ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ಅದು ಅರ್ಧ ಲೋಟ ಆಗುವವರೆಗೂ ಕುದಿಸಬೇಕು ಅದು ಬಿಸಿ ಬಿಸಿಯಾಗಿರುವಾಗಲೆ ರಾತ್ರಿ ಊಟ ಅದ ನಂತರ ಕುಡಿದು ಮಲಗಬೇಕು ನಂತರ ಬೆಳಿಗ್ಗೆ ನೆನಸಿಟ್ಟ ಜೀರಿಗೆ ನೀರನ್ನು ಕುಡಿಯಬೇಕು. ಹಾಗೇನೇ ಇನ್ನು 15 ದಿನ ಅಜೀವಾನದ ನೀರನ್ನು ಕುಡಿಯುವಾಗ ರಾತ್ರಿ ಮಲಗುವ ಸಮಯದಲ್ಲಿ ಊಟ ಆದ ನಂತರ ಒಂದು ಲೋಟ ನೀರಿಗೆ ಒಂದು ಚಮಚ ಅಜೀವಾನವನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಕುಡಿಯಬೇಕು ನಂತರ ಬೇಳಿಗ್ಗೆ ಅಜೀವಾನದ ನೀರನ್ನು ಕುಡಿಯಬೇಕು. ಈ ವಿಧಾನವನ್ನು ಮಾಡುವುದರಿಂದ ನೀವು ಖಂಡಿತವಾಗಿ 6 ರಿಂದ 7 ಕೆಜಿ ತೂಕವನ್ನು 2 ರಿಂದ 3 ತಿಂಗಳಲ್ಲಿ ಖಂಡಿತವಾಗಿ ಕರಗಿಸುತ್ತೀರಿ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ. ಜೊತೆಗೆ ಹಣ್ಣು ತರಕಾರಿಗಳನ್ನು ಹೆಚ್ಚು ತಿನ್ನುವುದು ಜೊತೆಗೆ ಹೆಚ್ಚು ನೀರನ್ನು ಕುಡಿಯುವುದು ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಶೇರ್ ಮಾಡಿ

LEAVE A REPLY

Please enter your comment!
Please enter your name here