ಇಸುಬು ಚಿಕಿತ್ಸೆ ಗೆ ರಾಮಬಾಣವಾಗಿದೆ ಈ ಕತ್ತೆ ಕಿರುಬನ ಗಿಡ

223

ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತಿರುವ ಸಸ್ಯ ಕತ್ತೆ ಕಿರುಬನ ಸಸ್ಯ. ನಮಸ್ತೆ ಗೆಳೆಯರೇ ಈ ಸಸ್ಯದ ಹೆಸರು ಕೇಳಲು ತುಂಬಾ ವಿಚಿತ್ರವಾಗಿ ಇದೆ ಅಲ್ವಾ , ಹಾಗಾದ್ರೆ ಇದರ ಬಗ್ಗೆ ನಿಮಗೆ ತಿಳಿಯಲು ಕುತೂಹಲವೇ ಬನ್ನಿ ತಿಳಿಯಲು ನೀವೇ ಮುಂದೆ ಓದಿ. ಕತ್ತೆ ಕಿರುಬ ಈ ಗಿಡದ ಇತರ ಹೆಸರುಗಳು ಕತ್ತೆ ಕರಿ ಗಿಡ ಕತ್ತೆ ಕಾಲಿನ ಹಬ್ಬು, ಕತ್ತೆ ಹೊಟ್ಟೆ ಗಿಡ ಮುಂತಾದ ಹೆಸರುಗಳಿಂದ ಇದನ್ನು ಸೂಚಿಸುತ್ತಾರೆ. ಈ ಸಸ್ಯವು ಕಲ್ಲಿ ಕುರುಚಲು ಗಿಡಗಳಿಂದ ಕೂಡಿದ್ದು ಬೇಸಿಗೆಯಲ್ಲಿ ಎಲೆ ಉದುರುವ ಮೈದಾನ ಸೀಮೆಯ ಸಸ್ಯಾವರಣಗಳಲ್ಲಿ ಕಂಡು ಬರುತ್ತದೆ. ಇದು ಬಹುವಾರ್ಷಿಕ ಸಸ್ಯ ಆಗಿದ್ದು ಇದು ನೆಲದ ಮೇಲೆ ಹಾಸಿದಂತೆ ಕಂಡು ಬರುತ್ತದೆ. ಕಾಂಡ ಕಾವಲು ಒಡೆದು ಹರಡಿದಂತೆ ಬೆಳೆಯುತ್ತದೆ. ಕಾಂಡದ ಮೇಲೆ ಉದ್ದವಾದ ಗೀರುಗಳು ಕಂಡು ಬರುತ್ತದೆ. ಸರಳವಾದ ಹೃದಯಾಕಾರ ಎಲೆಗಳು ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆ ಆಗಿರುತ್ತದೆ. ಮತ್ತು ಎಲೆಗಳ ತೊಟ್ಟಿನಲ್ಲಿ ಹೃದಯಕಾರದ ಹೂವು ಪತ್ರವಿರುತ್ತದೆ. ಮತ್ತು ಈಶ್ವರಿ ಬಳ್ಳಿಯಂತೆ ಹೂವು ಕಾಯಿಗಳು ಇರುತ್ತದೆ. ಈ ಮೂಲಿಕೆಗಳ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಕತ್ತೆ ಕಿರುಬನ ಗಿಡದ ಸತ್ವಕ್ಕೆ ಸೊಳ್ಳೆ ಮರಿಗಳನ್ನು ನಾಶ ಪಡಿಸುವ ಸಾಮರ್ಥ್ಯ ಇದೆ ಎಂದು ಪ್ರಯೋಗದಿಂದ ದೃಢ ಪಟ್ಟಿದೆ. ಇದು ಮಲೇರಿಯಾ ರೋಗವನ್ನು ನಾಶ ಪಡಿಸುವ ಗುಣವನ್ನು ಕೂಡ ಹೊಂದಿದೆ ಎಂದು ಸೂಡಾನ್ ದೇಶದ ಜಾನಪದ ವೈದ್ಯ ಪದ್ಧತಿಯಲ್ಲಿ ಕತ್ತೆ ಕಿರುಬನ ಗಿಡವನ್ನು ಮಲೇರಿಯಾ ನಿವಾರಣೆಗೆ ಬಳಕೆ ಮಾಡುತ್ತಿರುವುದು ಸಮರ್ಥನೆಯನ್ನು

ನೀಡಲಾಗಿದೆ ಎಂದು ನಮಗೆ ತಿಳಿದು ಬಂದಿದೆ. ಈ ಮೂಲಿಕೆಯನ್ನು ಜಂತು ಹುಳಗಳ ನಿವಾರಣೆಗೆ ಗಾಯದ ಚಿಕಿತ್ಸೆಗೆ ಇಸುಬು ರೋಗದ ಚಿಕಿತ್ಸೆಗೆ ಮತ್ತು ತುರಿಕೆ ನವೆ ಇನ್ನೂ ಅನೇಕ ಚರ್ಮದ ಕಾಯಿಲೆಗಳಿಗೆ ಉಪಯೋಗಿಸಲಾಗುತ್ತದೆ. ಆಯುರ್ವೇದ ಪ್ರಕಾರ ಎಲ್ಲ ಬಗೆಯ ಚರ್ಮದ ಕಾಯಿಲೆಗಳಿಗೆ ಉಪಯೋಗಿಸ ಲಾಗುತ್ತದೆ. ಸಿದ್ದ ಔಷಧೀಯ ಪ್ರಕಾರ ಉರಿಮೂತ್ರ, ಮೂತ್ರ ಕೋಶದ ತೊಂದರೆಗಳಿಗೆ ಮತ್ತು ಬಿಳಿ ಸೆರಗು ರೋಗಕ್ಕೆ, ದೇಹದಲ್ಲಿ ಉಷ್ಣ ಹೆಚ್ಚಾದಾಗ ಹೊಟ್ಟೆ ನೋವು ಚರ್ಮದ ಕಾಯಿಲೆಗಳಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ಜಂತು ಹುಳುಗಳ ನಿವಾರಣೆಗೆ ಕತ್ತೆ ಕಿರುಬನ ಗಿಡದ ಬೇರನ್ನು ನೆರಳಿನಲ್ಲಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಬಟ್ಟೆಯಲ್ಲಿ ಶೋಧಿಸಿ, ನಯವಾದ ಬಾಟಲ್ ನಲ್ಲಿ ತುಂಬಿಟ್ಟುಕೊಳ್ಳಬೇಕು. ಅಧಿಕವಾಗಿ ಹೊಟ್ಟೆ ನೋವು ಕಾಣಿಸಿಕೊಂಡಾಗ ಇದರ ಚೂರ್ಣವನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಸೇವಿಸಬೇಕು. ದಿನಕ್ಕೆ ಒಂದು ಬಾರಿಯಂತೆ ಮೂರು ದಿನ ಸೇವನೆ ಮಾಡುವುದರಿಂದ ಜಂತು ಹುಳುಗಳು ಮಲದೊಡನೆ ಹೊರ ಬಂದು ಹೊಟ್ಟೆ ನೋವು ಕಡಿಮೆಯಾಗುತ್ತದೆ. ಗಾಯದ ಚಿಕಿತ್ಸೆಗೆ ಕತ್ತೆ ಕಿರುಬನ ಚೂರ್ಣ ಬೇವಿನ ಎಲೆ ತುಳಸಿ ಎಲೆ ಮತ್ತು ಅಳಲೆಕಾಯಿ ಚೂರ್ಣ ಇವುಗಳನ್ನು ಮಿಶ್ರಣ ಮಾಡಿ ಬಾಟಲ್ ನಲ್ಲಿ ತುಂಬಿಟ್ಟುಕೊಳ್ಳಬೇಕು. ಹರಿತವಾದ ಆಯುಧಗಳಿಂದ ಗಾಯವಾದರೆ ಈ ಚೂರ್ಣವನ್ನು ಸಿಂಪಡಿಸಿ ಬಟ್ಟೆ ಕಟ್ಟಿದರೆ ಗಾಯ ಬೇಗನೆ ವಾಸಿಯಾಗುತ್ತದೆ. ಇಸುಬು ರೋಗಕ್ಕೆ ಚಿಕಿತ್ಸೆ ಮಾಡುವುದು ಕತ್ತೆ ಕಿರುಬನ ಚೂರ್ಣ ಒಂದು ಚಮಚ ಎರಡು ಚಮಚ ಹೊಂಗೆ

ಎಣ್ಣೆ ಇವೆರನ್ನು ಮಿಕ್ಸ್ ಮಾಡಿ ಇಸುಬು ಇರುವ ಜಾಗಕ್ಕೆ ಹಚ್ಚಬೇಕು. ರಾತ್ರಿ ಹಚ್ಚಿ ಬೆಳಿಗ್ಗೆ ಕಡಲೆ ಹಿಟ್ಟು ಉಪಯೋಗಿಸಿ ತೊಳೆಯಬೇಕು. ಇದೇ ರೀತಿ ಇಸುಬು ವಾಸಿಯಾಗುವವರೆಗೂ ಮುಂದುವರೆಸಬೇಕು. ಜ್ವರದ ನಿವಾರಣೆಗೆ ಕತ್ತೆ ಕಿರುಬನ ಗಿಡದ ಸಮೂಲವನ್ನು ಅರೆದು ಮಂದಾಗ್ನಿಯಲ್ಲಿ ಕುದಿಸಿ ಬಟ್ಟೆಯ ಮೂಲಕ ಶೋಧಿಸಿ ಸಂಗ್ರಹಿಸಿಟ್ಟು ಕೊಳ್ಳಬೇಕು. ಬಿಟ್ಟು ಬಿಟ್ಟು ಬರುವ ಜ್ವರ ಕಾಣಿಸಿಕೊಂಡಾಗ ಈ ಕಷಾಯವನ್ನು ಜೇನುತುಪ್ಪದೊಂದಿಗೆ ಕುಡಿಯಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಈ ಸಸ್ಯದಿಂದ ಆದಷ್ಟು ದೂರವಿದ್ದಷ್ಟೂ ಒಳ್ಳೆಯದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here