ಮುಖದಲ್ಲಿ ಮೊಡವೆ ಹೆಚ್ಚಾಗಲು ಈ ಕೆಟ್ಟ ಅಭ್ಯಾಸಗಳು ಕಾರಣ. ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಎಷ್ಟೇ ಕಾಳಜಿ ಮತ್ತು ಆರೈಕೆಯನ್ನು ಮಾಡಿದರು ಮೊಡವೆಗಳು ಏಳುತ್ತವೆ ಈ ಮೊಡವೆಗಳಿಗೆ ನಿಜವಾದ ಕಾರಣ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಹಾರ್ಮೋನ್ ವ್ಯತ್ಯಾಸದಿಂದಾಗಿ ಕೂಡ ಮೊಡವೆಗಳು ಏಳುತ್ತವೆ ಎನ್ನುತ್ತಾರೆ ವೈದ್ಯರು. ಕೆಲವೊಂದು ದುರಭ್ಯಾಸಗಳು ಮೊಡವೆ ಸಮಸ್ಯೆ ಹೆಚ್ಚಾಗಲು ಕಾರಣ ಆಗಿವೆ. ಈ ದುರಭ್ಯಾಸಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲನೆಯದು ಮುಖವನ್ನು ಅತಿಯಾಗಿ ಉಜ್ಜುವುದು ಹೌದು ಕೆಲವರು ಕ್ಲೆನ್ಸಿಂಗ್ ಬ್ರಷ್ ಅನ್ನು ಅತಿಯಾಗಿ ಬಳಕೆ ಮಾಡುತ್ತಾರೆ ಇದನ್ನು ದಿನವೂ ಬಳಕೆ ಮಾಡುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ.
ರಂಧ್ರಗಳಲ್ಲಿ ಉರಿಯೂತ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ವಾರಕ್ಕೆ ಎರಡು ಬಾರಿ ಮಾತ್ರ ಮುಖಕ್ಕೆ ಸ್ಕ್ರಬ್ ಮಾಡಬೇಕು. ಎರಡನೆಯದು ಸೌಂದರ್ಯ ಉತ್ಪನ್ನಗಳ ಬಳಕೆ. ಮೊಡವೆ ಇರುವಂತವರು ಎಲ್ಲಾ ಬಗೆಯ ಕ್ಲೆನ್ಸರ್ ಮತ್ತು ಚಿಕಿತ್ಸಾ ಉತ್ಪನ್ನಗಳನ್ನು ಬಳಸಬಾರದು ಏಕೆಂದರೆ ನಿಮ್ಮ ಚರ್ಮಕ್ಕೆ ಅದು ಹೊಂದಿಕೆ ಆಗದೆ ಇರಬಹುದು ತಜ್ಞರ ಸಲಹೆ ಮೇರೆಗೆ ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಉಚಿತ. ಅತಿಯಾಗಿ ಮುಖವನ್ನು ತೊಳೆಯ ಬೇಡಿ. ಇದರಿಂದ ಶುಷ್ಕತೆ ಹೆಚ್ಚಾಗುತ್ತದೆ. ಮೂರನೆಯದು ಮೊಡವೆ ಒಡೆಯುವ ಅಭ್ಯಾಸ. ಮೊಡವೆ ಎದ್ದಿದೆ ಎಂದಾಕ್ಷಣ ಆದಷ್ಟು ಅದನ್ನು ಹೊಡೆದು ಹಾಕಬೇಕು ಎಂಬ ತವಕ ಹೆಚ್ಚಾಗಿ ಇರುತ್ತದೆ ಈ ರೀತಿ ಮಾಡುವುದರಿಂದ ಮೊಡವೆಗಳು ಹೆಚ್ಚಾಗುತ್ತದೆ ಏಕೆಂದರೆ ನಿಮ್ಮ ಕೈ ಬೆರಳುಗಳಲ್ಲಿ ಇರುವ ಬ್ಯಾಕ್ಟೀರಿಯಾ
ಮೊಡವೆ ಗಾಯ ಸೇರಿಕೊಳ್ಳುತ್ತದೆ. ನಾಲ್ಕನೆಯದು ಪದೇ ಪದೇ ಮುಖವನ್ನು ಮುಟ್ಟಿ ಕೊಳ್ಳುವುದು ನಿಮ್ಮ ಕೈಗಳು ಎಷ್ಟೇ ಸ್ವಚ್ಚವಾಗಿ ಇದ್ದರೂ ಬ್ಯಾಕ್ಟೀರಿಯಾ ಹರಡುತ್ತವೆ ಹೆಚ್ಚುವರಿಯಾಗಿ ನಿಮ್ಮ ಬೆರಳುಗಳು ದ್ರವ್ಯವನ್ನು ನೈಸರ್ಗಿಕವಾಗಿ ಸ್ರವಿಸುತ್ತದೆ ಆದ್ದರಿಂದ ನಿಮ್ಮ ಮುಖವನ್ನು ಸ್ಪರ್ಶಿಸುವುದು ಮಾಡುವುದರಿಂದ ಮುಖದಲ್ಲಿ ಎಣ್ಣೆಯ ಜಿಡ್ಡು ಹೆಚ್ಚಾಗುತ್ತದೆ ಹಾಗಾಗಿ ಪದೇ ಪದೇ ಮುಖವನ್ನು ಮುಟ್ಟಬೇಡಿ. ಮುಂದಿನ ಅಭ್ಯಾಸ ಕೂದಲನ್ನು ಮುಟ್ಟಿ ನಂತರ ಮುಖವನ್ನು ಮುಟ್ಟುವುದು ಹೌದು ಎಷ್ಟೋ ಮಂದಿ ತಮ್ಮ ಕೂದಲನ್ನು ಮುಟ್ಟಿ ನಂತರ ಮುಖವನ್ನು ಮುಟ್ಟುವ ಅಭ್ಯಾಸ ಇದೆ ಹೀಗೆ ಮಾಡಿದರೆ ತಲೆಯಲ್ಲಿನ ಹೊಟ್ಟು ಬ್ಯಾಕ್ಟೀರಿಯಾ ನಿಮ್ಮ ಮುಖಕ್ಕೆ ಸೇರಿ ಮೊಡವೆ ಆಗುವ ಸಾಧ್ಯತೆ ಹೆಚ್ಚು.
ಹೆಚ್ಚು ಸಿಹಿ ಸೇವನೆ ಒಳ್ಳೆಯದಲ್ಲ ಸಕ್ಕರೆಯಲ್ಲಿ ಗ್ಲೆಸೇಮಿಕ್ ಪ್ರಮಾಣ ಹೆಚ್ಚಾಗಿ ಇರುತ್ತದೆ ಹಾಗಾಗಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕ ಇರುವ ಯಾವುದೇ ಪದಾರ್ಥವನ್ನು ಹೆಚ್ಚು ಸೇವಿಸಬೇಡಿ. ಕೆಲವರು ಮುಖಕ್ಕೆ ಕೂಡ ಬಾಡಿ ಲೋಷನ್ ಹಚ್ಚಿಕೊಳ್ಳುತ್ತಾರೆ ಇದರಿಂದ ಕೂಡ ಮೊಡವೆಗಳು ಏಳುವ ಸಾಧ್ಯತೆ ಇರುತ್ತದೆ ಬಾಡಿ ಲೋಶನ್ ನಲ್ಲಿ ಬೆಣ್ಣೆಯ ಅಂಶ ಹೆಚ್ಚಾಗಿ ಇರುತ್ತದೆ. ಹಾಗಾಗಿ ಯಾವಾಗಲೂ ಮುಖಕ್ಕೆ ಫೇಸ್ ಕ್ರೀಂ ಹಚ್ಚಿರಿ. ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಬೆಣ್ಣೆ ಹಾಲು ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆ ಏಳುತ್ತವೆ ಹಾಗಾಗಿ ಮುಖದ ಸೌಂದರ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು.