ಈ ಆಹಾರ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತದೆ

59

ಈ ಆಹಾರ ಸೇವಿಸದೇ ಇದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಎಲ್ಲರಲ್ಲೂ ಒಂದು ಮುಜುಗರ ಉಂಟು ಮಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ ಇತ್ತೀಚೆಗೆ ಎಲ್ಲರಿಗೂ ಅದೊಂದು ಮಾಮೂಲ್ ಆಗಿದೆ ಅತಿಯಾದ ಮದ್ಯಸೇವನೆ ಒತ್ತಡ ಹಾಗೇನೇ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದು ಇದರಿಂದಲೂ ಕೂಡ ನಮಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣುತ್ತದೆ ಹೀಗೆ ಹಲವಾರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ ಇದರ ನಿವಾರಣೆಗೆ ಹಲವಾರು ಮಾತ್ರೆಗಳನ್ನು ಸೇವಿಸುತ್ತಾರೆ ಆದರೆ ಪ್ರಮುಖವಾಗಿ ಆರೋಗ್ಯಕರ ಆಹಾರ ಪತ್ಯ ಮಾಡಬೇಕು ಗ್ಯಾಸ್ಟ್ರಿಕ್ ತೊಂದರೆ ನಿವಾರಣೆ ಯಾಗುವವರೆಗೆ ಕೆಲವು ಆಹಾರ ಪಧಾರ್ಥಗಳನ್ನು ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸದೇ ಇರುವುದೇ ಒಳ್ಳೆಯದು ಸೇವಿಸಬಾರದು ಏಕೆಂದರೆ ಅಂತಹ ಆಹಾರ ಪಧಾರ್ಥಗಳ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ ಹಾಗಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗ ತಿನ್ನಬಾರದಂತಹ ಆಹಾರ ಪಧಾರ್ಥಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ

ಮೊದಲನೆಯದು ಕ್ಯಾಬಿಜ್ ಅಂದರೆ ಎಲೆಕೋಸು ಇದು ಸುಲಭವಾಗಿ ಜೀರ್ಣವಾಗದ ತರಕಾರಿಯಾಗಿದೆ ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ ರಾತ್ರಿಯ ವೇಳೆ ಎಲೆಕೋಸು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಸೆಳೆತ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸುತ್ತದೆ. ಹಾಗೇನೇ ಎರಡನೇ ಆಹಾರ ಎಂದರೆ ಅದು ಆಲೂಗಡ್ಡೆ ಈ ಆಲೂಗಡ್ಡೆ ಎಲ್ಲರಿಗೂ ಇಷ್ಟವಾದ ತರಕಾರಿಯಾಗಿದೆ ಆದರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಆಲೂಗಡ್ಡೆಯಿಂದ ದೂರವಿರುವುದು ಬಹಳ ಉತ್ತಮ. ಈ ಆಲೂಗಡ್ಡೆಯಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ ಅದು ಜೀರ್ಣಕ್ರಿಯೆಗೆ ಅಡ್ಡಿಯನ್ನು ಉಂಟು ಮಾಡುತ್ತದೆ ಅದರಲ್ಲೂ ಕಾಳುಗಳ ಜೊತೆ ಬೇಯಿಸಿದ ಆಲೂಗಡ್ಡೆಯನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಇನ್ನು ಮೂರನೆಯದು ಕಲ್ಲಂಗಡಿ ಇದರಲ್ಲಿ ನೀರು ಮತ್ತು ಖನಿಜದ ಪ್ರಮಾಣ ಹೆಚ್ಚಾಗಿರುತ್ತದೆ ಈ ರಸಭರಿತ ಹಣ್ಣು ಕರುಳಿನಲ್ಲಿ ಕಳೆಯಬೇಕಾದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಇದರಿಂದ ಜೀರ್ಣಕ್ರಿಯೆಗೆ ಅಡ್ಡಿ ಆಗುತ್ತದೆ ಇದರಲ್ಲಿ ಸಕ್ಕರೆ ಮತ್ತು ಮೇನಿಟಾಲ್ ಇರುವುದರಿಂದ ಹೊಟ್ಟೆ ಉಬ್ಬರಿಸುತ್ತದೆ.

ಹಾಗೇನೇ ಸೌತೆಕಾಯಿ ಈ ಸೌತೆಕಾಯಿಯಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಇದನ್ನು ಹೊಟ್ಟೆಗೆ ತಿನ್ನುವುದು ಒಳ್ಳೆಯದಲ್ಲ ಇದು ಜೀರ್ಣಕ್ರಿಯೆಯನ್ನು ನಿಧಾನ ಮಾಡಿ ಗ್ಯಾಸ್ ತುಂಬಿಕೊಳ್ಳಲು ಕಾರಣವಾಗುತ್ತದೆ ರಾತ್ರಿ ವೇಳೆ ಸೌತೆಕಾಯಿ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದಂತೆ ಆಗಲು ಈ ಸೌತೆಕಾಯಿಯೇ ಕಾರಣ. ಇನ್ನು ಕೋನೆಯದು ಸ್ವೀಟ್ ಲೈಮ್ ಈ ಹಣ್ಣು ಕೂಡ ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಈ ಹಣ್ಣನ್ನು ಸೇವಿಸಬಾರದು ಒಂದುವೇಳೆ ಸೇವಿಸಿದರೆ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಇನ್ನಷ್ಟು ಬಲವಾಗುತ್ತದೆ ಈ ಸ್ವೀಟ್ ಲೈಮ್ ರಸವನ್ನು ಕೂಡ ಕುಡಿಯದೆ ಇರುವುದೇ ಒಳ್ಳೆಯದು. ಹೀಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗ ಅವರು ಇಂತಹ ಆಹಾರಗಳಿಂದ ದೂರವಿದ್ದರೆ ಅವರ ಗ್ಯಾಸ್ಟ್ರಿಕ್ ಸಮಸ್ಯೆ ನಿಧಾನವಾಗಿ ಕಡಿಮೆ ಆಗುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here