ಈ ಎಣ್ಣೆ ನಿಮ್ಮ ಕೀಲು ನೋವನ್ನು ಕ್ಷಣಾರ್ಧದಲ್ಲಿ ಮಾಯ ಮಾಡುತ್ತದೆ

72

ಕೀಲು ನೋವು ಇವತ್ತಿನ ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಸಹ ತುಂಬಾ ಮಾರಕವಾಗಿ ಕಾಡುವಂತಹ ಒಂದು ದೊಡ್ಡ ಸಮಸ್ಯೆಯಾಗಿದೆ ಈ ಕೀಲು ನೋವಿಗೆ ತುಂಬಾ ಜನರು ಅನೇಕ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ ಆದರೆ ಅದು ಕ್ಷಣಿಕ ಮಾತ್ರ ಅದರಿಂದ ಮತ್ತೆ ಸಾಕಷ್ಟು ಅಡ್ಡ ಪರಿಣಾಮಗಳು ಆಗುತ್ತವೆ ಆದ್ದರಿಂದ ಇಂದು ಈ ಒಂದು ಲೇಖನದಲ್ಲಿ ಈ ಕೀಲು ನೋವಿಗೆ ಮನೆ ಮದ್ದನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ. ಒಂದು ಎಣ್ಣೆಯನ್ನು ಕೀಲು ನೋವಿಗೆ ಇಂದು ತಯಾರಿಸೊಣ ಇದನ್ನು ನೀವು ಬಳಸುವುದರಿಂದ ನಿಮ್ಮ ಕೀಲು ನೋವು ಬೇಗನೆ ಪರಿಹಾರ ಆಗುತ್ತದೆ ಈ ಎಣ್ಣೆಯನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಹೀಗಿವೆ ಹಾಗೇನೇ ತಯಾರಿಸುವ ವಿಧಾನ ಕೂಡ ತುಂಬಾ ಸುಲಭವಾಗಿದೆ ಒಂದು ಪಾತ್ರೆಗೆ ಒಂದು ಲೋಟದಷ್ಟು ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಮೆಂತೆಕಾಳು ಹಾಕಿರಿ

ಹಾಗೇನೆ ಅದರ ಜೊತೆಗೆ ಎರಡು ಚಮಚ ಓಂ ಕಾಳನ್ನು ಹಾಕಿಕೊಳ್ಳಿ ಹಾಗೇನೇ ಇದಕ್ಕೆ ಎರಡು ಚಮಚ ಲವಂಗವನ್ನು ಸಹ ಹಾಕಿಕೊಳ್ಳಿ ಇನ್ನು ಒಂದು ಹಿಡಿಯಷ್ಟು ಪಲಾವ್ ಎಲೆಯನ್ನು ಹಾಕಿಕೊಳ್ಳಿ ಇವೆಲ್ಲದರ ಜೊತೆಗೆ ಮತ್ತೆ ಎರಡು ಇಂಚಷ್ಟು ಚೆಕ್ಕೆಯನ್ನು ಹಾಕಿಕೊಳ್ಳಿ ಎರಡು ಇಂಚಷ್ಟು ಶುಂಠಿಯನ್ನು ಹಾಕಿ ಮತ್ತೆ ಒಂದು ಚಿಕ್ಕ ಗಾತ್ರದ ಬೆಳ್ಳುಳ್ಳಿಯನ್ನು ಸಹ ಶುಂಠಿಯಂತೆ ಜಜ್ಜಿ ಹಾಕಿಕೊಳ್ಳಿ. ನಂತರ ಇದಕ್ಕೆ ಒಂದು ಚಮಚ ಅರಿಷಿಣ ಹಾಕಿ ಮತ್ತೆ 6 ರಿಂದ 7 ರಷ್ಟು ಕರ್ಪುರವನ್ನು ಹಾಕಿ ಈಗ ಇದಕ್ಕೆ ಒಂದು ಚಿಕ್ಕ ಅಲೋವೆರದ ಎಲೆಯನ್ನು ಹಾಕಿಕೊಳ್ಳಿ ಈಗ ಇವೆಲ್ಲವನ್ನು ಚೆನ್ನಾಗಿ ಬೇಯಿಸಬೇಕು ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ ಈಗ ಈ ಎಲ್ಲ ಪಧಾರ್ಥಗಳ ಬಣ್ಣ ಬದಲಾಗುವ ವರೆಗೂ ಬೇಯಿಸಿ ಆಗ ಮಾತ್ರ ಒಳ್ಳೆ ಎಣ್ಣೆ ನಿಮಗೆ ಸಿಗುತ್ತದೆ. ಇದಕ್ಕೆ ಹಾಕಿರುವ ಬೆಳ್ಳುಳ್ಳಿ ಬಣ್ಣವು ಸಹ ಬದಲಾಗುತ್ತದೆ ಹಾಗೇನೇ ಅಲೋವೆರದ ಬಣ್ಣವು ಸಹ ಬದಲಾಗುತ್ತದೆ ಈಗ ಎಣ್ಣೆ ಚೆನ್ನಾಗಿ ಬೆಂದು ತಯಾರಾಗಿದೆ

ಇದನ್ನು ಶೋಧಿಸಿ ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಿ ಇನ್ನು ತಯಾರಿಸಿದ ಈ ಎಣ್ಣೆಯನ್ನು ಹಚ್ಚುವ ವಿಧಾನ ನಿಮಗೆ ದೇಹದ ಯಾವ ಭಾಗದಲ್ಲಿ ನೋವಿದೆ ಅಲ್ಲಿ ಈ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ನಿಧಾನವಾಗಿ ಉಜ್ಜಿರಿ ಆಮೇಲೆ ನಿಮಗೆ ಸಾಧ್ಯವಾದರೆ ಬಿಸಿ ನೀರಿನ ಶಾಖ ಕೊಡಿ ಇಲ್ಲವಾದರೆ ಬಿಸಿ ನೀರನ್ನು ನೋವಿರುವ ಜಾಗಕ್ಕೆ ಹಾಕಿರಿ ಹೀಗೆ ಮಾಡುವುದರಿಂದ ನಿಮಗೆ ನೋವಿನಿಂದ ಒಳ್ಳೆಯ ಪರಿಣಾಮ ಸಿಗುತ್ತದೆ ಈ ರೀತಿಯಾಗಿ ಸುಲಭವಾಗಿ ಮನೆಯಲ್ಲೇ ಎಣ್ಣೆ ತಯಾರಿಸಿ ನಿಮ್ಮ ನೋವನ್ನು ನಿವಾರಿಸಿಕೊಳ್ಳಿ ಈ ಎಣ್ಣೆಯನ್ನು ತಯಾರಿಸಿ ಇಟ್ಟುಕೊಳ್ಳಬಹುದು ನಿಮಗೆ ಯಾವಾಗ ನೋವು ಬರುತ್ತದೆ ಆಗ ಎಣ್ಣೆಯನ್ನು ಹಚ್ಚಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

LEAVE A REPLY

Please enter your comment!
Please enter your name here