ನಮ್ಮ ಈ ಐದು ವಿಷಯಗಳನ್ನು ಬೇರೆ ಯಾರಿಗೂ ಜೀವನದಲ್ಲಿ ನಾವು ಹೇಳಿಕೊಳ್ಳಬಾರದು. ಯುಗಯುಗಗಳೇ ಕಳೆದರು ಕೂಡ ಆಚಾರ್ಯ ಚಾಣಕ್ಯ ಹೇಳಿದ ಮಾತುಗಳನ್ನು ನಾವು ಇಂದು ಕೂಡ ಕಡೆಗಣಿಸುತ್ತಿಲ್ಲ ಹೌದು ಜಗತ್ತು ಇಂದು ಕೂಡ ಈ ವ್ಯಕ್ತಿಯನ್ನು ಮಹಾಪಂಡಿತ ರಾಜತಂತ್ರಜ್ಞ ಅರ್ಥಶಾಸ್ತ್ರಜ್ಞ ಅಂತ ಗುರುತಿಸಿದೆ. ಆಚಾರ ಚಾಣಕ್ಯ ಎಂಬ ಹೆಸರಿನಿಂದ ಜಗತ್ತಿಗೆ ಪರಿಚಯವಾದ ಈ ಆಚಾರ್ಯ ಚಾಣಕ್ಯ ತನ್ನ ಸ್ವಂತ ಜ್ಞಾನದಿಂದ ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಮಾಡಿದ ಧರ್ಮ ರಾಜತಾಂತ್ರಿಕತೆ ಮತ್ತು ರಾಜಕೀಯದ ಬಗ್ಗೆ ಚನ್ನಾಗಿ ತಿಳಿದಿರುವ ಚಾಣಕ್ಯ ಅನೇಕ ವಿಷಯಗಳನ್ನು ಪ್ರಪಂಚಕ್ಕೆ ತಿಳಿಸಿದ್ದಾರೆ. ಇದನ್ನು ನಾವು ಅನುಸರಿಸುವುದರಿಂದ ನಮ್ಮ ಜೀವನ ಸುಖವಾಗಿ ಇರುತ್ತದೆ ಅಂತ ಹೇಳಲಾಗುತ್ತದೆ.
ಆಚಾರ್ಯರು ಅರ್ಥಶಾಸ್ತ್ರ ಮತ್ತು ರಾಜಕೀಯಕ್ಕೆ ಸಂಬಂದಿಸಿದ ವಿಷಯಗಳ ಬಗ್ಗೆ ತಮ್ಮ ಅನುಭವವನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಸಾಮಾನ್ಯ ಮಾನವನ ನಡುವಳಿಕೆ ಸ್ತ್ರೀ ಪುರುಷರ ಸಂಬಂಧಿಸಿದಂತೆ ಮತ್ತು ಭವಿಷ್ಯದ ಬಿಕ್ಕಟ್ಟುಗಳನ್ನು ಗುರುತಿಸಲು ಸಾಧ್ಯವಾಗುವ ಅಪಾರ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಅವುಗಳು ವಾಸ್ತವಕ್ಕೆ ಕೂಡ ತುಂಬಾ ಹತ್ತಿರ ಇವೆ ಇನ್ನು ಆಚಾರ್ಯ ಚಾಣಕ್ಯನ ಪ್ರಕಾರ 5 ವಿಷಯಗಳನ್ನು ಒಬ್ಬ ಮನುಷ್ಯ ಬದುಕಿರುವ ತನಕ ಯಾರಿಗೂ ಕೂಡ ಹೇಳಬಾರದು ಅಂತಹ ರಹಷ್ಯಕರ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಈಗ ತಿಳಿದುಕೊಳ್ಳೋಣ. ನಾವು ಕಷ್ಟಪಟ್ಟು ಗಳಿಸಿದ ಸಂಪತ್ತು ಹೇಗೆ ಕಳೆದು ಕೊಂಡಿದ್ದೀವಿ ಎನ್ನುವ ವಿಷಯವನ್ನು ಯಾರಿಗೂ ಕೂಡ ನಾವು ಹಂಚಿಕೊಳ್ಳಬಾರದು ಇದರಿಂದ
ನಮ್ಮ ದೌರ್ಬಲ್ಯವನ್ನು ಅವರು ತಿಳಿದು ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ನಮಗೆ ಕಾಡುತ್ತಿರುವ ದುಃಖಗಳನ್ನು ಹಾಗೇನೇ ನಮ್ಮ ನೋವುಗಳನ್ನು ನಮಗೆ ನಾವು ಅರ್ಥ ಮಾಡಿಕೊಂಡು ಹಂಚಿ ಕೊಳ್ಳಬೇಕಾಗುತ್ತದೆ ಇದನ್ನು ಬೇರೆ ಯಾರಿಗೂ ಹೇಳುವ ಪ್ರಯತ್ನ ಮಾಡಬಾರದು ಇದನ್ನು ಬೇರೆಯವರಿಗೆ ಹೇಳುವುದರಿಂದ ಸಹಾಯದ ಬದಲು ಅಪಹಾಸ್ಯ ಮಾಡುವವರೇ ಹೆಚ್ಚಾಗಿದ್ದಾರೆ ಈ ಕಾಲದಲ್ಲಿ. ಹಾಗೇನೇ ನಮ್ಮ ಹೆಂಡತಿಗೆ ಸಂಬಂದಿಸಿದ ಯಾವುದನ್ನು ಬೇರೆಯವರಿಗೆ ಹಂಚಿಕೊಳ್ಳಬಾರದು ಅನೇಕ ಜನರು ತಮ್ಮ ಹೆಂಡತಿಯ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ ಆದರೆ ಹೀಗೆ ಮಾಡಬಾರದು ಇದು ಹಲವಾರು ಮಾತುಗಳು ಹಾಗೇನೇ ಹಲವಾರು ಸಮಸ್ಯೆಗಳು ಉದ್ಭವವಾಗಲು ದಾರಿಮಾಡಿಕೊಡುತ್ತದೆ.
ಇನ್ನು ಒಂದು ವೇಳೆ ಎಲ್ಲಾದರೂ ಅಥವಾ ಯಾವುದೇ ಸಂದರ್ಭದಲ್ಲಿ ಆದರೂ ನಮಗೆ ಅಪಮಾನ ನಿಂದನೆ ಆಗಿದ್ದರೆ ಆ ವಿಷಯವನ್ನು ಕೂಡ ಯಾರಿಗೂ ಹೇಳದೆ ರಹಷ್ಯವಾಗಿ ಇಡಬೇಕು ಬದಲಾಗಿ ಬೇರೆಯವರ ಹತ್ತಿರ ಈ ವಿಷಯವನ್ನು ಹೇಳಿಕೊಂಡರೆ ಒಂದಲ್ಲ ಒಂದು ದಿನ ಈ ವಿಷಯ ನಮಗೆ ತಲೆನೋವಾಗಿ ಕಾಡುತ್ತದೆ. ಇನ್ನು ಕೊನೆಯದಾಗಿ ಯಾವ ಯಾವ ಜಾಗದಲ್ಲಿ ಯಾವ ಯಾವ ರೀತಿ ನಾವು ಗೌರವವನ್ನು ಕಳೆದುಕೊಂಡಿದ್ದೀವಿ ಎನ್ನುವ ಒಂದು ಸಂಗತಿಯನ್ನು ಸಹ ಬೇರೆಯವರಿಗೆ ಹೇಳಬಾರದು ಆದಷ್ಟು ಸುಮ್ಮನೆ ಇರಬೇಕು ಏಕೆಂದರೆ ತಪ್ಪು ಮಾಡುವ ಮನುಷ್ಯನಿಲ್ಲ ಆದರೆ ಆ ತಪ್ಪನ್ನು ತಿಳಿದು ಕಾಲೆಳೆಯುವ ಜನರೇ ಈ ಪ್ರಪಂಚದಲ್ಲಿ ಹೆಚ್ಚಿದ್ದಾರೆ.
ಆದ್ದರಿಂದ ಸ್ನೇಹಿತರೆ ಈ 5 ವಿಷಯಗಳನ್ನು ನೀವು ಪ್ರಪಂಚಕ್ಕೆ ಅಂದರೆ ಬೇರೆಯವರ ಮುಂದೆ ಹೇಳಿಕೊಳ್ಳಲು ಹೋಗಬೇಡಿ ಈ ವಿಷಯಗಳನ್ನು ನಮ್ಮ ಜೀವನದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಮಾತ್ರ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಏಕೆಂದರೆ ನಮ್ಮ ನೋವನ್ನು ನಿಗಿಸಿಕೊಳ್ಳಲು ಬೇರೆಯವರ ಹತ್ತಿರ ಹೇಳಿಕೊಂಡರೆ ಅವರು ಇನ್ನೊಬ್ಬರ ಮುಂದೆ ಹೇಳಿ ನಮಗೆ ಅವಮಾನ ಮಾಡುವ ಪರಿಸ್ಥಿತಿಯು ಸಹ ಇರುತ್ತದೆ ಹಾಗಾಗಿ ನಮ್ಮ ಜೀವನದ ಯಾವುದೇ ವಿಷಯವಾದರು ಸರಿ ಅದನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಬಾರದು. ಈ ಒಂದು ಚಿಕ್ಕ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಲು ಮರೆಯದಿರಿ