ಈ ಒಂದು ಕಷಾಯವನ್ನು ಕುಡಿಯುವುದರಿಂದ ನೀವು ದಿನವಿಡಿ ಉಲ್ಲಾಸದಿಂದ ಇರಬಹುದು. ಸಾಧಾರಣವಾಗಿ ತುಂಬಾ ಜನರು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಹಸಿರು ಚಹಾವನ್ನು ಸೇವಿಸುತ್ತಾರೆ ಹಾಗೆ ಇನ್ನು ಕೆಲವರು ಬೆಚ್ಚನೆಯ ನೀರಿನಲ್ಲಿ ನಿಂಬೆ ಹಣ್ಣಿನ ರಸ ಹಾಕಿ ಜೇನುತುಪ್ಪವನ್ನು ಬೆರಸಿ ಕುಡಿಯುತ್ತಿರುತ್ತಾರೆ ಆದರೆ ಇವರು ತಿಳಿದುಕೊಂಡಿರುವ ಫಲಿತಾಂಶ ಇವರಿಗೆ ಸಿಗುವುದಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಾರೆ ಆದ್ದರಿಂದ ಇಲ್ಲಿ ಈ ಲೇಖನದಲ್ಲಿ ತಿಳಿಸುವ ಕಷಾಯವನ್ನು ನೀವು ಕುಡಿದರೆ ನಿಮಗೆ ದಿನಕ್ಕೆ ಬೇಕಾಗುವಷ್ಟು ಪೋಷಕಾಂಶಗಳು ಸಿಗುತ್ತವೆ ಹಾಗೆ ಇದರ ಜೊತೆಗೆ ಉತ್ತೇಜನ ಉತ್ಸಾಹ ಕೂಡ ಸಿಗುತ್ತದೆ ಬನ್ನಿ ಹಾಗಾದರೆ ಆ ಮನೆಮದ್ದನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ತಿಳಿಯೋಣ ಕರಿಬೇವು ತೆಗೆದುಕೊಳ್ಳಿ ಈ ಕರಿಬೇವಿನಲ್ಲಿ ಫೈಬರ್ ಕ್ಯಾಲ್ಸಿಯಂ ಐರನ್ ಕಾಫರ್ ವಿಟಮಿನ್ಸ್ ಇರುತ್ತದೆ ಹಾಗೆ ಇದು ಒಂದು ಆಂಟಿ ಆಕ್ಸಿಡೆಂಟ್ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ
ಹಾಗೆ ಇದಕ್ಕೆ 10 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ನಂತರ ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಿ ಇದರಲ್ಲಿ ಡಾಯಟ್ರಿ ಫೈಬರ್ ಮ್ಯಾಂಗನೀಸ್ ಐರನ್ ಮೆಗ್ನಿಶಿಯಮ್ ತುಂಬಾ ಇರುತ್ತದೆ ಹಾಗೆ ಇದರಲ್ಲಿ ಪ್ರೋಟಿನ್ಸ್ ವಿಟಮಿನ್ಸ್ ಕೂಡ ಇರುತ್ತದೆ ಇದಕ್ಕೆ ಕಾಲುಲೋಟ ಕೊತ್ತಂಬರಿ ಸೊಪ್ಪು ಬೇಕು ಇದನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ ನಂತರ ಪುದಿನ ತೆಗೆದುಕೊಳ್ಳಿ ಈ ಪುದಿನ ಅಜೀರ್ಣ ಸಮಸ್ಯೆಯನ್ನು ದೂರ ಮಾಡಲು ತುಂಬಾ ಸಹಕಾರಿಯಾಗಿದೆ ಪುದಿನದಲ್ಲಿ ಹೆಚ್ಚಾಗಿ ಐರನ್ ವಿಟಮಿನ್ಸ್ ಮೆಗ್ನಿಶಿಯಮ್ ಇರುತ್ತದೆ. ಇದಕ್ಕೆ ಮೂರರಿಂದ ನಾಲ್ಕು ಪುದಿನ ಎಲೆಗಳು ಬೇಕಾಗುತ್ತದೆ ನಂತರ ಹಸಿಶುಂಠಿ ಇದರಲ್ಲಿ ವಿಟಮಿನ್ ಬಿ6 ಹಾಗೇನೇ ವಿಟಮಿನ್ ಸಿ ಮೆಗ್ನಿಶಿಯಮ್ ತುಂಬಾ ಇರುತ್ತದೆ ಇದು ರಕ್ತ ಸಂಚಾರ ಚೆನ್ನಾಗಿ ಆಗುವಂತೆ ಮಾಡುತ್ತದೆ ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ನಾವು ತಿನ್ನುವ ಪೋಷಕಾಂಶಗಳನ್ನು ಹಿರಿಕೊಳ್ಳುವಂತೆ ಈ ಹಸಿಶುಂಠಿ ಮಾಡುತ್ತದೆ ಇದಕ್ಕೆ ಕಾಲು ಇಂಚು ಹಸಿ ಶುಂಠಿ ತೆಗೆದುಕೊಳ್ಳಿ ನಂತರ ಇದಕ್ಕೆ ಕಾಲು ಚಮಚ ಕರಿಮೆಣಸಿನ ಪುಡಿ ತೆಗೆದುಕೊಳ್ಳಿ ಈಗ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಇದಕ್ಕೆ ಈ ಎಲ್ಲ ಸಾಮಗ್ರಿಗಳನ್ನು ಹಾಕಿಕೊಳ್ಳಿ
ಈಗ ಇದನ್ನು ಚೆನ್ನಾಗಿ ಕಾಯಿಸಬೇಕು ಇದು ತಣ್ಣಗಾದ ನಂತರ ಸೋಸಿಕೊಳ್ಳಿ ಇದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಇದನ್ನು ನೀವು ಪ್ರತಿದಿನ ಕಾಫಿ ಚಹಾ ಕುಡಿಯುವ ಬದಲಿಗೆ ಈ ಒಂದು ಕಷಾಯವನ್ನು ಕುಡಿಯಬೇಕು ಹೀಗೆ ಈ ಒಂದು ಕಷಾಯವನ್ನು ಕುಡಿಯುವುದರಿಂದ ಇಡೀ ದಿನ ನೀವು ಉತ್ಸಾಹದಿಂದ ಇರಬಹುದು ಈ ಕಷಾಯವನ್ನು ನೀವು ಅಷ್ಟೇ ಕುಡಿಯುವುದಲ್ಲದೆ ನಿಮ್ಮ ಮನೆಗೆ ಯಾರೇ ಅತಿಥಿಗಳು ಬಂದರು ಕೂಡ ಅವರಿಗೂ ಕೂಡ ಈ ಕಷಾಯವನ್ನು ಕುಡಿಯಲು ಕೊಡಿ ಅವರ ಆರೋಗ್ಯವನ್ನು ಸಹ ವೃದ್ಧಿಸಲು ಸಹಾಯ ಮಾಡಿ ಈ ಒಂದು ಕಷಾಯದಲ್ಲಿ ನಾವು ಬಳಸಿರುವ ಪ್ರತಿಯೊಂದು ವಸ್ತುವು ಕೂಡ ನಮ್ಮ ಮೆದುಳನ್ನು ಉತ್ತೇಜಿಸಲು ತುಂಬಾ ಸಹಾಯ ಮಾಡುತ್ತದೆ ಹಾಗೇನೇ ಬೆಳಿಗ್ಗೆ ತಿಂಡಿ ತಿನ್ನುವಾಗ ಅದರಲ್ಲಿ ಹಣ್ಣುಗಳು ಇರುವಂತೆ ನೋಡಿಕೊಳ್ಳಿ ಹಾಗೇನೇ ಖರ್ಜುರವನ್ನ ಕೂಡ ಬಳಸಿ ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ