ಮಹಿಳೆಯರು ಮುಖದ ಸೌಂದರ್ಯ ಹೆಚ್ಚಿಸಲು ಬಹಳ ವಿಧಾನಗಳನ್ನು ಬಳಸುತ್ತಾರೆ ಹಾಗೇನೇ ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರತಿಯೊಂದು ಕ್ರಿಮನ್ನು ಸಹ ಬಳಸಿ ಸೌಂದರ್ಯ ಹೆಚ್ಜಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಇದರ ಜೊತೆಗೆ ಹಲವಾರು ಫೇಸ್ ಪ್ಯಾಕ್ ಗಳನ್ನು ಅಂದರೆ ಕಡಲೆಹಿಟ್ಟು ಜೇನುತುಪ್ಪ ಹೀಗೆ ಹಲವಾರು ಫೇಸ್ ಪ್ಯಾಕ್ ಗಳನ್ನು ಸಹ ಬಳಸುತ್ತಾರೆ ಆದರೆ ಉತ್ತಮ ಹೊಳೆಯುವ ತ್ವಚೆ ಪಡೆಯಲು ಈ ಒಂದು ಲೇಖನದಲ್ಲಿ ತಿಳಿಸುವ ಪ್ರಕಾರ ಈ ಒಂದು ಫೇಸ್ ಪ್ಯಾಕ್ ಹಾಕುವುದರ ಮೂಲಕ ನೀವು ನಿಮ್ಮ ಸೌಂದರ್ಯವನ್ನು ಇನ್ನು ಎರಡರಷ್ಟು ಹೆಚ್ಚಿಸಿಕೊಳ್ಳಬಹುದು ಬನ್ನಿ ಹಾಗಾದರೆ ಅದು ಯಾವ ಫೇಸ್ ಪ್ಯಾಕ್ ಮತ್ತು ಅದನ್ನು ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ. ಮೊದಲನೆಯದಾಗಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಇದನ್ನು ಮಾಡಲು ಒಂದು ಚಮಚ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ ಇಲ್ಲಿ ಶ್ರೀಗಂಧದ ಮುಲ್ತಾನಿ ಮಿಟ್ಟಿ ತೆಗೆದುಕೊಂಡು ಈ ಫೇಸ್ ಪ್ಯಾಕನ್ನು ಮಾಡೋಣ ಹಾಗೇನೇ
ಇದರಲ್ಲಿ ವಿವಿಧ ಬಗೆಯ ಮುಲ್ತಾನಿ ಮಿಟ್ಟಿ ಸಿಗುತ್ತದೆ ಮಲ್ಲಿಗೆ ಪರಿಮಳದ ಮುಲ್ತಾನಿ ಮಿಟ್ಟಿ ಕಿತ್ತಲೆ ಪರಿಮಳದ ಮುಲ್ತಾನಿ ಮಿಟ್ಟಿ ಅಂದರೆ ಮುಖದ ಮೇಲೆ ಮೊಡವೆ ಕಲೆಗಳು ಇರುವವರಿಗೆ ಒಂದು ಬಗೆಯ ಮುಲ್ತಾನಿ ಮಿಟ್ಟಿ ಸಿಗುತ್ತದೆ ಹಾಗೇನೇ ಒಣ ಚರ್ಮದವರಿಗೆ ಒಂದು ಬಗೆಯ ಮುಲ್ತಾನಿ ಮಿಟ್ಟಿ ಹೀಗೆ ವಿವಿಧ ಬಗೆಯಲ್ಲಿ ಮುಲ್ತಾನಿ ಮಿಟ್ಟಿ ಸಿಗುತ್ತದೆ. ಈಗ ಮುಖ ಕಾಂತಿ ಬರಲು ಈ ಫೇಸ್ ಪ್ಯಾಕ್ ಮಾಡುವುದು ಒಂದು ಚಮಚ ಮುಲ್ತಾನಿ ಮಿಟ್ಟಿ ಎರಡನೆಯದು ಗುಲಾಬಿ ನೀರು ಇದನ್ನು ಬಳಸುವುದರಿಂದ ನಿಧಾನವಾಗಿ ಮುಖದ ಚರ್ಮ ಕಾಂತಿಯನ್ನು ಪಡೆಯುತ್ತದೆ ಹಾಗೇನೇ ಯಾವುದೇ ಕಲೆಗಳು ಸಹ ಇರುವುದಿಲ್ಲ ಇದನ್ನು ವಾರಕ್ಕೆ ಒಮ್ಮೆ ಬಳಸಬಹುದು ಗುಲಾಬಿ ನೀರು ಕೂಡ ಒಳ್ಳೆಯ ಹೊಳಪನ್ನು ಕೊಡುತ್ತದೆ ಚರ್ಮಕ್ಕೆ ಹಾಗೇನೇ ಕಲೆ ರಹಿತ ಕಾಂತಿಯುತ ಮುಖ ನಿಮ್ಮದಾಗುತ್ತದೆ ಒಂದು ಚಮಚ ಮುಲ್ತಾನಿ ಮಿಟ್ಟಿ ಹಾಗೇನೇ ಸ್ವಲ್ಪ ಗುಲಾಬಿ ನೀರನ್ನು ಹಾಕಿಕೊಂಡು ಇವೆರಡನ್ನು
ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ ಇದನ್ನು ನಿಮ್ಮ ಮುಖಕ್ಕೆ ಹಾಗೇನೇ ನಿಮ್ಮ ಕುತ್ತಿಗೆ ಭಾಗಕ್ಕೂ ಕೂಡ ಹಚ್ಚಬಹುದು ಹೀಗೆ ಇದನ್ನು ಮುಖಕ್ಕೆ ಹಾಗೇನೇ ಕುತ್ತಿಗೆಗೆ ಹಚ್ಚಿ ಇದು ಒಣಗಿದ ಮೇಲೆ ಅಂದರೆ 25 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ ನಂತರ ಐಸ್ಕ್ಯೂಬ್ ನಿಂದ ಮುಖವನ್ನು ನಿಧಾನವಾಗಿ ಉಜ್ಜಿರಿ ಒಂದು ಐಸ್ ಕ್ಯೂಬ್ ಸಾಕು ಹೀಗೆ ಮಾಡುವುದರಿಂದ ಚರ್ಮಕ್ಕೆ ಇದು ಫೇಸ್ ಪ್ಯಾಕ್ ಹಿಡಿಯುತ್ತದೆ ಹಾಗೇನೇ ಸ್ವಚ್ಛವಾದ ಹೊಳೆಯುವ ತ್ವಚೆಯನ್ನು ನೀವು ಪಡೆಯಬಹುದು ಆದ್ದರಿಂದ ನೀವು ಮುಲ್ತಾನಿ ಮಿಟ್ಟಿ ಬಳಸಿ ಹೊಳೆಯುವ ತ್ವಚೆ ಪಡೆಯಿರಿ. ಈ ಒಂದು ಸೌಂದರ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಖಂಡಿತವಾಗಿಯೂ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳೀಸಿ ಜೋತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ