ಈ ಒಂದು ಸಸ್ಯ ಸಕ್ಕರೆ ಕಾಯಿಲೆಗೆ ರಾಮಬಾಣ

69

ಹಿಂದೆ ಹಳ್ಳಿಗಳಲ್ಲಿ ನಮ್ಮ ಹಿರಿಯರು ಯಾವುದೇ ಕಾಯಿಲೆ ಬಂದರು ಕೂಡ ಗಿಡಮೂಲಿಕೆ ಔಷಧಿ ಬಳಸುತ್ತಿದ್ದರು ಅವರು ಯಾವುದೇ ಕಾಯಿಲೆ ಬಂದರು ಕೂಡ ವೈದ್ಯರನ್ನು ಭೇಟಿ ಮಾಡುತ್ತಿರಲಿಲ್ಲ ಅವರ ಸುತ್ತ ಮುತ್ತ ಇರುವಂತಹ ಗಿಡಗಳನ್ನೇ ಬಳಸಿ ಔಷಧಿ ತಯಾರಿಸಿಕೊಂಡು ಅವರು ಸೇವಿಸುತ್ತಿದ್ದರು ಆದರೆ ಈಗ ಕಾಲ ಬದಲಾದಂತೆ ನಾವುಗಳು ಯಾವುದೇ ಸಣ್ಣ ಪುಟ್ಟ ಕಾಯಿಲೆಗೂ ಕೂಡ ವೈದ್ಯರನ್ನು ಭೇಟಿ ಮಾಡಿ ಅವರು ಕೊಡುವ ಮಾತ್ರೆಗಳನ್ನು ತಂದು ಅವುಗಳನ್ನು ತಿಂಗಳುಗಟ್ಟಲೆ ತಿಂದು ಅದರಿಂದ ಪರಿಹಾರ ಇಲ್ಲ ಎಂದಾಗ ಮತ್ತೆ ವೈದ್ಯರ ಬಳಿ ಹೋಗುವುದು ಪ್ರತಿಯೊಬ್ಬರ ಒಂದು ದಿನಚರಿ ಆಗಿದೆ ಎಂದರೆ ಅದು ತಪ್ಪಾಗಲಾರದು ಏಕಂದರೆ ಇವತ್ತಿನ ನಮ್ಮ ಆಹಾರ ಕ್ರಮ ಹಾಗೆ ಇರುವುದೇ ನಮ್ಮ ಇಂದಿನ ಈ ಪರಿಸ್ಥಿತಿಗೆ ಕಾರಣ ಹಾಗಾಗಿ ಹಲವಾರು ರೋಗಗಳು ಅದರಲ್ಲೂ ಸಕ್ಕರೆ ಕಾಯಿಲೆ ಇಂದು ಮನೆಮನೆಗೆ ಬೇಟಿ ಕೊಡುತ್ತಿದೆ ಹಾಗಾದರೆ ಈ ಸಕ್ಕರೆ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಮನೆಮದ್ದುಗಳು ಯಾವುವು ಇಲ್ಲವೇ ಎಂದರೆ ಖಂಡಿತ ಇದೆ

ಈ ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಲು ಸಹ ಮನೆಮದ್ದು ಇದೆ ಹಾಗಾದರೆ ಬನ್ನಿ ಸ್ನೇಹಿತರೆ ಸಕ್ಕರೆ ಕಾಯಿಲೆಯನ್ನು ಗುಣಪಡಿಸಲು ಯಾವ ಒಂದು ನೈಸರ್ಗಿಕವಾದ ಔಷಧಿ ಇದೆ ಎಂಬುದನ್ನು ಈ ಲೆಖನದಲ್ಲಿ ತಿಳಿಯೋಣ ಬನ್ನಿ.ಈ ಒಂದು ನೈಸರ್ಗಿಕವಾದ ಔಷಧಿ ತಯಾರಿಕೆಗೆ ಇಲ್ಲಿ ಒಂದು ಸಸ್ಯವನ್ನು ತೆಗೆದುಕೊಳ್ಳೋಣ ಅದು ಯಾವ ಸಸ್ಯೆ ಎಂದರೆ ನೆಲನೆಲ್ಲಿಗಿಡ ಮತ್ತು ಕರಿಬೆವನ್ನು ಬಳಸಿ ಈ ಒಂದು ಔಷಧಿ ತಯಾರಿಸಿ ಸಕ್ಕರೆ ಕಾಯಿಲೆ ಇರುವವರಿಗೆ ಕೊಡಲಾಗುತ್ತದೆ ಬನ್ನಿ ಹಾಗಾದರೆ ಹೇಗೆ ಮಾಡುವುದು ಎಂದು ತಿಳಿಯೋಣ ನೆಲನೆಲ್ಲಿಗಿಡ ಮತ್ತು ಕರಿಬೆವನ್ನು ಹರಿದುಕೊಂಡು ಚೆನ್ನಾಗಿ ಅರೆದು ರಸದ ಸಮೇತ ಉಂಡೆ ಮಾಡಬೇಕು ಇದನ್ನು ಕೆಲವರು ಹಾಗೆ ತಿನ್ನುತ್ತಾರೆ ಇನ್ನು ಕೆಲವರಿಗೆ ಇದು ಕಹಿ ಇರುವುದರಿಂದ ಹಾಗೆ ತಿನ್ನಲು ಆಗುವುದಿಲ್ಲ ಎನ್ನುವವರು ಬೆಲ್ಲದ ಜೊತೆ ಇದನ್ನು ಬೆರಸಿಕೊಂಡು ತಿನ್ನಬಹುದು

ಇದನ್ನು ನಿಯಮಿತವಾಗಿ ಮತ್ತು ನಿರಂತರವಾಗಿ ಬೆಳಿಗ್ಗೆ ಆರು ಗಂಟೆಯ ಒಳಗೆ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ತುಂಬಾ ಒಳ್ಳೆಯ ಪರಿಣಾಮವೇ ನಮಗೆ ಸಿಗುತ್ತದೆ ಹಳ್ಳಿಗಳಲ್ಲೂ ಕೂಡ ಈ ನೆಲನೆಲ್ಲಿಗಿಡ ತುಂಬಾ ಇರುತ್ತದೆ ಆದ್ದರಿಂದ ಸಕ್ಕರೆ ಕಾಯಿಲೆ ಇರುವವರು ಈ ನೆಲನೆಲ್ಲಿಗಿಡ ಮತ್ತು ಸ್ವಲ್ಪ ಕರಿಬೆವನ್ನು ಸೇರಿಸಿ ಅರೆದು ಬೆಲ್ಲ ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು ಇದನ್ನು ನಿತರಂತರವಾಗಿ 15 ದಿನ ತಿನ್ನಬೇಕು ಇಲ್ಲವಾದರೆ ಅದು ಅಷ್ಟೊಂದು ಪರಿಣಾಮ ಬೀರುವುದಿಲ್ಲ ಆದ್ದರಿಂದ ನಿಮಗೆ ಗೊತ್ತಿರುವವರು ಯಾರಾಗಿದರು ಸಕ್ಕರೆ ಕಾಯಿಲೆ ಇದ್ದರೆ ಅವರಿಗೂ ಸಹ ಈ ನೆಲನೆಲ್ಲಿಗಿಡದ ಬಗ್ಗೆ ತಿಳಿಸಿ ಅವರಿಗೂ ಸಹ ಸಹಾಯ ಮಾಡಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here