ಈ ಕಷಾಯ ಮಾಡಿ ಕುಡಿದರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಜಾಸ್ತಿ ಆಗುತ್ತದೆ

40

ನೆಲನೆಲ್ಲಿಯ ಕಷಾಯವನ್ನು ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅದು ಹೇಗೆ ಎನ್ನುತ್ತೀರಾ ತಿಳಿಯಲು ಓದಿ. ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಕಂಡು ಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದು ಕರೆಯುತ್ತಾರೆ. ಕಳೆ ಗಿಡವಾದರೂ ಕೂಡ ಔಷಧೀಯ ಗುಣಗಳ ಭಂಡಾರವಾಗಿದೆ. ಹಾಗಾದ್ರೆ ಇಂದಿನ ಲೇಖನದಲ್ಲಿ ನೆಲನೆಲ್ಲಿಯ ಕಷಾಯವನ್ನು ಹೇಗೆ ತಯಾರಿಸುವುದು, ಇದನ್ನು ಯಾಕೆ ಹಾಗೂ ಹೇಗೆ ಸೇವನೆ ಮಾಡುವುದೆಂದು ವಿವರವಾಗಿ ತಿಳಿದುಕೊಳ್ಳೋಣ. ಮುಖ್ಯವಾಗಿ ನೆಲನೆಲ್ಲಿಯನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜಾಂಡೀಸ್ ಅಂಥಹ ದೊಡ್ಡ ಕಾಯಿಲೆಯನ್ನು ನಿವಾರಿಸಲು ಇದನ್ನು ಬಳಕೆ ಮಾಡುತ್ತಾರೆ. ನೆಲನೆಲ್ಲಿಯನ್ನು ಕಷಾಯದ ರೂಪದಲ್ಲಿ ಸೇವನೆ ಮಾಡಬಹುದು. ಅಥವಾ ರಸದ ರೂಪದಲ್ಲಿ ತಂಬುಳಿ ಹಾಗೂ ಚಟ್ನಿ ಕೂಡ ಮಾಡಿ ಊಟದಲ್ಲಿ ಸೇವಿಸಬಹುದು. ಈ ರೀತಿ ನಾವು ಬಳಕೆ ಮಾಡುವುದರಿಂದ ನಮಗೆ ಚಿಕನ್ ಗುನ್ಯಾ, ಹಾಗೂ ಡೆಂಗ್ಯೂ, ಕಾಲರಾ ಈ ರೀತಿಯ ಸಾಂಕ್ರಾಮಿಕ ರೋಗ ಬಂದಾಗ ನಾವು ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಎಂಥಹ ಮಹಾಮಾರಿ ಕಾಯಿಲೆ ನಮ್ಮ ತಂಟೆಗೆ ಬರುವುದಿಲ್ಲ. ನಮ್ಮ ದೇಹ ಸದೃಢವಾಗಿ ರೋಗಗಳ ವಿರುದ್ಧ ಹೋರಾಡುತ್ತದೆ. ಇನ್ನೂ ಈ ಸಸ್ಯವನ್ನು ನೀವು ಸುಲಭವಾಗಿ ಗುರುತಿಸಬಹುದು. ಹಳ್ಳಿಗಳಲ್ಲಿ ರಸ್ತೆ ಬದಿಯಲ್ಲಿ ಸಿಕ್ಕಿದ ಜಾಗದಲ್ಲಿ ಕಳೆಯ ರೂಪದಲ್ಲಿ ಇದು ಬೆಳೆದಿರುತ್ತದೆ. ನೆಲನೆಲ್ಲಿಯನ್ನು ನೆಲನೆಲ್ಲೆ

ಕಿರುನೆಲ್ಲೆ ಹಾಗೂ ಸಂಸ್ಕೃತದಲ್ಲಿ ಬಹುಪತ್ರ, ಬಹುಫಲ, ತಾಮಲಕ್ಕಿ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡು ಬರುವ ಸಸ್ಯವಾಗಿದೆ. ಜನ ಸಾಮಾನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ. ಇಷ್ಟು ಈ ಸಸ್ಯದ ಸಾಮಾನ್ಯ ಮಾಹಿತಿ ಆಗಿದೆ ಸ್ನೇಹಿತರೇ ಬನ್ನಿ ಹಾಗಾದ್ರೆ ಮುಂದೆ ಇದರ ಕಷಾಯವನ್ನು ಹೇಗೆ ಮಾಡುವುದೆಂದು ತಿಳಿಯೋಣ. ಈ ನೆಲನೆಲ್ಲಿಯನ್ನು ಬೇರು ಸಮೇತವಾಗಿ ತೆಗೆದುಕೊಳ್ಳಬೇಕು. ನಂತರ ಇದನ್ನು ಪೂರ್ತಿಯಾಗಿ ಜಜ್ಜಿ ಇದರ ಕಷಾಯವನ್ನು ಮಾಡಿಕೊಳ್ಳಬೇಕು. ಇದು ಮಳೆಗಾಲದಲ್ಲಿ ಅಧಿಕವಾಗಿ ದೊರೆಯುವ ಸಸ್ಯವಾಗಿದ್ದು, ಬೇಸಿಗೆ ಕಾಲದಲ್ಲಿ ಸಿಗದೇ ಇದ್ದಲ್ಲಿ ಮೊದಲೇ ಇದನ್ನು ತಂದು ಬೇಸಿಗೆ ಕಾಲದಲ್ಲಿ ಚೆನ್ನಾಗಿ ಒಣಗಿಸಿ ಇದನ್ನು ಪುಡಿ ಮಾಡಿ ಬೇಸಿಗೆಯಲ್ಲಿ ಉಪಯೋಗಿಸಬಹುದು. ಈಗ ಕಷಾಯ ಮಾಡುವ ವಿಧಾನ. ಬೇರು ಸಮೇತವಾಗಿ ನೆಲನೆಲ್ಲಿಯನ್ನು ತೆಗೆದುಕೊಳ್ಳಿ ಹಾಗೂ ನಿಮಗೆ ಏನಾದರೂ ಶೀತ ನೆಗಡಿ ಕೆಮ್ಮು ಕಫ ಇದ್ದರೆ 5 ರಿಂದ 6 ತುಳಸಿ ಎಲೆ ತೆಗೆದುಕೊಳ್ಳಿ. ನಂತರ ನಾವು ಅಮೃತ ಬಳ್ಳಿ ಹಾಗೂ ಬೆಲ್ಲವನ್ನು ತೆಗೆದುಕೊಳ್ಳೋಣ. ಈ ಎಲ್ಲ ವಸ್ತುಗಳನ್ನು ಕುಟ್ಟನಿಗೆಯಲ್ಲಿ ಹಾಕಿ ಒರಟು ಒರಟಾಗಿ ಜಜ್ಜಿ ಒಂದು ಮಡಿಕೆಯಲ್ಲಿ ಹಾಕಿಕೊಂಡು ಇಟ್ಟುಕೊಳ್ಳೋಣ. ತದ ನಂತರ ಈ ಜಜ್ಜಿದ ನೆಲನೆಲ್ಲಿ ಸೊಪ್ಪನ್ನು ಜೊತೆಗೆ ಬೆಲ್ಲವನ್ನು ಸೇರಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಎರಡು ಲೋಟ ನೀರು ಒಂದು ಲೋಟ ಆಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಬೇಕು.

ತದ ನಂತರ ಇದು ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಇದನ್ನು ಶೋಧಿಸಿಕೊಳ್ಳಬೇಕು. ಈಗ ನಮಗೆ ನೆಲನೆಲ್ಲಿಯ ರಸ ಅಥವಾ ಕಷಾಯ ದೊರಕಿದೆ. ಇದನ್ನು ದೊಡ್ಡವರು ಮೂರು ಹೊತ್ತು ಒಂದು ಚಿಕ್ಕ ಲೋಟದಷ್ಟು ಕುಡಿಯಬೇಕು. ಚಿಕ್ಕ ಮಕ್ಕಳಿಗೆ ಎರಡು ಹೊತ್ತು ಒಂದು ಚಿಕ್ಕ ಚಮಚದಷ್ಟು ಕುಡಿಸಬೇಕು. ಹೀಗೆ ಸೇವನೆ ಮಾಡುವುದರಿಂದ ಯಾವುದೇ ರೋಗ ರುಜಿನಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಕೂಡ. ನಿಮ್ಮ ದೇಹ ಎಲ್ಲ ಬಗೆಯ ರೋಗಗಳ ಜೊತೆ ಹೋರಾಡಲು ಸಿದ್ಧವಾಗುತ್ತದೆ ಇನ್ನೂ ಒಂದು ವೇಳೆ ನಿಮಗೆ ಏನಾದರೂ ಶೀತ ನೆಗಡಿ ಕೆಮ್ಮು ಕಫ ಸಮಸ್ಯೆ ಇದ್ದರೆ ಈ ಕಷಾಯಕ್ಕೆ ನೀವು ಹಸಿ ಶುಂಠಿ ಕಾಳು ಮೆಣಸು ಹಾಕಿ ಕುದಿಸಿ ಕುಡಿದರೆ ಕೆಮ್ಮು ಶೀತ ನೆಗಡಿ ಕಾಯಿಲೆಗಳು ಕೂಡ ಕಡಿಮೆಯಾಗುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here