ಈ ಪಾನೀಯ ಕುಡಿಯುವುದರಿಂದ ಬೇಗನೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

70

ಸಾಧಾರಣವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಕೊಡುವ ಸಲಹೆ ಎಂದರೆ ನಡೆದಾಡುವುದು ಇಲ್ಲವೇ ಊಟದಲ್ಲಿ ನಿಯಂತ್ರಣ ಮಾಡಿಕೊಳ್ಳುವುದು ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ನಡೆದಾಡಲು ಸಮಯ ಇಲ್ಲದೆ ಅದನ್ನು ಕೆಲವು ದಿನ ಮಾಡಿ ಮತ್ತೆ ಬಿಟ್ಟುಬಿಡುತ್ತಾರೆ ಹಾಗೆಯೇ ಇನ್ನು ಕೆಲವು ಜನರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ ಅದು ತಾತ್ಕಾಲಿಕ ಮಾತ್ರವೇ ಏಕೆಂದರೆ ತುಂಬಾ ದಿನಗಳ ವರೆಗೆ ಬಾಯಿ ಕಟ್ಟಿ ಬೇಕಾದ ಆಹಾರವನ್ನು ತಿನ್ನದೆ ಇರಲು ಸಾಧ್ಯವಿಲ್ಲ ಹಾಗೆಯೇ ನಿಮಗೆ ಇಷ್ಟ ಇರುವ ಆಹಾರವನ್ನು ತುಂಬಾ ದಿನಗಳವರೆಗೆ ಬಿಡುವುದು ಅಸಾಧ್ಯವಾದುದು ಆದ್ದರಿಂದ ಮತ್ತೆ ನಮ್ಮ ದೇಹದ ತೂಕವು ಹೆಚ್ಚಾಗುತ್ತದೆ ಈ ತಪ್ಪನ್ನು ಮಾಡದೆ ಸ್ವಲ್ಪ ಸ್ವಲ್ಪ ನಿಧಾನವಾದರು ಆದಷ್ಟು ಜಂಕ್ ಪುಡನ್ನು ನಿಯಂತ್ರಣ ಮಾಡುತ್ತ ಬನ್ನಿ ಅದರ ಜೊತೆಗೆ ವ್ಯಾಯಾಮವನ್ನು ಮಾಡುತ್ತ ಬನ್ನಿ ಹಾಗೇನೇ ಅದರ ಜೊತೆಗೆ ಈ ಲೇಖನದಲ್ಲಿ ತಿಳಿಸುವ

ದೇಹದ ತೂಕವನ್ನು ಕಡಿಮೆ ಮಾಡುವ ಒಂದು ಪಾನೀಯವನ್ನು ಕೂಡ ಸೇವಿಸುವ ಮೂಲಕ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಈಗ ತಿಳಿಯೋಣ ಬನ್ನಿ ಈ ಪಾನೀಯಕ್ಕೆ ಬೇಕಾದ ಪಧಾರ್ಥಗಳೂ ಕೊತ್ತಂಬರಿ ಸೊಪ್ಪು ಒಂದು ಕಟ್ಟು ಬೆಳ್ಳುಳ್ಳಿ ಎರಡು ಎಸಳು ಚೆಕ್ಕೆ ಪುಡಿ ಅರ್ಧ ಚಮಚ ಕರಿಬೇವು 10 ಎಲೆಗಳು ಹಾಗೇನೇ ನಿಂಬೆಹಣ್ಣಿನ ರಸ ಎರಡು ಚಮಚ ಹಾಗೇನೇ ಜೇನುತುಪ್ಪ ಎರಡು ಚಮಚ. ಈಗ ತಯಾರಿ ಮಾಡುವ ವಿಧಾನ ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಿ ಮಿಕ್ಸಿ ಜಾರಿನಲ್ಲಿ ಹಾಕಿ ಎರಡು ಬೆಳ್ಳುಳ್ಳಿ ಅರ್ಧ ಚಮಚ ಚೆಕ್ಕೆ ಪುಡಿ 10 ಕರಿಬೇವಿನ ಎಲೆಗಳು ಎರಡು ಚಮಚ ನಿಂಬೆಹಣ್ಣಿನ ರಸವನ್ನು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ ಈಗ ಅದಕ್ಕೆ ಬೇಕಾದಷ್ಟು ಬಿಸಿ ನೀರನ್ನು ಹಾಕಿ ಪಾನೀಯವನ್ನು ಮಾಡಿಕೊಳ್ಳಬೇಕು ಹಾಗೇನೇ ನಿಮ್ಮ ಬಾಯಿ ರುಚಿಗೊಸ್ಕರ ಜೇನುತುಪ್ಪವನ್ನು ಹಾಕಿ ಕುಡಿಯಬಹುದು ಇನ್ನು ಇದನ್ನು ಕುಡಿಯುವ ವಿಧಾನ ಎಂದರೆ ಪ್ರತಿದಿನ ಬೆಳಗಿನ ಜಾವ ಖಾಲಿಹೊಟ್ಟೆಯಲ್ಲಿ

ಈ ಪಾನೀಯವನ್ನು ಸೇವಿಸುವುದು ಒಳ್ಳೆಯದು ಹೀಗೆ ಸೇವಿಸಿದ ಮೇಲೆ ಅರ್ಧ ಗಂಟೆ ಬಿಟ್ಟು ತಿಂಡಿಯನ್ನು ತಿನ್ನಬೇಕು ಈ ಅರ್ಧ ಗಂಟೆ ಸಮಯದಲ್ಲಿ ಯಾವದಾದರು ವ್ಯಾಯಾಮ ಅಥವಾ ವಾಕಿಂಗ್ ಮಾಡಿದರೆ ಇನ್ನು ಒಳ್ಳೆಯದು ಹಾಗೇನೇ ಈ ಒಂದು ಪಾನೀಯವನ್ನು ಮಹಿಳೆಯರು ತಮ್ಮ ತಿಂಗಳ ಋತು ಚಕ್ರದ ಅವಧಿಯಲ್ಲಿ ಕುಡಿಯದೆ ಇರುವುದೇ ಒಳ್ಳೆಯದು ಈ ಪಾನೀಯವನ್ನು ನಿರಂತರವಾಗಿ ಕ್ರಮ ತಪ್ಪದೆ ಒಂದು ತಿಂಗಳವರೆಗೆ ಸೇವಿಸಿದರೆ ನಿಮ್ಮ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹೀಗೆ ಮಾಡುವುದರಿಂದ ಬೇಡವಾದ ದೇಹದ ಬೊಜ್ಜನ್ನು ಬೇಗನೆ ಕಡಿಮೆ ಮಾಡಿಕೊಳ್ಳಬಹುದು ಹಾಗೇನೇ ನಾವು ತೆಳುವಾಗಿ ಗಟ್ಟಿಯಾಗಿ ಜೊತೆಗೆ ಆರೋಗ್ಯವಾಗಿ ಕೂಡ ಇರಬಹುದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಕೂಡ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here