ಈ ಪುಡಿಯನ್ನು ತಿನ್ನುವುದರಿಂದ ಮಕ್ಕಳಿಗೆ ಸರಿಯಾದ ಪೋಷಕಾಂಶ ದೊರೆಯುತ್ತದೆ. ತಾಯಂದಿರಿಗೆ ಮಕ್ಕಳ ಬೆಳವಣಿಗೆಯೇ ತುಂಬಾ ಮುಖ್ಯ ಅದಕ್ಕಾಗಿ ಹಗಲು ರಾತ್ರಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುತ್ತಾರೆ ಆದರೆ ಮಕ್ಕಳು ಪೌಷ್ಟಿಕಾಂಶ ಇರುವ ಆಹಾರ ತಿನ್ನಲು ಬಯಸುವುದಿಲ್ಲ ಬರಿ ಬಾಯಿ ರುಚಿ ಕೊಡುವ ಕುರುಕಲು ತಿಂಡಿ ತಿನ್ನುತ್ತಾರೆ ಸರಿಯಾದ ಪೋಷಕಾಂಶ ದೊರೆಯದಿದ್ದರೆ ಮಕ್ಕಳ ಬೆಳವಣಿಗೆ ಕುಂಠಿತ ಗೊಳ್ಳುತ್ತದೆ ಮಕ್ಕಳು ಇಷ್ಟ ಪಟ್ಟು ತಿನ್ನುವ ಕುರುಕಲು ತಿಂಡಿಗಳು ಮತ್ತು ಪಾಷ್ಟ ಫುಡ್ ಗಳಲ್ಲಿ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಯಾವುದೇ ಪೋಷಕಾಂಶಗಳು ಇರುವುದಿಲ್ಲ ಆದ್ದರಿಂದ ಪೋಷಕಾಂಶ ಇರುವ ಆಹಾರಗಳನ್ನು ಮಕ್ಕಳ ಆಹಾರ ಕ್ರಮದಲ್ಲಿ ಸೇರಿಸುವುದು ಒಳ್ಳೆಯದು ದಿನನಿತ್ಯದ ಮಗುವಿನ ಬೆಳವಣಿಗೆಗೆ ಪೋಷಕಾಂಶಗಳ ಹೆಚ್ಚಿನ ಅವಶ್ಯಕತೆ ಇದೆ ಎಲ್ಲ ತಾಯಂದಿರು ತನ್ನ ಮಗುವಿನ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳಬೇಕು
ಈಗ ಈ ಲೇಖನದಲ್ಲಿ ತಿಳಿಸುವ ಈ ಪೌಷ್ಟಿಕಾಂಶದ ಪುಡಿ ಮಗುವಿನ ಬೆಳವಣಿಗೆ ಉತ್ತಮವಾಗಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಅದಲ್ಲದೆ ಮಗುವಿನ ಆರೋಗ್ಯಕರ ತೂಕ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ ಈ ಪುಡಿಯನ್ನು ಮಾಡಲು ಬೇಕಾಗಿರುವ ಪಧಾರ್ಥಗಳೂ ಪಿಸ್ತಾ 100 ಗ್ರಾಮ್ ಬಾದಾಮಿ 100 ಗ್ರಾಮ್ ಗೋಡಂಬಿ 100 ಗ್ರಾಮ್ ಅರಿಷಿಣ ಅರ್ಧ ಚಮಚ ತುರಿದ ಜಾಕಾಯಿ ಅರ್ಧ ಕೇಸರಿ ಎಳೆ 5 ರಿಂದ 8 ಕಡಲೇಬಿಜ 100 ಗ್ರಾಮ್ ಈಗ ಮಾಡುವ ವಿಧಾನ ಮೊದಲಿಗೆ 100 ಗ್ರಾಮ್ ಪಿಸ್ತಾ 100 ಗ್ರಾಮ್ ಬಾದಾಮಿ 100 ಗ್ರಾಮ್ ಗೋಡಂಬಿ ಮತ್ತು 100 ಗ್ರಾಮ್ ಕಡಲೆ ಬೀಜವನ್ನು ಸಣ್ಣ ಉರಿಯಲ್ಲಿ ಒಂದೊಂದೇ ಬಣ್ಣ ಬದಲಾಯಿಸುವವರೆಗೆ ಹುರಿದಿಟ್ಟುಕೊಳ್ಳಬೇಕು. ಕೇಸರಿಯನ್ನು ಸಹ ಹುರಿದುಕೊಳ್ಳಿ ನಂತರ ಇದನ್ನು ಒಂದು ಬಟ್ಟಲಿನಲ್ಲಿ ಇಟ್ಟುಕೊಳ್ಳಬೇಕು ಇದು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಬರುವಂತೆ ಪುಡಿ ಮಾಡಿಕೊಳ್ಳಿ ಈಗ ಇದಕ್ಕೆ ತುರಿದ ಜಾಕಾಯಿ ಅರಿಷಿಣವನ್ನು ಮತ್ತೆ ಸೇರಿಸಿಕೊಂಡು ರುಬ್ಬಿಕೊಳ್ಳಿ ಈಗ ಪೌಷ್ಟಿಕಾಂಶ ಬರಿತ ಪುಡಿ ತಯಾರಾಗಿದೆ
ಈ ಪೌಷ್ಟಿಕಾಂಶದ ಪುಡಿಯನ್ನು ಒಂದು ಡಬ್ಬದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು ಈ ಪುಡಿಯನ್ನು ಒಂದು ತಿಂಗಳ ಕಾಲ ಬಳಸಿಕೊಳ್ಳಬಹುದು ಇದನ್ನು ಫ್ರಿಜ್ ನಲ್ಲಿಯೂ ಕೂಡ ಇಡಬಹುದು ಇದನ್ನು ಮಕ್ಕಳು ತಿನ್ನುವ ಆಹಾರದಲ್ಲಿ ಸೇರಿಸಿ ತಿನಿಸುವುದರಿಂದ ಪೌಷ್ಟಿಕಾಂಶಗಳು ಮಕ್ಕಳಿಗೆ ದೊರೆಯಲು ಸಹಾಯವಾಗುತ್ತದೆ ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಇದು ಮಕ್ಕಳ ಮೂಳೆ ಗಟ್ಟಿಯಾಗಲು ಮತ್ತು ಕಣ್ಣಿಗೆ ತುಂಬಾ ಒಳ್ಳೆಯದು ಅದಲ್ಲದೆ ಮಕ್ಕಳ ಮೆದುಳಿನ ಬೆಳವಣಿಗೆಗೆ ಬೇಕಾಗಿರುವ ಎಲ್ಲ ಪೌಷ್ಟಿಕಾಂಶಗಳು ಸಿಗುತ್ತದೆ ಇದನ್ನು ಕ್ರಮ ತಪ್ಪದೆ ಮಕ್ಕಳಿಗೆ ಕೊಡುವುದರ ಜೊತೆಗೆ ಆರೋಗ್ಯಕರವಾದ ಆಹಾರವನ್ನು ನೀಡಿದರೆ ನಿಮ್ಮ ಮಕ್ಕಳ ಬೆಳವಣಿಗೆಗೆ ಯಾವ ತೊಂದರೆಯು ಆಗುವುದಿಲ್ಲ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಆರೋಗ್ಯಕರ ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ.