ಈ ಬಳ್ಳಿ ಜ್ಯೂಸ್ ನಿಂದ ನೂರಾರು ಲಾಭ

47

ಅಮೃತ ಬಳ್ಳಿಯ ಆರೋಗ್ಯಕರ ಲಾಭಗಳು. ಅಮೃತ ಬಳ್ಳಿಯಲ್ಲಿ ಅಥವಾ ಅಮೃತ ಎಲೆಗಳಲ್ಲಿ ಸುಮಾರು ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಅಡಗಿದೆ. ಈ ಅಮೃತ ಬಳ್ಳಿಯನ್ನು ಹಲವಾರು ಆಯುರ್ವೇದಿಕ್ ಔಷಧಿಯಾಗಿ ಬಳಸುತ್ತಾರೆ. ಮತ್ತು ಅಮೃತ ಬಳ್ಳಿಯಲ್ಲಿ ಇರುವ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಔಷಧಿಯ ಗುಣಗಳನ್ನು ಹೆಚ್ಚಿಸುತ್ತದೆ. ಅಮೃತ ಬಳ್ಳಿಯ ಲಾಭಗಳ ಬಗ್ಗೆ ಹೇಳುವುದೇಂದರೆ ಜಾಂಡೀಸ್ ಅಥವಾ ಕಾಮಾಲೆ ಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಈ ಅಮೃತ ಬಳ್ಳಿಯನ್ನು ಸೇರಿಸಿ ತಿನ್ನಬೇಕು. ಅಮೃತ ಬಳ್ಳಿಯ ಜ್ಯೂಸ್ ಮಾಡಿಕೊಂಡು ಕುಡಿಯಬಹುದು ಅಥವಾ ಹಸಿಯಾಗಿ ಸೇವಿಸಬಹುದು.ಅಥವಾ ಕಷಾಯವನ್ನು ತಯಾರಿಸಿ ಕುಡಿಯಬಹುದು. ಸಾಮಾನ್ಯವಾಗಿ ಹೇಳುವುದಾದರೆ ಈ ಕಾಮಾಯೆ ಕಾಯಿಲೆಗೆ ಈ ಅಮೃತ ಬಳ್ಳಿ ತುಂಬಾ ಉತ್ತಮವಾದದ್ದು. ಕೀಳು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಅಮೃತ ಬಳ್ಳಿಯ ಕಷಾಯ ಮಾಡಿ ಕುಡಿಯಬೇಕು. ಇದರಿಂದ ಕೀಳು ನೋವಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮತ್ತು ಈ ಅಮೃತ ಬಳ್ಳಿಯಲ್ಲಿ ಆಂಟಿ ಪೈರೇಟಿಕ್ ಎಂಬ ಅಂಶ ಅಡಗಿದೆ. ಇದು ದೇಹದಲ್ಲಿ ಹೆಚ್ಚು ಜ್ವರ ಬಂದಾಗ, ಜ್ವರವನ್ನು ಕಡಿಮೆ ಮಾಡಲು ಈ ಅಮೃತ ಬಳ್ಳಿಯು

ಸಹಾಯ ಮಾಡುತ್ತದೆ. ಮಲೇರಿಯಾ ಮತ್ತು ಡೆಂಗ್ಯೂ ಎಂಬ ಕಾಯಿಲೆಗಳು ಕಾಣಿಸಿಕೊಂಡಾಗ ದೇಹದಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂಥಹ ಸಮಯದಲ್ಲಿ ಈ ಅಮೃತ ಬಳ್ಳಿ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಅಮೃತ ಬಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿಯಾಗಿ ಇರುವುದರಿಂದ ದೇಹದಲ್ಲಿ ಫ್ರೀ ರಾಡಿಕಲ್ಸ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ದೇಹದಲ್ಲಿ ಇಮ್ಯುನಿಟಿ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಈ ಅಮೃತ ಬಳ್ಳಿಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ಕಿಡ್ನಿಯಲ್ಲಿ ಮತ್ತು ಲಿವರ್ ನಲ್ಲಿ ಅಡಗಿಕೊಂಡಿರುವ ಜೀವಾಣುಗಳನ್ನು ನಾಶ ಮಾಡಲು ಅಮೃತ ಬಳ್ಳಿಯು ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸರಾಗವಾಗಿ ಆಗಲು ಉತ್ತೇಜಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಮಲಬದ್ಧತೆ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳಿಗೆ ಈ ಅಮೃತ ಬಳ್ಳಿ ಆರೋಗ್ಯಕರ ಔಷಧಿಯಾಗಿದೆ. ಸಕ್ಕರೆ ಕಾಯಿಲೇ ರೋಗಿಗಳು ಆಹಾರದಲ್ಲಿ ಈ ಅಮೃತ ಬಳ್ಳಿಯನ್ನು ಸೇವಿಸುತ್ತಿದ್ದರೆ ದೇಹದಲ್ಲಿ ಸಕ್ಕರೆ ಅಂಶವನ್ನು

ನಿಯಂತ್ರಣದಲ್ಲಿ ಇಡಲು ಇದು ಸಹಾಯ ಮಾಡುತ್ತದೆ. ಅಮೃತ ಎಲೆಗಳು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಪಿಸಿಓಡಿ ಸಮಸ್ಯೆ ಅಥವಾ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವವರು ಈ ಅಮೃತ ಬಳ್ಳಿಯ ಕಷಾಯವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಪಿಸಿಓಡಿ ಸಮಸ್ಯೆಯನ್ನು ದೂರ ಮಾಡಿ, ದೇಹದಲ್ಲಿ ಹಾರ್ಮೋನುಗಳನ್ನು ಸಮತೋಲನದಲ್ಲಿ ಇಡಲು ನೆರವಾಗುತ್ತದೆ. ಅಮೃತ ಬಳ್ಳಿಯಲ್ಲಿ ಆಂಟಿ ಕ್ಯಾನ್ಸರ್ ಅಂಶ ಹೆಚ್ಚಾಗಿ ಇರುತ್ತದೆ. ಇದು ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಮತ್ತು ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮತ್ತು ಅಮೃತ ಬಳ್ಳಿಯು ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಸಮಸ್ಯೆಯನ್ನು ಮಾಯಾಗುತ್ತದೆ. ಮತ್ತು ಅಮೃತ ಬಳ್ಳಿಯ ರಸವನ್ನು ಹಿಂಡಿ ಎರಡು ಹನಿ ನೋವಾದ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಹಾಗೆಯೇ ಈ ಅಮೃತ ಬಳ್ಳಿಯು ಕಣ್ಣಿನ ದೃಷ್ಟಿಗೆ ಒಳ್ಳೆಯದು. ಇದರಲ್ಲಿ ಇರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ತುಂಬಾ ಶೀತ, ಕೆಮ್ಮು, ನೆಗಡಿ ಜ್ವರ ಕಾಣಿಸಿಕೊಂಡಾಗ ಈ ಅಮೃತ ಬಳ್ಳಿಯ ಜೊತೆಗೆ ಜೇನುತುಪ್ಪವನ್ನು ಸೇರಿಸಿ ತಿನ್ನುವುದರಿಂದ ಈ ಕಾಯಿಲೆಗಳು ಮಾಯವಾಗುತ್ತದೆ. ಮೊಡವೆಗಳು, ಕಪ್ಪುಚುಕ್ಕೆಗಳು ಹೋಗಲಾಡಿಸಲು ಈ ಅಮೃತ ಬಳ್ಳಿಯ ಎಲೆಗಳು ತುಂಬಾ ಪ್ರಯೋಜನಕಾರಿ. ಮತ್ತು ಈ ಅಮೃತ ಬಳ್ಳಿ ನರಕೋಶಗಳ ಆರೋಗ್ಯವನ್ನು ವೃದ್ಧಿಸುತ್ತದೆ.

2 COMMENTS

LEAVE A REPLY

Please enter your comment!
Please enter your name here