ಗಣೇಶನ ರೂಪ ರಹಸ್ಯಗಳು. ಗಣೇಶನಿಗೆ ಹಲವರು ರೂಪಗಳಿವೆ ಅದರಲ್ಲಿ ಒಂದೊಂದು ರೂಪವು ಒಂದೊಂದು ರಹಸ್ಯಮಯ ವಿಷಯವನ್ನು ಒಳಗೊಂಡಿದೆ. ನಾವು ಯಾವುದೇ ದೇವರ ಪೂಜೆಯನ್ನು ಮಾಡುವ ಮೊದಲು ವಿಘ್ನ ವಿನಾಶಕ ಅಂದರೆ ಗಣೇಶನನ್ನು ಪೂಜಿಸಿ ನಂತರ ಬೇರೆ ದೇವರ ಪೂಜೆ ಮಾಡುತ್ತೇವೆ ಏಕೆಂದರೆ ನಾವು ಮಾಡುವ ಪೂಜೆಗೆ ಯಾವುದೇ ವಿಘ್ನ ಬರದ ರೀತಿಯಲ್ಲಿ ಕಾಪಾಡು ಎಂದು ಬೇಡಿ ಕೊಳ್ಳುತ್ತೇವೆ ಅಲ್ಲವೇ. ಗಣೇಶನನ್ನು ಪ್ರಥಮ ವಂದಿತ ಆದಿ ಪೂಜಿತ ಬುದ್ಧಿ ಪ್ರದಾಯಕ ಸಿದ್ಧಿ ವಿನಾಯಕ ವಿಘ್ನ ವಿನಾಶಕ ಗೌರಿಪುತ್ರ ವರದಹಸ್ತ ಸಿದ್ಧಿ ಬುದ್ಧಿ ಶ್ರೀಪತಿ ಮಾಯ ಭೂಪತಿ ಏಕದಂತ ಎಂಬಲ್ಲ ನಾಮಗಳಿಂದ ಆರಾಧಿಸುತ್ತಾರೆ. ಹಾಗಿದ್ದರೆ ಯಾವ ಯಾವ ರೂಪದಲ್ಲಿ ಇರುವ ಗಣೇಶನನ್ನು ಯಾವ ಯಾವ ಸಮಸ್ಯೆಗಳಿಗೆ ಪೂಜಿಸಬೇಕು ಎಂದು ನೋಡೋಣ ಬನ್ನಿ. ಗಣೇಶನ ಒಂದೊಂದು ರೂಪದ ಆರಾಧನೆಯಿಂದ ಒಂದೊಂದು ಫಲ ಸಿಗುತ್ತದೆ ಹಾಗಾಗಿ ಹಿಂದೂ ಪುರಾಣಗಳಲ್ಲಿ ಗಣಪತಿ ಪುರಾಣ ಮತ್ತು ಮುದ್ಗಲ ಪುರಾಣದಲ್ಲಿ ನಮಗೆ ಗೊತ್ತಿಲ್ಲದ ಗಣಪತಿಯ ರೂಪಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ ಅದರಲ್ಲಿ ಹೇರಂಬ ಎಂಬ ಗಣಪತಿಯ ರೂಪ ಅತ್ಯಂತ ವಿಶಿಷ್ಟವಾಗಿದೆ.
ಹೇರಂಬ ಗಣಪತಿಯ ರೂಪ ಇದು ತುಂಬಾ ವಿಶೇಷವಾದ ಗಣಪತಿ ರೂಪ ಎಂದು ಮುದ್ಗಲ ಪುರಾಣದಲ್ಲಿ ತಿಳಿಸಿದೆ. ಹೇರಂಬ ಎಂದರೆ ಹೆ ಎಂದರೆ ಅಸಹಾಯಕ ರಂಭ ಎಂದರೆ ಅಸಹಾಯಕರನ್ನು ರಕ್ಷಿಸುವವನು ಎಂದರ್ಥ. ಈ ಗಣಪನಿಗೆ ಐದು ತಲೆಗಳು ಇವೆ. ಈ ಗಣಪ ನೋಡಲು ಹೇಗಿದ್ದಾನೆ ಎಂದರೆ ತನ್ನ ಕೈಯಲ್ಲಿ ಸಿಹಿ ಕಡಬು ದಂತ ಜಪಮಾಲೆ ಅಂಕುಶ ಪರಶುವನ್ನು ಹಿಡಿದಿದ್ದಾನೆ. ಈ ಗಣಪತಿಯ ಆರಾಧನೆ ಹೆಚ್ಚು ನೇಪಾಳದಲ್ಲಿ ನಡೆಯುತ್ತದೆ. ಈ ಗಣೇಶನ ಮೂರ್ತಿಯನ್ನು ನಾವು ಕಾಶಿ ವಿಶ್ವನಾಥನ ದೇಗುಲದಲ್ಲಿ ಕಾಣಬಹುದು. ಹಾಗೆಯೇ ಈ ಹೇರಂಬ ಗಣಪತಿಯ ಪೂಜಾ ವಿಧಾನ ಮತ್ತು ಫಲವನ್ನು ನೋಡೋಣ ಬನ್ನಿ ಹೇರಂಬ ಗಣಪತಿಯನ್ನು ಪೂಜಿಸುವಾಗ ಓಂ ವಕ್ರ ತುಂಡಾಯ ನಮಃ ಎಂಬ ಮೂಲ ಮಂತ್ರವನ್ನು ಜಪಿಸಬೇಕು. ಹೇರಂಬ ಗಣಪತಿ ಪಂಚ ಭೂತಗಳ ಸ್ವರೂಪ. ಈ ಒಂದು ಗಣಪತಿಯನ್ನು ಪೂಜೆ ಮಾಡಿದರೆ ಹಲವರು ಪೂಜೆಗೆ ಸಮಾನ ಹಾಗೂ ಐದು ಫಲಗಳು ಒಟ್ಟಿಗೆ ನಮಗೆ ಸಿಗುತ್ತದೆ ಎನ್ನುತ್ತಾರೆ.ಹಾಗೂ ಈ ಗಣಪನನ್ನು ಪೂಜಿಸುವಾಗಾ ಐದು ತಲೆಗಳ ಗಣಪ ಕಾಪಾಡು ಎಂದು ಬೇಡಿಕೊಳ್ಳಬೇಕು.
ಎರಡನೇದು ಹರಿದ್ರ ಗಣಪತಿಯ ರೂಪ ಇದು ಮುದ್ಗಲ ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಹರಿದ್ರಾ ಗಣಪತಿಯ ರೂಪವೆ ಅರಿಶಿನ ಬಣ್ಣ. ಹಾಗೂ ಹರಿದ್ರಾ ಗಣಪನಿಗೆ ನಾಲ್ಕು ಕೈಗಳಿವೆ ಹಾಗೂ ಎಡಗೈಯಲ್ಲಿ ದಂತವನ್ನು ಹಿಡಿದಿದ್ದಾನೆ. ಈ ಹರಿದ್ರಾ ಗಣಪತಿಯ ಪೂಜೆಯ ವಿಧಾನವನ್ನು ತಿಳಿಯೋಣ ಈ ಗಣಪತಿಯನ್ನು ಪುಜಿಸುವಾಗಾ ಓಂ ಹುಂ ಗಂ ಗ್ಲೋo ಹರಿದ್ರಾ ಗಣಪತಯೇ ವರ ವರದಾ ಸರ್ವ ಜನ ಹೃದಯಂ ಸ್ಥಂಭಯ ಸ್ಥಂಭಯ ಸ್ವಾಹ ಎಂಬ ಮಂತ್ರವನ್ನು ಜಪಿಸಬೇಕು. ಈ ಗಣಪನನ್ನು ಪೂಜಿಸಿದರೆ ಯಾವುದೇ ಮಾಟ ಮಂತ್ರ ಮಾಡಿಸುವ ಶತ್ರುಗಳು ನಾಶವಾಗುತ್ತಾರೆ. ವಾಮಾಚಾರ ಮಾಡಿರುವವರಿಗೆ ಶಿಕ್ಷೆ ನೀಡುತ್ತಾನೆ ಮಾಟ ಮಂತ್ರದ ಅಗದ ರೀತಿಯಲ್ಲಿ ನೋಡಿಕೊಳ್ಳುತ್ತಾನೆ ಮೂರನೆಯದು ಲಕ್ಷ್ಮಿ ಗಣಪತಿ ರೂಪ ಶ್ರೀ ಲಕ್ಷ್ಮೀ ದೇವಿಯನ್ನು ಎಡ ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೇ ಲಕ್ಷ್ಮಿ ಸರ್ವಾಲಂಕೃತಳಾಗಿ ಬಲಗಡೆಯ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಅಮೃತದ ಜರಿಯಂತೆ ಲಕ್ಷ್ಮಿ ಗಣಪ ಪ್ರಜ್ವಲಿಸುತ್ತಾನೆ. ಲಕ್ಷ್ಮಿ ಗಣಪತಿಯ ಪೂಜಾ ವಿಧಾನ ಓಂ ಲಕ್ಷ್ಮೀ ಗಣಪತಯೇ ನಮಃ ಮಂತ್ರವನ್ನು ಹೇಳಬೇಕು ಈ ಗಣಪನ ಪೂಜೆಯಿಂದ ಸಂಪತ್ತು ಐಶ್ವರ್ಯ ಮನೆಯಲ್ಲಿ ಸುಖ ಸಮೃದ್ಧಿ ಸಿಗುತ್ತದ
ನಾಲ್ಕನೆಯದು ತ್ರ್ಯಕ್ಷ ಗಣಪತಿ ರೂಪ ಇದು ಸಹ ಮುದ್ಗಲ ಪುರಾಣದಲ್ಲಿ ಉಲ್ಲೇಖವಾಗಿದೆ ಈ ಗಣಪ ಚಿನ್ನದ ಬಣ್ಣವನ್ನು ಹೊಂದಿದೆ ಹಾಗೂ ಅತಿದೊಡ್ಡದಾದ ಕಿವಿಗಳಿವೆ. ತ್ರ್ಯಕ್ಷ ಗಣಪತಿ ಆರಾಧನೆಯ ವಿಧಾನ ಓಂ ಹ್ರಾಂ ಹ್ರೀಂ ಹ್ರೀಂ ಓಂ ಎಂಬ ಮಂತ್ರ ಜಪಿಸಬೇಕು.ಈ ಗಣಪತಿ ಪೂಜಿಸಿದರೆ ಜೀವನದ ಎಲ್ಲ ಸುಖ. ನೆಮ್ಮದಿ ಸಿಗುತ್ತವೆ. ಸಕಲ ಸಂತೋಷಗಳು ಲಭಿಸುತ್ತವೆ. ಮಾನಸಿಕ ಸಮಸ್ಯೆ ದೂರ ಆಗುತ್ತವೆ. ಗಣೇಶಾನಿ ರೂಪ ಇದು ಕೂಡ ಮುದ್ಗಲ ಪುರಾಣದಲ್ಲಿ ಉಲ್ಲೇಖವಾಗಿದೆ. ಇದು ಗಣಪತಿಯ ಸ್ತ್ರೀರೂಪ ಹೊಂದಿದೆ ಈ ಗಣಪನ ದೇಹ ಸ್ತ್ರೀ ರೂಪದಲ್ಲಿದೆ.ಇದು ಮಧುರೈನ ದೇವಾಲಯದಲ್ಲಿ ಕಾಣಬಹುದು ಗಣೇಶಾನಿಯ ಪೂಜಾ ವಿಧಾನ ಓಂ ಗಣೇಶಾನ್ಯಯೇ ನಮಃ ಎಂಬ ಮಂತ್ರವನ್ನು ಜಪಿಸಬೇಕು ಗಣೇಶಾನಿಯ ಪೂಜೆಯಿಂದ ಸಾಂಸಾರಿಕ ಕಲಹಗಳು ನಿವಾರಣೆಯಾಗುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಹಾಗೂ ಪ್ರೀತಿಸಿದವರನ್ನು ನಮ್ಮವರಾಗಿಸಿಕೊಳ್ಳುವುದಕ್ಕೆ ಸಹಾಯ ಕೂಡ ಸಿಗುತ್ತದೆ. ಉಚ್ಚಿಷ್ಟ ಗಣಪ ಇದು ಮುದ್ಗಲ ಪುರಾಣದಲ್ಲಿ ಉಲ್ಲೇಖವಾಗಿದೆ. ಇದು ಕಪ್ಪು ಬಣ್ಣದಿಂದ ಕೂಡಿದೆ ಹಾಗೂ ಈ ಗಣಪನಿಗೆ ಹನ್ನೆರಡು ಕೈಗಳು ಇವೆ. ಇವನ ಕೈಯಲ್ಲಿ ಪುಸ್ತಕ, ದಾಳಿಂಬೆ ಹಣ್ಣುಗಳನ್ನು ಹಿಡಿದಿದ್ದಾನೆ. ಹಾಗೂ ಇವನ ತೊಡೆಯ ಮೇಲೆ ಸ್ತ್ರೀಶಕ್ತಿ ಕುಳಿತಿದ್ದಾಳೆ .
ಉಚ್ಚಿಷ್ಟ ಗಣಪತಿಯ ಪೂಜಾ ವಿಧಾನ ಓಂ ಉಚ್ಚಿಷ್ಟ ಗಣಪತಯೇ ಸ್ವಾಹ ಎಂಬ ಮಂತ್ರವನ್ನು ಜಪಿಸಬೇಕು ತಾಂತ್ರಿಕ ಸಾಧನೆಗಾಗಿ. ಮಾಟ ಮಂತ್ರ ದೂರ ಆಗುವುದಕ್ಕೆ. ಈ ಗಣಪನನ್ನು ಪೂಜಿಸಬೇಕು ದ್ವಿಜ ಗಣಪತಿ ರೂಪ ಈ ಗಣಪ ಜ್ಞಾನ ಸಂಪನ್ನ ರೂಪವನ್ನು ಹೊಂದಿದ್ದಾನೆ ಈ ಗಣಪತಿಗೆ ನಾಲ್ಕು ಮುಖಗಳು ನಾಲ್ಕು ಕೈಗಳು ಇವೆ ಗಣಪತಿಯ ಕೈಯಲ್ಲಿ ಪುಸ್ತಕ ಜಪಮಾಲೆ ಇದೆ ಹಾಗೂ ದಂಡ ಹಾಗೂ ಕಮಂಡಲವನ್ನು ಹಿಡಿದಿದ್ದಾನೆ. ಈ ದ್ವಿಜ ಗಣಪ ಬಿಳಿ ಬಣ್ಣದಿಂದ ಇದ್ದಾನೆ. ದ್ವಿಜ ಗಣಪತಿಯ ಪೂಜಾ ವಿಧಾನ ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು ಜಪಿಸಬೇಕು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯ ಸಿಗುತ್ತದೆ ಹಾಗೂ ಆನಂದ ಮತ್ತು ಸಂತೃಪ್ತಿಯ ಭಾವ ಲಭಿಸುತ್ತದೆ. ಮಹಾರಾಷ್ಟ್ರದ ಪಾಲಿಯಲ್ಲಿ ಬಲ್ಲಾಳೇಶ್ವರ ದೇವಾಲಯದಲ್ಲಿ ದ್ವಿಜ ಗಣಪತಿಯ ರೂಪ ಕಾಣಸಿಗುತ್ತದೆ. ದುರ್ಗಾ ಗಣಪತಿ ರೂಪ ಈ ಗಣಪತಿ ದೇಹವೂ ಚಿನ್ನದಂತೆ ಹೊಳೆಯುತ್ತಿರುತ್ತದೆ. ಈ ದುರ್ಗ ಗಣಪತಿಗೆ ಎಂಟು ಕೈಗಳು ಇವೆ ಹಾಗೂ ದೊಡ್ಡದಾದ ಶರೀರವನ್ನು ಹೊಂದಿದ್ದಾನೆ ಈ ದುರ್ಗಾ ಗಣಪತಿ ಕೆಂಪು ಬಟ್ಟೆಯನ್ನು ಧರಿಸಿದ್ದಾನೆ.
ದುರ್ಗಾ ಗಣಪತಿಯ ಪೂಜಾ ವಿಧಾನ ಓಂ ದುರ್ಗಾ ಗಣಪತಯೇ ನಮಃ ಎಂಬ ಮಂತ್ರವನ್ನು ಜಪಿಸಬೇಕು ದುರ್ಗ ಗಣಪತಿ ಎಂದರೆ ದುರ್ಗತಿಯನ್ನು ನಾಶ ಮಾಡುವವನು ಎಂದರ್ಥ. ಸಂತೋಷ. ನೆಮ್ಮದಿ ಎಂಬುದನ್ನು ನೀಡುತ್ತಾನೆ. ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲದಲ್ಲಿ ದುರ್ಗ ಗಣಪತಿಯ ಮೂರ್ತಿಯನ್ನು ನೋಡಬಹುದು. ಯೋಗ ಗಣಪತಿ ರೂಪ ಯೋಗ ಗಣಪತಿಯ ರೂಪ ಧ್ಯಾನ ರೂಪದಲ್ಲಿ ಇದ್ದಾನೆ ಈ ಗಣಪ ಯೋಗ ಪೀಠದಲ್ಲಿ ವಿರಾಜಮಾನನಾಗಿದ್ದಾನೆ. ಯೋಗ ಗಣಪತಿ ಇಂದ್ರನೀಲ ಮಣಿಯಂತೆ ಹೊಳೆಯುವ ನಿಲುವಂಗಿ ಧರಿಸಿದ್ದಾನೆ. ಯೋಗ ಗಣಪತಿಯ ಪೂಜಾ ವಿಧಾನ ಓಂ ಯೋಗ ಗಣಪತಯೇ ನಮಃ ಎಂಬ ಮಂತ್ರವನ್ನು ಜಪಿಸಬೇಕು ಇವನನ್ನು ಪೂಜಿಸುವುದರಿಂದ ಉತ್ತಮ ಸಾಧನೆಗೆ ದಾರಿ ಕಾಣುತ್ತದೆ. ದುಂಡಿ ಗಣಪತಿ ರೂಪ ದುಂಡಿ ಗಣಪತಿಯ ಬಣ್ಣ ಕೆಂಪು,ಇವನು ಪದ್ಮಾಸನದಲ್ಲಿ ಕುಳಿತು ವಿರಾಜ ಮಾನನಾಗಿದ್ದಾನೆ. ಗಣಪತಿಯ ಪೂಜಾ ವಿಧಾನ ಓಂ ದುಂಡಿ ಗಣಪತಯೇ ನಮಃ ಮಂತ್ರವನ್ನು ಜಪಿಸಬೇಕು ನಮ್ಮ ಇಷ್ಟಾರ್ಥಗಳನ್ನು ಕರುಣಿಸು ತ್ತನೆ ಕೇರಳದಲ್ಲಿರುವ ಎರ್ನಾಕುಲಂ ನಲ್ಲಿರುವ ದೇವಸ್ಥಾನವಾದ ಚೊಟ್ಟಾಣಿಕರ ಅಮ್ಮನ ದೇವಸ್ಥಾನ ದಲ್ಲಿ ಈ ಮೂರ್ತಿಯನ್ನು ಕಾಣಬಹುದು.
ಊರ್ಧ್ವ ಗಣಪತಿ ರೂಪ ಚಿನ್ನದ ಬಣ್ಣವನ್ನು ಹೊಂದಿದ್ದಾನೆ ಶಕ್ತಿ ದೇವತೆಯನ್ನು ಎಡ ತೊಡೆಯ ಮೇಲೆ ಕುಳ್ಳರಿಸಿಕೊಂ ಡಿದ್ದನೆ ಹಾಗೂ ಕಣ್ಣಿನ ದೃಷ್ಟಿ ಮೇಲ್ಮುಖವಾಗಿದೆ. ಊರ್ದ್ವ ಗಣಪತಿಯ ಪೂಜಾ ವಿಧಾನ ಓಂ ನಮೋ ಭಗವತೇ ಏಕ ದಂಷ್ಟ್ರಾಯ, ಹಸ್ತಿ ಮುಖಾಯ ಲಂಬೋಧರಾಯ ಉಚ್ಚಿಷ್ಟ ಮಹಾತ್ಮನೇ ಆಂ ಕ್ರೌo ಹ್ರೀಂ ಗಂ ಘೆ ಘೆ ಸ್ವಾಹ ಎಂಬ ಮಂತ್ರವನ್ನು ಹೇಳಬೇಕು. ವಿಶೇಷವಾದ ಶಕ್ತಿಯಾನ್ನು ಪಡೆಯಲು ಪೂಜಿಸಬೇಕು. ಈ ಗಣಪತಿಯನ್ನು ಯೋಗಿಗಳು ಮತ್ತು ಸಾಧಕರು ಹೆಚ್ಚಾಗಿ ಪೂಜಿಸುತ್ತಾರೆ.ಉದ್ದಂಡ ಗಣಪತಿಯ ರೂಪ ಉದ್ದಂಡ ಗಣಪತಿಯ ಬಣ್ಣ ಕೆಂಪು, ಈ ಗಣಪನಿಗೆ ಹತ್ತು ಕೈಗಳು ಇವೆ, ಕಬ್ಬಿನ ಜಲ್ಲೆಯಿಂದಾದ ಬಿಲ್ಲನ್ನು ಹಿಡಿದಿದ್ದಾನೆ, ಇವನ ಸೊಂಡಿಲು ಮುಂದಕ್ಕೆ ಇದೆ ಉದ್ದಂಡ ಗಣಪತಿಯ ಪೂಜಾ ವಿಧಾನ ಓಂ ಉದ್ದಂಡ ಗಣಪತಯೇ ನಮಃ ಮಂತ್ರವನ್ನು ಜಪಿಸಬೇಕು. ಉದ್ದಂಡ ಎಂದರೇ ಶತ್ರುಗಳನ್ನು ನಾಶ ಮಾಡುವವನು ಎಂದರ್ಥ. ಶತ್ರುಗಳ ಭಯ ಯಾರಿಗೆ ಹೆಚ್ಚಾಗಿ ಇರುತ್ತದೆ ಅವರು ಶತ್ರು ನಾಶಕಾಗಿ ಉದ್ದಂಡ ಗಣಪನನ್ನು ಪೂಜಿಸಬೇಕು. ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಉದ್ದಂಡ ಗಣಪತಿಯ ಮೂರ್ತಿ ಕಾಣಸಿಗುತ್ತದೆ.
ಸೃಷ್ಟಿ ಗಣಪತಿ ರೂಪ ಈ ಗಣಪತಿ ಚತುರ್ಭುಜವನ್ನು ಉಳ್ಳವನು. ಸೃಷ್ಟಿ ಗಣಪತಿಯ ಬಣ್ಣ ಕೆಂಪು, ಸೃಷ್ಟಿ ಗಣಪತಿಯ ಪೂಜಾ ವಿಧಾನ ಓಂ ಸೃಷ್ಟಿ ಗಣಪತಯೇ ನಮಃ ಮಂತ್ರವನ್ನು ಜಪಿಸಬೇಕು ಇವನು ಸಂತಾನ ಸಮಸ್ಯೆ ದೂರ ಆಗುತ್ತದೆ ಸೃಷ್ಟಿ ಗಣಪತಿಯ ಮೂರ್ತಿಯನ್ನು ತಮಿಳುನಾಡಿನ ಕುಂಬಕೋಣಂ ಅಲ್ಲಿ ಕಾಣಬಹುದು. ಸಿಂಹ ಗಣಪತಿ ರೂಪ ಗಣಪತಿಯ ರೂಪಗಳಲ್ಲಿ ಸಿಂಹದ ರೂಪ ತುಂಬಾ ವಿಶಿಷ್ಟ ಆಗಿದೆ ಇವನು ಸಿಂಹದ ಮುಖವುಳ್ಳವನು ಮತ್ತು ಸಿಂಹದಂತೆ ದೊಡ್ಡ ಕಣ್ಣುಗಳು ಚಿಕ್ಕ ಕಿವಿಗಳು ತಲೆಯಲ್ಲಿ ದಟ್ಟವಾದ ಕೇಶ ಮತ್ತು ಈ ಗಣಪನ ಕೈಯಲ್ಲಿ ಕಲ್ಪವೃಕ್ಷದ ಬಳ್ಳಿ ಹೂವಿನ ಗೊಂಚಲು ಇದೆ. ಸಿಂಹ ಗಣಪತಿಯ ಪೂಜಾ ವಿಧಾನ ಓಂ ಸಿಂಹ ಗಣಪತಯೇ ನಮಃ ಮಂತ್ರವನ್ನು ಜಪಿಸಬೇಕು ಜೀವನದಾಲ್ಲಿ ಎದುರಾಗುವ ಸಂಕಟಗಳಿಂದ ಪಾರಾಗಲು ಸಿಂಹ ಗಣಪತಿಯನ್ನು ಪೂಜಿಸಲಾಗುತ್ತದೆ. ತನ್ನ ಭಕ್ತರಿಗೆ ಸಿಂಹ ಸದೃಶವಾದ ಶಕ್ತಿ, ಸಾಮರ್ಥ್ಯ ದಯಪಾಲಿಸುವ ಸಿಂಹ ಗಣಪತಿ ಶತ್ರುಗಳಿಂದ ತಪ್ಪಿಸಿಕೊಳ್ಳುವ ರಕ್ಷಾ ಕವಚವಾಗಿರುತ್ತಾನೆ. ಮಹಾರಾಷ್ಟ್ರದ ಪಂಡರಾಪುರದಲ್ಲಿ ಸಿಂಹ ಗಣಪತಿಯ ಸುಂದರ ಮೂರ್ತಿಯನ್ನು ಕಾಣಬಹುದು.ಇದೆಲ್ಲ ಗಣಪತಿಯ ರೂಪಗಳ ರಹಸ್ಯದ ವಿಷಯಗಳು.