ಈ ರೀತಿ ಕನಸು ಬಿದ್ದರೆ ಈ ಅರ್ಥ ಸೂಚಿಸುತ್ತದೆ

91

ನಮಗೆ ಯಾವ ರೀತಿ ಕನಸುಗಳು ಬಿದ್ದರೆ ನಾವು ಏನನ್ನು ನಿರೀಕ್ಷೆ ಮಾಡಬಹುದು ಎಂದು ನೋಡೋಣ ಬನ್ನಿ. ಮೊದಲನೆಯದಾಗಿ ಕನಸು ಪ್ರತಿ ನಿತ್ಯ ಬೀಳುವುದಿಲ್ಲ ಯಾವಾಗ ಆದರೂ ಕನಸು ಬಿದ್ದರೆ ಪ್ರತಿ ನಿತ್ಯ ಅದಕ್ಕೆ ಏನೋ ಒಂದು ಅರ್ಥ ಇದ್ದೇ ಇರುತ್ತದೆ ಎಂದು ಅರ್ಥ ಸಾಮಾನ್ಯವಾಗಿ ನಾವು ಈ ಕನಸಿನಲ್ಲಿ ಎರಡು ಬಗೆಗಳನ್ನು ಕಾಣಬಹುದು ನಾವು ಬೆಳಗ್ಗಿನಿಂದ ರಾತ್ರಿವರೆಗೆ ಏನಾದರೂ ವಿಪರೀತವಾಗಿ ಒತ್ತಡದಲ್ಲಿ ಕೆಲಸವನ್ನು ಮಾಡಿದಾಗ ಅದು ಕನಸಿನಲ್ಲಿ ಬರುತ್ತದೆ ಅಥವಾ ನಮಗೆ ಯಾವಾಗ ಒಂದು ವಿಶೇಷವಾದ ಘಟನೆ ಈ ದಿನ ನಡೆಯುತ್ತದೆಯೋ ಅದು ಕನಸಿನಲ್ಲಿ ಬಂದು ಹೋಗುವ ರೀತಿ ಇರುತ್ತದೆ ಇದು ಒಂದು ಕನಸಿನ ಬಗೆ ಆದರೆ ಇನ್ನೊಂದು ಬಗೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ನಾವು ಯಾವಾಗ ಸಂಪೂರ್ಣವಾಗಿ ಮೈ ಮರೆತು ನಿದ್ದೆಯನ್ನು ಮಾಡುತ್ತೇವೆ ಘಾಡ ನಿದ್ದೆಯಲ್ಲಿ ಇರುತ್ತೇವೆ ಸುಖ ನಿದ್ದೆ ಮಾಡುವಾಗ ಬೀಳುವ ಕನಸುಗಳು ಕೆಲವೊಮ್ಮೆ ಅವು ನಿಜವಾಗಿಯೂ ಕೂಡ ಜೀವನದಲ್ಲಿ ಅದರದ್ದೇ ಆದ ಕೆಲವು ಫಲಗಳನ್ನು ಕೊಡುತ್ತವೆ.

ಇಂದಿನ ಲೇಖನದಲ್ಲಿ ನಿಮಗೆ ಯಾವ ರೀತಿ ಕನಸು ಬಿದ್ದರೆ ನೀವು ಯಾವ ರೀತಿ ಅರ್ಥ ಕೊಡುತ್ತದೆ ಎಂದು ತಿಳಿಸುತ್ತೇವೆ. ಮೊದಲನೆಯದಾಗಿ ಕನಸಿನಲ್ಲಿ ಲಕ್ಷ್ಮಿ ದೇವಿಯ ಚಿತ್ರಣ ಕನಸಿನಲ್ಲಿ ಬಂದರೆ ಸಂಪತ್ತು ಐಶ್ವರ್ಯ ಕೈ ಸೇರುತ್ತದೆ ಹಾಗೂ ಯಶಸ್ಸು ಲಭಿಸುತ್ತದೆ ಎಂದು ಭಾವಿಸಲಾಗುತ್ತದೆ. ಇನ್ನೂ ಮರ ನೆಲ್ಲಿಕಾಯಿ ಕಂಡು ಬಂದರೆ ಆರೋಗ್ಯ ಸೌಭಾಗ್ಯ ಗೌರವ ಲಭಿಸುತ್ತದೆ ಎಂಬ ನಂಬಿಕೆ ಇದೆ ಇನ್ನೂ ದೇವರಿಗೆ ಪೂಜೆ ಮಾಡುತ್ತ ಇರುವುದು ಕಂಡು ಬಂದರೆ ಋಣ ಬಾಧೆಯಿಂದ ಮುಕ್ತಿ ಮೊಸರು ಕಂಡರೆ ಧನ ಲಾಭ ಆಗುತ್ತದೆ. ಹಾಗೇಯೇ ನಿಮ್ಮ ಕನಸಿನಲ್ಲಿ ತುಪ್ಪ ಕಂಡು ಬಂದರೆ ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಮತ್ತು ಹಾವು ಬಲಗೈ ಗೆ ಕಚ್ಚಿದಂತೆ ಕನಸು ಕಂಡು ಬಂದರೆ ಧನ ಲಾಭ ಇದೆ ಎನ್ನಲಾಗುತ್ತದೆ ಇನ್ನೂ ಹೆಣವನ್ನು ಕಂಡರೆ ಧೀರ್ಘಯಸ್ಸು ಬರುತ್ತದೆ. ಅಷ್ಟೆ ಅಲ್ಲ ನಾವೇ ಸತ್ತಂತೆ ಕನಸು ಕಂಡರೆ ಆಯಸ್ಸು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಇನ್ನೂ ಚಿಕ್ಕ ಮಗು ನಿಮ್ಮ ಕನಸಿನಲ್ಲಿ ನಡೆದು ಬಂದರೆ ಅದರೊಂದಿಗೆ ನಿಮ್ಮ ಬಾಳಿನ ಲಕ್ಷ್ಮಿ ಒಲಿದು ಬರುತ್ತಾರೆ ಎಂದು ಅರ್ಥವಿದೆ ದೇವಸ್ಥಾನ ಕಳಸ ಲಕ್ಷ್ಮಿ ದೇವಿಯ ಫೋಟೋ ಕನಸಿನಲ್ಲಿ ಬಂದರೆ ಅದು ನಿಮ್ಮ ಜೀವನದಲ್ಲಿ ನಡೆಯುತ್ತಾ ಇರುವ ಶುಭ ಸಂಕೇತವನ್ನು ಸೂಚಿಸುತ್ತದೆ. ಗೆಳೆಯರೇ ನಿಮಗೆ ಈಗಾಗಲೇ ಕನಸು ಬಿದ್ದ ಗಳಿಗೆಯ ಮೇಲೆ ಈ ಕನಸು ನನಸು ಆಗುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲೂ ಬೆಳಗಿನ ಜಾವದ ಕನಸು ಬೇಗ ನನಸು ಆಗುತ್ತದೆ ಎಂದು ಹೇಳಲಾಗುತ್ತದೆ ಇದರಲ್ಲಿ ಹಸುವೊಂದು ಕನಸಿನಲ್ಲಿ ಕಂಡರೆ ಅದು ಗೋಮಾತೆ ಅಥವಾ ಕರುವಿಗೆ ಹಾಲು ಉಣಿಸುತ್ತಾ ಇದ್ದರೆ ಅದು ಅದೃಷ್ಟ ಲಕ್ಷ್ಮಿ ನಿಮ್ಮ ಬಾಳಲ್ಲಿ ಪಾದಾರ್ಪಣೆ ಮಾಡುತ್ತಾರೆ ಎಂದು ಅರ್ಥ ಏಕೆಂದರೆ ಗೋಮಾತೆ ಗೆ ನಮ್ಮ ಸಂಸ್ಕೃತಿಯಲ್ಲಿ ಉನ್ನತ ಸ್ಥಾನವಿದ್ದು ಮುಕ್ಕೋಟಿ ದೇವತೆಗಳು ನೆಲಸಿದ್ದಾರೆ.

LEAVE A REPLY

Please enter your comment!
Please enter your name here