ಈ ಲಕ್ಷಣಗಳು ಇದ್ರೆ ನಿಮ್ಮ ಕಿಡ್ನಿಗೆ ಸಮಸ್ಯೆ ಆಗಿದೆ ಎಂದು ಅರ್ಥ

103

ಮೂತ್ರ ಪಿಂಡದ ತೊಂದರೆ ಎನ್ನುವುದು ನಿಧಾನವಾಗಿ ಹರಡುವ ಒಂದು ಕಾಯಿಲೆ ಎಂದು ನಮ್ಮಲ್ಲಿ ತುಂಬಾ ಜನರಿಗೆ ಗೊತ್ತಿಲ್ಲ ಮೂತ್ರ ಪಿಂಡ ಅತಿಯಾಗಿ ಹಾನಿಯಾದರೆ ತಡೆಯುವುದಕ್ಕೆ ತುಂಬಾನೇ ಕಷ್ಟವಾಗಿರುತ್ತದೆ ನಮ್ಮ ಜೀವವನ್ನು ಕಳೆದುಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಮೂತ್ರಪಿಂಡ ಹಾಳಾಗುವುದನ್ನು ನಾವು ತಡೆಯ ಬೇಕೆಂದರೆ ಈ ಲೇಖನದಲ್ಲಿ ನಾವು ನಿಮಗೆ ಕೆಲವೊಂದು ಲಕ್ಷಣಗಳನ್ನು ಹೇಳುತ್ತೇವೆ ಈ ಲಕ್ಷಣಗಳು ನಿಮ್ಮಲ್ಲಿ ಸಹ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಮಾಡಿ. ಮೂತ್ರದಲ್ಲಿ ಬದಲಾವಣೆ ಮೂತ್ರ ಪಿಂಡದ ಮೊದಲ ಲಕ್ಷಣ ಮೂತ್ರದ ಪ್ರಮಾಣ ಮತ್ತು ಅದರ ಒಂದು ಬಣ್ಣದಲ್ಲಿ ಬದಲಾವಣೆ ಕಂಡುಬರುವುದು ಮೂತ್ರದ ಪ್ರಮಾಣ ಕಡಿಮೆ ಅಥವಾ ಜಾಸ್ತಿ ಆಗಬಹುದು ಅದರಲ್ಲೂ ರಾತ್ರಿ ಸಮಯದಲ್ಲಿ ಇದು ಅಧಿಕವಾಗಿ ಕಂಡುಬರುತ್ತದೆ ಬಣ್ಣದಲ್ಲಿ ಕೂಡ ಬದಲಾವಣೆ ಕಂಡುಬರುತ್ತದೆ.

ನೋವು ಕಾಣಿಸಿಕೊಳ್ಳುವುದು ಮೂತ್ರ ಮಾಡುವಾಗ ನೋವು ಅಥವಾ ಒತ್ತಡ ಕಂಡು ಬರುತ್ತದೆ ಮೂತ್ರಕೋಶದ ಸೋಂಕಿನಿಂದಾಗಿ ಮೂತ್ರದಲ್ಲಿ ನೋವು ಅಥವಾ ಕಿರಿಕಿರಿ ಕಾಣಿಸಿಕೊಳ್ಳಬಹುದು ಈ ಒಂದು ಸೋಂಕು ಮೂತ್ರಪಿಂಡವನ್ನು ತಲುಪಿದರೆ ಜ್ವರ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಮೂತ್ರದಲ್ಲಿ ರಕ್ತ ಹೋಗುವಿಕೆ ಮೂತ್ರದಲ್ಲಿ ರ ಕ್ತ ಹೋಗುವುದು ಕೂಡ ಮೂತ್ರಪಿಂಡದ ಒಂದು ಲಕ್ಷಣ ಇದರ ಬಗ್ಗೆ ಅಲಕ್ಷ್ಯವನ್ನು ಮಾಡಬಾರದು ಆದರೆ ಈ ಮೂತ್ರದಲ್ಲಿ ರ ಕ್ತ ಹೋಗುವುದಕ್ಕೆ ಬೇರೆ ಕಾರಣಗಳು ಸಹ ಇರುತ್ತದೆ ವೈದ್ಯರನ್ನು ಕೂಡಲೇ ಭೇಟಿಮಾಡಬೇಕು. ಮೂತ್ರಪಿಂಡ ದೇಹದ ಹೆಚ್ಚಿನ ತ್ಯಾಜ್ಯ ಮತ್ತು ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತದೆ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಕೆಲಸ ಮಾಡಲು ಆಗುವುದಿಲ್ಲ ಕೈಕಾಲು ನೋವು ಕೈಕಾಲು ಊತ ಜಾಸ್ತಿ ಇರುತ್ತದೆ. ವಿಪರೀತಿ ಆಯಾಸ ಮತ್ತು ದುರ್ಬಲತೆ ಕಿಡ್ನಿ ಉತ್ಪತ್ತಿ ಮಾಡುವ ಏರಿತ್ರೋ ಪೊಯಿಟಿನ್ ಎಂಬ ಹಾರ್ಮೋನ್ ಆಮ್ಲಜನಕ ಬಿಡುಗಡೆ ಮಾಡುವ ಕೆಂಪು ರ ಕ್ತಕಣಗಳನ್ನು ಹುಟ್ಟುಹಾಕುತ್ತದೆ

ಮೂತ್ರಪಿಂಡದ ರೋಗಗಳು ಕಾಣಿಸಿಕೊಂಡಾಗ ಏರಿತ್ರೋ ಪೊಯಿಟಿನ್ ಪ್ರಮಾಣ ಕಡಿಮೆಯಾಗಿ ಕೆಂಪುರಕ್ತಕಣಗಳ ಉತ್ಪತ್ತಿ ಕಡಿಮೆಯಾಗುತ್ತದೆ ಇದರಿಂದ ನಮ್ಮಲ್ಲಿ ಸುಸ್ತು ಕಾಣಿಸಿಕೊಳ್ಳುತ್ತದೆ ಆಮ್ಲಜನಕ ಪೂರೈಕೆ ಕೂಡ ಕಡಿಮೆಯಾಗುವುದರಿಂದ ವಿಪರೀತ ಆಯಾಸ ಮತ್ತು ದುರ್ಬಲತೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಆಗ ನಾವು ವೈದ್ಯರನ್ನು ಭೇಟಿಯಾಗುವುದು ತುಂಬಾನೇ ಸೂಕ್ತ. ತಲೆ ಸುತ್ತುವಿಕೆ ಮತ್ತು ಏಕಾಗ್ರತೆ ಸಮಸ್ಯೆಯಿಂದಲು ನಮಗೆ ಮೂತ್ರಪಿಂಡದ ಸಮಸ್ಯೆ ಇದೆ ಎಂದು ನಾವು ಕಂಡುಕೊಳ್ಳಬಹುದು. ಮೂತ್ರಪಿಂಡದ ಸಮಸ್ಯೆಗೆ ಸಂಬಂದಿಸಿದ ಹಾಗೆ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ತಲೆಸುತ್ತುವಿಕೆ ಮತ್ತು ಏಕಾಗ್ರತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಬೇಸಿಗೆಯಲ್ಲೂ ಚಳಿ ಆಗುವುದು ಮತ್ತು ಪ್ರತಿವರ್ಷ ಪೂರ್ತಿ ಚಳಿಯಾಗುವುದು ಮೂತ್ರಪಿಂಡದ ಸಮಸ್ಯೆ ಇದ್ದರೆ ಹೊರಗಡೆ ವಾತಾವರಣ ಬಿಸಿಯಾಗಿದ್ದರು ಕೂಡ ಚಳಿಯಾಗುತ್ತದೆ. ಮೂತ್ರ ಪಿಂಡದ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಚಳಿಜ್ವರ ಕೂಡ ಬರುತ್ತದೆ.

ಚರ್ಮದ ತೊಂದರೆ ಮತ್ತು ತುರಿಕೆ ಮೂತ್ರಪಿಂಡ ಹಾನಿಗೊಳಗಾದ ಇದು ರ ಕ್ತದಲ್ಲಿನ ತ್ಯಾಜ್ಯಗಳನ್ನು ಶೇಖರಿಸಿ ಬಿಡುತ್ತದೆ ಇದರಿಂದ ಚರ್ಮದ ತೊಂದರೆ ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ಮತ್ತು ರುಚಿ ಹದಗೆಡುವುದು ರಕ್ತದಲ್ಲಿ ಯೂರಿಯಾ ಪ್ರಮಾಣವನ್ನು ಅಧಿಕಗೊಳಿಸುತ್ತದೆ ಈ ಯೂರಿಯಾ ಲಾಲಾರಸದಲ್ಲಿ ಅಮೋನಿಯವಾಗಿ ಪರಿವರ್ತನೆಗೊಂಡು ಕೆಟ್ಟ ಉಸಿರಾಟ ಪ್ರಾರಂಭವಾಗುತ್ತದೆ ಹಾಗೆ ಬಾಯಿಯ ರುಚಿ ಕೂಡ ಕಳೆದುಕೊಳ್ಳುತ್ತದೆ. ವಾಕರಿಕೆ ಮತ್ತು ವಾಂತಿ ಮೂತ್ರಪಿಂಡದ ತೊಂದರೆಯಿಂದ ರಕ್ತದಲ್ಲಿ ಸೇರಿಕೊಳ್ಳುವ ತ್ಯಾಜ್ಯದಿಂದಾಗಿ ವಾಕರಿಕೆ ಆಗುತ್ತದೆ. ದೊಡ್ಡ ಉಸಿರಾಟದ ತೊಂದರೆ ಮೂತ್ರಪಿಂಡದ ತೊಂದರೆ ಇದ್ದಾಗ ಶ್ವಾಸಕೋಶದಲ್ಲಿ ದ್ರವ ಸೇರಿಕೊಳ್ಳುತ್ತದೆ ಜೊತೆಗೆ ಅನೇಮಿಯ ಕೂಡ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹಕ್ಕೆ ಆಮ್ಲಜನಕದ ತೊಂದರೆ ಕಾಣಿಸಿಕೊಳ್ಳುತ್ತದೆ ಇದರಿಂದಾಗಿ ಉಸಿರಾಟದ ತೊಂದರೆಯಾಗುತ್ತದೆ. ಬೆನ್ನುನೋವು ಅಥವಾ ಪಕ್ಕೆಲುಬುನೋವು ಕಾಣಿಸುವುದು ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಾಗ ನೋವು ಸಂಭವಿಸುತ್ತದೆ ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಂಡಾಗ ಉರಿನೋವು ಕಾಣಿಸಿಕೊಳ್ಳುತ್ತದೆ.

LEAVE A REPLY

Please enter your comment!
Please enter your name here