ಆಧುನಿಕ ಜೀವನ ಶೈಲಿಯಿಂದಾಗಿ ಹಲವಾರು ರೋಗಗಳು ಮಾನವನನ್ನು ಬೆಂಬಿಡದೆ ಕಾಡುತ್ತಿವೆ ಮಾನವನ ದೇಹ ಒಂದು ರೋಗದ ಗುಡಾಗಿ ಬಿಟ್ಟಿದೆ ದೇಹದಲ್ಲಿ ಇರುವ ಪ್ರತಿಯೊಂದು ಗ್ರಂಥಿಗಳು ಅಂಗಾಂಗಗಳು ಹಾಗೂ ನಮ್ಮ ನರಗಳು ದೈಹಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತವೆ ಹಾಗೆಯೇ ಥೈರಾಯ್ಡ್ ಗ್ರಂಥಿಗಳು ಕೂಡ ಮಹತ್ವದ್ದಾಗಿದೆ ಥೈರಾಯ್ಡ್ ಗ್ರಂಥಿಗಳು ಬಿಡುಗಡೆ ಮಾಡುವ ಹಾರ್ಮೋನಗಳು ಹೆಚ್ಚಾದಾಗ ಅಥವಾ ಕಡಿಮೆ ಆದಾಗ ಥೈರಾಯ್ಡ್ ಸಮಸ್ಯೆ ಕಾಣಿಸುತ್ತದೆ ಇದನ್ನು ಹೈಪರ್ ಥೈರಾಯ್ಡಿ ಸಮ್ ಅಥವಾ ಹೈಪೋ ಥೈರಾಯ್ಡಿ ಸಮ್ ಎಂದು ಕರೆಯಲಾಗುತ್ತದೆ ಥೈರಾಯ್ಡ್ ಗ್ರಂಥಿಗಳು ಟಿ 4 ಥೈರಾಕ್ಸಿನ್ ಮತ್ತು ಟಿ3 ಟ್ರೈಯೊ ಟ್ರೈಯೋಡೋನೇನ್ ಎನ್ನುವ ಹಾರ್ಮೋನ್ ಬಿಡುಗಡೆ ಮಾಡುವುದು ಆದ್ದರಿಂದ ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬಿರುವುದು ಪಿಟ್ಯುಟರಿ ಗ್ರಂಥಿ ಅಂದರೆ ಮೆದುಳಿನ ತಳದಲ್ಲಿ ಕಂಡುಬರುವ ಸಣ್ಣ ಅಂಗವನ್ನು ಪಿಟ್ಯುಟರಿ ಗ್ರಂಥಿ ಎನ್ನುತ್ತೇವೆ ಥೈರಾಯ್ಡ್ ಉತ್ತೇಜಿಸುವ ಹಾರ್ಮೋನ್ ಗಳನ್ನು ಬಿಡುಗಡೆ ಮಾಡಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ನಿಯಂತ್ರಿಸಲು ನೆರವಾಗುವುದು ಆದ್ದರಿಂದ ನಾವು ಇದಕ್ಕೆ ಕಾರಣಗಳು ಯಾವವೆಂದರೆ ಧೀರ್ಘ ಕಾಲದ ಲಿಂಪೊಸಿಟಿಕ್ ಥೈರಾಯ್ಡ್ ಅಥವಾ ಆಟೋ ಇಮೇನ್ ಥೈರಾಯ್ಡಿಸ್ ಎಂದು ಕರೆಯಲ್ಪಡುವ
ಅಸೀಮೋಟಿನ್ ಥೈರಾಯ್ಡಿಸ್ ಇದು ಹೈಪೋ ಥೈರಾಯ್ಡಿಸಮ್ ನ ಅತ್ಯಂತ ಸಾಮಾನ್ಯ ಕಾರಣವಾಗಿದೆ ಇದರ ಪ್ರಮುಖ ಕಾರಣವೆಂದರೆ ಅಯೋಡಿನ್ ಕೊರತೆ ಅಯೋಡಿನ್ ಸೇವನೆ ಕಡಿಮೆಯಾದಾಗ ಈ ಸಮಸ್ಯೆ ಕಂಡು ಬರುತ್ತದೆ ಎಂದು ತಿಳಿಸಲಾಗಿದೆ. ಥೈರಾಯ್ಡ್ ನ ಪ್ರಮುಖ ಲಕ್ಷಣಗಳು ಬೇಸರ ಮತ್ತು ಖಿನ್ನತೆ ಈ ಸಮಯದಲ್ಲಿ ಮೆದುಳಿನಲ್ಲಿ ಹೆಚ್ಚಿನ ಉತ್ತೇಜನಕಾರಿಗಳು ಮುಡುವುದು ಇದರಿಂದ ನಿಮಗೆ ಒಳ್ಳೆಯ ಭಾವನೆ ಬರುವುದಿಲ್ಲ. ಬೇಸರ ಯಾವಾಗಲೂ ಉಂಟಾಗುವುದು. ಮಲಬದ್ಧತೆ ನಿಯಮಿತ ಮಲಬದ್ಧತೆಯೂ ಮತ್ತೊಂದು ಮೌನ ಲಕ್ಷಣವಾಗಿದೆ ಥೈರಾಯ್ಡ್ ಹಾರ್ಮೋನಗಳು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯ ಕಾರ್ಯ ನಿರ್ವಹಿಸುವಂತೆ ಮಾಡುವುದು ಅತಿಯಾದ ಥೈರಾಯ್ಡ್ ಗ್ರಂಥಿಯ ಚಟುವಟಿಕೆಯು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ನಿಧಾನಗೊಳಿಸಿ ಮಲಬದ್ಧತೆಗೆ ಕಾರಣವಾಗಬಹುದು. ಅತಿಯಾದ ನಿದ್ರೆ ಹಗಲಿನಲ್ಲಿ ನಿಮಗೆ ತುಂಬಾ ಸುಸ್ತಾಗುವುದು ಮತ್ತು ನಿಷ್ಕ್ರಿಯ ಥೈರಾಯ್ಡ್ ನ ಲಕ್ಷಣವಾಗಿದೆ ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಥೈರಾಯ್ಡ್ ಹಾರ್ಮೋನ್ ಬಿಡುಗಡೆ ಮಾಡದೆ ಇರುವಾಗ ಹೀಗೆ ಆಗುವುದು ಯಾವಾಗಲೂ ಅತಿಯಾಗಿ ನಿದ್ದೆ ಮಾಡುವಂತೆ ಅನಿಸುವುದು.
ಕೂದಲು ಉದುರುವಿಕೆ ಮತ್ತು ಚರ್ಮ ಒಣಗುವುದು ಕಣ್ಣಿನ ರೆಪ್ಪೆ ಸಹಿತ ಕೂದಲು ಉದುರುವಿಕೆಯು ಥೈರಾಯ್ಡ್ ನ ಲಕ್ಷಣಗಳಲ್ಲಿ ಒಂದಾಗಿದೆ ಅತಿಯಾದ ಚಟುವಟಿಕೆ ಮತ್ತು ನಿಷ್ಕ್ರಿಯತ ಥೈರಾಯ್ಡ್ ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ ಬಿರುವುದು ಥೈರಾಯ್ಡ್ ಹಾರ್ಮೋನಗಳು ಸಮತೋಲನ ಕಳೆದುಕೊಂಡಾಗ ಕೂದಲು ಉದುರುವುದು ಹೆಚ್ಚಾಗುತ್ತದೆ ಇದರಿಂದ ಕೂದಲು ಮತ್ತು ಚರ್ಮ ಒಣಗುವುದು. ಒಮ್ಮೆಲೇ ತೂಕ ಹೆಚ್ಚಳ ನಿಷ್ಕ್ರಿಯ ಥೈರಾಯ್ಡ್ ನಿಂದಾಗಿ ಒಮ್ಮೆಲೇ ತೂಕ ಹೆಚ್ಚಾಗುವುದು ಏಕೆಂದರೆ ಥೈರಾಯ್ಡ್ ಹಾರ್ಮೋನಗಳು ಚಯಾಪಚಯ ಕ್ರಿಯೆಯನ್ನು ಕುಗ್ಗಿಸುವುದು ಮತ್ತು ಕ್ಯಾಲೋರಿ ಕಡಿಮೆ ದಹಿಸುವುದು ಆದ್ದರಿಂದ ನಿಮ್ಮ ತೂಕ ಹೆಚ್ಚಾಗುವುದೂ. ಲೈಂಗಿಕ ಆಸಕ್ತಿ ಕುಗ್ಗುವುದು ನಿಷ್ಕ್ರಿಯ ಥೈರಾಯ್ಡನಿಂದಾಗಿ ಲೈಂಗಿಕ ಆಸಕ್ತಿ ಕುಂದುವುದು ಕಾಮಾಸಕ್ತಿ ಕಡಿಮೆ ಅಥವಾ ಮಹಿಳೆಯರಲ್ಲಿ ಕಾಮೋದ್ವೇಗ ಕಡಿಮೆ ಆಗುವುದು ಆದ್ದರಿಂದ ನಿಮ್ಮ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ