ಈ ಹಣ್ಣನ್ನು ಒಮ್ಮೆ ತಿಂದರೆ ಸಾಕು ನಿಮಗೆ ಈ ಏಳು ರೋಗಗಳು ಹತ್ತಿರ ಕೂಡ ಬರಲ್ಲ

54

ಹಿಪ್ಪುನೇರಳೆ ಹಣ್ಣುಗಳನ್ನು ಸೇವಿಸುವುದರಿಂದ ಏನೆಲ್ಲಾ ಲಾಭಗಳು ಆಗುತ್ತವೆ ಗೊತ್ತೇ. ಸಾಮಾನ್ಯವಾಗಿ ನಾವು ಕಂಡಂತೆ ಹಿಪ್ಪು ನೇರಳೆ ಹಣ್ಣನ್ನು ಹೆಚ್ಚಾಗಿ ಕುರಿಗಳಿಗೆ ಸೇವಿಸಲು ನೀಡುತ್ತಾರೆ ಏಕೆಂದರೆ ಹಿಪ್ಪುನೇರಳೆ ಹಣ್ಣಿನಲ್ಲಿ ಹಲವರು ರೀತಿಯ ಅರೋಗ್ಯದ ಗುಣಗಳು ಇರುತ್ತದೆ. ಆದರೆ ಬರಿ ಕುರಿಗಳು ಮಾತ್ರವಲ್ಲ ಹಿಪ್ಪು ನೇರಳೆ ಹಣ್ಣಿನ ಉಪಯೋಗವನ್ನು ತಿಳಿದುಕೊಂಡರೆ ಸಾಕು ಅದನ್ನು ನಾವೇ ಸೇವಿಸಲು ಆರಂಭಿಸುತ್ತೇವೆ. ಆಗಿದ್ದಾರೆ ಏನೆಲ್ಲಾ ಪ್ರಯೋಜನ ಇದೆ ನೋಡೋಣ ಬನ್ನಿ. ಹಿಪ್ಪು ನೇರಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ವಿಟಮಿನ್ ಸಿ ವಿಟಮಿನ್ ಕೆ ಪೊಟಾಷಿಯಂ ರಿಬೋಫ್ಲಾವಿನ್ ಕ್ಯಾಲ್ಸಿಯಂ ನಾರಿನಾಂಶ ಇನ್ನೂ ಅನೇಕ ರೀತಿಯ ಪೋಷಕಾಂಶಗಳು ಹೇರಳವಾಗಿದೆ. ಹಿಪ್ಪು ನೇರಳೆ ಹಣ್ಣಿನಲ್ಲಿ ಫ್ಲ್ಯಾವೊನೊಯ್ಡ್ ಎಂಬ ಅಂಶಗಳು ಇದ್ದು ಇದು ನಮ್ಮ ದೇಹದಲ್ಲಿ ಇರುವ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಿಪ್ಪು ನೇರಳೆ ಹಣ್ಣಿನಲ್ಲಿ ಇರುವ ಕ್ಯಾರೊಟಿನಾಯ್ಡ್ಸ್ ಅಂಶಗಳು ನಮ್ಮ ಕಣ್ಣಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಹಿಪ್ಪು ನೇರಳೆ ಹಣ್ಣು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವ ರಕ್ತನಾಳಗಳಲ್ಲಿ ಸಂಗ್ರಹವಾಗಿರುವಂತಹ ಅನಗತ್ಯ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ ಹಿಪ್ಪು ನೇರಳೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಇದ್ದು ಇದು ನಮ್ಮ ದೇಹದಲ್ಲಿ ರಕ್ತ ಚಲನೆಯನ್ನು ವೃದ್ಧಿಸುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವ ಜೀವಕೋಶಗಳಿಗೆ ಅಗತ್ಯವಾದ ಆಮ್ಲಜನಕವನ್ನು ನೀಡುತ್ತದೆ. ಹಿಪ್ಪು ನೇರಳೆ ಹಣ್ಣು ಸೇವಿಸುವುದರಿಂದ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ವಾಗಲು ಸಹಾಯ ಮಾಡುತ್ತದೆ. ಹಿಪ್ಪು ನೇರಳೆ ಹಣ್ಣಿನಲ್ಲಿ ಅಗತ್ಯವಾದ ನಾರಿನಾಂಶ ಇದ್ದು ಇದು ಹೊಟ್ಟೆ ನೋವು ಹೊಟ್ಟೆ ಉಬ್ಬರ ಮೂತ್ರ ವಿಸರ್ಜನೆಯ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಾಗೆಯೇ ಹಿಪ್ಪು ನೇರಳೆ ಹಣ್ಣಿನಲ್ಲಿ ಅಧಿಕವಾದ ಆಂಟಿ ಅಕ್ಸಿಡಾಂಟ್ಸ್ ಗಳು. ವಿಟಮಿನ್ ಸಿ. ಹಾಗೂ ಎ ಅಂಶಗಳು ಹೆಚ್ಚು ಇದ್ದು ಇದು ಕ್ಯಾನ್ಸರ್ ಅಂತ ಕಾಯಿಲೆಗಳಿಂದ ನಮ್ಮ ದೂರ ಇರಿಸುತ್ತದೆ. ಹಿಪ್ಪು ನೇರಳೆ ಹಣ್ಣನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮೂಳೆಗಳು ಗಟ್ಟಿ ಆಗುತ್ತವೆ ತಲೆಸುತ್ತು ಸುಸ್ತು ಎಲ್ಲವೂ ಕೂಡ ಕಡಿಮೆ ಆಗುತ್ತದೆ. ಹಿಪ್ಪು ನೇರಳೆ ಹಣ್ಣಿನ ನಿಯಮಿತ ಸೇವನೆಯಿಂದ ಹೃದಯದ ತೊಂದರೆಗಳು ಕೂಡ ಕಡಿಮೆ ಆಗುತ್ತವೆ. ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಎ. ಬೀಟಾ ಕೆರಾಟಿನ್ ಆಲ್ಫಾ ಕೆರಾಟಿನ್ ಅಂಶಗಳು ಇದ್ದು ಇವು ನಮ್ಮ ಜೀವಕೋಶಗಳನ್ನು ಕಾಪಾಡುತ್ತದೆ ಇದರಿಂದ ನಮಗೆ ವಯಸ್ಸು ಆಗಿದ್ದರು ಕೂಡ ವಯಸ್ಸು ಆಗಿಲ್ಲದ ರೀತಿಯಲ್ಲಿ ಕಾಣಿಸುತ್ತವೆ. ಚರ್ಮದಲ್ಲಿ ಸುಕ್ಕುಗಳು ಇರುವುದಿಲ್ಲ ಕಲೆ. ಮೊಡವೆ ಬರುವುದಿಲ್ಲ. ಹಾಗಾಗಿ ನಿಯಮಿತವಾಗಿ ಹಿಪ್ಪು ನೇರಳೆ ಹಣ್ಣನ್ನು ಸೇವಿಸುತ್ತಾ ಬಂದು ಹಲವರು ಕಾಯಿಲೆಗಳನ್ನು ದೂರ ಮಾಡಿಕೊಳ್ಳಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here