ಈ ಹೂವಿನ ಬೆಲೆ ಎರಡು ಕೋಟಿಗೂ ಹೆಚ್ಚು

45

ಈ ಒಂದು ಹೂವಿನ ಬೆಲೆ ಎಷ್ಟು ಗೊತ್ತಾ. ನಮಸ್ತೆ ಗೆಳೆಯರೇ ನಮಗೆ ಸಿಗುವ ಹೂವುಗಳ ಬೆಲೆ ಜಾಸ್ತಿ ಅಂದರೆ 1000ವರೆಗೆ ಇರಬಹುದು ಅದಕ್ಕಿಂತ ಹೆಚ್ಚು ಇರಲು ಸಾಧ್ಯವೇ ಇಲ್ಲ ಯಾರೇ ಆಗಲಿ ಹಾಗೆ ಅಂದುಕೊಳ್ಳುತ್ತೇವೆ ಆದರೆ ಕೆಲವು ಹೂಗಳ ಬೆಲೆ ಲಕ್ಷದವರೆಗೆ ಇರುತ್ತದೆ ನಮಗೆ ಗೊತ್ತಿರುವುದಿಲ್ಲ ಇನ್ನು ಕೆಲವು ಹೂಗಳ ಬೆಲೆ ಲಕ್ಷದವರೆಗೆ ಮಾತ್ರ ಅಲ್ಲ ಕೋಟಿವರೆಗೂ ಕೂಡ ಇದೆ ಈ ಲೇಖನದಲ್ಲಿ ಕೋಟಿ ರೂಪಾಯಿ ಬೆಲೆ ಮಾಡುವ ಹೂವಿನ ಬಗ್ಗೆ ತಿಳಿಯೋಣ. ಗೆಳೆಯರೇ ಈ ಒಂದು ಹೂವು 2 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಇದರ ಬೆಲೆ ಕೇಳಿದರೆ ಎಲ್ಲರಿಗೂ ಆಶ್ಚರ್ಯ ಆಗುವುದು ಸಾಮಾನ್ಯ ಈ ಹೂವು ಎಲ್ಲಿ ಸಿಗುತ್ತದೆ ಇದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. ಚೀನಾದ ಯುಂಚಿಂಗ್ ಪ್ರದೇಶದಲ್ಲಿ ತೈವಾನ್ ಮೂಲದ ಹೂವಿನ ಅಂಗಡಿಯಲ್ಲಿ ವ್ಯಾಪಾರಿ ಒಬ್ಬ ಐರಿಸ್ ಜಪೋನಿಕಾ ಎಂಬ ಜಾತಿಗೆ ಸೇರಿದ ಗಿಡದ ಹೂವನ್ನು ಮಾರಾಟಕ್ಕೆ ಇಟ್ಟಿರುತ್ತಾನೆ ಆತ ಅದನ್ನು ಬೇರೆ ಪ್ರದೇಶದಿಂದ ತರಿಸಿದ್ದ ಹೂವಿನ ಬೆಲೆ ಅವರ ಕರೆನ್ಸಿಯಲ್ಲಿ 2

ಕೋಟಿ ರೂಪಾಯಿ ಈ ಅಪರೂಪದ ಹೂವನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ ಅಂತೆ ಹಲವು ರೀತಿಯ ಕ್ಯಾನ್ಸರ್ ಹುಣ್ಣುಗಳ ಕಾಯಿಲೆಗಳನ್ನು ಗುಣ ಪಡಿಸುತ್ತದೆ.
ಗೆಳೆಯರೆ ಅಷ್ಟೇ ಅಲ್ಲದೆ ಶ್ವಾಸಕೋಶ ಕ್ಯಾನ್ಸರ್ ಸಮಸ್ಯೆಗಳಿಗೂ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ ಈ ಹೂವಿಗಾಗಿ ಹಲವು ದೇಶದವರು ಆಜ್ಞೆಯನ್ನು ಮಾಡಿದ್ದರಂತೆ ಆದ್ದರಿಂದ ಆ ಹೂವಿನ ಗಿಡವನ್ನು ತರಿಸಿ ಅದರಿಂದ ಹೂವನ್ನು ಬೆಳೆಸಬೇಕು ಎಂದು ಅಂದುಕೊಂಡಿದ್ದನಂತೆ ಅಂಗಡಿಯ ಮಾಲೀಕ. ಹಾಗಾಗಿ ಐರಿಸ್ ಜಪೋನಿಕ ಹೂವನ್ನು ಆತ ಬೇರೆ ದೇಶದಿಂದ ತರಿಸಿದ್ದ ಆದರೆ ಅಂಗಡಿಯ ಮಾಲೀಕ ಆ ಹೂವನ್ನು ಅಂಗಡಿಯಲ್ಲಿರುವ ಇತರೆ ಸಾಮಾನ್ಯ ಹೂಗಳ ಜೊತೆ ಇಟ್ಟು ನೆನಪಿಲ್ಲದೆ ಹೋಗುತ್ತಾನೆ ಆ ಸಮಯದಲ್ಲಿ ಆ ಮಳಿಗೆಯಲ್ಲಿ ಮಹಿಳೆಯೊಬ್ಬಳು ಹೂವನ್ನು ಖರೀದಿಸುತ್ತಾರೆ ಆಕೆ ತೆಗೆದುಕೊಂಡಿದ್ದು ಬೇರೆ ಹೂವು ಆದರೆ ಅವರಿಗೆ ಇಷ್ಟವಾಗುವುದಿಲ್ಲ ಯಜಮಾನನಿಗೆ ಹೇಳದೆ ಆ ಹೂವನ್ನು ಅಲ್ಲೇ ಇಟ್ಟು ಬೇರೆ ಪಕ್ಕದಲ್ಲಿರುವ ಜಪೋನಿಕ

ಹೂವನ್ನು ತೆಗೆದುಕೊಂಡು ಮನೆಗೆ ಹೋಗುತ್ತಾಳೆ. ಹೂ ಕಾಣದೇ ಇರುವುದನ್ನು ಕಂಡು ಗಾಬರಿಯಿಂದ ಮಾಲಿಕ ಪೊಲೀಸರ ಮೊರೆ ಹೋಗುತ್ತಾನೆ ಹೂವಿನ ಬೆಲೆಯನ್ನು ತಿಳಿದುಕೊಂಡ ಪೊಲೀಸರು ಆಶ್ಚರ್ಯದಿಂದ ಮಹಿಳೆಯನ್ನು ಹುಡುಕಲು ಪ್ರಾರಂಭಿಸುತ್ತಾರೆ ನಂತರ ಅಂಗಡಿಯ ಮುಂದೆ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಮಹಿಳೆಯರನ್ನು ತೆಗೆದುಕೊಂಡು ಆಕೆಯ ವಿಳಾಸವನ್ನು ತಿಳಿದುಕೊಂಡು ಆ ಮಹಿಳೆಯನ್ನು ಹುಡುಕುತ್ತಾರೆ ಮತ್ತೆ ಆ ಹೂವನ್ನು ಮರಳಿ ಪಡೆಯುತ್ತಾರೆ. ಆ ಹೂವನ್ನು ಮಹಿಳೆ ಗೊತ್ತಿಲ್ಲದೆ ತೆಗೆದುಕೊಂಡು ಹೋದ ಕಾರಣ ಅವಳ ಮೇಲೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಳ್ಳುವುದಿಲ್ಲ ಇದೆಲ್ಲಾ ಈ ಹೂವಿನ ಒಂದು ಕಥೆಯಾಗಿದೆ ಏನೇ ಆಗಲಿ ಗೆಳೆಯರೇ ಈ ಒಂದೇ ಹೂವಿನ ಬೆಲೆ 2 ಕೋಟಿ ರೂಪಾಯಿ ಅಂದರೆ ನಂಬಲು ಕಷ್ಟ ಆಗುತ್ತದೆ. ಆದ್ರೆ ಕೆಲವೊಂದು ಅಪರೂಪದ ಹೂವುಗಳ ಬೆಲೆ ಇಷ್ಟ ಮಟ್ಟಿಗೆ ಇದ್ರೆ ಅಂದ್ರೆ ನಿಜಕ್ಕೂ ಬೆರಗಾಗುತ್ತೇವೆ ಈ ಹೂವಿನ ವಿಶೇಷತೆಯ ಬಗ್ಗೆ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ.

LEAVE A REPLY

Please enter your comment!
Please enter your name here