ಊಟ ಮಾಡುವಾಗ ಯಾವ ರೀತಿ ನಾವು ಆಹಾರ ತಿನ್ನುತ್ತೇವೆ ಎನ್ನುವುದೂ ಕೂಡ ಒಂದು ಪದ್ದತಿ ಟೇಬಲ್ ಮೇಲೆ ನಾಲ್ಕು ಜನರ ಜೊತೆ ಕುಳಿತು ಊಟ ಮಾಡುವಾಗ ನೀವು ಆಹಾರವನ್ನು ಹೇಗೆ ಸೇವನೆ ಮಾಡುತ್ತೀರಾ ಎನ್ನುವುದು ಕೂಡ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹೊರದೇಶಗಳಲ್ಲಿ ಮಕ್ಕಳಿಗೆ ಟೇಬಲ್ ಮೇಲೆ ಹೇಗೆ ಊಟ ಮಾಡಬೇಕು ಎಂಬುದನ್ನು ಅವರು ಚಿಕ್ಕವರಿದ್ದಾಗಲೆ ಕಲಿಸಿ ಕೊಡುತ್ತಾರೆ ಊಟ ಮಾಡಲು ಯಾವುದೇ ನಿಯಮಗಳು ಇಲ್ಲದಿದ್ದರೂ ಸಹ ನಾವು ತಿನ್ನುವ ಶೈಲಿ ಅಕ್ಕಪಕ್ಕದಲ್ಲಿ ಇರುವವರಿಗೆ ಮುಜುಗರ ಆಗದಂತೆ ಎಚ್ಚರಿಕೆ ವಹಿಸಬೇಕು ಹಾಗಾದರೆ ಯಾವ ರೀತಿ ಅಭ್ಯಾಸಗಳನ್ನು ನಾವು ಊಟ ಮಾಡುವಾಗ ಬಿಡಬೇಕು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಮೊದಲನೆಯದು ಊಟ ಮಾಡುವಾಗ ಶಬ್ದ ಬರುವಂತೆ ಅಗೆಯುವುದು ಅಕ್ಕಪಕ್ಕದಲ್ಲಿ ಇರುವವರಿಗೆ ಕಿರಿಕಿರಿ ಆಗುತ್ತದೆ ಹಾಗೇನೇ ಕೆಲವರು ಕಾಫಿ ಮತ್ತು ಟೀ ಕುಡಿಯುವಾಗ ಬಾಯಿ ಚಪ್ಪರಿಸುವಂತಹ ಶಬ್ದ ಮಾಡುತ್ತಾರೆ ಈ ತರಹ ಕುಡಿಯುವುದರಿಂದ ನಿಮಗೆ ಖುಷಿ ಎನಿಸಬಹುದು
ಆದರೆ ಜೊತೆಗಿರುವವರಿಗೆ ಅದು ಸರಿ ಎನಿಸುವುದಿಲ್ಲ. ಇನ್ನು ಏರಡನೆಯದು ಬಾಯಿಗಿಂತ ಹೆಚ್ಚಿನ ತುತ್ತನ್ನು ತಿನ್ನುವುದು ಒಳ್ಳೆಯದಲ್ಲ ನೋಡುವವರಿಗೆ ಅಸಹ್ಯ ಎನಿಸುತ್ತದೆ ಆದ್ದರಿಂದ ಸ್ವಲ್ಪ ಸ್ವಲ್ಪವೇ ತಿನ್ನಿ. ಮೂರನೆಯದು ಕೆಲವರಿಗೆ ಊಟದ ತಟ್ಟೆ ನೋಡಿದ ತಕ್ಷಣ ಬೇಗ ಬೇಗ ತಿಂದು ಮುಗಿಸುವ ಅವಸರ ಹೆಚ್ಚಿರುತ್ತದೆ. ಇದರ ಪರಿಣಾಮವಾಗಿ ಬೇಗ ಬೇಗನೆ ತಿನ್ನುವಾಗ ಊಟ ಮೈಮೇಲೆ ಬೀಳುತ್ತದೆ ಇನ್ನು ಕೆಲವರಿಗೆ ಮೊಬೈಲ್ ನೋಡುತ್ತಾ ಅಥವಾ ಟಿವಿ ನೋಡುತ್ತಾ ತಿನ್ನುವ ರೂಢಿ ಇರುತ್ತದೆ ಈಗಲೂ ಸಹ ಮೈ ಮೇಲೆ ಊಟ ಬೀಳುವ ಸಾಧ್ಯತೆ ಇರುತ್ತದೆ ಹೀಗಿರುವಾಗ ಅದು ನೋಡುವವರಿಗೆ ಅಸಹ್ಯ ಎನಿಸುತ್ತದೆ. ನಾಲ್ಕನೆಯದು ತಿನ್ನುವಾಗ ಮಾತನಾಡುವ ಅಭ್ಯಾಸ ಬಹಳಷ್ಟು ಜನರಿಗೆ ಇರುತ್ತದೆ ಎಲ್ಲರು ಒಟ್ಟಿಗೆ ಕುಳಿತು ಮಾತನಾಡುತ್ತ ಊಟ ಮಾಡುವುದು ಖುಷಿ ನೀಡುತ್ತದೆ ನಿಜ ಆದರೆ ಬಾಯಲ್ಲಿ ಆಹಾರ ಇರುವಾಗ ಮಾತನಾಡಿದರೆ ಅದು ನಿಮ್ಮ ಮುಂದೆ ಕುಳಿತಿರುವವರ ಮೈ ಮೇಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ
ಹಾಗಾಗಿ ನೀವು ಊಟ ಮಾಡುವಾಗ ಮಾತನಾಡದೆ ಊಟ ಮಾಡುವದು ಒಳ್ಳೆಯದು. ಐದನೆಯದು ಬೆರಳುಗಳನ್ನು ಚೀಪುವುದು ಊಟ ರುಚಿಯಾದಾಗ ಅಥವಾ ಇಷ್ಟವಾದ ಊಟ ಮಾಡುವಾಗ ಕೆಲವರು ತಮ್ಮ ಬೆರಳುಗಳನ್ನು ಚೀಪುತ್ತಾರೆ ಹೀಗೆ ಮಾಡುವ ನಿಮ್ಮ ಅಭ್ಯಾಸ ಜೊತೆಗೆ ಇರುವವರಿಗೆ ಅಸಹ್ಯ ಎನಿಸುತ್ತದೆ. ಹಾಗೇನೇ ಕೋನೆಯದು ತಿಂದಿರುವ ಕೈಯಲ್ಲೇ ಊಟವನ್ನು ಬಡಿಸಿಕೊಳ್ಳುವುದು ತಿನ್ನುವ ಮಧ್ಯ ಅಥವಾ ತಟ್ಟೆಯಲ್ಲಿ ಇರುವ ಆಹಾರ ಖಾಲಿ ಆದಾಗ ಮತ್ತಷ್ಟು ಬಡಿಸಿಕೊಳ್ಳಲು ಎಂಜಲು ಕೈಯನ್ನೇ ಬಳಸುವುದು ನೋಡುಗರಿಗೆ ಮುಜುಗರ ಎನಿಸುತ್ತದೆ ಹೀಗಾಗಿ ಕೈ ತೊಳೆದು ಕೊಂಡು ಊಟ ಬಡಿಸಿಕೊಳ್ಳಿ ಅಥವಾ ಬೇರೆ ನಿಮ್ಮದೇ ಕೈಯನ್ನು ಬಳಸಿ ಅಥವಾ ಬೇರೆಯವರ ಜೊತೆ ಬಡಿಸಿಕೊಳ್ಳಿ ಹೀಗೆ ಮಾಡಿದರೆ ನಿಮ್ಮ ಜೊತೆಗಿರುವವರಿಗೂ ಯಾವುದೇ ರೀತಿಯ ಅಸಹ್ಯ ಮುಜುಗರ ಆಗುವುದಿಲ್ಲ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ಎಲ್ಲರಿಗೂ ತಿಳಿಸಿ.