ಎಲ್ಲ ರೀತಿಯ ಗಂಟಲಿನ ಸಮಸ್ಯೆಗಳಿಗೆ ಇದುವೇ ಮನೆ ಮದ್ದು

66

ಈ ಮರದ ಹತ್ತಿಯಿಂದ ತಲೆದಿಂಬುಗಳನ್ನು ತಯಾರಿಸಲಾಗುತ್ತದೆ. ತನ್ನ ಸುಂದರವಾದ ಫಲ ಪುಷ್ಪಗಳಿಂದ ಕಾಡಿನ ಸೌಂದರ್ಯವನ್ನು ಇಮ್ಮಡಿ ಗೊಳಿಸಿರುವಂತಹ ವೃಕ್ಷಗಳಲ್ಲಿ ಅರಿಷಿಣ ಬುರುಗ ಅಥವಾ ಹಳದಿ ಬುರುಗದ ಮರಕ್ಕೆ ವಿಶೇಷ ಸ್ಥಾನವಿದೆ. ಹಳದಿ ಬುರುಗದ ವೈಜ್ಞಾನಿಕ ಹೆಸರು ಕೋಕ್ಲಾ ಸ್ಪರ್ಮಮ್ ಈ ವೃಕ್ಷದ ಕುಟುಂಬವನ್ನು ಕೆಲವರು ಕೋಕ್ಲೋ ಸ್ಪರ್ಮೆಸಿಯೇ ಎಂದರೆ ಮತ್ತೆ ಕೆಲವರು ಬಿಕ್ಷೆಸಿಯೇ ಎಂದಿದ್ದಾರೆ ಈ ವೃಕ್ಷದ ಮೂಲ ಭಾರತ ಬರ್ಮಾ ಹಾಗೂ ಥೈಲ್ಯಾಂಡ್ ಆಗಿದ್ದು ದಕ್ಷಿಣ ಏಷ್ಯಾದ ರಾಷ್ಟ್ರಗಳ ಉಷ್ಣವಲಯದ ಕಾಡುಗಳಲ್ಲಿ ಕಂಡು ಬರುತ್ತದೆ ಬಹುತೇಕ ದಕ್ಷಿಣ ಭಾರತದ ಎಲ್ಲ ಕಾಡುಗಳಲ್ಲಿ ಕಂಡು ಬರುವ ಹಳದಿ ಬುರುಗ ಕುರುಚಲು ಕಾಡು ಹಾಗೂ ಮಧ್ಯಮ ಪ್ರಮಾಣದ ಕಾಡುಗಳು ಸೇರಿದಂತೆ ಕೆಲವೊಂದು ದೇವಾಲಯಗಳ ಆವರಣಗಳಲ್ಲಿ ಸಹ ಕಂಡು ಬರುತ್ತದೆ ಸಂಸೃತದಲ್ಲಿ ಗಿರಿಮಲ್ಲಿಕ ಶಿಲಾಕಾ ಪ್ರಸಿಧ್ದ ಎಂದರೆ ಕನ್ನಡದಲ್ಲಿ ಅರಿಷಿಣ ಬುರುಗ ಹಳದಿ ಬುರುಗ ಕಾಡು ಬುರುಗ ಇತ್ಯಾದಿ ಹೆಸರುಗಳಿದ್ದರೆ

ಆಂಗ್ಲ ಭಾಷೆಯಲ್ಲಿ ಬಟರ್ ಕಪ್ ಟ್ರಿ ಇತ್ಯಾದಿ ಹೆಸರುಗಳಿವೆ. ಸುಮಾರು 30 ರಿಂದ 40 ಅಡಿಗಿಂತಲು ಎತ್ತರಕ್ಕೆ ಬೆಳೆಯಬಲ್ಲ ಅರಿಸಿಣಬರುಗ ಸೀಳು ಸಿಳಾದ ವರಟು ಮಾರ್ಪಾಡುಗಳಿಂದ ಕುಡಿದ ಮಾಸಲು ಬಿಳಿ ಹಾಗೂ ಕಪ್ಪು ಬಣ್ಣದ ಕಾಂಡವಿದ್ದು ಉದ್ದನೆಯ ತೊಟ್ಟಿನಿಂದ ಕುಡಿದ ನಕ್ಷತ್ರಾಕಾರದ ಸುಮಾರು 20 ಸೆಂಟಿಮೀಟರ್ ಉದ್ದ ಹಾಗೂ 15 ಸೆಂಟಿಮೀಟರ್ ಅಗಲವಾದ ಮೇಲ್ಭಾಗದಲ್ಲಿ ಹಸಿರು ಹಾಗೂ ಕೆಳಭಾಗದಲ್ಲಿ ಮಾಸಲು ಬಿಳಿಬಣ್ಣದಿಂದ ಕುಡಿದ ಎಲೆಗಳಿದ್ದು 5 ದಳಗಳಿಂದ ಕುಡಿದ ದುಂಡರವಾದ ಹೂವುಗಳಿದ್ದು ತಿಳಿಗುಲಾಬಿ ಬಣ್ಣದ ಅಂಡಾಕಾರದ ಚಂಡಿನಂತಹ ಕಾಯಿಗಳು ಗೊಂಚಲುಗಳಲ್ಲಿ ಸಮಾವೇಶಗೊಂಡಿದ್ದು ಈ ಕಾಯಿಗಳು ಮಾಗಿದ ಬಳಿಕ ಸೀಳು ಸಿಳಾಗಿ ಒಡೆದುಕೊಳ್ಳುತ್ತವೆ ಇವುಗಳ ಒಳಗೆ ಬಿಳಿಯ ಹತ್ತಿ ಇದ್ದು ಹತ್ತಿಯ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ಬೀಜಗಳಿರುತ್ತವೆ.

ಪ್ರೋಟಿನ್ಸ್ ಲಿಪಿಡ್ಸ್ ಕಾರ್ಬೋ ಹೈಡ್ರೇಟ್ ಪೆನಾಲ್ಸ್ ಟ್ಯಾನಿನ್ಸ್ ಅಲ್ಕೋಲೈಡ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಅರಿಷಿಣ ಬುರುಗದ ಎಲೆ ಹೂವುಗಳು ಹಾಗೂ ಅಂಟನ್ನು ಸಾಂಪ್ರದಾಯಿಕ ಆಯುರ್ವೇದ ಹಾಗೂ ಸಿಧ್ದ ಯುನಾನಿ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಅರಿಷಿಣ ಬುರುಗದ ಸಾಮಾನ್ಯ ಉಪಯೋಗವೆಂದರೆ ಈ ಮರದ ಅಂಟು ಸಿಹಿಯಾಗಿದ್ದು ಇದನ್ನು ನಿದ್ರಾಹೀನತೆ ಕೆಮ್ಮು ಅತಿಸಾರ ಮುಂತಾದ ಕಾಯಿಲೆಗಳಲ್ಲಿ ಬಳಸಲಾಗುತ್ತದೆ. ಈ ಮರದ ಅಂಟನ್ನು ಒಂದು ಲೋಟ ನೀರಿನಲ್ಲಿ ಕರಗಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಕೆಮ್ಮು ಹಾಗೂ ಗಂಟಲಿಗೆ ಸಂಬಂದಿಸಿದ ತೊಂದರೆಗಳಿಂದ ಮುಕ್ತಿ ಪಡೆಯಬಹುದಾಗಿದ್ದು ಈ ಅಂಟನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಅತಿಸಾರದಲ್ಲಿ ಲಾಭಕಾರಿಯಾಗಿದೆ.

ಇದರ ಎಲೆಗಳ ದ್ರಾವಣವನ್ನು ಶಾಂಪೂವಿನಂತೆ ಬಳಸಲಾಗುತ್ತದೆ. ಈ ಮರದ ಹತ್ತಿಯಿಂದ ತಯಾರಿಸಲಾಗುವ ತಲೆದಿಂಬುಗಳಿಗೆ ಬೇಡಿಕೆ ಇದ್ದು ಈ ದಿಂಬುಗಳನ್ನು ಬಳಸುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನಲಾಗಿದೆ. ಬುರುಗದ ಬೀಜಗಳಿಂದ ಎಣ್ಣೆಯನ್ನು ತಗೆಯಲಾಗುತ್ತದೆ ಈ ವೃಕ್ಷದ ಯಾವುದೇ ಅಡ್ಡ ಪರಿಣಾಮಗಳ ವರದಿಗಲಿಲ್ಲ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

LEAVE A REPLY

Please enter your comment!
Please enter your name here