ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳು ಬಿಡುತ್ತದೆ

57

40 ಬಗೆಯ ಹಣ್ಣು ಕೊಡುವ ಈ ಅದ್ಭುತ ಗಿಡದ ಅಚ್ಚರಿಯ ಸಂಗತಿಗಳು. ವಿಜ್ಞಾನವೆಂಬ ಲೋಕ ಅತ್ಯಂತ ಕುತೂಹಲಕಾರಿ ಯಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯಿಂದಾಗಿ ಒಂದು ಕಾಲದಲ್ಲಿ ಅಸಾಧ್ಯ ಎಂದು ಬಿಂಬಿತವಾಗಿದ್ದ ಸಂಗತಿಗಳು ಇಂದು ಸಾಧ್ಯವಾಗುತ್ತಿವೆ. ಇಂತಹ ಆವಿಷ್ಕಾರಕ್ಕೆ ಸಾಕ್ಷಿ ಎಂಬಂತಿದೆ 40 ಬಗೆಯ ಹಣ್ಣು ಗಳನ್ನು ನೀಡುವ ಟ್ರೀ ಆಫ್‌ 40. ಇಂತಹ ಮರ ಕೂಡ ಇದೆ ಎಂಬುದು ನಂಬಲು ಅಸಾಧ್ಯ ಎನಿಸುತ್ತದೆ. ಆದರೆ ಇದು ಸತ್ಯ ಹಾಗೂ ನಂಬುವಂತಹ ವಿಚಾರ. ಬಾಲ್ಯದಿಂದಲೂ ನಾವು ಒಂದು ಮರದಲ್ಲಿ ಒಂದೇ ಬಗೆಯ ಹಣ್ಣು ಬಿಡುವುದನ್ನು ನಾವು ನೋಡಿದ್ದೇವೆ. ಆದರೆ ಪ್ರೊಫೆಸರ್ ಸ್ಯಾಮ್ ಎಕೆನ್ ಎಂಬುವವರು ಗ್ರಾಫ್ಟಿಂಗ್ ತಂತ್ರಜ್ಞಾನದಿಂದ ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳು

ಬಿಡುವಂತಹ ಕಲ್ಪನೆಯನ್ನು ನಿಜವಾಗಿಸಿದ್ದಾರೆ. ಈ ವಿಭಿನ್ನ ಮತ್ತು ಅದ್ಬುತ ಮರಕ್ಕೆ ಟ್ರೀ ಆಫ್ 40 ಎಂದು ನಾಮಕರಣ ಮಾಡಲಾಗಿದೆ. ಈ ಮರ ಫ್ಲಮ್ ಯಾಮ್ ಆಪ್ರಿಕಾಟ್ ಚೆರ್ರಿ ಮತ್ತು ನೆಕ್ಟರಿನ್ ಎಂಬ ಹಲವಾರು ಬಗೆಯ ಹಣ್ಣುಗಳನ್ನು ಬಿಡುತ್ತದೆ. ನ್ಯೂಯಾರ್ಕ್ ನ ಸೆರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ವಿಶ್ಯೂವಲ್ ಆರ್ಟ್ ಪ್ರೊಫೆಸರ್ ಆಗಿರುವಂತಹ ಸ್ಯಾಮ್ ಎಕೆನ್ ಕೃಷಿ ಕುಟುಂಬದಿಂದ ಬಂದವರು. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಅವರಲ್ಲಿ ಬಾಲ್ಯದಿಂದಲೂ ಇತ್ತು. ಅವರು 2008 ನೇ ಇಸವಿಯಿಂದಲೂ ಟ್ರೀ ಆಫ್ 40 ಮೇಲೆ ಕೆಲಸ ಮಾಡುತ್ತಿದ್ದಾರೆ. ನ್ಯೂಯಾರ್ಕ್ ನ ಅಗ್ರಿಕಲ್ಚರ್ ಎಕ್ಸಿಪಿರಿಮೆಂಟ್ ನಲ್ಲಿದ್ದ ಸ್ಯಾಮ್ ಎಕೆನ್ ನ ದೃಷ್ಟಿ ಚೆರ್ರಿ ಹಾಗೂ ಇನ್ನಿತರೇ ಹಣ್ಣುಗಳ ಮರಗಳಿದ್ದ ತೋಟದ ಮೇಲೆ ಹರಿದಿತ್ತು.

ಆದರೆ ಇದು ಆರ್ಥಿಕ ಅಡಚಣೆಯಿಂದಾಗಿ ಮುಚ್ಚುವ ಹಂತದಲ್ಲಿತ್ತು. ತೋಟವನ್ನು ನೋಡಿಕೊಳ್ಳುವ ಕೆಲಸಗಾರ ಕೂಡ ಇರಲಿಲ್ಲ.ಈಗಾಗಿ ಪ್ರೊಫೆಸರ್ ಆ ತೋಟವನ್ನು ಬಾಡಿಗೆಗೆ ಪಡೆದುಕೊಂಡು ತಮ್ಮ ಕನಸು ನನಸಾಗಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತೋಟದಲ್ಲಿದ್ದ ಹಲವಾರು ಮರಗಳು ಅತ್ಯಂತ ಹಳೇಯ ಪ್ರಜಾತಿಯದಾಗಿದ್ದವು. ತಮ್ಮ ಆವಿಷ್ಕಾರ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೊಫೆಸರ್ ನಾನು ಗ್ರಾಫ್ಟಿಂಗ್ ತಂತ್ರಜ್ಞಾನದ ಬಗ್ಗೆ ಕೇಳಿದ್ದೆ ಇದರಿಂದ ಒಂದೇ ಮರದಲ್ಲಿ ಹಲವು ಬಗೆಯ ಹಣ್ಣುಗಳನ್ನು ಪಡೆಯಲು ಸಾಧ್ಯವಿತ್ತು. ಚಿಕ್ಕ ಮಟ್ಟದಲ್ಲಿ ಹಲವಾರು ಮಂದಿ ಇದನ್ನು ಪ್ರಯೋಗ ಕೂಡ ಮಾಡಿದ್ದರು. ಆದರೆ ನಾನು ಒಂದೇ ಮರದಲ್ಲಿ 40 ಬಗೆಯ ಹಣ್ಣು ಪಡೆಯುವ ಕನಸು ಕಂಡಿದ್ದೆ.

ಹೀಗಾಗಿ ನನ್ನ ಸಂಶೋಧನೆ ಆರಂಭಿಸಿದೆ. ಈ ವೇಳೆ ಹಲವಾರು ಮಂದಿ ಕೃಷಿ ವಿಜ್ಞಾನಿಗಳು ಹಾಗೂ ಗ್ರಾಫ್ಟಿಂಗ್ ಬಗ್ಗೆ ತಿಳಿದಿರುವಂತಹ ಗಣ್ಯರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ. ಇದು ಅತ್ಯಂತ ವಿಶೇಷವಾದ ಹಾಗೂ ವಿನೂತನ ತಂತ್ರಜ್ಞಾನ ಎನ್ನಬಹುದು. ಆದ್ರೆ ಕೆಲವು ಪುರಾಣದಲ್ಲಿ ಉಲ್ಲೇಖ್ಯ ಸಹಾಯದಿಂದ ಭಾರತದಲ್ಲಿ ಇಂತಹ ಕೃಷಿ ತಂತ್ರಜ್ಞಾನ ರಾಮಾಯಣ ಮಹಾಭಾರತದ ಕಾಲದಲ್ಲಿಯೇ ಇತ್ತು ಎಂಬುದು ಗ್ರಂಥಗಳಿಂದ ತಿಳಿದು ಬಂದಿದೆ ಆದರೂ ಭಾರತ ಎಂಬುದು ವಿಶೇಷ ಭೂಮಿ ಆಧುನಿಕತೆ ನಿನ್ನೆ ಮೊನ್ನೆಯದಲ್ಲ ಈ ಮಣ್ಣಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ.

LEAVE A REPLY

Please enter your comment!
Please enter your name here