ಒಣಹಣ್ಣುಗಳನ್ನು ಈ ಸಮಯದಲ್ಲಿ ಸೇವಿಸಿ ಸಮೃದ್ದ ಆರೋಗ್ಯ ಪಡೆಯಿರಿ

66

ಒಣಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳು ಹೀಗಿವೆ. ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ ಅಂತ ಇದನ್ನು ಕರೆಯುತ್ತಾರೆ ಈ ಒಂದು ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ತುಂಬಾ ತಜ್ಞರು ಮತ್ತು ವಿಜ್ಞಾನಿಗಳು ಹೇಳುವ ಒಂದು ಮಾತಾಗಿದೆ. ಫಲ ವಸ್ತುಗಳಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟಗಳು ಈ ಒಂದು ಒಣ ಹಣ್ಣುಗಳಲ್ಲಿ ಇರುತ್ತದೆ. ಈ ಆಂಟಿ ಆಕ್ಸಿಡೆಂಟಗಳು ಉರಿಯುತವನ್ನು ತಡೆಯುವುದಕ್ಕೆ ಮತ್ತೆ ದೇಹಕ್ಕೆ ಉಂಟಾಗುವ ಹಾನಿಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಒಣ ಬೀಜಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ನಾರಿನಂಶ ಆರೋಗ್ಯಕರ ಕೊಬ್ಬು ವಿಟಮಿನ್ ಮತ್ತು ಖನಿಜಾಂಶಗಳು ಇರುತ್ತವೆ ಇವುಗಳ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಮಟ್ಟ ಕಡಿಮೆಯಾಗುತ್ತದೆ.

ರ ಕ್ತನಾಳಗಳ ಕಾರ್ಯವನ್ನು ಉತ್ತಮಗೊಳಿಸಿ ಕೀಲುಗಳು ಮತ್ತು ಮಾಂಸಖಂಡಗಳನ್ನು ದೃಢವಾಗಿ ಇರಿಸುತ್ತದೆ ಮತ್ತೆ ಕೀಲುಗಳ ನೋವನ್ನು ಕೂಡ ಕಡಿಮೆ ಮಾಡುತ್ತದೆ ಆದರೆ ಕೆಲವು ಒಣ ಬೀಜಗಳಲ್ಲಿ ಕೊಬ್ಬಿನಾಂಶ ಅಧಿಕ ಪ್ರಾಮಾಣದಲ್ಲಿ ಇರುವುದರಿಂದ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದರೆ ಅದನ್ನು ಕೆಲವು ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಈ ಬೀಜಗಳಲ್ಲಿ ಕಬ್ಬಿಣಾಂಶ ವಿಟಮಿನ್ ಖನಿಜಾಂಶಗಳು ಮೆಗ್ನಿಶಿಯಮ್ ಒಮೆಗ 3 ಎಂಬ ಪೋಷಕಾಂಶಗಳು ಇರುತ್ತವೆ ಅಷ್ಟೇ ಅಲ್ಲದೆ ತಾಮ್ರ ಮ್ಯನ್ಗನಿಸ್ ಪೊಟ್ಯಾಸಿಯಮ್ ಮೆಗ್ನೇಶಿಯಂ ಜಿಂಕ್ ಅಂಶಗಳು ಹೇರಳವಾಗಿ ಇರುತ್ತವೆ. ಇವೆಲ್ಲವೂ ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತವೆ.

ಈ ಒಂದು ಒಣಹಣ್ಣುಗಳು ನಮ್ಮ ದೇಹಕ್ಕೆ ತುಂಬಾ ಸಹಕರಿಸುತ್ತದೆ ಒಣದ್ರಾಕ್ಷಿ ಅಂಜುರ ಖರ್ಜುರ ಅಥವಾ ಒಣ ಖರ್ಜುರ ಒಣಚೆರ್ರಿಗಳು ತುಂಬಾ ಪೋಷಕಾಂಶಗಳಿಂದ ಕೂಡಿದ ಪಧಾರ್ಥಗಳಾಗಿವೆ ಇವುಗಳ ಸೇವನೆಯಿಂದ ವೇಗವಾಗಿ ದೇಹಕ್ಕೆ ಶಕ್ತಿ ಸಿಗುತ್ತದೆ ಅಲ್ಲದೆ ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಪೋಷಕಾಂಶಗಳು ಸಿಗುತ್ತವೆ ದೇಹದಲ್ಲಿ ರೋಗನಿರೋಧಕ ಶಕ್ತಿಯೆಯನ್ನು ವೃದ್ಧಿಸಲು ಇದು ಸಹಕರಿಸುತ್ತದೆ ಜೇನುತುಪ್ಪವನ್ನು ಇದರೊಂದಿಗೆ ಸೇರಿಸಿ ತೆಗೆದುಕೊಳ್ಳುವುದು ಇನ್ನು ಒಳ್ಳೆಯದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಶೀತ ನೆಗಡಿ ಅಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಇದು ಸಹಕರಿಸುತ್ತದೆ ಚರ್ಮದ ಆರೋಗ್ಯವನ್ನು ರಕ್ಷಿಸುವುದರಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ

ಮಕ್ಕಳಿಗೆ ಪ್ರತಿನಿತ್ಯ ಒಣಹಣ್ಣುಗಳನ್ನು ನೀಡುವುದರಿಂದ ಅವರ ಮೇದುಳು ಚುರುಕಾಗುತ್ತದೆ ಮತ್ತು ಮಗು ಆರೋಗ್ಯವಾಗಿ ಇರುವಂತೆ ಇವು ಸಹಕರಿಸುತ್ತವೆ ಅಷ್ಟೇ ಅಲ್ಲದೆ ಮಕ್ಕಳ ತೂಕ ಕಡಿಮೆ ಇದ್ದಾಗ ನಾವು ರಾತ್ರೀಇಡಿ ಒಣಹಣ್ಣುಗಳು ಹಾಲಿನಲ್ಲಿ ನೆನಸಿ ಇಟ್ಟು ಬೆಳಿಗ್ಗೆ ಅದನ್ನು ಸೇವಿಸಲು ಕೊಟ್ಟರೆ ಮಕ್ಕಳುದಪ್ಪ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಒಣ ಹಣ್ಣುಗಳಲ್ಲಿ ಕೆಲವು ಬಾರಿ ರಾಸಾಯನಿಕಗಳು ಇರುವುದರಿಂದ ಇವುಗಳನ್ನು 5 ರಿಂದ 6 ತಾಸು ನೀರಿನಲ್ಲಿ ನೆನಸಿ ಆ ನೀರನ್ನು ಚೆಲ್ಲಿ ಸೇವಿಸುವುದು ತುಂಬಾ ಒಳ್ಳೆಯದು. ಆದ್ದರಿಂದ ಸ್ನೇಹಿತರೆ ಒಣಹಣ್ಣುಗಳಿಂದ ನಮ್ಮ ಆರೋಗ್ಯಕ್ಕೆ ಸಿಗುವ ಆರೋಗ್ಯಕರ ಅಂಶಗಳ ಬಗ್ಗೆ ನೀವು ತಿಳಿದ ಮೇಲೆ ನೀವು ಸಹ ಇದೇರೀತಿಯಲ್ಲಿ ಇವುಗಳನ್ನು ಬಳಸಿರಿ ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ

LEAVE A REPLY

Please enter your comment!
Please enter your name here