ಒಣ ಕೆಮ್ಮು ನಿವಾರಣೆ ಮಾಡಲು ಸೂಕ್ತ ಮನೆ ಮದ್ದು

81

ಕೆಮ್ಮು ಎಂಬುದು ಪ್ರತಿಫಲಿತ ಕ್ರಿಯೆ. ಇದು ಉದ್ರೇಕಕಾರಿಗಳು ಮತ್ತು ಲೋಳೆಯ ಮಾರ್ಗವನ್ನು ತೆರವುಗೊಳಿಸುತ್ತದೆ. ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೇನೆ ಅನುತ್ಪಾದಕ ಕೆಮ್ಮು. ಈ ಕೆಮ್ಮಿನಲ್ಲಿ ಲೋಳೆಯ ಉತ್ಪತ್ತಿಯಾಗುವುದಿಲ್ಲ. ಒಣಕೆಮ್ಮಿಗೆ ಕಾರಣಗಳು ಹಲವಾರು ಇದ್ದರೂ ಸಹ ಇದು ದಿನ ನಿತ್ಯದ ಜೀವನವನ್ನು ಗಂಭೀರಗೊಳಿಸುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಈ ಒಣ ಕೆಮ್ಮನ್ನು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಒಣಕೆಮ್ಮನ್ನು ನಿವಾರಣೆ ಮಾಡಬಹುದು. ಹಾಗಾದರೆ ಸ್ನೇಹಿತರೆ ಈ ಆರೋಗ್ಯಕರ ಮಾಹಿತಿಯನ್ನು ಕೊನೆವರೆಗೂ ಓದಿರಿ. ಶ್ವಾಸಕೋಶದಲ್ಲಿ ಕಫ ಗಟ್ಟಿಯಾಗಿ ಕಾಣಿಸಿಕೊಂಡರೆ ಅದಕ್ಕೆ ಒಣಕೆಮ್ಮು ಎಂದು ಕರೆಯುತ್ತಾರೆ. ಇದನ್ನು ನಾಯಿ ಕೆಮ್ಮು ಎಂದು ಕೂಡ ಕರೆಯುತ್ತಾರೆ. ಕೆಮ್ಮು ಜಾಸ್ತಿಯಾಗಿ ದೇಹದಲ್ಲಿ ಇರಬಾರದು. ಒಂದು ವೇಳೆ ಇದ್ದರೆ ಅಥವಾ ಈ ಒಣಕೆಮ್ಮು ಎರಡು ವಾರಕ್ಕಿಂತ ಹೆಚ್ಚಾಗಿ ದೇಹದಲ್ಲಿ ಕಾಣಿಸಿಕೊಂಡರೆ ಇದು ಟಿ. ಬಿ ಎಂಬ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಮತ್ತು ನ್ಯುಮೋನಿಯಾ ಈ ಕಾಯಿಲೆಯು ಬರುವ ಲಕ್ಷಣವಾಗಿರುತ್ತದೆ. ಮತ್ತು ಉಸಿರಾಟದ ಸಮಸ್ಯೆಗಳಿಗೆ ಇದು ದಾರಿ

ಮಾಡಿ ಕೊಡುತ್ತದೆ ಮುಖ್ಯವಾಗಿ ಅಸ್ತಮಾ,ಲಂಗ್ಸ್, ಶ್ವಾಸಕೋಶದ ಕಾಯಿಲೆಗೆ ಈ ಒಣಕೆಮ್ಮು ಕಾರಣವಾಗಿರುತ್ತದೆ. ಆದ್ದರಿಂದ ಶ್ವಾಸಕೋಶದಲ್ಲಿ ಕಫ ಸಂಗ್ರಹಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಒಣಕೆಮ್ಮನ್ನು ಈ ಸುಲಭವಾದ ಮನೆಮದ್ದು ಮಾಡಿ ಹೋಗಲಾಡಿಸಬಹುದು. ಮೊದಲನೆಯ ಮನೆಮದ್ದು ಅರ್ಧ ಚಮಚ ಜೇಶ್ಟಮಧು ಒಂದು ಚಮಚ ಜೇನುತಪ್ಪ ಮತ್ತು ಹತ್ತು ತುಳಸಿ ಎಳೆಗಳನ್ನು ತೆಗೆದುಕೊಳ್ಳಬೇಕು. ಈ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಿಶ್ರಣವನ್ನು ಮಾಡಬೇಕು. ಈ ಮಿಶ್ರಣವನ್ನು ಪ್ರತಿದಿನವು ಮೂರು ಬಾರಿ ಊಟ ಮಾಡಿದ ನಂತರ ಅರ್ಧ ಗಂಟೆ ಬಿಟ್ಟು ಸೇವಿಸಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮನ್ನೂ ಸುಲಭವಾಗಿ ನಿವಾರಣೆ ಮಾಡಬಹುದು. ಎರಡನೆಯ ಮನೆಮದ್ದು ಎರಡು ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಅರ್ಧ ಚಮಚ ಕಲ್ಲು ಸಕ್ಕರೆ ಮತ್ತು ಅರ್ಧ ಚಮಚ ಜೇನುತುಪ್ಪ ತೆಗೆದುಕೊಳ್ಳಬೇಕು. ಇವುಗಳನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮಿಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ. ಮೂರನೆಯ ಮನೆಮದ್ದು ಒಣಕೆಮ್ಮಿಗೆ ಲವಂಗ ತುಂಬಾ ಲಾಭದಾಯಕ ಪದಾರ್ಥ ಎಂದು

ಹೇಳಬಹುದು. ನಾಲ್ಕರಿಂದ ಐದು ಲವಂಗವನ್ನು ಮತ್ತು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು. ಲವಂಗವನ್ನು ಸ್ವಲ್ಪ ಹೊತ್ತು ಚೆನ್ನಾಗಿ ಹುರಿದು ಕೊಳ್ಳಬೇಕು. ಹುರಿದ ಲವಂಗದ ಜೊತೆಗೆ ತುಳಸಿ ಎಳೆಯನ್ನು ಸೇರಿಸಿ ಹಾಗೆಯೇ ಜಗಿದು ತಿನ್ನಬೇಕು. ಇದನ್ನು ದಿನಕ್ಕೆ ಎರಡು ಬಾರಿ ಮಾಡಬೇಕು. ಯಾವುದೇ ಸಮಸ್ಯೆ ಉಂಟಾಗುದಿಲ್ಲ. ಇದರಿಂದ ಶ್ವಾಸಕೋಶದಲ್ಲಿ ಇರುವ ಕಫವನ್ನು ಲೋಳೆ ರೂಪದಲ್ಲಿ ಹೊರ ಹಾಕಲು ಸಹಾಯ ಮಾಡುತ್ತದೆ. ಮತ್ತು ಒನಕೆಮ್ಮನ್ನು ಬೇಗನೆ ನಿವಾರಣೆ ಮಾಡುತ್ತದೆ. ಕೊನೆಯ ಮನೆಮದ್ದು ಈ ಮನೇ ಮದ್ದನ್ನು ಹೇಗೆ ಮಾಡಬೇಕೆಂದರೆ ಅರ್ಧ ಇಂಚು ಅರಿಶಿನ ಕೊಂಬನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಇದನ್ನು ರಾತ್ರಿ ಹೊತ್ತು ಮಲಗುವಾಗ ಬಾಯಲ್ಲಿ ಹಾಗೆ ಇಟ್ಟುಕೊಳ್ಳಬೇಕು. ನಂತರ ಇದನ್ನು ಜಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ. ಯಾವುದೇ ಮನೆಮದ್ದು ತಕ್ಷಣವೇ ಲಾಭ ಕೊಡುವುದಿಲ್ಲ. ಮೇಲೆ ಹೇಳಿರುವ ಎಲ್ಲ ಮನೆಮದ್ದನ್ನು ಒಂದು ವಾರ ಸತತವಾಗಿ ಮಾಡಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮನ್ನು ಮಾಯ ಮಾಡಬಹುದು. ಈ ಒಂದು ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here