ಕನಸು ಏಕೆ ಈ ರೀತಿ ಬೀಳುತ್ತೆ

101

ಕನಸಿನ ಬಗ್ಗೆ ನೀವು ಕೇಳಿರದ ಕುತೂಹಲಕಾರಿ ಮಾಹಿತಿಗಳು. ಸ್ನೇಹಿತರೆ ಕನಸುಗಳು ಯಾರಿಗೆ ಬಿದ್ದಿರಲ್ಲ ಹೇಳಿ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಸಾವಿರಾರು ಕನಸುಗಳನ್ನು ಕಾಣುತ್ತಾನೆ ಆದರೆ ನಿಮಗೆ ಬೀಳುವ ಕನಸುಗಳ ಬಗ್ಗೆ ನಿಮಗೆ ಎಷ್ಟು ಗೊತ್ತು ಕನಸುಗಳು ಏಕೆ ನೆನಪು ಇರಲ್ಲ ಕುರುಡರಿಗೆ ಕನಸು ಬೀಳುತ್ತಾ ಇಲ್ವಾ ಎಲ್ಲವನ್ನೂ ಹೇಳುತ್ತೇವೆ. ಕನಸು ಮನುಷ್ಯನ ಜೀವನದ ಅದ್ಬುತ ಗಳಲ್ಲಿ ಕನಸು ಕೂಡ ಒಂದು ಹಿಂದಿನ ನಾಗರಿಕತೆಯ ಕೃತಿಗಳಲ್ಲಿ ಕೂಡ ಕನಸುಗಳ ಬಗ್ಗೆ ಉಲ್ಲೇಖವಿದೆ. ಪ್ರಾಚೀನ ರೋಮ್ ಸಾಮ್ರಾಜ್ಯದಲ್ಲಿ ಕನಸುಗಳನ್ನು ದೇವರ ಸಂದೇಶಗಳು ಎಂದು ಭಾವಿಸುತ್ತಾ ಇದ್ದರು. ಎಷ್ಟೋ ವಿಜ್ಞಾನಿಗಳು ಹಾಗೂ ಕಲಾವಿದರು ಒಳ್ಳೆಯ ಐಡಿಯಾಗಳು ತನ್ನ ಕನಸಿನಿಂದ ಬಂದಿವೆ ಎಂದು ಹೇಳಿಕೊಂಡಿದ್ದಾರೆ ಹಾಗಾದರೆ ಕನಸಿನ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ತಿಳಿಯೋಣ.

ಕನಸಿನ 90 ಭಾಗವನ್ನು ನೀವು ಮರೆಯುವಿರಿ ಹೌದು ನೀವು ನಿದ್ದೆಯಿಂದ ಎದ್ದ ಐದು ನಿಮಿಷದಲ್ಲಿ ನಿಮ್ಮ ಕನಸಿನ ಅರ್ಧ ಭಾಗವನ್ನು ನೀವು ಮರೆತು ಬಿಡುವಿರಿ ಇನ್ನೈದು ನಿಮಿಷ ಆಗುವಷ್ಟರಲ್ಲಿ 90% ಭಾಗವನ್ನು ಕೂಡ ಮಾರೆಯುವಿರಿ. ಯಾರು ಹುಟ್ಟಿನ ನಂತರ ಕುರುಡ ಆಗಿರುತ್ತಾರೆ ಅಂತವರು ನಮ್ಮಂತೆಯೇ ಕನಸು ಕನಬಲ್ಲರು ಆದರೆ ಹುಟ್ಟು ಕುರುಡು ಕಾಣುವ ಕನಸಿನಲ್ಲಿ ಯಾವುದೇ ಚಿತ್ರಣಗಳು ಇರುವುದಿಲ್ಲ ಅವರು ಕಾಣುವ ಕನಸು ಬಾರಿ ಶಬ್ದ ವಾಸನೆ ಸ್ಪರ್ಶ ಹಾಗೂ ಭಾವನೆಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬ ಮನುಷ್ಯನೂ ಕನಸು ಕಾಣುತ್ತಾನೆ ಹೌದು ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ಮನುಷ್ಯ ಕೂಡ ಕಂಡು ಕಾಣುತ್ತಾನೆ ತೀರಾ ವಿಚಿತ್ರ ಮಾನಸಿಕ ಸಮಸ್ಯೆ ಇದ್ದವರಿಗೆ ಕೆಲವೊಮ್ಮೆ ಕನಸುಗಳು ಬೀಳುವುದಿಲ್ಲ. ಅಕಸ್ಮಾತ್ ನೀವು ನಿಮಗೆ ಕನಸು ಬೀಳುತ್ತಾ ಇಲ್ಲ ಎಂದು ಹೇಳಿದರೆ ಪ್ರಾಯಶಃ ನೀವು ಅವನ್ನು ಮರೆಯುತ್ತಾ ಇದ್ದೀರಿ ಎಂದು ಅರ್ಥ

ನೋಡಿದ ಮುಖಗಳೇ ಕಾಣುತ್ತವೆ. ಹೌದು ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ಮುಖವೂ ಕೂಡ ಯಾವುದೋ ಸಮಯದಲ್ಲಿ ನಾವು ಜೀವನದಲ್ಲಿ ನೋಡಿದ ಮುಖಗಳೇ ಆಗಿರುತ್ತದೆ ನಾವು ನಮ್ಮ ಜೀವನದಲ್ಲಿ ಹಲವಾರು ಮುಖಗಳನ್ನು ನೋಡುತ್ತಲೇ ಇರುವುದರಿಂದ ಕನಸಿನ ಫ್ಯಾಕ್ಟರ್ ಗೆ ಪಾತ್ರಗಳ ಕೊರತೆ ಇರುವುದಿಲ್ಲ ಪ್ರತಿಯೊಬ್ಬರೂ ಕಲರ್ ಫುಲ್ ಕನಸು ಕಾಣುವುದಿಲ್ಲ. ಹೌದು ಶೇಕಡಾ 12% ಜನರು ಕಾಣುವ ಕನಸು ಎಲ್ಲವೂ ಕಪ್ಪು ಬಿಳುಪಿನದು ಆಗಿರುತ್ತದೆ ಇದು 1915 ರಿಂದ 1950 ರವರೆಗಿನ ಮಾಹಿತಿ 1960 ರ ನಂತರ 12% ಇದ್ದ ಕಪ್ಪು ಬಿಳುಪು ಕನಸುಗಳು 4.4% ಗೆ ಇಳಿಕೆ ಆಗಿವೆ ಸಂಶೋಧನೆಗಳ ಪ್ರಕಾರ ಕಲರ್ ಟಿವಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಅನ್ವೇಷಣೆ ಇದಕ್ಕೆ ಕಾರಣ ಅಂತೆ ಪದೇ ಪದೇ ಯಾರಾದರೂ ಕನಸಿನಲ್ಲಿ ಬರುತ್ತಾ ಇದ್ದರೆ ಒಂದು ನೀವು ಅವರನ್ನು ಮಿಸ್ ಮಾಡಿ ಕೊಳ್ಳುತ್ತಾ ಇರುವಿರಿ ಅಥವಾ ಅವರನ್ನು ಮರೆಯಲು ಪ್ರಯತ್ನ ಪಡುತ್ತ ಇದ್ದೀರಿ ಎಂದು ಅರ್ಥ.

LEAVE A REPLY

Please enter your comment!
Please enter your name here