ನಮ್ಮ ಕರ್ನಾಟಕದ ರೈಲು ಮಾರ್ಗದ ಈಗಿನ ಸ್ಥಿತಿ ಗತಿ. ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡುವುದನ್ನು ನೀವೆಲ್ಲ ನೋಡಿರುತ್ತಿರ ಆದರೆ ಕರ್ನಾಟಕ ರೈಲ್ವೆ ಹೊಸ ಉಪಾಯವಲ್ಲ ರಾಜ್ಯ ಸರ್ಕಾರ ರೈಲ್ವೇ ವ್ಯವಸ್ಥೆಯನ್ನು ಕಲ್ಪಿಸುವುದು ಇವತ್ತಿಗೆ ಹೊಸದಾಗಿ ಕಂಡರು ಕರ್ನಾಟಕದಲ್ಲಿ ಸ್ವಾತಂತ್ರಕ್ಕೂ ಮುಂಚೆ ಇತಿಹಾಸಾನೆ ಇದೆ ಇವತ್ತಿನ ಈ ಲೇಖನದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರಿ ವಿಷಯವನ್ನು ತಿಳಿಯೋಣ ಬನ್ನಿ. 1877 ಮತ್ತು 78 ರ ಸಮಯ ಆಗ ಬಂದ ಭೀಕರ ಬರಗಾಲದಿಂದ ಮೈಸೂರು ಸಂಸ್ಥಾನ ಘಾಸಿಗೊಂಡಿತ್ತು ಇನ್ನು ಸಮಯದಲ್ಲಿ ಸಂತ್ರಸ್ತ ಜನರಿಗೆ ಉದ್ಯೋಗವನ್ನು ಕೊಡುವ ಸಲುವಾಗಿ ಬೆಂಗಳೂರು ಮತ್ತು ಮೈಸೂರು ನಡುವೆ 86 ಮೈಲಿ ಉದ್ದದ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ಯುರೋಪಿನ ಅಭಿಯಂತರರ ಸಹಾಯದೊಂದಿಗೆ ಮೈಸೂರು ಸ್ಟೇಟ್ ರೈಲ್ವೇಸ್ ಈ ಒಂದು ಕಾರ್ಯವನ್ನು ಕೈಗೆ ತೆಗೆದುಕೊಂಡಿತು ಅದು ಕನ್ನಡ ನಾಡಿನ ಮೊದಲ ರೈಲುಮಾರ್ಗವನ್ನು ಕನ್ನಡಿಗರೇ ಮುಂದಾಗಿ ಕಟ್ಟಿಕೊಂಡ ಪ್ರಸಂಗವಾಗಿತ್ತು
ಈ ಮಾರ್ಗ 1884 ರಲ್ಲಿ ಜನಸಂಚಾರಕ್ಕೆ ದಾರಿಯಾಯಿತು ನಂತರ ಬೆಂಗಳೂರು ಗುಬ್ಬಿ ನಡುವಿನ 54 ಮೈಲಿ ಉದ್ದದ ಮಾರ್ಗವನ್ನು ಇದೆ ಸಂಸ್ಥೆ ನಿರ್ಮಾಣ ಮಾಡಿತು ಆದರೆ ಬರಗಾಲದ ಕಾರಣ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತೆರಬೇಕಿದ್ದ 80 ಲಕ್ಷಬರ ಸಾಲದ ಹೊರೆ ತೀರಿಸಲಾಗದೆ ಬ್ರಿಟಿಷ್ ಸರ್ಕಾರದ ಅಣತೆಯಂತೆ ಸದರನ್ ಮ್ಹರಾಟ ರೈಲ್ವೆ ಕಂಪನಿಗೆ 140 ಮೈಲಿ ಉದ್ದದ ಪೂರ್ತಿ ರೈಲು ವ್ಯವಸ್ಥೆಯನ್ನು ಮೈಸೂರು ಸರ್ಕಾರ ಫರಭಾರೆ ಮಾಡಬೇಕಾಯಿತು ಇನ್ನು ಫರಬಾರೆಯಿಂದ ಬಂದ ಹಣದಲ್ಲಿ ಬರಸಾಲ ತೀರಿಸಿಕೊಂಡು ಗುಬ್ಬಿ ಹರಿಹರದ ನಡುವಿನ ರೈಲು ಮಾರ್ಗವನ್ನು ಆರಂಭಿಸಲಾಯಿತು 1892 ರಿಂದ 1899 ರ ನಡುವೆ 7 ವರ್ಷಗಳಲ್ಲಿ ಬೆಂಗಳೂರು ಹಿಂದುಪುರ ಕೆಜಿಎಫ್ ಬಿರುರೂ ಶಿವಮೊಗ್ಗದ ನಡುವಿನ 99 ಮೈಲಿ ಮಾರ್ಗ ನಿರ್ಮಾಣವಾಯಿತು. ನಂತರ 1912 ರಿಂದ 1918 ರ ನಡುವೆ 6 ವರ್ಷದಲ್ಲಿ ಮೈಸೂರು ಅರಸೀಕೆರೆ ಚಿಕ್ಕಬಳ್ಳಾಪುರ ಬೆಂಗಳೂರು ತರೀಕೆರೆ ನರಸಿಂಹರಾಜಪುರದ ನಡುವಿನ 231 ಮೈಲಿ ಉದ್ದದ ರೈಲುಮಾರ್ಗವನ್ನು ಮಿಂಚಿನ ವೇಗದಲ್ಲಿ ಮೈಸೂರು ರೈಲು ಸಂಸ್ಥೆ ಪೂರ್ತಿಗೊಳಿಸಿತು.
ಜೂನ್ 30, 1940 ರ ಹೊತ್ತಿಗೆ ಮೈಸೂರು ಸಂಸ್ಥಾನದಲ್ಲಿ ಒಟ್ಟು ಅಂದಾಜು 1200 ಕಿಲೋಮೀಟರ್ ಉದ್ದದ ರೈಲುಮಾರ್ಗವಿತ್ತು ಬ್ರಿಟಿಷರಿಗೆ ಕಪ್ಪ ಕಟ್ಟಿಕೊಂಡು ಕಷ್ಟದಲ್ಲಿದ್ದ ಸರ್ಕಾರ ಒಂದು ತನ್ನ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವ ಏಕೈಕ ಕಾಳಜಿಯಿಂದ ಇಂತಹದ್ದೊಂದು ಅದ್ಭುತವಾದ ವ್ಯವಸ್ಥೆ ಕಟ್ಟಿ ತೋರಿಸಿತು ಇತಿಹಾಸದಲ್ಲಿ ಕನ್ನಡಿಗರೆಲ್ಲರು ಹೆಮ್ಮೆ ಪಡಬೇಕಾದ ವಿಚಾರ ಇದಾಗಿದೆ. ಇನ್ನು ಸ್ವಾತಂತ್ರ್ಯದ ಹೊತ್ತಿಗೆ ಇಷ್ಟೊಂದು ಪ್ರಗತಿ ಸಾಧಿಸಿದ ನಮ್ಮ ನಾಡು ಇಷ್ಟೋತ್ತಿಗೆ ರೈಲು ಮಾರ್ಗದ ವಿಚಾರದಲ್ಲಿ ಭಾರತದಲ್ಲೇ ಮುಂಚೂಣಿಯಲ್ಲಿ ಇರಬೇಕಿತ್ತು ಆದರೆ ಆಗಿದ್ದೆ ಬೇರೆ ಇಂದು ಕರ್ನಾಟಕದಲ್ಲಿರುವ ರೈಲು ಮಾರ್ಗದ ಅಳತೆ ಸರಿಸುಮಾರು 3100 ಕಿಲೋಮೀಟರ್ ಅಂತ ಹೇಳಲಾಗುತ್ತದೆ. ಸುಮಾರು 7 ಮತ್ತು 8 ದಶಕಗಳ ಹಿಂದೆನೆ ಉತ್ತರ ಕರ್ನಾಟಕ ಕರವಳಿಯನ್ನು ಹೊರತುಪಡಿಸಿ ಮೈಸೂರು ಸಂಸ್ಥಾನದಲ್ಲೇ ಈಗಿರುವ ಮಾರ್ಗದ 40% ಮಾರ್ಗ ನಿರ್ಮಾಣವಾಯಿತು
ಅಂದರೆ ಇನ್ನು ಸ್ವಾತಂತ್ರ್ಯ ನಂತರ ರೈಲು ಮಾರ್ಗದ ವಿಷಯದಲ್ಲಿ ಕರ್ನಾಟಕ ಎಂತಹ ಅನ್ಯಾಯಕ್ಕೀಡಾಗಿದೆ ಎನ್ನುವುದನ್ನು ಅಂದಾಜಿಸಬಹುದು. 1951 ರಲ್ಲಿ ಮೈಸೂರಿನ ರೈಲು ವ್ಯವಸ್ಥೆ ಎಲ್ಲವೂ ಭಾರತೀಯ ರೈಲಿನಲ್ಲಿ ವಿಲೀನವಾದ ನಂತರ ನಮ್ಮ ನಾಡಿಗೆ ಬೇಕಾದ ರೈಲು ಮಾರ್ಗದ ಮೇಲಿದ್ದ ನಮ್ಮ ಅಧಿಕಾರವೆಲ್ಲವು ಕೈಬಿಟ್ಟುಹೋಗಿ ಎಲ್ಲದಕ್ಕೂ ದೆಹಲಿಯ ರೈಲು ಮಂತ್ರಾಲಯದ ಬಾಗಿಲನ್ನು ಕಾಯಬೇಕಾಯಿತು ಇವತ್ತು ಕರ್ನಾಟಕದಲ್ಲಿ ಸುಮಾರು 81 ತಾಲೂಕುಗಳಲ್ಲಿ ರೈಲು ಸಂಪರ್ಕವಿಲ್ಲ ಅಂತ ಹೇಳಲಾಗುತ್ತದೆ. ಕರ್ನಾಟಕ ದಕ್ಷಿಣ ಭಾರತದಲ್ಲಿ ಅತ್ಯಂತ ಕಳಪೆ ರೈಲು ಸೌಕರ್ಯವಿರುವ ರಾಜ್ಯ ಎನಿಸಿಕೊಂಡಿದೆ. ಈ ರಸ್ತೆ ಸಾರಿಗೆಗೆ ಕೆ ಎಸ್ ಆರ್ ಟಿ ಸಿ ಇರುವಂತೆ ರೈಲು ಸಾರಿಗೆಗೆ ಕರ್ನಾಟಕ ರಾಜ್ಯ ಸರ್ಕಾರವೆ ನಡೆಸುವಂತಹ ಕರ್ನಾಟಕ ರೈಲ್ವೇಸ್ ಎನ್ನುವ ವ್ಯವಸ್ಥೆ ಇದ್ದರೆ ಕರ್ನಾಟಕದೊಳಗಿನ ರೈಲು ವ್ಯವಸ್ಥೆ ಸಾಕಷ್ಟು ಸುಧಾರಿಸುತ್ತದೆ.