ಕಲಿಯುಗದ ಬಗ್ಗೆ ಕೃಷ್ಣ ಹೇಳಿದ್ದು ಏನು ಕಲಿಯುಗದ ಬಗ್ಗೆ ಪಾಂಡವರ ಗೊಂದಲ ಪರಿಹಾರ ಮಾಡಿದ್ದು ಹೇಗೆ ಕೃಷ್ಣ ಕಲಿಯುಗದ ಬಗ್ಗೆ ತಿಳಿಯಲು ಪಾಂಡವರನ್ನು ಕಾಡಿಗೆ ಕಳುಹಿಸಿದ್ದು ಏಕೆ ಕೃಷ್ಣ ಸ್ನೇಹಿತರೆ ಶ್ರೀ ಕೃಷ್ಣ ಮಹಾ ಭಾರತದ ಸಮಯದಲ್ಲಿ ದ್ವಾಪರ ಯುಗದ ನಂತರ ಬರುವ ಕಲಿಯುಗ ಹೇಗೆ ಇರುತ್ತದೆ ಎಂದು ಹೇಳಿದ್ದ ಕಲಿಯುಗದಲ್ಲಿ ಜನ ಹೇಗಿರುತ್ತಾರೆ ಹೇಗೆ ಜೀವನ ಕಳೆಯುತ್ತಾರೆ ಜನರ ವರ್ತನೆ ಹೇಗಿರುತ್ತದೆ ಎಲ್ಲವನ್ನು ಪಂಚ ಪಾಂಡವರಿಗೆ ಪಂಚ ಉದಾಹರಣೆಯ ಮೂಲಕ ಹೇಳಿದ್ದನು ಅದನ್ನು ನಾವು ಈ ಲೇಖನದಲ್ಲಿ ಹೇಳುತ್ತೇವೆ ನೋಡಿ. ಒಂದು ದಿನ ಪಂಚ ಪಾಂಡವರಿಗೆ ದ್ವಾಪರ ಯುಗದ ನಂತರ ಬರುವ ಕಲಿಯುಗ ಹೇಗಿರಬಹುದು ಎಂಬ ತಿಳಿದುಕೊಳ್ಳುವ ಆಸೆ ಆಗುತ್ತದೆ ಹೀಗಾಗಿ ತಮ್ಮ ಅನುಮಾನವನ್ನು ಶ್ರೀ ಕೃಷ್ಣನ ಬಳಿ ಹೇಳಿಕೊಳ್ಳುವರು ಮನುಷ್ಯರು ಹೇಗಿರುತ್ತಾರೆ ಮನುಷ್ಯರು ವಿಚಾರ ಧಾರೆಗಳು ಹೇಗಿರುತ್ತದೆ
ಮೋಕ್ಷದ ಹಾದಿ ಯಾವುದು ಎಂದು ಕೇಳುತ್ತಾರೆ ಆಗ ಶ್ರೀ ಕೃಷ್ಣ ಪಾಂಡವರಿಗೆ ಕಾಡಿಗೆ ಹೋಗಲು ಹೇಳುತ್ತಾನೆ ಜೊತೆಗೆ ಅಲ್ಲಿ ನೀವು ಏನೇ ನೋಡಿದರೂ ಸರಿಯಾಗಿ ತಿಳಿಸಿ ಕೊಂಡು ಬಂದು ನನಗೆ ಹೇಳಬೇಕು ಎಂದು ಸೂಚಿಸುತ್ತಾನೆ ಆಗ ಪಂಚ ಸಹೋದರರು ಅರಣ್ಯಕ್ಕೆ ಹೋಗುತ್ತಾರೆ ನಂತರ ಸ್ವಲ್ಪ ಸುತ್ತಾಡಿ ಎಲ್ಲರೂ ಒಂದು ವಿಚಿತ್ರ ನೋಡಿಕೊಂಡು ವಾಪಸ್ ಅರಣ್ಯಕ್ಕೆ ಬರುತ್ತಾರೆ. ಶ್ರೀ ಕೃಷ್ಣ ಮೊದಲಿಗೆ ಯುಧಿಷ್ಠಿರ ಮೊದಲು ನೀನು ಏನು ನೋಡಿದೆ ಹೇಳಿ ಎಂದು ಹೇಳುತ್ತಾನೆ ಅದಕ್ಕೆ ಯುಧಿಷ್ಠಿರ ನನೈಬೇರದು ಸೊಂಡಿಲಿನ ಆನೆ ತಂದಿರುವೆ ಎಂದು ಹೇಳುತ್ತಾನೆ ಅದಕ್ಕೆ ಉತ್ತರಿಸಿದ ಶ್ರೀ ಕೃಷ್ಣ ಆನೆಯ ರೀತಿಯಲ್ಲಿ ಮನುಷ್ಯರ ಬುದ್ಧಿ ಇರುತ್ತದೆ ಕಲಿಯುಗದಲ್ಲಿ ಆಳುವವರು ಪ್ರಜೆಗಳನ್ನು ಎಲ್ಲಾ ರೀತಿಯ ಶೋಷಣೆ ಮಾಡುತ್ತಾರೆ ಎಂದು ಹೇಳುತ್ತಾನೆ.
ಭೀಮ ಕಾಡಿಗೆ ಹೋದಾಗಲೂ ಒಂದು ವಿಚಿತ್ರ ನೋಡಿಕೊಂಡು ಬಂದಿದ್ದ ಹಸುವೊಂದು ತನ್ನ ಮರಿಯನ್ನು ಯಾವ ರೀತಿ ನೆಕ್ಕುತ್ತಾ ಇತ್ತು ಎಂದರೆ ಮಗುವಿನ ಚರ್ಮ ಹರಿದು ರಕ್ತವೇ ಬರುತ್ತಾ ಇತ್ತು ಇದನ್ನು ತಮ್ಮ ಭೀಮನ ಬಳಿ ಆಶ್ಚರ್ಯ ದಿಂದ ಹೇಳುತ್ತಾನೆ. ಆಗ ಉತ್ತರಿಸುವ ಕೃಷ್ಣ ಹೇ ಭೀಮ ಕಲಿಯುಗದಲ್ಲಿ ಮನುಷ್ಯರು ತಮ್ಮ ಮಕ್ಕಳನ್ನು ಯಾವ ಮಟ್ಟಿಗೆ ಪ್ರೀತಿಸುತ್ತಾರೆ ಎಂದರೆ ಮಕ್ಕಳ ಮಾನಸಿಕ ಬೆಳವಣಿಗೆಗೆ ನಿಂತು ಹೋಗುತ್ತದೆ ಬೇರೆಯವರ ಮಕ್ಕಳು ಸಾಧು ಸಂತ ಆದರೆ ಆಶೀರ್ವಾದ ಪಡೆಯುತ್ತಾರೆ ಅದೇ ತನ್ನ ಮಕ್ಕಳು ಸಾಧು ಸನ್ಯಾಸಿ ಆದರೆ ದುಃಖ ಪಡುತ್ತಾರೆ ತನ್ನ ಮಗ ಯಾವ ಹಾದಿಯಲ್ಲಿ ಸಾಗುತ್ತಾ ಇದ್ದಾರೆ ಎಂದು ಅಳುತ್ತಾರೆ ಕಲಿಯುಗದಲ್ಲಿ ಮನುಷ್ಯರು ಮಕ್ಕಳನ್ನು ಕೇವಲ ಪ್ರೀತಿ ಮತ್ತು ಬಂಧನದಲ್ಲಿ ಬೆಸೆದು ಇಡುತ್ತಾರೆ ಈ ಬಂಧನದಲ್ಲಿ ಮನುಷ್ಯ ಬೆಂದು ಅಂತ್ಯ ಆಗುತ್ತದೆ ಎಂದು ಕೃಷ್ಣ ಹೇಳುತ್ತಾನೆ.