ಕಲ್ಲು ಸಕ್ಕರೆಯಲ್ಲಿದೆ ನಿಮ್ಮ ದೇಹದಕ್ಕೆ ಬೇಕಾಗುವ ಪೌಷ್ಟಿಕಾಂಶ

41

ಕಲ್ಲು ಸಕ್ಕರೆ ಒಂದು ಮಿಠಾಯಿ ಖನಿಜಾಂಶ ವಾಗಿದ್ದು ಇದು ಖಾದ್ಯ ಮತ್ತು ರುಚಿಕರವಾಗಿರುತ್ತದೆ. ಆಯುರ್ವೇದಿಕ್ ಪ್ರಕಾರ ಕಲ್ಲು ಸಕ್ಕರೆಗಿಂತ ಶೀತ ವಾಗಿರುತ್ತದೆ. ಮತ್ತು ಸಾಮಾನ್ಯವಾದ ಸಕ್ಕರೆಗಿಂತ ಹೆಚ್ಚು ಆರೋಗ್ಯಕರ ವಾಗಿರುತ್ತದೆ. ಏಕೆಂದರೆ ಕಲ್ಲು ಸಕ್ಕರೆ ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ. ಇದರಲ್ಲಿ ಜೀವಸತ್ವಗಳು ಖನಿಜಗಳು ಅಮೈನೋ ಆಮ್ಲಗಳು ಹೆಚ್ಚಾಗಿ ಇರುತ್ತದೆ. ಈ ಕಲ್ಲು ಸಕ್ಕರೆಯನ್ನು ಹೆಚ್ಚಾಗಿ ಸಸ್ಯಾಹಾರಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದರಲ್ಲಿ ವಿಟಮಿನ್ ಬಿ12 ಹೊಂದಿರುತ್ತದೆ. ಹಾಗಾದ್ರೆ ಸ್ನೇಹಿತರೆ ಕೃತಕ ಸಕ್ಕರೆ ಮತ್ತು ನೈಸರ್ಗಕವಾಗಿ ಸಿಗುವ ಸಕ್ಕರೆಯ ಲಾಭಗಳನ್ನು ನೋಡೋಣ. ಈ ಮಾಹಿತಿಯನ್ನು ಕೊನೆವರೆಗೆ ಓದಿ. ತುಂಬಾ ಜನರು ಅಂಗಡಿ ಸಿಗುವ ಕೃತಕ ಸಕ್ಕರೆಯನ್ನು ಕಲ್ಲು ಸಕ್ಕರೆ ಎಂದು ಕೊಂಡಿದ್ದಾರೆ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಇರುತ್ತದೆ. ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಕಲ್ಲು ಸಕ್ಕರೆಯನ್ನು ಬಳಸುತ್ತಾರೆ ಹೊರತು ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆಯನ್ನು ಬಳಸುವುದಿಲ್ಲ. ಇಲ್ಲವಾದರೆ ಸಿಹಿ ಜಾಗದಲ್ಲಿ ಜೇನುತುಪ್ಪ ಅಥವಾ ಬೆಲ್ಲವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಕೃತಕ ಸಕ್ಕರೆಯನ್ನು ಬಳಸುವುದಿಲ್ಲ.

ಏಕೆಂದರೆ ಅಂಗಡಿಯಲ್ಲಿ ಸಿಗುವ ಸಕ್ಕರೆಯಲ್ಲಿ ಕೆಮಿಕಲ್ಸ್ ಅನ್ನು ಬಳಸಿರುತ್ತಾರೆ. ಮತ್ತು ಅದನ್ನು ರಿಫೈನ್ ಮಾಡಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸದಿಂದ ಬೆಲ್ಲ ಸಕ್ಕರೆ ಕಲ್ಲು ಸಕ್ಕರೆಯನ್ನು ತಯಾರಿಸುತ್ತಾರೆ. ಇದರಲ್ಲಿ ಕಲ್ಲು ಸಕ್ಕರೆ ಮತ್ತು ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅಂಗಡಿಯಲ್ಲಿ ಸಿಗುವ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಇದು ಸಕ್ಕರೆ ಕಾಯಿಲೆಗೆ ದಾರಿ ಮಾಡಿ ಕೊಡುತ್ತದೆ. ಏಕೆಂದರೆ ಅಂಗಡಿಯಲ್ಲಿ ಸಿಗುವ ಸಕ್ಕರೆಯಲ್ಲಿ ಕೆಟ್ಟ ಕೆಮಿಕಲ್ಸ್ ಅನ್ನು ಸೇರಿಸಿರುತ್ತಾರೆ. ಸಕ್ಕರೆ ತುಂಬಾ ಬೆಳ್ಳಗೆ ಕಾಣಲು ಮತ್ತು ನೋಡಲು ತುಂಬಾ ಆರ್ಷಕವಾಗಿ ಕಾಣಲು ಸಕ್ಕರೆಯನ್ನು ಪೋಲಿಷಿಂಗ್ ಮಾಡುತ್ತಾರೆ. ಈ ಪೋಲಿಷಿಂಗ್ ವಿಧಾನವೇ ರಿಫೈನ್ ಪ್ರೋಸೆಸ್ ಎಂದು ಕರೆಯುತ್ತಾರೆ. ಪದೇ ಪದೇ ರಿಫೈನ್ ಮಾಡಿರುವ ಕಲುಷಿತ ಸಕ್ಕರೆ ಅಥವಾ ಬಿಳಿ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಆದರೆ ಕಲ್ಲು ಸಕ್ಕರೆ ವಿಷಯಕ್ಕೆ ಬಂದಾಗ ಇದು ರಿಫೈನ್ ಮಾಡದೆ ಇರುವ ಆಹಾರ ಪದಾರ್ಥಎಂದು ಹೇಳಬಹುದು. ಕಬ್ಬಿನ ರಸದಲ್ಲಿ ಇದ್ದ

ನಾರಿನ ಅಂಶ ಅಥವಾ ಫೈಬರ್ ಅಂಶ ಈ ಕಲ್ಲು ಸಕ್ಕರೆಯಲ್ಲಿ ಅಡಗಿರುತ್ತದೆ. ಈ ಕಲ್ಲು ಸಕ್ಕರೆ ಬಿಳಿ ಬಣ್ಣದಾಗಿ ಕಾಣಿಸಿಕೊಳ್ಳಲು ಇದರಲ್ಲಿ ಹಾಲನ್ನು ಬೆರೆಸುತ್ತಾರೆ. ಹಾಗೇ ಆಯುರ್ವೇದಿಕ್ ನಲ್ಲಿ ಹೇಳುತ್ತಾರೆ ಕಲ್ಲು ಸಕ್ಕರೆ ಒಂದು ತಂಪು ಸ್ವಭಾವ ಆಗಿರುತ್ತದೆ. ಇದು ಪಿತ್ತ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು. ಪಿತ್ತ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದಲ್ಲಿ ಕಲ್ಲು ಸಕ್ಕರೆಯನ್ನು ಬೆರೆಸಿ ಬಳಸಹುದಾಗಿದೆ. ಮತ್ತು ಶ್ವಾಸಕೋಶದಲ್ಲಿ ಪಿತ್ತ ಹೆಚ್ಚಾಗಿದ್ದಾರೆ ಬೆಲ್ಲವನ್ನು ಸೇವಿಸಿದರೆ ಪಿತ್ತ ಸಮಸ್ಯೆಯನ್ನು ಹೋಗಲಾಡಿಸಬಹುದು. ಬೆಲ್ಲ ಸಾಮಾನ್ಯವಾಗಿ ಉಷ್ಣ ಸ್ವಭಾವವನ್ನು ಹೊಂದಿರುತ್ತದೆ. ಈ ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳುವಾಗ ನಾವು ಗಮನದಲ್ಲಿ ಇಟ್ಟುಕೊಳ್ಳುವ ವಿಷಯ ಏನೆಂದರೆ ಚಿಕ್ಕ ಚಿಕ್ಕ ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಬಾರದು. ಚಿಕ್ಕದಾಗಿ ಇರುವ ಕಲ್ಲು ಸಕ್ಕರೆಯು, ಬಿಳಿ ಸಕ್ಕರೆ ಅಥವಾ ಕಲಬೆರಕೆ ಮಾಡಿರುವ ಸಕ್ಕರೆಯಾಗಿರುತ್ತದೆ. ಕಲ್ಲು ಸಕ್ಕರೆಗೆ ಯಾವುದೇ ಆಕಾರ ಇರುವುದಿಲ್ಲ. ಅದರಿಂದ ದೊಡ್ಡ ದೊಡ್ಡ ಗಾತ್ರದ ಕಲ್ಲು ಸಕ್ಕರೆಯನ್ನು ಹೆಚ್ಚಾಗಿ ಸೇವಿಸಬೇಕು. ಈ ಒಂದು ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here