ಕಿಡ್ನಿ ಸಮಸ್ಯೆ ಉಂಟಾದಾಗ ಯಾವ ಆಹಾರವನ್ನು ಸೇವಿಸಬೇಕು

98

ಕಿಡ್ನಿ ಸಮಸ್ಯೆ ಉಂಟಾದಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಸೇವಿಸಬಾರದು. ಕಿಡ್ನಿಯಲ್ಲಿ ಮುಖ್ಯವಾಗಿ ಕಲ್ಲುಗಳು ಉತ್ಪತ್ತಿಯಾಗಲು ಕಾರಣವೇನೆಂದರೆ ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಸಿಡ್ ಮತ್ತು ಕ್ಯಾಲ್ಸಿಯಂ ಒಕ್ಸಿಲೇಟರ್. ದೇಹದಲ್ಲಿ ಅನಗತ್ಯವಾಗಿ ಹೆಚ್ಚಾಗುತ್ತಿರುವ ಖನಿಜಾಂಶಗಳನ್ನು ಹೊರಹಾಕುವ ಕಾರ್ಯವನ್ನು ಈ ಕಿಡ್ನಿ ನಿರ್ವಹಿಸುತ್ತದೆ. ಆದರೆ ಕಿಡ್ನಿ ಕೆಲಸಗಳು ಸರಿಯಾಗಿ ಆಗದೇ ಇದ್ದಾಗ ದೇಹದಲ್ಲಿ ಕಲ್ಲುಗಳು ಉಂಟಾಗುತ್ತವೆ. ಈ ಲೇಖನದಲ್ಲಿ ಕಿಡ್ನಿ ಸಮಸ್ಯೆ ಇರುವವರಿಗೆ ಯಾವ ರೀತಿಯ ಆಹಾರದ ಕ್ರಮಗಳನ್ನು ಕೈಗೊಳ್ಳುವುದು ಎಂದು ತಿಳಿಯೋಣ. ಕಿಡ್ನಿಯಲ್ಲಿ ಕಲ್ಲುಗಳು ಉತ್ಪತ್ತಿಯಾದಾಗ ಈ ಆಹಾರವನ್ನು ಕಡ್ಡಾಯವಾಗಿ ಸೇವಿಸಬೇಕು. ಅದರಲ್ಲಿ ಹಣ್ಣು ಮತ್ತು ತರಕಾರಿಗಳಲ್ಲಿ ಹೇಳುವುದೆಂದರೆ ನುಗ್ಗೆ ಸೊಪ್ಪು, ನುಗ್ಗೆಕಾಯಿ, ಕಿಡ್ನಿಬೀನ್ಸ್ ಬ್ಲಾಕ್ ಬೀನ್ಸ್ ಹುರಳಿ ಕಟ್ಟು ಸಾರು ಕ್ಯಾರೆಟ್ ಬಾಳೆ ಹೂವಿನ ಪಲ್ಯ ಬಾಳೆ ದಿಂಡುಪಲ್ಯ. ಹಾಗಲಕಾಯಿ ಮತ್ತು ಹಸಿ ಈರುಳ್ಳಿ ಈ ಎಲ್ಲ ತರಕಾರಿಗಳನ್ನು ಊಟದ ಜೊತೆಗೆ ಸೇವಿಸಬೇಕು. ಇನ್ನು ಹಣ್ಣುಗಳ ಬಗ್ಗೆ ಹೇಳುವುದೆಂದರೆ ಅನಾನಸ್ ಹಣ್ಣು ಸೇಬು ಹಣ್ಣು, ಮಾವಿನ ಹಣ್ಣು ಮತ್ತು ಮಾವಿನ ಎಲೆಯ ಟೀ ಮಾಡಿ ಕುಡಿಯಬೇಕು. ಹಾಗೆಯೇ ಪಪ್ಪಾಯಿ ಹಣ್ಣು

ಕಲ್ಲಂಗಡಿ ಹಣ್ಣು ಖರ್ಬೋಜ ಹಣ್ಣು ದಾಳಿಂಬೆ ಹಣ್ಣು ಮತ್ತು ಎಳೆನೀರು ಈ ಎಲ್ಲ ಹಣ್ಣುಗಳು ಅತ್ಯಗತ್ಯವಾಗಿದೆ. ಧಾನ್ಯಗಳಲ್ಲಿ ಹೇಳುವುದಾದರೆ ಬಾರ್ಲಿ ಅಕ್ಕಿ ಅಗಸೆ ಬೀಜ ಎಳ್ಳು ಜೋಳ ಮತ್ತು ಸಿರಿ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಮತ್ತು ಒಣಹಣ್ಣುಗಳಲ್ಲಿ ಹೇಳುವುದಾದರೆ ಕುಂಬಳ ಕಾಯಿ ಬೀಜ ಈ ಬೀಜವನ್ನು ಕಿಡ್ನಿ ಸಮಸ್ಯೆ ಉಂಟಾದಾಗ ತಿನ್ನುವುದು ತುಂಬಾ ಉತ್ತಮ. ಮತ್ತು ನಿಂಬೆ ಹಣ್ಣಿನ ರಸ ಅಥವಾ ನಿಂಬೆ ಹಣ್ಣಿನ ಜ್ಯೂಸ್ ಮಾಡಿಕೊಂಡು ಅದರಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಸೇರಿಸಿ ಕುಡಿಯಬೇಕು. ಇದನ್ನು ದಿನಕ್ಕೆ ಒಂದು ಬಾರಿ ಮಾಡಬೇಕು. ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಅಥವಾ ಸಿಟ್ರಿಕ್ ಆಸಿಡ್ ಅಂಶ ಕಿಡ್ನಿಯಲ್ಲಿ ಆಗಿರುವ ಕಲ್ಲುಗಳನ್ನು ಪುಡಿ ಪುಡಿಯಾಗಿ ಮಾಡಿ ಮೂತ್ರದ ಮೂಲಕ ಹೊರ ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಬಾಳೆಹಣ್ಣಿನ ರಸ ಮತ್ತು ದಾಳಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಆಗುವ ಕಿಡ್ನಿ ಸಮಸ್ಯೆಯನ್ನು ದೂರ ಮಾಡುತ್ತದೆ. ಕಿಡ್ನಿಯಲ್ಲಿ ಕಲ್ಲುಗಳು ಉಂಟಾದಾಗ ತುಳಸಿ ಎಲೆಗಳು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ದಿನಕ್ಕೆ ಹತ್ತರಿಂದ ಹನ್ನೆರಡು ತುಳಸಿ ಎಲೆಗಳ ಜೊತೆಗೆ ಜೇನುತುಪ್ಪವನ್ನು ಬೆರೆಸಿ ತಿನ್ನಬೇಕು. ಇದರಿಂದ ಕಿಡ್ನಿಯಲ್ಲಿ ಆಗಿರುವ

ಕಲ್ಲುಗಳನ್ನು ಪುಡಿ ಮಾಡಿ ಮೂತ್ರದ ರೂಪದಲ್ಲಿ ಹೊರಹಾಕುತ್ತದೆ. ಈ ಎಲ್ಲ ಆಹಾರಗಳನ್ನು ಕಿಡ್ನಿ ಸಮಸ್ಯೆ ದೂರ ಮಾಡಲು ಸೇವಿಸಬೇಕು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಕೆಲವು ಆಹಾರಗಳಿಂದ ದೂರವಿರಬೇಕು. ಇಲ್ಲವಾದರೆ ಕಿಡ್ನಿ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾದರೆ ಆ ಆಹಾರಗಳು ಯಾವುದು ಎಂದು ನೋಡೋಣ. ಫಾಸ್ಫರಿಕ್ ಆಸಿಡ್ ಇರುವ ತಂಪು ಪಾನೀಯವನ್ನು ಕಡ್ಡಾಯವಾಗಿ ನಿರ್ಲಕ್ಷಿಸಬೇಕು. ಜೊತೆಗೆ ಆಲ್ಕೋಹಾಲ್ ಮಧ್ಯಪಾನ ಸ್ಮೋಕಿಂಗ ಹವ್ಯಾಸಗಳನ್ನು ನಿಲ್ಲಿಸಬೇಕು. ಹಾಗೆಯೇ ಮೈದಾ ಹಿಟ್ಟಿನಿಂದ ಮಾಡಿರುವ ಯಾವುದೇ ಆಹಾರ ಪದಾರ್ಥಗಳನ್ನೂ ತಿನ್ನಬಾರದು. ಮುಖ್ಯವಾಗಿ ಬೇಕರಿ ತಿನಿಸುಗಳಿಂದ ದೂರವಿರಬೇಕು. ಹೆಚ್ಚು ಖಾರ ಮತ್ತು ಉಪ್ಪಿನ ಆಹಾರವನ್ನು ಕೂಡ ತ್ಯಜಿಸಬೇಕು. ಜೊತೆಗೆ ಮಾಂಸಹಾರಿ ಆಹಾರವನ್ನು ಕಡಿಮೆ ಮಾಡಬೇಕು. ಕಿಡ್ನಿಯಲ್ಲಿ ಕಲ್ಲುಗಳಾದಾಗ ಕೆಲವು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಆಗುತ್ತದೆ. ಅವುಗಳಲ್ಲಿ ಆಲೂಗಡ್ಡೆ, ಬದನೆಕಾಯಿ, ಬಸಳೆ ಸೊಪ್ಪು, ಕೆಂಪು ಮೆಣಸಿನಕಾಯಿ ಟೊಮ್ಯಾಟೋ ಪಾಲಕ್ ಸೊಪ್ಪು ಎಲೆಕೋಸು, ಹಸಿರು ಬಟಾಣಿ ಬೂದು ಕುಂಬಳಕಾಯಿ, ಅಣಬೆ ಈ ಎಲ್ಲ ತರಕಾರಿಗಳನ್ನು ಸೇವಿಸಬಾರದು. ಹಾಗೆಯೇ ಹುಳಿ ಮೊಸರು, ಒಣದ್ರಾಕ್ಷಿ ಮತ್ತು ಉದ್ದಿನ ಬೇಳೆಯನ್ನು ಸೇವಿಸಬಾರದು. ಈ ಆಹಾರಗಳಿಂದ ದೂರವಿದ್ದರೆ ಕಿಡ್ನಿ ಸಮಸ್ಯೆ ಮಾಯವಾಗುತ್ತದೆ. ಈ ಎಲ್ಲ ಆಹಾರಗಳನ್ನು ತಿನ್ನುವುದರಿಂದ ಕಿಡ್ನಿ ಸಮಸ್ಯೆ ಪರಿಹಾರವಾಗುತ್ತದೆ. ಮತ್ತು ಕಿಡ್ನಿಯಲ್ಲಿ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ.

LEAVE A REPLY

Please enter your comment!
Please enter your name here