ಈಗಿನ ದಿನಗಳಲ್ಲಿ ಕೀಲು ನೋವು ಎಲ್ಲ ವಯಸ್ಸಿನಲ್ಲೂ ಕಾಡುವಂತಹ ಒಂದು ದೊಡ್ಡ ಸಮಸ್ಯೆ ಕಾಲು ಕೈ ಗಳು ಕುತ್ತಿಗೆ ಕೀಲುಗಳು ತುಂಬಾ ನೋವಾದಾಗ ಕೆಲವು ಸೂಚನೆಗಳು ನಮಗೆ ನೀಡುತ್ತವೆ ಅವುಗಳನ್ನು ನಾವು ಹೇಗೆ ಪರಿಹರಿಸಿ ಕೊಳ್ಳುವುದು ಅಂತ ತುಂಬಾ ಕಸರತ್ತುಗಳನ್ನು ನಾವು ಮಾಡುತ್ತೇವೆ ಅಷ್ಟೇ ಯಾಕೆ ಕೀಲು ನೋವು ಬಂದಾಗ ನೋವನ್ನು ತಡೆದುಕೊಳ್ಳಲು ಆಗುವುದಿಲ್ಲ ಆದರೆ ಯಾವ ಖರ್ಚು ಇಲ್ಲದೆ ಸಮಯದ ವ್ಯರ್ಥವಿಲ್ಲದೆ ನಾವು ಹೇಳುವ ಕೆಲವೊಂದು ಸಲಹೆಗಳನ್ನು ನೀವು ಅನುಸರಿಸಿದರೆ ಕೀಲು ನೋವುಗಳನ್ನು ನಾವು ದೂರ ಮಾಡಿಕೊಳ್ಳಬಹುದು ಈ ಒಂದು ಲೇಖನದಲ್ಲಿ ಕೀಲು ನೋವು ದುರಮಾಡಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ. ಹರಳೆಣ್ಣೆ ಮತ್ತು ನಿಂಬೆರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣಮಾಡಿ ಕೀಲುನೋವು ಇರುವ ಕಡೆ ಹಚ್ಚಿ ನಿಧಾನವಾಗಿ ಸವರುವುದರಿಂದ ನೋವು ಕೂಡಲೇ ಕಡಿಮೆಯಾಗುತ್ತದೆ.
ನಮ್ಮಲ್ಲಿ ತುಂಬಾ ಜನರು ತೂಕ ಜಾಸ್ತಿ ಇದ್ದರೆ ಆ ತೂಕವನ್ನು ಕಡಿಮೆ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ನಮಗೆ ಕೀಲುನೋವು ಕಾಣಿಸುವುದಿಲ್ಲ ಮೂಳೆಗಳ ನಿಶಕ್ತಿಯಿಂದ ಕೀಲುನೋವು ನಮ್ಮಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಒಣದ್ರಾಕ್ಷಿಯನ್ನು ಸೇವಿಸುವುದು ಉತ್ತಮ ನಮ್ಮ ಮನೆ ಹತ್ತಿರ ಇರುವ ನುಗ್ಗೆ ಸೊಪ್ಪನ್ನು ಕೀಲುನೋವು ಇರುವ ಜಾಗಕ್ಕೆ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಹಾಗೇನೇ ಹುಣಸೆ ಎಲೆಗಳನ್ನು ಕೀಲುನೋವು ಇರುವ ಜಾಗಕ್ಕೆ ಹಾಕಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಹಾಗೇನೇ ಕೀಲುನೋವು ಮತ್ತು ಸಂಧಿವಾತ ಇದ್ದರೆ ಅದಕ್ಕೆ ಒಂದು ಸುಲಭ ಉಪಾಯವಿದೆ. ಅದೇನೆಂದರೆ ಹಸಿ ಶುಂಠಿ ಬೆಳ್ಳುಳ್ಳಿ ಮತ್ತು ಇಂಗನ್ನು ಬೆರಸಿ ಜಜ್ಜಿಕೊಂಡು ಅದಕ್ಕೆ ಎಳ್ಳೆಣ್ಣೆಯನ್ನು ಹಾಕಿ ಅದನ್ನು ಚನ್ನಾಗಿ ಕುದಿಸಿ ಉಗುರು ಬೆಚ್ಚನೆಯ ಎಣ್ಣೆಯನ್ನು ಕೀಲುನೋವು ಇರುವ ಕಡೆ ಹಚ್ಚಿದರೆ ಬೇಗ ನೋವು ಕಡಿಮೆಯಾಗುತ್ತದೆ.
ಕೀಲುನೋವಿನಿಂದ ಕಾಲು ಕೈಗಳು ಉದಿಕೊಂಡಿದ್ದರೆ ಕೊಬ್ಬರಿ ಎಣ್ಣೆಗೆ ಇಂಗುಹಾಕಿ ಕಾಯಿಸಿ ಉಗುರು ಬೆಚ್ಚನೆಯ ಎಣ್ಣೆಯನ್ನು ಕೀಲುನೋವು ಇರುವ ಕಡೆ ಹಚ್ಚಿದರೆ ಹಾಗೇನೇ ನಿಧಾನವಾಗಿ ತಿಕ್ಕಿದರೆ ನೋವು ಬೇಗ ಕಡಿಮೆಯಾಗುತ್ತದೆ. ಕೀಲುನೋವು ಇರುವ ಕಡೆ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ದೂರವಾಗುತ್ತದೆ ಮೂಳೆನೋವು ಕೀಲುನೋವುಗಳಿಗೆ ಹುರಿದ ಗೋದಿ ಹಿಟ್ಟಿನಿಂದ ತಯಾರಿಸಿದ ತಂಬಿಟ್ಟು ಮಾಡಿಕೊಂಡು ತಿನ್ನುವುದರಿಂದ ನೋವು ದೂರವಾಗುತ್ತದೆ ಹಾಗೇನೇ ಈ ನೋವಿನಿಂದ ಮುಕ್ತಿ ಪಡೆಯಲು ಒಂದು ಬಟ್ಟಲು ಮೊಸರಿಗೆ ಅರಿಷಿಣದ ಕೊಂಬನ್ನು ಅರೆದು ಸೇರಿಸಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ಆಗ ಆ ಕೀಲುನೋವು ವಾಸಿಯಾಗುತ್ತವೆ. ಜೊತೆಗೆ ಕಲ್ಲುಉಪ್ಪನ್ನು ಹುರಿದು ಶಾಖವನ್ನು ಕೊಡುವ ಮೂಲಕ ನೋವು ನಿವಾರಣೆಯಾಗುತ್ತದೆ.
ಓಂ ಕಾಳುಗಳಿಗೆ ನಿಂಬೆರಸವನ್ನು ಬೆರೆಸಿ ಚನ್ನಾಗಿ ಅರೆದು ಬಿಸಿಮಾಡಿ ಊತ ಇರುವ ಕಡೆ ಹಚ್ಚಬೇಕು ಆಗ ನೋವು ಕಡಿಮೆಯಾಗುತ್ತದೆ. ಕೀಲುನೋವು ತುಂಬಾ ನೋವನ್ನು ಕೊಡುವ ಕಾಯಿಲೆ ವಾತ ತುಂಬಿರುವ ಪಧಾರ್ಥಗಳನ್ನು ನಾವು ಸೇವಿಸಬಾರದು ಅಂತಹ ಪಧಾರ್ಥಗಳಲ್ಲಿ ಆಲೂಗಡ್ಡೆ ಮತ್ತು ಕುಂಬಳಕಾಯಿ ಸಹ ಒಂದು ಇದರ ಸೇವನೆಯಿಂದ ಕೀಲುನೋವು ಜಾಸ್ತಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿಮಗೆ ಕೀಲುನೋವು ಜಾಸ್ತಿ ಇದ್ದರೆ ಇವುಗಳಿಂದ ದೂರವಿರಿ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ