ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಮಾಡಿರಿ

57

ಈ ಲೇಖನದಲ್ಲಿ ಹೇಳುವ ಹೇರ್ ಪ್ಯಾಕ್ ಅನ್ನು ಕೂದಲಿನ ಮಧ್ಯೆ ಬಿರುಕು ಮತ್ತು ತಲೆಯಲ್ಲಿ ಹೊಟ್ಟು ಹೆಚ್ಚಾಗಿ ಇರುವವರು ಮತ್ತು ಕೂದಲು ಹೆಚ್ಚಿನ ಮಟ್ಟದಲ್ಲಿ ಉದುರುತ್ತಿದ್ದರೆ ಈ ಪ್ಯಾಕ್ ಅನ್ನು ಅವರು ಬಳಸಬಹುದು. ಕೂದಲು ಉದುರುವುದರಿಂದ ತಲೆಯು ಅಲ್ಲಲ್ಲಿ ಖಾಲಿ ಖಾಲಿಯಾಗಿ ಕಾಣಿಸಿಕೊಳ್ಳುವುದು. ಇವೆಲ್ಲವೂ ಸಮಸ್ಯೆ ಹುಟ್ಟುವುದಕ್ಕೆ ಕಾರಣ ಕೂದಲಿಗೆ ಸರಿಯಾಗಿ ಪೋಷಕಾಂಶದ ಪ್ರಮಾಣ ಸಿಗದೇ ಇದ್ದಾಗ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ದುಬಾರಿ ಎಣ್ಣೆಯನ್ನು ಬಳಸುವುದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಮತ್ತು ದುಡ್ಡು ಕೂಡ ಹಾಳಾಗಿ ಹೋಗುತ್ತದೆ. ಮತ್ತು ಕೂದಲಿನ ಆರೋಗ್ಯವು ಹಾಳಾಗುತ್ತದೆ. ಈ ಒಂದು ಸುಲಭವಾದ ಮನೆಮದ್ದು ಮಾಡಿಕೊಂಡು ತಲೆಯ ಹೊಟ್ಟು ಮತ್ತು ತಲೆಯ ಕೂದಲಿನ ಬೆಳವಣಿಗೆ ಮತ್ತು ಪೋಷಣೆಯನ್ನು ಹೆಚ್ಚಿಸಬಹುದು. ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಹಾಗಾದರೆ ಮನೆಯಲ್ಲಿ ಯಾವ ರೀತಿಯ ನೈಸರ್ಗಿಕವಾಗಿ ಕೂದಲುಗಳ ಬೆಳವಣಿಗೆಯನ್ನೂ ಮಾಡಿಕೊಳ್ಳುವುದು ಎಂದು ನೋಡೋಣ. ಹೇರ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳು

ಎಂದರೆ ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆ. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ ತೆಗೆದು ಚಿಕ್ಕ ತುಂಡುಗಳಾಗಿ ಇಟ್ಟುಕೊಳ್ಳಬೇಕು. ಅಲೋವೆರಾದಲ್ಲಿ ವಿಟಮಿನ್ ಇ ಹೇರಳವಾಗಿ ಇರುತ್ತದೆ. ಇದು ಉದ್ದ ಮತ್ತು ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಮತ್ತು ಹಾನಿಯಾದ ಕೂದಲನ್ನು ಚೆನ್ನಾಗಿ ಪೋಷಿಸುತ್ತದೆ. ಹಾಗೂ ಅಲೋವೆರಾ ತುಂಬಾ ಮೃದು ಇರುವುದರಿಂದ ಕೂದಲು ಸೊಂಪಾಗಿ ಮೃದುವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮತ್ತು ಅಲೋವೆರಾ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲೋವೆರಾವನ್ನೂ ಸ್ನಾನದ ನೀರಿನಲ್ಲಿ ಹಾಕಿ ಬಳಸಬಹುದು. ಅಥವಾ ಎಣ್ಣೆಯಲ್ಲಿ ಅಲೋವೆರಾವನ್ನು ಬೆರೆಸಿ ಕೂದಲಿಗೆ ಬಳಸಬಹುದು. ಅಥವಾ ಅಲೋವೆರಾ ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಬಹುದು. ಹೀಗೆ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ. ಮತ್ತು ಕೂದಲು ಉದುರುವುದನ್ನೂ ತಡೆಯುತ್ತದೆ. ರಾಸಾಯನಿಕವಾಗಿ ಅಂಗಡಿಯಲ್ಲಿ

ಸಿಗುವ ಅಲೋವೆರಾವನ್ನು ಬಳಸಬಾರದು. ಆದಷ್ಟು ನೈಸರ್ಗಕವಾಗಿ ಸಿಗುವ ಅಲೋವೆರಾವನ್ನು ಬಳಸಬೇಕು. ಈರುಳ್ಳಿ ಇದರಲ್ಲಿ ಸಲ್ಫರ್ ಅಂಶ ಹೇರಳವಾಗಿ ಇರುತ್ತದೆ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ನಂತರ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು. ಮೂರು ಸಾಮಗ್ರಿಗಳನ್ನು ಚಿಕ್ಕ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಮಾಡಬೇಕು. ಸ್ನಾನ ಮಾಡುವ ಮುಂಚೆ ಈ ಮಿಶ್ರಣವನ್ನು ಚೆನ್ನಾಗಿ ತಲೆಯ ಬುಡದ ಕೆಳಗೆ ಹಚ್ಚಬೇಕು. ಸ್ವಲ್ಪ ಹೊತ್ತು ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತವೆ. ಮತ್ತು ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಯುತ್ತದೆ. ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಮತ್ತು ಹೊಸ ಕೂದಲು ಬೆಳೆಯುವುದಕ್ಕೆ ಈ ಮಿಶ್ರಣ ತುಂಬಾ ಸಹಾಯ ಮಾಡುತ್ತದೆ. ಇದನ್ನು ಚೆನ್ನಾಗಿ ವಾರದಲ್ಲಿ ಮೂರು ಬಾರಿ ಮಾಡಿದರೆ ಕೂದಲಿನ ಸಮಸ್ಯೆಗೆ ಮುಕ್ತಾಯ ಹೇಳಬಹುದು. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

LEAVE A REPLY

Please enter your comment!
Please enter your name here