ಕೊಳವಂಕ ತಿಂದರೆ ಎಂಟು ರೀತಿಯ ರೋಗ ನಿಮ್ಮ ಹತ್ರ ಕೂಡ ಸುಳಿಯಲ್ಲ

81

ಉತ್ತಮ ಆರೋಗ್ಯಕ್ಕೆ ಸಹಕಾರಿ ಕೊಳವಂಕ ಸಸ್ಯ. ಕೆರೆ ಕಟ್ಟೆಗಳ ಪಕ್ಕದಲ್ಲಿ ಕಂಡುಬರುವ ಈ ಕೊಳವಂಕ ಗಿಡವನ್ನು ಒಂದು ಮುಳ್ಳಿನ ಗಿಡ ಎಂದು ಕಡೆಗಣಿಸಲಾಗುತ್ತದೆ.ಆದರೆ ಇದೊಂದು ಅದ್ಬುತವಾದ ಔಷಧೀಯ ಸಸ್ಯವೂ ಹೌದು ಅಕ್ಯಾಂಥೆಸ್ಯೇ ಕುಟುಂಬಕ್ಕೆ ಸೇರಿದ ಈ ಸಸ್ಯದ ವೈಜ್ಞಾನಿಕ ಹೆಸರು ಐಗ್ರೋಫಿಲ್ಲಾ ಆರ್ರಿಕ್ಯೂಲೇಟಾ ಸಂಸ್ಕೃತದಲ್ಲಿ ಗೋಕಂಟ ಕೋಕಿಲಾಕ್ಷ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಕನ್ನಡದಲ್ಲಿ ಕೊಳವಂಕ ಕೊಳವಳಿಕೆ ಗಿಡ. ಗೊಕಣ್ವ ಕ, ಗೊಕ್ಷುರಾ, ನೀರು ಉಪ್ಪಿನ ಗಿಡ ಎಂಬ ಇತ್ಯಾದಿ ಹೆಸರುಗಳಿವೆ. ಆಂಗ್ಲಭಾಷೆಯಲ್ಲಿ ಟೆಂಪಲ್ ಪ್ಲಾಂಟ್, ಮಾರ್ಶಬಾರ್ಬೆಲ್ ಹೈಗ್ರೋಫಿಲ್ಲಾ ಇತ್ಯಾದಿ ಹೆಸರುಗಳಿವೆ. ಈ ಸಸ್ಯದ ಮೂಲ ಏಷ್ಯಾ ಹಾಗೂ ಆಫ್ರಿಕಾದ ಉಷ್ಣವಲಯ ಗಳಾಗಿದ್ದು ಭಾರತ, ಶ್ರೀಲಂಕಾ ಮಯನ್ಮಾರ್ ಇಂಡೋನೇಷ್ಯಾ ಥೈಲ್ಯಾಂಡ್ ಕಾಂಬೋಡಿಯ ಮಲೇಷಿಯಾ ಮುಂತಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.

ಕೇವಲ ನೀರಿನ ತಾಣಗಳಾದ ಕೆರೆ ನದಿಗಳ ಪಕ್ಕದಲ್ಲಿ ಕಂಡುಬರುವ ಕೊಳವಂಕ ಸುಮಾರು ನಾಲ್ಕರಿಂದ ಐದು ಅಡಿ ಎತ್ತರ ಬೆಳೆಯುವ ಹಲವಾರು ಕವಲುಗಳಾಗಿ ಬೆಳೆಯುವ ಸಸ್ಯ ವಾಗಿದೆ. ಇದು ಮಾಸಲು ಕೆಂಪು ಬಣ್ಣದ ಕಾಂಡಗಳನ್ನು ಒಳಗೊಂಡಿದೆ. ಕಾಂಡಗಳ ಮೇಲೆ ಬಿಳಿಯ ಸೂಕ್ಷ್ಮವಾದ ರೋಮಗಳಿರುತ್ತವೆ. ನೀಳವಾದ ಸುಮಾರು ಹದಿನಾರು ಸೆ.ಮೀ ಉದ್ದ ಹಾಗೂ ಎರಡು ಸೆ.ಮೀ ಅಗಲವಾದ ಹಸಿರು ಎಲೆಗಳಿದ್ದು ಸುಮಾರು ಐದು ಸೆ.ಮೀ ಉದ್ದದ ತಿಳಿ ಹಳದಿ ಬಣ್ಣದ ಗಟ್ಟಿಯಾದ ಮೊನಚಾದ ಮುಳ್ಳುಗಳು ಇರುತ್ತವೆ. ತಿಳಿನೀಲಿ ಬಣ್ಣದ ಮೇಲ್ಬಾಗದಲ್ಲಿ ಎರಡು ಕೆಳಮುಖವಾಗಿ ಬಾಗಿದ ಮೂರುದಳಗಳು ಸೇರಿದಂತೆ ಒಟ್ಟು ಐದುದಳಗಳಿಂದ ಕೂಡಿದ ನೀಲಿ ಬಣ್ಣದ ಹೂವುಗಳಿವೆ. ಎಲೆಗಳು ಮುಳ್ಳುಗಳು ಹಾಗೂ ಪುಷ್ಪಗಳು ಕಾಂಡದ ಒಂದೇ ಗೆಣ್ಣುಗಳಲ್ಲಿ ಸಮಬೆಸ ಗೊಂಡಿರುತ್ತವೆ. ಕೊಳವಂಕ ಗಿಡದಲ್ಲಿ ಫೈಥೊಸ್ಟಿರಾಲ್ಟ್ಸ್, ಟ್ಯಾನಿನ್ಸ್, ಕಾರ್ಬೊ ಹೈಡ್ರೈಟ್ಸ್ ಫ್ಲೆವನಾಯ್ಟ್ಸ್ ಟರ್ಪಿನಾಯಡ್ಸ್ ಸ್ಟಿರಾಲ್ಟ್ಸ್ ಪಾಲಮೆಟಿಕ್ ಲಿನೊಲಿಕ್ ಆಸಿಡ್ಸ್ ಆಲ್ಕೊಲೈಟ್ಸ್ ಹಾಗೂ ಫ್ಯಾಟ್ ಮುಂತಾದ ರಾಸಾಯನಿಕ ಸಂಯುಕ್ತಗಳಿದ್ದು ಸಂಧಿವಾತ ಉರಿಯೂತ ಕಾಮಾಲೆ ಯಕೃತ್ತಿನ ತೊಂದರೆಗಳು ಮುಂತಾದ ಸಮಸ್ಯೆಗಳಿಗೆ ಈ ಸಸ್ಯದ ಎಲೆ ಹಾಗೂ ಬೀಜಗಳಿಂದ ಸಾಂಪ್ರದಾಯಿಕ ಆಯುರ್ವೇದ

ಹಾಗೂ ಸಿದ್ದವೈದ್ಯ ಚಿಕಿತ್ಸಾ ಪದ್ದತಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೊಳವಂಕ ಗಿಡದ ಸಾಮಾನ್ಯ ಉಪಯೋಗ ಗಳೆಂದರೆ ಸ್ಥಾನೀಯವಾಗಿ ಇದೊಂದು ತರಕಾರಿ ಗಿಡವಾಗಿದ್ದು. ಶ್ರೀಲಂಕಾದ ಸ್ಥಾನೀಯ ಮಾರುಕಟ್ಟೆಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ. ಇದರ ಎಲೆಗಳಿಂದ ಪಲ್ಯ ಹಾಗೂ ಸಾಂಬಾರು ತಯಾರಿಸಲು ಬಳಸಲಾಗುತ್ತದೆ. ಇದನ್ನು ತರಕಾರಿಯಂತೆ ಸೇವನೆ ಮಾಡುವುದರಿಂದ ರ ಕ್ತ ಹೀನತೆ ಹಾಗೂ ಜಾಂಡಿಸ್ ಖಾಯಿಲೆಗೂ ಸಹ ಸಹಕಾರಿಯಾಗಿದೆ. ಅಲ್ಲದೇ ಕಾಮೊ ತ್ತೇಜಕವಾಗಿಯೂ ಸಹ ಕೆಲಸ ಮಾಡುತ್ತದೆ. ಇದರ ಎಲೆಗಳನ್ನು ಕುದಿಸಿದ ನೀರಿನಲ್ಲಿ ಜ್ವರಪೀಡಿತರಿಗೆ ಸ್ನಾನ ಮಾಡಿಸುವ ರೂಢಿಯಿದ್ದು ಇದರ ಎಲೆಗಳ ಕಷಾಯ ಕೆಮ್ಮಿಗೂ ಸಹ ಸಹಕಾರಿಯಾಗಿದೆ. ಕೊಳವಂಕ ದ ಬೀಜಗಳ ಚೂರ್ಣವು ರ ಕ್ತ ದೋಷಗಳಿಗೆ ಸಹಕಾರಿಯಾಗಿದೆ. ವೀ ರ್ಯ ವೃದ್ದಿಗೂ ಸಹ ಉತ್ತಮವಾಗಿದೆ. ಈ ಗಿಡದ ಬೇರುಗಳಿಂದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ. ಈ ಸಸ್ಯದ ಯಾವುದೇ ಅಡ್ಡಪರಿಣಾಮದ ವರದಿಗಳಿಲ್ಲ.

LEAVE A REPLY

Please enter your comment!
Please enter your name here