ಕೋಲ್ಡ್ ವಾಟರ್ ನಿಂದ ಹೃದಯಾಘಾತ ಇದು ಸತ್ಯ

55

ಕೋಲ್ಡ್ ವಾಟರ್ ಆಹಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.ಬೇಸಿಗೆಯಲ್ಲಿ ಬಾಯಿ ತಂಪಾಗಿಸುವ ಕೋಲ್ಡ್ ವಾಟರ್ ನಿಂದ ಆಗುವ ಲಾಭ ನಷ್ಟಗಳನ್ನು ತಿಳಿದು ಕೋಳ್ಳೊಣ ಬನ್ನಿ. ಸ್ನೇಹಿತರೆ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ನೀರನ್ನು ಕುಡಿಯುತ್ತೇವೆ ಅದರಲ್ಲೂ ತಂಪಾದ ಅಂದ್ರೆ ಫ್ರಿಜ್ ನಲ್ಲಿಟ್ಟಿರುವ ನೀರನ್ನು ಜಾಸ್ತಿ ಕುಡಿತೀವಿ ಆದರೆ ಈ ಕೋಲ್ಡ್ ವಾಟರ್ ದೇಹಕ್ಕೆ ಎಷ್ಟೊಂದು ಪರಿಣಾಮಕಾರಿ ಅನ್ನೋದು ನಿಮಗೆ ಗೊತ್ತೇ. ಫ್ರಿಜ್‍ನ ನೀರು ಆರೋಗ್ಯಕ್ಕೆ ಹಾನಿಕರ ಅಂತ ಹೇಳಬಹುದು ಮುಖ್ಯವಾಗಿ ಫ್ರಿಜ್ ನಲ್ಲಿ ಇಟ್ಟಿರುವ ನೀರುಕುಡಿದರೆ ಹೃದಯಾಘಾತ ಆಗುವ ಸಾಧ್ಯತೆ ಜಾಸ್ತಿ ಇರುತ್ತೆ ಆದ್ದರಿಂದ ಹಾರ್ಟ್ ಪೇಷಂಟ್ ಗಳು ಈ ನೀರನ್ನು ಕುಡಿಬೇಡಿ ಅಷ್ಟೇ ಅಲ್ಲದೆ ಒಂದು ವೇಳೆ ಊಟದ ಬಳಿಕ ನೀರು ಕುಡಿದರೆ ಮುಗಿಯಿತು ನಿಮ್ಮ ಜೀರ್ಣ ಕ್ರಿಯೆ ಟ್ರಾಫಿಕ್ ಜಾಮ್ ಆದಂತೆ ನಿಂತು ಹೋಗುತ್ತದೆ

ನಮ್ಮ ದೇಹಕ್ಕೆ ಜೀರ್ಣಸುವ ಶಕ್ತಿಯೆ ಇರುವುದಿಲ್ಲ ಹೆಚ್ಚಾಗಿ ಕೋಲ್ಡ್ ನೀರು ಕುಡಿಯುವವರಿಗೆ ಗಂಟಲಿನ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಕುಡಿಯುವ ತಣ್ನೀರು ನಿಮ್ಮ ಹೊಟ್ಟೆಯನ್ನು ಕಟ್ಟುತ್ತದೆ. ಊಟದ ನಂತರ ಆಹಾರವನ್ನು ಜೀರ್ಣ ಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತದೆ. ತಂಪಾದ ನೀರನ್ನು ಕುಡಿಯುವಾಗ ದೇಹದ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಎಂದು ತಜ್ಞವೈದ್ಯರು ಹೇಳುತ್ತಾ ಬಂದಿದ್ದಾರೆ. ರಕ್ತದ ಪೂರೈಕೆಗೆ ತೊಂದರೆಯಾಗುತ್ತದೆ. ದೇಹದ ತಾಪಮಾನವನ್ನು ಕ್ಷೀಣಿಸುತ್ತದೆ. ಹೀಗಾಗಿ ದೇಹದ ಪ್ರತಿಕ್ರಿಯೆಗೆ ತುಂಬಾ ತೊಂದರೆ ಉಂಟು ಮಾಡುತ್ತದೆ. ಆಯುರ್ವೇದದ ಪ್ರಕಾರ ಕುಡಿಯುವ ತಣ್ನೀರು ಗ್ಯಾಸ್ಟಿಕ್ ಸೇರಿದಂತೆ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಮತ್ತು ದೇಹದ ಸಮತೋಲನವನ್ನು ಏರಿಳಿತ ಗೊಳಿಸುತ್ತದೆ. 2001ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ತಣ್ಣೀರು ಕುಡಿಯುವವರಿಗೆ ಅನೇಕ ಜನರಲ್ಲಿ ಮೈಗ್ರೇನ್ ನೋವಿನೊಂದಿಗೆ

ಸಂಬಂಧವಿರುತ್ತದೆ. ತಣ್ಣಿರಿನ ನಿಯಮಿತ ಬಳಕೆ ಕೂಡ ಅಚಲೇಷಿಯಾ ಎಂಬಲ್ಲಿ ಉಂಟಾಗುತ್ತದೆ ಅಲ್ಲಿ ಅನ್ನನಾಳವು ಆಹಾರವನ್ನು ಹಾದುಹೋಗಲು ಸೀಮಿತಗೊಳಿಸುತ್ತದೆ ಅಲ್ಲದೆ ಪೂರಾತನ ಚೀನೀಯರ ಔಷಧಿ ಪ್ರಕಾರ ಬಿಸಿಯಾದ ಆಹಾರದೊಂದಿಗೆ ತಂಪಾದ ನೀರನ್ನು ಕುಡಿಯುವುದು ಸಮಗ್ರ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಅಸ್ವಸ್ಥಗೊಳ್ಳುವಂತೆ ಮಾಡಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ತಣ್ಣನೇಯ ನೀರು ಕುಡಿಯುವುದು ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಅಂತ ನಂಬಲಾಗುತ್ತದೆ ಯಾಕಂದ್ರೆ ಅದು ದೇಹದ ತಳಭಾಗದ ತಾಪವನ್ನು ಕಳೆದುಕೊಳ್ಳಲು ಶ್ರಮಿಸುವಂತೆ ದೇಹವನ್ನು ತಳ್ಳುತ್ತದೆ ಒಂದು ಅಧ್ಯಯನದ ಪ್ರಕಾರ ತಣ್ಣೀರು ಕೂಡ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಇದು ನರವ್ಯೂಹದ ಭಾಗವಾಗಿರುವ ವೇಗಸ್ ನರವನ್ನು ಹತ್ತನೆ ಕಪಾಳದ ನರವನ್ನು ಉತ್ತೇಜಿಸುತ್ತದೆಯಂತೆ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಇದರಿಂದ ತಣ್ಣೀರು ಕುಡಿಯುವ ಮುನ್ನ ಆಲೋಚನೆ ಮಾಡಿ.ಅತೀ ತಣ್ಣನೆಯ ನೀರು ನಮ್ಮ ಆರೋಗ್ಯಕ್ಕೆ ಹಾನಿಯಂಬುದನ್ನು ಮರೆಯದಿರಿ. ಈ ಉಪಯುಕ್ತ ಮಾಹಿತಿ ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here