ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳು ಸೇವನೆ ಮಾಡಿದ್ರೆ ಅರೋಗ್ಯ ತುಂಬಾ ಚೆನ್ನಾಗಿ ಇರುತ್ತೆ

70

ನಮಸ್ತೆ ಗೆಳೆಯರೆ ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಯಾವೆಲ್ಲ ಹಣ್ಣುಗಳನ್ನು ಸೇವಿಸಬೇಕು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ ಕೆಲವೊಂದು ಹಣ್ಣುಗಳನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ತಿನ್ನಲು ಸಾಧ್ಯ ಅಂದರೆ ಇನ್ನೂ ಸ್ವಲ್ಪ ಬೇರೆ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಸಿಡಿಟಿ ಯನ್ನು ಹೆಚ್ಚಿಸುತ್ತದೆ ನಮ್ಮ ದೇಹಕ್ಕೆ ಸಿಗುವ ನ್ಯೂಟ್ರಿಸನ್ಸ್ ಗಳು ಸಿಗುವುದಿಲ್ಲ ಹಾಗಾಗಿ ಯಾವ ಹಣ್ಣುಗಳನ್ನು ಯಾವ ಸಮಯಕ್ಕೆ ತಿನ್ನಬೇಕು ಅನ್ನೋದು ನಮಗೆ ಅರಿವು ಇರಬೇಕಾಗುತ್ತದೆ. ಖಾಲಿಯಾಗಿರುವ ಹೊಟ್ಟೆಯಲ್ಲಿ ಒಳ್ಳೆಯದಾದಂತಹ ಎವರ್ಗ್ರೀನ್ ಹಣ್ಣುಗಳು ಯಾವುದು ಎಂದರೆ ಮೊದಲನೆಯದಾಗಿ ಕಲಂಗಡಿ ಹಣ್ಣು ಮತ್ತು ಕರ್ಬುಜ ಹಣ್ಣು ಈ 2 ಹಣ್ಣುಗಳನ್ನು ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ನಮ್ಮ ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ ನಿಮ್ಮ ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸುತ್ತದೆ ಹಾಗೆ ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ನಮ್ಮ ಇಮ್ಯುಡಿಟಿ ಶಕ್ತಿಯನ್ನು ಹೆಚ್ಚಿಸುತ್ತದೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾ ಸಹಾಯಕವಾಗಿದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಇರುವುದರಿಂದ ಇದರಲ್ಲಿರುವ ನೈಸರ್ಗಿಕ ಸಕ್ಕರೆ ಪ್ರಮಾಣದ ಅಂಶ ಡಯಾಬಿಟಿಸ್ ರೋಗಿಗಳಿಗೆ ಒಳ್ಳೆಯದಲ್ಲ. ಇನ್ನು ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಒಳ್ಳೆಯದು ಆದರೆ ಡಯಾಬಿಟಿಸ್ ರೋಗಿಗಳಿಗೆ ಈ ರಸವನ್ನು ಕುಡಿಯಲು ಸಲಹೆ ಮಾಡುವುದು

ಒಳ್ಳೆಯದಲ್ಲ. ಸಾಮಾನ್ಯವಾಗಿ ಆರೋಗ್ಯವಂತ ರಾಗಿರುವ ದಾಳಿಂಬೆ ಹಣ್ಣಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ತುಂಬಾ ಒಳ್ಳೆಯದು ದಾಳಿಂಬೆ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಪೈಬರ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಮತ್ತೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದರೆ ಈ ದಾಳಿಂಬೆ ಹಣ್ಣಿನ ರಸವನ್ನು ಒಂದು ವಾರ ತಪ್ಪದೇ ಕುಡಿದರೆ ರಕ್ತಹೀನತೆ ಸಮಸ್ಯೆ ಸರಿಪಡಿಸಿ ಕೊಳ್ಳಬಹುದು. ಇನ್ನು ಖಾಲಿ ಹೊಟ್ಟೆಯಲ್ಲಿ ಪಪಾಯಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ ಪಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಬೇಗ ಜೀರ್ಣವಾಗುತ್ತದೆ ಹಾಗೆ ನಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಕೂಡ ಈ ಹೆಣ್ಣು ತುಂಬಾ ಸಹಾಯಕವಾಗಿದೆ ಆದರೆ ಪಪಾಯಿ ಹಣ್ಣನ್ನು ಗರ್ಭಿಣಿ ಮಹಿಳೆಯರು ತಿನ್ನಲು ಬಾರದು. ಇನ್ನು ಖಾಲಿಹೊಟ್ಟೆಯಲ್ಲಿ ಸ್ಟ್ರಾಬೆರಿ ಚರಿಸ್ ಗ್ಲೋಬೇರಿಸ್ ಹಣ್ಣನ್ನು ತಿನ್ನುಬೇಕು ನೆರಳೆ ಹಣ್ಣಿನ ಜಾತಿಗೆ ಸೇರಿರುವ ಈ ಹಣ್ಣುಗಳನ್ನು ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ನು ಡಯಾಬಿಟಿಸ್ ರೋಗಿಗಳಿಗೆ ನೇರಳೆ ಹಣ್ಣು ತಿನ್ನುವುದರಿಂದ ತುಂಬಾ ಒಳ್ಳೆಯದು ಆಗುತ್ತದೆ. ಇನ್ನು ಅಂಜೂರ ಮತ್ತು ಅತ್ತಿ ಹಣ್ಣು ತಿನ್ನಬಹುದು ಹಿಂದಿನ ದಿನ ನೀರಿನಲ್ಲಿ ನಾಲ್ಕರಿಂದ ಐದು ಅಂಜೂರ

ನೆನಸಿಡಿ ನಂತರ ಮರು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ಸೇವನೆ ಮಾಡಿ ಇದರಿಂದ ನಿಮಗೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ ಹಾಗೆ ಒಣದ್ರಾಕ್ಷೀಹಣ್ಣು ತಿನ್ನುವುದು ಒಳ್ಳೆಯದು ಇದನ್ನು ಕೂಡ ಹಿಂದಿನ ದಿನ ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ ಮಾರನೇ ದಿನ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ ಹಾಗೆ ಖಾಲಿಹೊಟ್ಟೆಯಲ್ಲಿ ಖರ್ಜೂರವನ್ನು ಕೂಡ ಸೇವಿಸಬಹುದು ಹಾಗೆ ಆಮ್ಲವನ್ನು ಕೂಡ ಖಾಲಿಹೊಟ್ಟೆಯಲ್ಲಿ ತಿನ್ನಬಹುದು ಈ ಎಲ್ಲಾ ಹಣ್ಣುಗಳನ್ನು ಖಾಲಿಹೊಟ್ಟೆಯಲ್ಲಿ ತಿನ್ನಬಹುದು ಈ ಹಣ್ಣುಗಳನ್ನು ತಿಂದ ನಂತರ 45 ನಿಮಿಷಗಳ ಕಾಲ ಯಾವುದೇ ಆಹಾರವನ್ನು ಸೇವಿಸಬೇಡಿ ಯಾವುದೇ ಹಣ್ಣುಗಳನ್ನು ಊಟದ ಜೊತೆಗೆ ಸೇವಿಸಬಾರದು ಊಟ ಆದ ನಂತರವು ತಿನ್ನಬಾರದು. ನಾವು ಸೇವಿಸುವ ಎಲ್ಲ ಆಹಾರ ಒಂದೇ ರೀತಿಯಲ್ಲಿ ಇರುವುದಿಲ್ಲ ಗಟ್ಟಿ ಅಥವಾ ಘನರೂಪದ ಆಹಾರವನ್ನು ಸೇವಿಸುತ್ತವೆ ಕೆಲವೊಮ್ಮೆ ಲೀಕ್ವಿಡ್ ಆಹಾರವನ್ನು ಸೇವಿಸುತ್ತೇವೆ ಹಾಗಾಗಿ ಎಲ್ಲಾ ಆಹಾರಗಳಿಗೆ ಒಂದೇ ರೀತಿಯಾದ ಜೀರ್ಣಕ್ರಿಯೆ ನಡೆಯುವುದಿಲ್ಲ ನಮ್ಮ ಜೀರ್ಣಕ್ರಿಯೆ ಆಹಾರಕ್ಕೆ ತಕ್ಕಂತೆ ತನ್ನ ಕೆಲಸವನ್ನು ಮಾಡುತ್ತದೆ ಹಾಗಾಗಿ ನೀರನ್ನು ಕುಡಿದು ತಕ್ಷಣ ಊಟವನ್ನು ಮಾಡಲು ಹೋಗಬೇಡಿ ಮತ್ತು ಹಣ್ಣುಗಳನ್ನು ತಿಂದು ತಕ್ಷಣ ಊಟ ಮಾಡಬೇಡಿ. ಹಣ್ಣುಗಳನ್ನು ತಿನ್ನುವುದಾದರೆ ಊಟಕ್ಕಿಂತ 30 ನಿಮಿಷಗಳ ಮುಂಚೆ ಮತ್ತು ಊಟದ ನಂತರ 30 ನಿಮಿಷಗಳ ಸೇವಿಸಿ.

LEAVE A REPLY

Please enter your comment!
Please enter your name here