ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಹೀಗೆಲ್ಲ ಆಗುತ್ತದೆ

64

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಹೀಗೆಲ್ಲ ಆಗುತ್ತದೆ ನೋಡಿ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವಂತಹ ಮೊಟ್ಟ ಮೊದಲ ಕೆಲಸ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಹೀಗೆ ಚಹಾ ಕುಡಿಯುವುದು ಭಾರತದಲ್ಲಿ ತುಂಬಾ ಕಡೆ ಒಂದು ಸಾಂಪ್ರದಾಯವಾಗಿ ಉಳಿದುಬಿಟ್ಟಿದೆ ಹಿಂದೆ ಬ್ರಿಟಿಷರು ಭಾರತದಲ್ಲಿದಾಗ ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯಲ್ಲಿ ಎದ್ದ ತಕ್ಷಣ  ಚಹಾ ಕುಡಿಯುವುದನ್ನು ರೂಢಿ ಮಾಡಿಸಿ ಬಿಟ್ಟಿದ್ದಾರೆ ಅದನ್ನು ನಮ್ಮ ಹಿರಿಯರು ಮುಂದುವರೆಸಿ ಕೊಂಡು ಬಂದಿದ್ದಾರೆ ಅಷ್ಟೇ ಅಲ್ಲದೆ ಅದು ನಮ್ಮ ಭಾರತದಾದ್ಯಂತ ಈಗ ಬೆಳೆದು ನಿಂತಿದೆ ತುಂಬಾ ಜನಕ್ಕೆ ಚಹಾ ಕುಡಿಯದೆ ಹೋದರೆ ಆ ದಿನವೇ ಮುಂದೇ ಹೋಗಲ್ಲ ಇನ್ನು ಕೆಲವರು ಬೆಳಿಗ್ಗೆ ಮಾಡುವಂತಹ ಕೆಲಸಗಳನ್ನು ಚಹಾ ಕುಡಿದ ನಂತರವೇ ಮಾಡುತ್ತಾರೆ ಈ ಚಹಾದಲ್ಲಿರುವ ಅಂಟಿ ಆಕ್ಸಿಡೆಂಟ್ ಗಳು ಮತ್ತು ಟ್ಯಾನಿಕ್ ಎಂಬ

ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಸಾಯನಿಕ ಕ್ರಿಯೆಯನ್ನು ಚುರುಕು ಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದರೆ ಖಾಲಿಹೊಟ್ಟೆಯಲ್ಲಿ ಚಹಾ ಕುಡಿದರೆ ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧನೆಯಲ್ಲಿ ತಿಳಿದಿದೆ. ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಹೀಗೆ ಚಹಾ ಕುಡಿದರೆ ಜಠರ ರಸದ ಆಮ್ಲಿಯತೆ ಸಮತೋಲನ ತಪ್ಪಲು ಇದೆ ಕಾರಣ ಇದರಿಂದ ಸರಾಗವಾಗಿ ಆಗುವ ಜೀವರಸಾಯನಿಕ ಕ್ರಿಯೆ ಹೇರುಪೇರಾಗುತ್ತದೆ ಈ ಮೂಲಕ ದೇಹದಲ್ಲಿ ಹಲವಾರು ತೊಂದರೆಗಳನ್ನು ನಾವು ಎದಿರಿಸಬೇಕು. ನಂತರ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವಿಯುತ್ತದೆ ಏಕೆಂದರೆ ರಾತ್ರಿ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆ ಅಂಶವನ್ನು ಒಡೆದು ಸಣ್ಣದಾಗಿ ಮಾಡುತ್ತದೆ

ಇದರಿಂದಾಗಿ ಬಾಯಿಯ ಆಮ್ಲಿಯತೆ ಹೆಚ್ಚಾಗುತ್ತದೆ ಆಗ ಬಿಸಿ ಚಹಾ ಕುಡಿಯುವುದರಿಂದ ಸಡಿಲವಾದ ಹಲ್ಲುಗಳ ಹೊರಪದರ ಕಣಗಳು ಸುಲಭವಾಗಿ ಸವೆಯುತ್ತದೆ. ಚಹಾ ಒಂದು ಮೂತ್ರವರ್ಧಕ ಇದು ದೇಹದಿಂದ ಹೆಚ್ಚಿನ ನೀರನ್ನು ಹೊರಹಾಕುತ್ತದೆ 8 ಗಂಟೆಗಳ ಕಾಲ ಮಲಗಿ ಮುಂಜಾನೆ ಎದ್ದಾಗ ನೀರು ಲಭಿಸದೆ ನಮ್ಮ ದೇಹದ ನೀರು ಕಾಲಿ ಆಗುತ್ತದೆ ಆಗ ಖಾಲಿಹೊಟ್ಟೆಯಲ್ಲಿ ಚಹಾ ಕುಡಿದಾಗ ನೀರು ಹೋರ ಹೋಗುತ್ತದೆ ಇದರಿಂದ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಹೊಟ್ಟೆ ಉಬ್ಬರ ಉಂಟಾಗುತ್ತದೆ ಖಾಲಿಹೊಟ್ಟೆಯಲ್ಲಿ ಚಹಾ ಕುಡಿದಾಗ ವಾಕರಿಕೆ ತಲೆ ತಿರುಗುವುದು ಅಹಿತಕರ ಸಂವೇದನೆಗಳು ನಮ್ಮ ದೇಹದಲ್ಲಿ ನಡೆಯುತ್ತದೆ. ಹಾಗೇನೇ ಉದ್ವೇಗ ಮತ್ತು ನಿದ್ರೆಗೆ ಸಂಬಂದಿಸಿದ ತೊಂದರೆಗಳು ಎದುರಾಗುತ್ತವೆ. ಹಾಗಾಗಿ ರ ಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಖಾಲಿಹೊಟ್ಟೆಯಲ್ಲಿ ಚಹಾ ಕುಡಿಯಬಾರದು ಇದರಿಂದ ನಮ್ಮ ದೇಹ ಇತರ ಆಹಾರಗಳಿಂದ ಲಭಿಸಿದ ಕಬ್ಬಿಣವನ್ನು ಹಿರಿಕೊಳ್ಳದೆ ಹೋಗುತ್ತೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಮರೆಯದೇ ಶೇರ್ ಮಾಡಿ

LEAVE A REPLY

Please enter your comment!
Please enter your name here