ಗಜಕರ್ಣ ತುರಿಕೆಗೆ ಇಲ್ಲಿದೆ ಸುಲಭವಾದ ರಾಮಬಾಣ

173

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ತುರಿಕೆ ಗಜಕರ್ಣ ಚರ್ಮ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದೆಂದು ತಿಳಿದುಕೊಳ್ಳೋಣ ಬನ್ನಿ. ಈ ಸಮಸ್ಯೆಗಳು ಅಷ್ಟೊಂದು ದೊಡ್ಡ ಸಮಸ್ಯೆಗಳು ಅಲ್ಲ. ಆದರೂ ಇವು ನಮಗೆ ಆದರೆ ನಿತ್ಯವೂ ಮುಜುಗರ ಹಿಂಸೆ ಜಿಗುಪ್ಸೆ ಕೊಡುತ್ತಾ ಇರುತ್ತದೆ. ಈ ಸಮಸ್ಯೆ ಬರಲು ಮುಖ್ಯ ಕಾರಣ ಎಂದರೆ ಸ್ವಚ್ಛತೆ ಇರದೇ ಇರುವುದು, ಮಾಲಿನ್ಯದಿಂದ ಸಾಮಾನ್ಯವಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ಬಂದರೆ ಚರ್ಮಕ್ಕೆ ಹಾನಿ ಕೂಡ ಉಂಟಾಗುತ್ತದೆ. ಸಾಧಾರಣವಾಗಿ ಚರ್ಮದ ಮೇಲೆ ರಿಂಗ್ ಅಥವಾ ಕೆಂಪು ಆಕಾರದಲ್ಲಿ ಕಾಣಿಸಿಕೊಂಡರೆ ಅದನ್ನು ರಿಂಗ್ ವಾರ್ಮ್ ಅಥವಾ ಗಜಕರ್ಣ ಎಂದು ಕರೆಯುತ್ತೇವೆ. ಇದು ನಮ್ಮ ಚರ್ಮದ ಮೇಲೆ ಎಲ್ಲಿಬೇಕಾದರೂ ಬರಬಹುದು. ಅಂದ್ರೆ ಮುಖ್ಯವಾಗಿ ಗಜಕರ್ಣ ತೊಡೆಯ ಸಂಧಿಯಲ್ಲಿ ಅಂಡರ್ ಆರ್ಮ್ಸ್ ಮತ್ತು ಸೊಂಟದ ಸುತ್ತಲೂ ಹಾಗೂ ಕತ್ತಿನ ಹತ್ತಿರ ಇದು ಬರುತ್ತಾ ಇರುತ್ತದೆ. ಈ ಮನೆಮದ್ದುಗೆ ಬೇಕಾದ ಮುಖ್ಯವಾದ ಸಾಮಗ್ರಿ ಎಂದರೆ ಅಲೋವೆರಾ. ಈ ಅಲೋವೆರಾದಲ್ಲಿ ಆಂಟಿ ಇನ್ಫ್ಲಾಮೇಟರಿ ಆಂಟಿ ಫಂಗಲ್ ಪ್ರಾಪರ್ಟಿ ತುಂಬಾನೇ ಹೇರಳವಾಗಿ ಇರುತ್ತದೆ. ಇದು ಒಂದು ಅದ್ಭುತವಾದ ಔಷಧ ಅಂತ ಹೇಳಬಹುದು. ಇದನ್ನು ಹೆಚ್ಚಾಗಿ ಚರ್ಮದ ಸಮಸ್ಯೆಗೆ ಹಾಗೆಯೇ ಸೌಂದರ್ಯ ಉತ್ಪತ್ತಿ ಮಾಡುವ

ಉತ್ಪನ್ನಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದು ಎಲ್ಲ ಚರ್ಮದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಗಜಕರ್ಣದಿಂದ ಉಂಟಾದ ಉರಿಯನ್ನು ಕಡಿಮೆ ಮಾಡಲು ಈ ಅಲೋವೆರಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಮನೆಮದ್ದುಗೆ ಫ್ರೆಶ್ ಆಗಿರುವ ಅಲೋವೆರಾ ಬೇಕಾಗುತ್ತದೆ. ಇದನ್ನು ಹೇಗೆ ಕತ್ತರಿಸುವುದೆಂದು ನೋಡೋಣ ಬನ್ನಿ. ಈ ಅಲೋವೆರಾ ಅನ್ನು ಅದರ ಬದಿಗೆ ಕತ್ತರಿಸಿಕೊಳ್ಳಿ. ನಂತ್ರ ಅಲೋವೆರಾ ಮಧ್ಯದಲ್ಲಿ ಕತ್ತರಿಸಿಕೊಳ್ಳಿ. ಆಮೇಲೆ ಒಂದು ಚಮಚದಿಂದ ಈ ಜೆಲ್ ಅನ್ನು ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ನಮಗೆ ಬೇಕಾದ ಶುದ್ಧವಾದ ಅಲೋವೆರಾ ಸಿಗುತ್ತದೆ. ನಿಮ್ಗೆ ಈ ಫ್ರೆಶ್ ಅಲೋವೆರಾ ದೊರೆಯದೆ ಇದ್ದರೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಅಲೋವೆರಾ ಜೆಲ್ ಅನ್ನು ಬಳಕೆ ಮಾಡಬಹುದು. ಆದ್ರೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಚರ್ಮಕ್ಕೆ ಉತ್ತಮವಾದದ್ದು. ಈ ಮನೆಮದ್ದು ಒಂದು ಚಮಚದಷ್ಟು ಅಲೋವೆರಾ ಬೇಕಾಗುತ್ತದೆ. ನಂತರ ಮುಂದೆ ನಮಗೆ ಬೇಕಾಗಿರುವ ಸಾಮಗ್ರಿ ಎಂದರೆ ಅರಿಶಿನದ ಪುಡಿ. ಇದರಲ್ಲಿ ಆಂಟಿ ಇನ್ಫ್ಲಾಮೇಟರಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟಿರಿಯಲ್ ಆಂಟಿ ಆಕ್ಸಿಡೆಂಟ್ ಪ್ರಾಪರ್ಟಿ ಗುಣಗಳು ತುಂಬಾನೇ ಹೇರಳವಾಗಿರುತ್ತದೆ.

ಇದು ಚರ್ಮದ ಅಲರ್ಜಿಯನ್ನು ಮತ್ತು ತುರಿಕೆಯನ್ನು ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಇದು ಫಂಗಸ್ ಜೊತೆಗೆ ಕೂಡ ಹೋರಾಡುತ್ತದೆ. ಈ ರೆಮೆಡಿಗೆ ಒಂದು ಕಾಲು ಚಮಚದಷ್ಟು ಅರಿಶಿಣ ಪುಡಿ ಬೇಕಾಗುತ್ತದೆ. ಇದಕ್ಕೆ ಅರಿಶಿಣ ಪುಡಿಯನ್ನು ಸೇರಿಸಿಕೊಳ್ಳಿ. ಈಗ ಒಂದು ಚಮಚದಷ್ಟು ತೆಂಗಿನ ಕಾಯಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಈಗ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಚರ್ಮದ ಸಮಸ್ಯೆ ಮತ್ತು ಗಜ ಕರ್ಣ ಸಮಸ್ಯೆಯನ್ನು ಕಡಿಮೆ ಮಾಡುವ ಮನೆಮದ್ದು ಸಿದ್ಧವಾಗಿದೆ. ಇದನ್ನು ಹೇಗೆ ಬಳಕೆ ಮಾಡಬೇಕೆಂದು ವಿವರವಾಗಿ ತಿಳಿದುಕೊಳ್ಳೋಣ. ಈ ಸಾಮಗ್ರಿಗಳ ಲೇಪನವನ್ನು ತೆಗೆದುಕೊಂಡು ಗಜಕರ್ಣ ಎಲ್ಲಿ ಆಗಿರುತ್ತದೆ ಅಲ್ಲಿ ಈ ಲೇಪನವನ್ನು ಲೇಪಿಸಿ. ನಂತ್ರ ಕೇವಲ ಎರಡು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ಹೀಗೆ ನಿತ್ಯವೂ ಸ್ನಾನ ಮಾಡುವ ಎರಡು ಗಂಟೆ ಮುಂಚೆ ಇದನ್ನು ಲೇಪಿಸಿ ಕೊಂಡು ಸ್ನಾನ ಮಾಡುವುದರಿಂದ ಎಲ್ಲ ಚರ್ಮದ ಸಮಸ್ಯೆ ಮತ್ತು ಗಜಕರ್ಣ ತಕ್ಷಣವೇ ಮಾಯವಾಗುತ್ತದೆ. ಆದಷ್ಟು ನೀವು ಹೊಸದಾದ ಇನ್ನರ್ ವಿಯರ್ ಉಪಯೋಗಿಸುವುದನ್ನು ರೂಢಿ ಮಾಡಿಕೊಳ್ಳಿ. ಇಲ್ಲವಾದರೆ ನೀವು ಹಳೆಯದಾದ ಇನ್ನರ್ ವಿಯರ್ ಇದ್ದಲ್ಲಿ ನೀವು ಬಿಸಿ ನೀರಿನಲ್ಲಿ ಎರಡು ಗಂಟೆ ನೆನೆಸಿ ಆಮೇಲೆ ಡೇಟಾಲ್ ನಿಂದ ಚೆನ್ನಾಗಿ ತೊಳೆದು ಒಣಗಿಸಿ ಉಪಯೋಗ ಮಾಡಿ.

LEAVE A REPLY

Please enter your comment!
Please enter your name here