ಗಣಕ ಪಿತಾಮಹ ವಸಿಷ್ಠ ನಾರಾಯಣ್ ಸಿಂಗ್ ಇವರ ಬುದ್ದಿ ಮತ್ತ ಐನ್ಸ್ಟೀನ್ ಗೆ ಸಮ

67

ಒಬ್ಬ ಮಹಾನ್ ಗಣಿತ ತಜ್ಞ ಸ್ಕಿಜೋಪ್ರೆನಿಯ ಕಾಯಿಲೆಗೆ ತುತ್ತಾದ ಘಟನೆ. ಇಂದು ನಾವು ಭಾರತದ ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ತಿಳಿಯೋಣ ಅವರೆ ವಸಿಷ್ಠ ನಾರಾಯಣ್ ಸಿಂಗ್ ಇದೆ ನವಂಬರ್ 14 ರಂದು ಈ ವ್ಯಕ್ತಿ ನಿಧನರಾದರು. ಇವರು ಪ್ರಸಿದ್ಧ ಗಣಿತಜ್ಞರಾಗಿದ್ದರು 1946 ರಲ್ಲಿ ಜನಿಸಿದ ಇವರು ಭಾರತ ಸೇರಿದಂತೆ ವಿದೇಶಗಳಲ್ಲೂ ಕೂಡ ತನ್ನ ಗಣಿತದ ಬುದ್ಧಿವಂತಿಕೆಗೆ ಪ್ರಸಿದ್ಧರಾಗಿದ್ದರು. ಕಾನ್ಸ್ಟೇಬಲ್ ಮಗನಾಗಿ ಬಿಹಾರದಲ್ಲಿ ಜನಿಸಿದ ವಸಿಷ್ಠ ನಾರಾಯಣ್ ಸಿಂಗ್ ಚಿಕ್ಕಂದಿನಲ್ಲಿಯೇ ಗಣಿತದಲ್ಲಿ ಮೇಧಾವಿಯಾಗಿದ್ದರು ನೆತ್ತರ್ ಹತ್ ರೆಸಿಡೆನ್ಸಿ ಶಾಲೆಯಲ್ಲಿ ಕಲಿತ ನಂತರ ಪಾಟ್ನಾ ವಿಜ್ಞಾನ ಕಾಲೇಜಿಗೆ ಸೇರಿದರು ಅಮೆರಿಕಾದ ಖ್ಯಾತ ಪ್ರೊಫೆಸರ್ ಜಾನ್ ಕೆಲ್ಲಿ ಎನ್ನುವವರು ಈ ಕಾಲೇಜಿಗೆ ಭೇಟಿ ನೀಡಿದಾಗ ಅವರು ನೀಡಿದ ಗಣಿತದ 5 ಕಠಿಣ ಸಮಸ್ಯೆಗಳನ್ನು

ಇವರು ಬಿಡಿಸಿದರು ಅಲ್ಲದೆ ಆ ಸಮಸ್ಯೆ ಬಿಡಿಸುವ ಬೇರೆ ಬೇರೆ ವಿಧಾನಗಳನ್ನು ಇವರು ಹೇಳಿದರು ಇದರಿಂದ ಪ್ರಭಾವಿತರಾದ ಜಾನ್ ಕೆಲ್ಲಿಯವರು ಇವರನ್ನು ಅಮೆರಿಕಾಗೆ ಕರೆದರು ತನ್ನ ಬಿಎಸ್ ಸಿ ಡಿಗ್ರಿಯನ್ನು ವಿಶೇಷ ಅನುಮತಿಯಿಂದ 2 ವರ್ಷ ಮೊದಲೇ ಮುಗಿಸಿ ಅಮೆರಿಕದ ಯುನಿವರ್ಸಿಟಿ ಕ್ಯಾಲಿಪೋರ್ ನಿಯಾಗೆ ಸೇರಿದರು ಇಲ್ಲಿ 1965 ರಲ್ಲಿ ಪಿಎಚ್ ಡಿ ಪದವಿಯನ್ನು ಮುಗಿಸಿದರು. ಇವರು ಸ್ಪೇಸ್ ದಿ ಏರಿಯಾ ಒಂದು ಗಣಿತದಲ್ಲಿ ಪಿಎಚ್ ಡಿ ಪಡೆದಿದ್ದರು. 1969 ರಲ್ಲಿ ನಾಸಾದವರು ಅಪೋಲೊ ಮಿಷನನ್ನು ನಡೆಸಿ ಚಂದ್ರನಲ್ಲಿಗೆ ಮಾನವನನ್ನು ಕಳುಸಿದರು ಈ ಮಿಶೆನ್ ಮಧ್ಯದಲ್ಲಿ ನಾಸಾದ ಗಣಕಯಂತ್ರಗಳು ಕೆಲಸ ಮಾಡದೆ ಇದ್ದಾಗ ವಸಿಷ್ಠ ನಾರಾಯಣ್ ಸಿಂಗ್ ಅವರು ಸ್ವತಹ ತಾವೇ ನಾಸಾದವರಿಗೆ ನೆರವಾಗುತ್ತಾರೆ. ನಂತರ ವಾಸಿಂಗಟನ್ ಯುನಿವರಸಿಟಿಯಲ್ಲಿ ಪ್ರೊಫೆಸರ್ ಆದರೂ. ಮುಂದೆ 1974 ರಲ್ಲಿ ಭಾರತಕ್ಕೆ ಬಂದು ಐ ಐ ಟಿ ಕಾಣಫ್ಲೋರ್ ನಲ್ಲಿ ಪ್ರೊಫೆಸರ್ ಆದರೂ ಇವರು ಭಾರತೀಯ ಸಂಖ್ಯಾಶಾಸ್ತ್ರಿಯ ಸಂಸ್ಥೆಯಲ್ಲೂ ಕೂಡ ಕೆಲಸ ಮಾಡುತ್ತಾರೆ.

1973 ರಲ್ಲಿ ಮದುವೆಯಾಗುತ್ತಾರೆ 3 ವರ್ಷದ ನಂತರ ಇವರ ಪತ್ನಿ ಇವರಿಂದ ವಿಚ್ಛೇದನ ಪಡೆಯುತ್ತಾರೆ. ಕಾರಣವೆಂದರೆ ವಸಿಷ್ಠರಿಗೆ ಸ್ಕಿಜೋಪ್ರೆನಿಯ ಎಂಬ ಕಾಯಿಲೆ ಇರುತ್ತದೆ ಅಂದರೆ ಮನುಷ್ಯ ನಿಧಾನವಾಗಿ ವಾಸ್ತವ ಸ್ಥಿತಿಯನ್ನು ಮರೆಯಲಾರಂಭಿಸುತ್ತದೆ. 1989 ರಲ್ಲಿ ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಕಾಣೆಯಾಗುತ್ತಾರೆ. ತಮ್ಮ ಅಸ್ತಿತ್ವವನ್ನೇ ಅವರು ಮರೆತಿದ್ದರಿಂದ ಅವರಿಗೆ ತಾವು ಯಾರೆಂದು ಜನರಿಗೆ ಹೇಳಲು ಆಗದೆ ಯಾವುದೋ ಒಂದು ಊರಿನಲ್ಲಿ ಉಳಿಯುತ್ತಾರೆ. ಇಲ್ಲಿಯೇ 4 ವರ್ಷ ಇರುತ್ತಾರೆ ನಂತರ 1993 ರಲ್ಲಿ ಮನೆಯವರಿಗೆ ಸಿಕ್ಕು ಮನೆಗೆ ಕರೆತರುತ್ತಾರೆ ನಂತರ ಬೆಂಗಳೂರಿನ ನಿಮನ್ಸ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಸರ್ಕಾರದಿಂದ ಹೆಚ್ಚಿನ ಸಹಾಯ ಸಿಗಲಿಲ್ಲವಾದ್ದರಿಂದ ಮತ್ತೆ ಮನೆಗೆ ಕರೆತರುತ್ತಾರೆ ಅಂದಿನಿಂದ ಮನೆಯಲ್ಲೇ ಇದ್ದ ಇವರು ನವೆಂಬರ್ 14 ರಂದು ಕೊನೆ ಉಸಿರೆಳೆದರು.

ಇಂತಹ ಸಾಧನೆ ಮಾಡಿದ ಇವರು ಕೊನೆಯುಸಿರೆಳೆದಾಗ ಇವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಯಾವುದೇ ಆ್ಯಂಬುಲೆನ್ಸ್ ಬಂದಿಲ್ಲ ಆಸ್ಪತ್ರೆಯವರು ಹೆಣವನ್ನು ಗೇಟಿನಿಂದ ಹೊರಗೆ ಬಿಟ್ಟಿದ್ದರು ಇವರ ಮಹತ್ವ ಸುತ್ತ ಮುತ್ತಲಿನವರಿಗೆ ತಡವಾಗಿ ತಿಳಿದಿದ್ದರಿಂದ ಕೊನೆಗೂ ಇವರಿಗೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ದೇಶ ಕಂಡ ಮಹಾನ್ ಗಣಿತಜ್ಞರಲ್ಲಿ ಇವರು ಒಬ್ಬರು. ಇವರಿಗೆ ಈ ಕಾಯಿಲೆ ಇಲ್ಲದಿದ್ದರೆ ಇವರಿಂದ ಇನ್ನು ಸಂಶೋಧನೆಗಳು ನಡೆಯುತ್ತಿದ್ದವು ಐನಸ್ಟಿನ್ ರಂತಹ ಮೇಧಾವಿಗೂ ಕೂಡ ಸರಿಸಮನಾದ ಬುದ್ಧಿವಂತಿಕೆಯನ್ನು ಹೊಂದಿದ್ದರು ಎನ್ನಲಾಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

LEAVE A REPLY

Please enter your comment!
Please enter your name here