ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಈ ತಪ್ಪು ಮಾಡಬೇಡಿ

73

ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬಾರದು. ಉತ್ತಮವಾದ ಆಹಾರ ಶೈಲಿ ಗರ್ಭಿಣಿಯರಿಗೆ ತುಂಬಾ ಮುಖ್ಯವಾಗಿರುತ್ತದೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಹುಟ್ಟುವ ಮಗುವಿನ ಮೇಲೆ ಬೀರುತ್ತದೆ. ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಗರ್ಭಿಣಿಯರು ಬಹಳಷ್ಟು ಆಹಾರವನ್ನು ಸೇವಿಸುತ್ತಾರೆ. ಅದರಿಂದ ಅವರಿಗೆ ಗರ್ಭಪಾತ ಮತ್ತು ಅಕಾಲಿಕ ಮಗುವಿಗೆ ಜನ್ಮ ನೀಡುವ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಮುಖ್ಯ ಕಾರಣವೇ ಗರ್ಭಿಣಿಯರು ಸೇವಿಸುವ ಆಹಾರವಾಗುತ್ತದೆ. ಮತ್ತು ಆಹಾರ ಶೈಲಿಯನ್ನು ಸರಿಯಾಗಿ ರೂಢಿ ಮಾಡಿಕೊಳ್ಳದೆ ಇರುವುದು ಒಂದು ಕಾರಣವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಸರಿಯಾದ ಆಹಾರ ಕ್ರಮವನ್ನು ಕೈಗೊಂಡರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಈ ಲೇಖನದಲ್ಲಿ ಗರ್ಭಿಣಿಯರು ಯಾವ ರೀತಿಯ ಆಹಾರವನ್ನು ಸೇವಿಸಬಾರದು ಮತ್ತು ಗರ್ಭಪಾತ ಆಗದಂತೆ ಹೇಗೆ ಎಚ್ಚರಿಕೆ ವಹಿಸುವುದು ಎಂದು ತಿಳಿದುಕೊಳ್ಳೋಣ. ಪಪ್ಪಾಯಿ ಹಣ್ಣು, ಈ ಹಣ್ಣನ್ನು ತಿನ್ನುವುದರಿಂದ ಗರ್ಭಪಾತ ಆಗುವ ಸಾಧ್ಯತೆಗಳು ಇರುತ್ತದೆ. ಏಕೆಂದರೆ ಇದರಲ್ಲಿ ಯುಟಿರಸ್ ಕೊಂಟ್ರಾಕ್ಷನ್ ಎಂಬ ಅಂಶ ಇರುವುದರಿಂದ ಇದು ಗರ್ಭಪಾತಕ್ಕೆ

ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಪಪ್ಪಾಯಿ ಹಣ್ಣನ್ನು ಗರ್ಭಿಣಿಯರು ಸೇವಿಸಬಾರದು. ತುಳಸಿ ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳು ಹೊಂದಿದ್ದರು ಇದು ಗರ್ಭಿಣಿಯರಿಗೆ
ಉತ್ತಮವಾದ ಆಹಾರವಲ್ಲ. ಏಕೆಂದರೆ ಇದು ಕೂಡ ಗರ್ಭಪಾತ ಆಗುವುದಕ್ಕೆ ಎಡೆಮಾಡಿ ಕೊಡುತ್ತದೆ. ಅಲೋವೆರಾ ಇದು ಆರೋಗ್ಯಕ್ಕೆ ಒಳ್ಳೆಯದು ಆದರೆ ಗರ್ಭಿಣಿಯರಿಗೆ ಯಾವುದೇ ಲಾಭಗಳನ್ನು ಕೊಡುವುದಿಲ್ಲ. ಮತ್ತು ಇದು ಗರ್ಭಪಾತ ಮತ್ತು ಅಕಾಲಿಕ ಮಗುವಿನ ಜನನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಲೋವೆರಾ ಜ್ಯೂಸ್ ಅನ್ನು ಸೇವಿಸಬಾರದು. ಮೆಂತ್ಯೆ ಕಾಳು ಇದನ್ನು ಬಾನಂತನದಲ್ಲಿ ಅಂದರೆ ಮಗು ಜನಿಸಿದ ನಂತರ ಮೆಂತ್ಯೆಯನ್ನೂ ಸೇವಿಸುವುದು ಉತ್ತಮ. ಆದರೆ ಗರ್ಭಾವಸ್ಥೆಯಲ್ಲಿ ಈ ಮೆಂತ್ಯೆಯನ್ನು ಸೇವಿಸಬಾರದು. ಇದು ಗರ್ಭಪಾತ ಉಂಟಾಗುವುದಕ್ಕೆ ಸಹಾಯ ಮಾಡುತ್ತದೆ. ಉಪ್ಪಿನ ಅಂಶ ಇರುವ ಆಹಾರಗಳನ್ನು ಸೇವಿಸಬಾರದು. ಏಕೆಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಸಿ ಮೊಟ್ಟೆಯನ್ನು ಕೂಡ ಗರ್ಭಿಣಿಯರು ಸೇವಿಸಬಾರದು. ಏಕೆಂದರೆ ಇದು ಪುಡ್ ಪಾಯಿಸನ್ ಗೆ ಕಾರಣವಾಗುತ್ತದೆ. ರಸ್ತೆಯ ಬದಿಯಲ್ಲಿರುವ ಆಹಾರವನ್ನು ಗರ್ಭಿಣಿಯರು ಸೇವಿಸಬಾರದು. ಏಕೆಂದರೆ ಅದರಲ್ಲಿ ಬೆರೆಸುವ

ರಾಸಾಯನಿಕ ಅಂಶಗಳು ಮಗುವಿನ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ಆಹಾರಗಳನ್ನು ತಿನ್ನಬಾರದು. ಸಮುದ್ರದ ಆಹಾರ ಎಂದರೆ ಮೀನು ಏಡೀ ಮುಂತಾದವು. ಇವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ಅನಾನಸ್ ಹಣ್ಣು, ಈ ಹಣ್ಣಿನಿಂದ ಗರ್ಭಿಣಿಯರು ಆದಷ್ಟು ದೂರವಿರಬೇಕು. ಏಕೆಂದರೆ ಇದು ಕೂಡ ಗರ್ಭಪಾತ ಉಂಟು ಮಾಡಲು ಸಹಾಯ ಮಾಡುವ ಹಣ್ಣುಗಳಲ್ಲಿ ಒಂದಾಗಿದೆ. ಈ ಎಲ್ಲ ಆಹಾರಗಳು ಗರ್ಭಿಣಿಯರಿಗೆ ಯಾವುದೇ ಲಾಭಗಳನ್ನು ಕೊಡುವುದಿಲ್ಲ. ಮತ್ತು ಗರ್ಭಪಾತ ಸಮಸ್ಯೆಗೆ ಮುಖ್ಯವಾಗಿ ಕಾರಣವಾಗಿರುತ್ತವೆ. ಆದ್ದರಿಂದ ಗರ್ಭಿಣಿಯರು ತಮ್ಮ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸಿಕೊಳ್ಳದೆ ಇರುವುದು ಉತ್ತಮ. ಆದ್ದರಿಂದ ಮೇಲೆ ಹೇಳಿರುವ ಎಲ್ಲ ಆಹಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಗರ್ಭಿಣಿಯರು ಯಾವುದು ಉಚಿತ ಮತ್ತು ಅನುಚಿತ ಎಂದು ಅರ್ಥ ಮಾಡಿಕೊಂಡು ಆಹಾರದ ಶೈಲಿಯನ್ನು ಅನುಕರಣೆ ಮಾಡಿದರೆ ಗರ್ಭಪಾತ ಮತ್ತು ಅಕಾಲಿಕ ಮಗುವಿನ ಜನನ ಈ ರೀತಿಯ ಸಮಸ್ಯೆ ಎದುರಿಸುವ ಅವಶ್ಯಕತೆ ಬರುವುದಿಲ್ಲ.

LEAVE A REPLY

Please enter your comment!
Please enter your name here