ಗ್ಯಾಸ್ ಸಿಲಿಂಡರಗೆ ಬೆಂಕಿ ಹತ್ತಿದಾಗ ಹೀಗೆ ಮಾಡಿ

131

ಗ್ಯಾಸ್ ಸಿಲಿಂಡರಗೆ ಬೆಂಕಿ ಹತ್ತಿದಾಗ ಹೀಗೆ ಮಾಡಿ. ಹಿಂದಿನ ಕಾಲದಲ್ಲಿ ಜನರು ಸೌದೆ ತಂದು ಮಣ್ಣಿನ ಒಲೆಯಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ದರು ಅದರಿಂದ ಮಾಡುವ ಅಡುಗೆ ತುಂಬಾನೇ ರುಚಿಯಾಗಿಯೂ ಇರುತ್ತಿತ್ತು ಜೊತೆಗೆ ಅವರು ಸಹ ಸುರಕ್ಷಿತವಾಗಿ ಇರುತ್ತಿದ್ದರು ಆಗ ಆ ಜನರಿಗೆ ಯಾವುದೇ ಕಾಯಿಲೆಗಳು ಬರುತ್ತಿರಲಿಲ್ಲ ಅದ ಕಾರಣ ಅವರು 100 ವರ್ಷಗಳ ವರೆಗೆ ಬದುಕುತ್ತಿದ್ದರು ಆದರೆ ದಿನ ಕಳೆದಂತೆ ನಮ್ಮ ಆಧುನಿಕ ಜನರ ಜೀವನ ಶೈಲಿಯೇ ಬದಲಾಗಿದೆ ಅವರು ಉಡುತೋಡುವ ಬಟ್ಟೆಯಿಂದ ಹಿಡಿದು ಅವರು ಅಡುಗೆ ಮಾಡುವ ಸಾಮಗ್ರಿಗಳು ಸಹ ಬದಲಾವಣೆ ಪಡೆದಿವೆ ಹೀಗಾಗಿ ಇವತ್ತಿನ ದಿನ ಪ್ರತಿಯೊಬ್ಬರು ಸಹ ಗ್ಯಾಸ್ ಸಿಲಿಂಡರನ್ನು ಉಪಯೋಗಿಸುತ್ತಿದ್ದಾರೆ ಆದರೆ ಅದರಿಂದ ಎಷ್ಟು ಪ್ರಯೋಜನವಿದೆಗೊ ಅಷ್ಟೇ ಜನರಿಗೆ ತೊಂದರೆಯು ಸಹ ಇದೆ ಕಾರಣ ಒಂದುವೇಳೆ ಏನೋ ಆಗಿ ಆ ಗ್ಯಾಸ್ ಸಿಲಿಂಡರ್ ಬೆಂಕಿ ಹತ್ತಿ ಉರಿದರೆ ಇಡೀ ಆ ವಠಾರದವರನ್ನೇ ನಾಶಮಾಡಿಬಿಡುತ್ತದೆ. ಹಾಗಾದರೆ ಆರೀತಿ ಗ್ಯಾಸ್ ಸಿಲಿಂಡರಗೆ ಬೆಂಕಿ ಹತ್ತಿದಾಗ ಏನು ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಈತ್ತಿಚಿನ ದಿನಗಳಲ್ಲಿ 80% ರಷ್ಟು ಜನರು ಗ್ಯಾಸ್ ಸಿಲಿಂಡರ್ ಗಳನ್ನು ಉಪಯೋಗಿಸುತ್ತಿದ್ದಾರೆ ಆದರೆ ಅದೇ ವೇಳೆಯಲ್ಲಿ ಗ್ಯಾಸ್ ಸಿಲಿಂಡರ್ ಉಪಯೋಗಿಸುವಾಗ ನಾವು ತುಂಬಾ ಜಾಗೃತರಾಗಿರಬೇಕು ಇಲ್ಲ ಅಂದರೆ ನಾವು ಅತಿದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಇಲ್ಲಿ ಸಿಲಿಂಡರ್ ಅಪಘಾತಗಳು ನಡೆಯಬಾರದು ಅಂತ ಇಲ್ಲಿ ಒಂದು ತಂಡ ಒಂದು ವಿಷಯವನ್ನು ಹೇಳಿಕೊಡುತ್ತಾರೆ ಅದನ್ನು ನೀವು ಸಹ ಒಂದು ಬಾರಿ ನೋಡಿ ಈ ಸಿಲಿಂಡರಗಳಿಂದ ನಡೆಯುವ ಕೇಲವೊಂದು ಘಟನೆಗಳು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತವೆ ಆದ್ದರಿಂದ ಅಗ್ನಿಶಾಮಕ ದಳದವರು ಕೆಲವೊಂದು ಪ್ರಚಾರ ಮಾಡುವುದರ ಜೊತೆಗೆ ಈ ಅಪಾಯದಿಂದ ಹೇಗೆ ಪಾರಾಗಬಹುದು ಅಂತ ತಿಳಿ ಹೇಳುತ್ತಿದ್ದಾರೆ ಅಕಸ್ಮಾತ್ತಾಗಿ ಸಿಲಿಂಡರಗೆ ಬೆಂಕಿ ಹತ್ತಿದಾಗ ಒಂದು ಬಕೆಟ್ನಿಂದ ವೇಗವಾಗಿ ಅದನ್ನು ಮುಚ್ಚಿ ಬೆಂಕಿಯನ್ನು ಆರಿಸಿ ನಂತರ ತೆಗೆದು ಗ್ಯಾಸನ್ನು ಬಂದುಮಾಡಬೇಕು ಇದರಿಂದ ದೊಡ್ಡ ಪ್ರಮಾಣದ ತೊಂದರೆಯನ್ನು ತಡೆಯಬಹುದು ಅಂತ ಅಗ್ನಿಶಾಮಕ ದಳದವರು ತಿಳಿ ಹೇಳುತ್ತಿದ್ದಾರೆ.

ಹೀಗೆ ನಿಮ್ಮ ಮನೆಯಲ್ಲಿ ಅಥವಾ ಬೇರೆ ಯಾವುದೋ ಕಡೆಯಲ್ಲಿ ಒಂದುವೇಳೆ ಏನಾದರೂ ಸಿಲಿಂಡರಗೆ ಬೆಂಕಿ ಹತ್ತಿದಾಗ ಅದಕ್ಕೆ ಮೊದಲು ಒಂದು ದೊಡ್ಡ ಬಕೇಟನ್ನು ಮುಚ್ಚಿ ಹಿಡಿಯಬೇಕು ಆ ಬೆಂಕಿ ನಂದಿದ ಬಳಿಕ ಸಿಲಿಂಡರನ್ನು ಬಂದು ಮಾಡಬೇಕು. ಆಗ ಆಗುವ ಒಂದು ದೊಡ್ಡ ಅನಾಹುತವನ್ನು ನೀವು ತಡೆಯಬಹುದು ಈ ವಿಚಾರವನ್ನು ನೀವು ನಿಮಗೆ ಗೊತ್ತಿರುವ ಪರಿಚಯಸ್ತರು ಮತ್ತು ಸಂಬಂದಿಕರಿಗೂ ಸಹ ತಿಳಿಸಿ ಹಾಗೇನೇ ಅವರಿಗೂ ಸಹ ಸಿಲಿಂಡರ್ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಲು ತಿಳಿಸಿ. ಈ ಒಂದು ಉಪಯುಕ್ತ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here