ಗ್ಯಾಸ್ ಸಿಲಿಂಡರ್ ಬಳಸುವ ಜನರ ಜೇಬಿಗೆ ಕತ್ತರಿ ಬೀಳಲಿದೆ

87

ಜನ ಸಾಮಾನ್ಯರ ಜೇಬಿಗೆ ನೇರವಾಗಿ ಕೈ ಹಾಕುವ ಬೆಲೆಗಳಲ್ಲಿ ಒಂದು ಅದು ಗ್ಯಾಸ್ ಸಿಲಿಂಡರ್ ಬೆಲೆ. ಗ್ಯಾಸ್ ಸಿಲಿಂಡರ್ ಬೆಲೆ ಇಳಿದಾಗ ಅಥವಾ ಏರಿದಾಗ ಅದು ಜನ ಸಾಮಾನ್ಯರ ಮೇಲೆ ನೇರವಾಗಿ ಪ್ರಭಾವ ಬೀರಲಿದ್ದು ಗ್ಯಾಸ್ ಸಿಲಿಂಡರ್ ಬೆಲೆ ಇಳಿದಾಗ ಜನ ಸಾಮಾನ್ಯರಿಗೆ ಒಳ್ಳೆಯದಾದರೆ ಬೆಲೆ ಏರಿದಾಗ ಜನ ಸಾಮಾನ್ಯರಿಗೆ ತುಂಬಾ ಹೊರೆ ಆಗುತ್ತದೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗಲಿದ್ದು ಇದನ್ನು ನಾವು ನೀವು ತಿಳಿದುಕೊಂಡು ಹುಷಾರ್ ಆಗಬೇಕು ನಾಳೆ ಯಿಂದ ಹೊಸ ಗ್ಯಾಸ್ ಸಿಲಿಂಡರ್ ಬೆಲೆಗಳು ಬರಲಿದ್ದು ಜಾಸ್ತಿ ಆಗಿದೆಯಾ ಕಡಿಮೆ ಆಗಿದೆಯಾ ನೋಡೋಣ ಬನ್ನಿ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ.

ಹೌದು ತಿಂಗಳಿಗೆ ಒಂದು ಸಾರಿ ಅಂದರೆ ಪ್ರತಿ ತಿಂಗಳು ಒಂದನೇ ತಾರೀಖು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಬದಲಾವಣೆ ಆಗುತ್ತದೆ ಇದನ್ನು ನಾವು ನೀವು ತಿಳಿದುಕೊಂಡು ಹುಷಾರಾಗಿ ಇರಬೇಕು ಏಕೆಂದರೆ ಗ್ಯಾಸ್ ಏಜೆನ್ಸಿಗಳು ಹೊಸ ಬೆಲೆಗಳನ್ನು ಹೇಳುವುದಿಲ್ಲ ನಾವು ಹುಷಾರಾಗಿ ಇದ್ದು ಹೊಸ ಬೆಲೆಗಳನ್ನು ತಿಳಿದುಕೊಂಡು ಅದನ್ನು ಅವರಿಗೆ ಹೇಳಬೇಕು ಏಕೆಂದರೆ ಗ್ಯಾಸ್ ವಿತರಕರು ಈ ಚಾರ್ಜ್ ಆ ಚಾರ್ಜ್ ಎಂದು ಡೆಲಿವರಿ ಚಾರ್ಜ್ ಅಂತ ಹೇಳಿ ಎಕ್ಸ್ಟ್ರಾ ಹಣ ಹೇಳಿ ಮೋಸ ಮಾಡುತ್ತಾರೆ ಈ ಕಾರಣದಿಂದ ಹೊಸ ಬೆಲೆಗಳನ್ನು ತಿಳಿದುಕೊಂಡು ಅವರಿಗೆ ಬುದ್ಧಿ ಕಲಿಸಿ ನೀವು ಮೋಸ ಹೋಗಬೇಡಿ ನಾಳೆ ಯಿಂದ ಗ್ಯಾಸ್ ಸಿಲಿಂಡರ್ ಬೆಲೆಗಳು ಏರಲಿದ್ದು ಸರ್ಕಾರವು ಸಾಮಾನ್ಯ ಜನರಿಗೆ ಮತ್ತೊಂದು ಹೊಡೆತ ಕೊಟ್ಟಿದೆ ಹೌದು ಕಳೆದ ನಾಲ್ಕು ತಿಂಗಳುಗಳಿಂದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ ಕಳೆದ ತಿಂಗಳು ಅಂದರೆ ನವೆಂಬರ್ ನಲ್ಲಿ ಕೂಡ ಸುಮಾರು 76 ರೂಪಾಯಿ ಗಳಷ್ಟು ಏರಿಕೆ ಆಗಿತ್ತು ಈಗ ನೋಡಿದರೆ ಡಿಸೆಂಬರ್ ನಲ್ಲಿ ಮತ್ತೆ ಏರಿಕೆ ಆಗಿದ್ದು ಸಾಮಾನ್ಯ ಜನರು ತಲೆ ಕೆಡಿಸಿ ಕೊಳ್ಳುವ ಪರಿಸ್ಥಿತಿ ಬಂದಿದೆ.

ಡಿಸೆಂಬರ್ ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ನ ಬೆಲೆ ಜಾಸ್ತಿ ಆಗಿದ್ದು ಅಡುಗೆಗೆ ಬಳಸುವ 14.2 ಕೆ ಜಿ ಗ್ಯಾಸ್ ಸಿಲಿಂಡರ್ ಬೆಲೆ 14 ರೂಪಾಯಿ ಅಷ್ಟು ಜಾಸ್ತಿ ಆಗಿದೆ ಈ ಬಾರಿಯೂ ಸೇರಿದಂತೆ ಕಳೆದ ನಾಲ್ಕು ತಿಂಗಳಲ್ಲಿ 120 ರೂಪಾಯಿ ಅಷ್ಟು ಗ್ಯಾಸ್ ಸಿಲಿಂಡರ್ ಬೆಲೆ ಜಾಸ್ತಿ ಆಗಿದೆ ಇನ್ನೂ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 193 ರೂಪಾಯಿ ಅಷ್ಟು ಹೆಚ್ಚಿಸಲಾಗಿದೆ. 3 ತಿಂಗಳ ಹಿಂದೆ ಅಂದರೆ ಆಗಸ್ಟ್ ತಿಂಗಳಲ್ಲಿ ನಾರ್ಮಲ್ ಸಿಲಿಂಡರ್ ನ ಬೆಲೆ 574 ರೂಪಾಯಿ ಆಗಿದ್ದರೆ ವಾಣಿಜ್ಯ ಸಿಲಿಂಡರ್ ನ ಬೆಲೆ 1004 ರೂ ಆಗಿತ್ತು ಆದರೆ ಈಗ ಸಂನ್ಯ ಮತ್ತು ವಾಣಿಜ್ಯ ಸಿಲಿಂಡರ ಎರಡರ ಬೆಲೆಯೂ ಜಾಸ್ತಿ ಆಗಿದ್ದು 14.2 ಕೆ ಜಿ ಸಬ್ಸಿಡಿ ರಹಿತ ಎಲ್ ಪೀ ಜಿ ಸಿಲಿಂಡರ್ ನ ಬೆಲೆ ಈಗ 681 ರೂಪಾಯಿ ಆದರೆ ಮತ್ತು ಕಮರ್ಷಿಯಲ್ ಸಿಲಿಂಡರ್ ಬೆಲೆ 1204 ರೂಪಾಯಿ ಆಗಿದೆ ಈ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಿಜಕ್ಕೂ ಜನ ಸಾಮಾನ್ಯರಿಗೆ ಹೊರೆ ಆಗಲಿದ್ದು ಜೇಬಿಗೆ ಕತ್ತರಿ ಬಿಳು ಗ್ಯಾರೆಂಟಿ.

LEAVE A REPLY

Please enter your comment!
Please enter your name here