ಗ್ಲಿಸರಿನ್ ನಿಂದ ನಿಮ್ಮ ಮುಖಕ್ಕೆ ಹತ್ತಾರು ರೀತಿಯ ಲಾಭ ಇದೆ

89

ನಮಸ್ಕಾರ ಗೆಳೆಯರೆ ಗ್ಲಿಸರಿನ್ ಉಪಯೋಗಿಸುವುದರಿಂದ ಆಗುವ ಉಪಯೋಗಗಳನ್ನು ಈ ಲೇಖನದಲ್ಲಿ ತಿಳಿಯೋಣ ಗ್ಲಿಸರಿನ್ ಅನ್ನು ಯಾವುದೇ ಬ್ಯೂಟಿ ಉತ್ಪನ್ನಗಳಲ್ಲಿ ಫೇಸ್ ವಾಷ್ ಸೋಪ್, ಫೇಸ್ ಕ್ರೀಂ ಎಲ್ಲದರಲ್ಲೂ ಗ್ಲಿಸರಿನ್ ಅನ್ನು ಉಪಯೋಗ ಮಾಡುತ್ತಾರೆ ಗ್ಲಿಸರಿನ್ ನಿಂದ ನಮ್ಮ ಚರ್ಮಕ್ಕೆ ತುಂಬಾನೇ ಉಪಯೋಗವಿದೆ ಇದನ್ನು ಯಾವ ಯಾವ ರೀತಿಯಾಗಿ ನಮ್ಮ ಚರ್ಮಕ್ಕೆ ಉಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಯೋಣ. ಕೈ ಕಾಲು ಹಾಗೂ ಪಾದಗಳು ತುಂಬಾ ಒರಟಾಗಿದ್ದರೆ ಒಂದು ಹನಿಯಷ್ಟು ಗ್ಲಿಸರಿನ್ ಅನ್ನು ನೀವು ಉಪಯೋಗಿಸುವ ಬಾಡಿಲೋಷನ್ ಗೆ ಹಾಕಿಕೊಂಡು ಕೈಕಾಲುಗಳಿಗೆ ಹಾಗೂ ನಿಮ್ಮ ಪಾದಕ್ಕೆ ಹಚ್ಚುವುದರಿಂದ ಒರಟು ಪಾದದ ಸಮಸ್ಯೆಗಳು ಹಾಗೂ ಸನ್ ಟ್ಯಾನ್ ಸಮಸ್ಯೆಗಳು ಬೇಗನೆ ನಿವಾರಣೆ ಆಗುತ್ತದೆ. ತುಟಿ ತುಂಬಾನೆ ಒಡೆಯುತ್ತಿದ್ದರೆ ಅಥವಾ ಒಣಗಿದ ಹಾಗೆ ಅನಿಸಿದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಹನಿ ಗ್ಲಿಸರಿನ್ ಅನ್ನು ತುಟಿಗೆ ಹಚ್ಚಿಕೊಂಡು ಬೆಳಗ್ಗೆ ತೊಳೆದುಕೊಳ್ಳಿ ಈ ರೀತಿಯಾಗಿ ನೀವು ತಪ್ಪದೆ ಪ್ರತಿದಿನ ಮಾಡುತ್ತಾ ಬಂದರೆ ಒಣ ತುಟಿಯ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ ಹಾಗೆ ತುಟಿಗಳು ಗುಲಾಬಿ ಬಣ್ಣಕ್ಕೆ ಬರುತ್ತದೆ. ಕೈ ಮತ್ತು ಕಾಲುಗಳು ತುಂಬಾನೇ ಕಪ್ಪಾಗಿದ್ದರೆ

ಒಂದು ಚಮಚದಷ್ಟು ಗ್ಲಿಸರಿನ್ ಅನ್ನು ತೆಗೆದುಕೊಂಡು ಒಂದು ಚಮಚ ನಿಂಬೆರಸವನ್ನು ಹಾಕಿ ನಂತರ ಒಂದು ಚಮಚ ಸಕ್ಕರೆಯನ್ನು ಹಾಕಿ ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಸಕ್ಕರೆ ಕರಗುವವರೆಗೆ ಸ್ಕ್ರಬ್ ಮಾಡಬೇಕು ಕೈ ಮತ್ತು ಕಾಲುಗಳನ್ನು ಈ ರೀತಿಯಾಗಿ ಮಾಡುತ್ತಾ ಬರುವುದರಿಂದ ನಿಮ್ಮ ಕಪ್ಪಗಾಗಿ ಇರುವ ಕೈಕಾಲುಗಳು ಬೆಳ್ಳಗೆ ಆಗುತ್ತದೆ ಇದರಿಂದ ನಿಮ್ಮ ಕೈಗೆ ಮತ್ತು ಕಾಲುಗಳಿಗೆ ಆಗಿರುವಂತಹ ಸನ್ ಟ್ಯಾನ್ ಬೇಗನೆ ಹೋಗುತ್ತದೆ. ಬಂಗಿನ ಸಮಸ್ಯೆ ಇದ್ದರೆ ಗ್ಲಿಸರಿನ್ ಅನ್ನು ಉಪಯೋಗಿಸುವುದರಿಂದ ಬಂಗಿನ ಸಮಸ್ಯೆಗೆ ನಿವಾರಣೆ ಆಗುತ್ತದೆ ಒಂದು ಚಮಚ ಗ್ಲಿಸರಿನ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚದಷ್ಟು ಜೇನು ತುಪ್ಪವನ್ನು ಹಾಕಿ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಮುಖವನ್ನು ಚೆನ್ನಾಗಿ ತೊಳೆದುಕೊಂಡು ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು ಹತ್ತು ನಿಮಿಷಗಳ ಕಾಲ ನಿಮಗೆ ಎಲ್ಲಿ ಪಿಗ್ಮೆಂಟೇಶನ್ ಬಂಗೂ ಇದ್ದಲ್ಲಿ ನಂತರ ಐದು ನಿಮಿಷಗಳ ಕಾಲ ಒಣಗಲು ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ ಈ ರೀತಿಯಾಗಿ ತಪ್ಪದೆ ಪ್ರತಿದಿನ ಮಾಡುವುದರಿಂದ ಬೇಗನೆ ಬಂಗೂ ನಿವಾರಣೆಯಾಗುತ್ತದೆ. ಇನ್ನೂ

ಡಾರ್ಕ್ ಸರ್ಕಲ್ಸ್ ಸಮಸ್ಯೆ ಇದ್ದರೆ ವಿಟಮಿನ್ ಎ ಮಾತ್ರೆ ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಒಂದೆರಡು ಹನಿಗಳಷ್ಟು ಗ್ಲಿಸರಿನ್ ಅನ್ನು ತೆಗೆದುಕೊಳ್ಳಿ ವಿಟಮಿನ್ ಇ ಕ್ಯಾಪ್ಸುಲ್ ಎರಡು ಹನಿ ಹಾಗೂ ಗ್ಲಿಸರಿನ್ ಅನ್ನು ಎರಡು ಹನಿ ತೆಗೆದುಕೊಳ್ಳಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ರಾತ್ರಿಯ ಹಚ್ಚಿ ಬೆಳಗ್ಗೆವರೆಗೂ ಹಾಗೆ ಬಿಡಿ ಬೆಳಿಗ್ಗೆಯೆದ್ದು ಮುಖವನ್ನು ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಡಾರ್ಕ್ ಸರ್ಕಲ್ಸ್ ಬೇಗನೆ ಕಡಿಮೆಯಾಗುತ್ತದೆ. ಬಾಯಲ್ಲಿ ಹುಣ್ಣು ಆಗಿದ್ದರೆ ಒಂದು ಹನಿಯಷ್ಟು ಗ್ಲಿಸರಿನ್ ತೆಗೆದುಕೊಂಡು ಹುಣ್ಣು ಆದ ಜಾಗಕ್ಕೆ ಹಚ್ಚಿ ಹಾಗೆ ಬಿಡಿ ಈ ರೀತಿ ಮಾಡುವುದರಿಂದ ಬಾಯಿಯಲ್ಲಿ ಆಗಿರುವ ಹುಣ್ಣು ಬೇಗನೆ ನಿವಾರಣೆ ಆಗುತ್ತದೆ. ಇನ್ನು ತಲೆಯಲ್ಲಿ ಹೊಟ್ಟಿನ ಸಮಸ್ಯೆ ಇದ್ದರೆ ಒಂದು ಚಮಚ ಗ್ಲಿಸರಿನ್ ಅನ್ನು ತೆಗೆದುಕೊಳ್ಳಿ ಒಂದು ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ ನಿಮ್ಮ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ ಅರ್ಧಗಂಟೆ ಬಿಟ್ಟು ತಲೆಯನ್ನು ಶಾಂಪುವಿನಿಂದ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮಗೆ ಹೊಟ್ಟಿನ ಸಮಸ್ಯೆ ಹಾಗೂ ತುರಿಕೆ ಸಮಸ್ಯೆ ಇದ್ದರೂ ಕೂಡಾ ನಿವಾರಣೆಯಾಗುತ್ತದೆ ಈ ರೀತಿಯಾಗಿ ಹಲವಾರು ಸಮಸ್ಯೆಗಳಿಗೆ ಗ್ಲಿಸರಿನ್ ಉಪಯೋಗಿಸುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

LEAVE A REPLY

Please enter your comment!
Please enter your name here